ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು ಗೊತ್ತಾ???

ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಿಮ್ಮ ದೇಹದ ತೂಕ ನಿಮ್ಮ ಎತ್ತರಕ್ಕೆ ಅನುಗುಣವಾಗಿ ಯಾವ ರೀತಿ ಎಷ್ಟು ಇದ್ದರೆ ಒಳ್ಳೆಯದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರಿಗೂ ಕೂಡ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಕನಸು ಇದ್ದೆ ಇರುತ್ತದೆ. ಆದ್ರೆ ಕೆಲವರಿಗೆ ಕೆಲಸದ ಹೊರೆ ಹಾಗೂ ಕೆಲಸದ ಒತ್ತಡದಿಂದ ಅಥವಾ ಅವರ ಆಹಾರ ಕ್ರಮದಿಂದ ಅವರ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಆಗದೆ ಇರಬಹುದು. ಆದ್ರೆ ನಾವು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಇವೆಲ್ಲವನ್ನೂ ಬದಿಗಿಟ್ಟು ನಮ್ಮ ದೇಹದ ತೂಕ ಕಡಿಮೆ ಇದ್ರೆ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯ ಆಗುತ್ತದೆ. ಈ ದೇಹದ ತೂಕ ಹೆಚ್ಚಾಗುವುದರಿಂದ ಹಲವು ರೋಗಗಳನ್ನು ನಾವೇ ಎಡೆ ಮಾಡಿ ಕೊಡುತ್ತೇವೆ. ಹಲವಾರು ಖಾಯಿಲೆಗಳು ಬರುತ್ತವೆ ಎಂದು ತಜ್ಞರು .

 

ಬಹಳ ಮುಖ್ಯವಾಗಿ ದೇಹದ ತೂಕ ಹೆಚ್ಚಾಗುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಮತ್ತು ಮಕ್ಕಳಾಗದೇ ಇರಬಹುದು. ಮುಟ್ಟಿನ ಸಮಸ್ಯೆ, ಮಂಡಿ ನೋವಿನ ಸಮಸ್ಯೆ, ಕೀಲು ನೋವಿನ ಸಮಸ್ಯೆ ಮತ್ತು ಬಹಳ ಮುಖ್ಯವಾಗಿ ನಮ್ಮ ದೇಹದಲ್ಲಿ ತೂಕ ಹೆಚ್ಚಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಇದರಿಂದ ನಾವು ಅನೇಕ ಅರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತವೆ. ಹಾಗೂ ನಮ್ಮ ದೇಹದಲ್ಲಿ ಅತಿಯಾಗಿ ಬೊಜ್ಜು ಇರುವ ಕಾರಣ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಉಂಟಾಗಬಹುದು. ಇನ್ನೂ ಪ್ರತಿನಿತ್ಯ ನಮ್ಮ ದೇಹದ ತೂಕ ಹೇಗೆ ಸರಿ ತೂಗಿಸಬೇಕು ಎಂದು ನೋಡುವುದಾದರೆ, ಮನುಷ್ಯನ ಎತ್ತರದಿಂದ ಮನುಷ್ಯನ ತೂಕವನ್ನು ನಾವು ತಿಳಿಯಬಹುದು. ಒಂದು ಉದಾಹರಣೆ ಮೂಲಕ ನೋಡುವುದಾದರೆ ಒಬ್ಬ ಮನುಷ್ಯನು 163 ಸಿಎಂ ಉದ್ದ ಇರುತ್ತಾನೆ ಅಂತ ಇಟ್ಟುಕೊಂಡರೆ ಆ 163 ಸಿಎಂ ಅಲ್ಲಿ 100 ರಷ್ಟು ಕಳೆಯಬೇಕು .

 

ಇನ್ನೂ ಅವನು 60 ಕೆಜಿ ಇರಬೇಕು. 60 ಕೆಜಿ ಗಿಂತ ಹೆಚ್ಚು ಇದ್ದರೆ ಅವನ ದೇಹದ ತೂಕ ಹೆಚ್ಚು ಇರುತ್ತದೆ ಹಾಗೂ ಅವರ ಕಡೆ ಬೊಜ್ಜು ಕೂಡ ಜಾಸ್ತಿ ಇರುತ್ತದೆ. ಈ ರೀತಿ ತೂಕ ಹೆಚ್ಚು ಇದ್ದರೆ, ನೀವು ನಿಮ್ಮ ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಹಾಗೂ ಪ್ರತಿನಿತ್ಯ ವ್ಯಾಯಾಮ ವಾಕಿಂಗ್ ಮಾಡುವುದರ ಮೂಲಕ ನಿಮ್ಮ ದೇಹದ ತೂಕವನ್ನು ನೀವು ನಿಯಂತ್ರಿಸಬಹುದು. ಬಹಳ ಮುಖ್ಯವಾಗಿ ಯಾರಿಗೆ ದೇಹದ ತೂಕ ಹೆಚ್ಚಿರುತ್ತದೆ ಅಂಥವರು ಜಂಕ್ ಫುಡ್ ತಿನ್ನುವುದನ್ನು ಪೂರ್ಣವಾಗಿ ಬಿಟ್ಟರೆ ಒಳ್ಳೆಯದು. ಇದರಿಂದ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ರ ಜೊತೆಗೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ನಿಮ್ಮಲ್ಲಿ ಹೆಚ್ಚಾದರೆ ನಿಮ್ಮಲ್ಲಿ ಆಯಾಸ ಸುಸ್ತು ಮೊಣಕೈ ನೋವು ಮೊಣಕಾಲು ನೋವು ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗುತ್ತವೆ. ಸೋ ನೋಡಿದ್ರಲ್ವ ಸ್ನೇಹಿತರೆ ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟು ಇರಬೇಕು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು