ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಬೆಳಗಿನ ಉಾಹಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅರೇ ಇದೇನಪ್ಪಾ ನಾವು ವಾರದಲ್ಲಿ ಒಂದು ಸಲ ಆದ್ರೂ ಅವಲಕ್ಕಿಯನ್ನು ಸೇವನೆ ಮಾಡಿಯೇ ಇರ್ತೀವಿ. ಇದರಲ್ಲಿ ಅದೆಂಥ ವಿಶೇಷತೆ ಇದೆ ಎಂದು ನೀವು ಕೂಡ ಅಂದುಕೊಳ್ಳುತ್ತಾ ಇರಬಹುದು ಆದ್ರೆ ಬೇರೆ ಉಪಹಾರಕ್ಕೆ ಹೋಲಿಸಿದರೆ ಈ ಅವಲಕ್ಕಿ ಬಹಳ ವಿಶೇಷತೆಯನ್ನು ಹೊಂದಿದೆ. ಹೌದು ಸ್ನೇಹಿತರೆ ಬೆಳಿಗ್ಗೆ ಸೇವನೆ ಮಾಡುವಂಥ ಉಪಹಾರ ಅತೀ ಪೌಷ್ಟಿಕ ಹಾಗೂ ಉತ್ತಮ ಪ್ರಮಾಣದಲ್ಲಿ ಇರಬೇಕು. ಏಕೆಂದರೆ ಒಂದು ಒಳ್ಳೆಯ ಉಪಹಾರ ಸೇವನೆ ಮಾಡಿ ಆರಂಭ ಮಾಡಿದ ದಿನ ಲವಲವಿಕೆ ಇಂದ ಇರಲು ಸಾಧ್ಯವಾಗುತ್ತದೆ. ಈ ಅವಲಕ್ಕಿ ಕೇವಲ ಒಳ್ಳೆಯ ರುಚಿ ಕೊಡುವುದಲ್ಲದೆ ಆರೋಗ್ಯಕ್ಕೆ ಕೂಡ ಹೆಚ್ಚು ಪ್ರಯೋಜನ ನೀಡುತ್ತದೆ. ಇದರಲ್ಲಿ ಇರುವ ಕಾರ್ಬೋಹೈಡ್ರೇಟ್ ಹಾಗೂ ಜೀವಸತ್ವಗಳು ನಮ್ಮ ದೇಹವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ.

 

ಈ ಅವಲಕ್ಕಿಯನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಕಬ್ಬಿಣವನ್ನು ಪೂರೈಸುವುದಕ್ಕೆ ಮುಖ್ಯ ಪಾತ್ರ ವಹಿಸುತ್ತದೆ. ಯಾರಿಗೆ ರಕ್ತ ಹೀನತೆ ಹಿಮೋಗ್ಲೋಬಿನ್ ಕೊರತೆ ಇರುತ್ತದೆಯೋ ಅಂಥವರಿಗೆ ಇದು ವರದಾನ ಎಂದೇ ಹೇಳಬಹುದು. ಈ ಅವಲಕ್ಕಿಯನ್ನು ಉಫಾರದಲ್ಲಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಕಡಿಮೆ ಆಗುತ್ತದೆ. ಹಾಗೂ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲದೇ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಒದಗಿಸುತ್ತದೆ. ವಾರದಲ್ಲಿ ಆಗಿಂದಾಗ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮಗೆ ಎಂದಿಗೂ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ ಕಬ್ಬಿಣದ ಅವಶ್ಯಕತೆ ಹೆಚ್ಚಿರುವ ಗರ್ಭಿಣಿ ಸ್ತ್ರೀಯರು ಮತ್ತು ಚಿಕ್ಕ ಮಕ್ಕಳಿಗೆ ಅವಲಕ್ಕಿ ಸೂಕ್ತ ಉಪಹಾರವಾಗಿದೆ. ಅವಲಕ್ಕಿಯನ್ನು ಉಪಘರದಲ್ಲಿ ಮಾಡಿದ ಆಹಾರ ಮಧ್ಯಾನದ ವರೆಗೆ ಅಗತ್ಯ ಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ಪೂರೈಸುತ್ತದೆ. ಈ ಶಕ್ತಿ ಪೂರೈಸಲು ಅವಲಕ್ಕಿ ಅಗತ್ಯವಾಗಿದೆ.

 

 

ಮಧುಮೇಹಿಗಳು ಶುಗರ್ ಕಾಯಿಲೆ ಇದ್ದವರಿಗೆ ಅವಲಕ್ಕಿ ತುಂಬಾ ಒಳ್ಳೆಯದು ಯಾಕೆಂದ್ರೆ ಮಧುಮೇಹಿ ಗಳಿಗೆ ತುಂಬಾನೇ ಹಸಿವು ಆಗುತ್ತಾ ಇರುತ್ತದೆ. ಹೊಟ್ಟೆಯಲ್ಲಿ ಸಂಕಟ ತಳಮಳ ಆಗುತ್ತಾ ಇರುತ್ತದೆ. ಈ ಅವಲಕ್ಕಿಯನ್ನು ಸಕ್ಕರೆ ಅಂಶ ತೀರಾ ಕಡಿಮೆ ಇರುವ ಕಾರಣದಿಂದ ಮಧುಮೇಹಿಗಳಿಗೆ ಉತ್ತಮವಾದ ಉಪಹಾರ ಇದಾಗಿದೆ. ಹಾಗೂ ಇದರಲ್ಲಿ ವಿಟಮಿನ್ ಬೀ 1 ಇರುವುದರಿಂದ ಇದು ಮಧುಮೇಹಿಗಳಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡಲು ಸಹಾಯವಾಗುತ್ತದೆ. ಒಂದು ಪ್ಲೇಟ್ ಅವಲಕ್ಕಿ ತಿನ್ನುವುದರಿಂದ 244 ಕ್ಯಾಲೋರಿ ಕಬ್ಬಿಣ ದೊರೆಯುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಉತ್ತಮವಾದ ಉಪಹಾರ ಎಂದು ಹೇಳಲಾಗುತ್ತದೆ. ಇನ್ನೂ ಯಾರು ತೂಕವನ್ನು ಇಳಿಸಲು ಪ್ರಯತ್ನ ಮಾಡ್ತಾ ಇದ್ದರೆ, ಅಂಥವರಿಗೆ ಇದು ಬಹಳ ಉಪಯುಕ್ತವಾದ ಆಹಾರ ಎಂದೇ ಹೇಳಬಹುದು. ಹೌದು ಸ್ನೇಹಿತರೆ ನಾವು ಈ ಅವಲಕ್ಕಿಯನ್ನು ಚಿಕ್ಕ ಪ್ರಮಾಣದಲ್ಲಿ ಸೇವನೆ ಮಾಡಿದರೂ ಕೂಡ ನಮ್ಮ ಹೊಟ್ಟೆ ಸಾಕಷ್ಟು ತುಂಬಿರುವ ಹಾಗೆ ಭಾವನೆ ಮೂಡುತ್ತದೆ. ಇದರಿಂದಾಗಿ ನಾವು ಅನಗತ್ಯವಾಗಿ ಆಹಾರ ಸೇವನೆ ಮಾಡುವುದನ್ನು ತಡೆಯಬಹುದು. ಇದು ಆರೋಗ್ಯಕರ ಜೀವನ ಕ್ರಮಕ್ಕೆ ತುಂಬಾನೇ ನೆರವಾಗುತ್ತದೆ. ನೋಡಿದ್ರಲ್ಬ ಸ್ನೇಹಿತರೆ ಬೆಳಗಿನ ಉಪಹಾರಕ್ಕೆ ಅವಲಕ್ಕಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

ಆಹಾರ