ತುಂಬಾ ಸ್ವಾದಿಷ್ಟ ಹಾಗೂ ರುಚಿಕರವಾದ ಕೋಕೋನಟ್ ರೈಸ್ ಅಥವಾ ತೆಂಗಿನನ್ನ ಮಾಡುವುದು ಈಗ ತುಂಬಾ ಸುಲಭ..!!

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಸ್ವಾದಿಷ್ಟಕರ ಕೊಕೊನಟ್ ರೈಸ್ ಮಾಡುವ ವಿಧಾನವನ್ನು ತಿಳಿಯೋಣ ಸ್ನೇಹಿತರೆ. ಈ ಕೊಕೊನಟ್ ರೈಸ್ ಮಾಡುವುದು ಅರ್ಧ ಗಂಟೆ ಕೆಲಸ ಆದ್ರೆ ಇದಕ್ಕಿರುವ ರುಚಿ ಎಷ್ಟು ಕೊಟ್ಟರೂ ಬರುವುದಿಲ್ಲ. ಇದನ್ನು ವೆಜ್ ನವರು ಹಾಗೆಯೇ ತಿನ್ನಬಹುದು ಇನ್ನೂ ನಾನ್ ವೆಜ್ ಜನರು ಚಿಕನ್ ಅಥವಾ ಮಟನ್ ಸಾರಿನ ಜೊತೆಗೆ ತಿನ್ನಬಹುದು. ಈ ರೆಸಿಪಿಯನ್ನು ಕಲಿತು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಬಹಳ ಸುಲಭವಾದ ರೆಸಿಪಿ ಇದಾಗಿದ್ದು, ಅರ್ಧ ಗಂಟೆಯಲ್ಲಿ ತಯಾರಿಸಬಹುದು. ಹಾಗೆ ಇದು ನಿಮ್ಮ ಲಂಚ್ ಬಾಕ್ಸ್ ಗೆ ಉತ್ತಮ ಜೋಡಿ. ಹಾಗಾದ್ರೆ ತಡ ಮಾಡದೆ ಇವತ್ತಿನ ರೆಸಿಪಿ ಕೊಕೊನಟ್ ರೈಸ್ ಮಾಡುವ ವಿಧಾನ ತಿಳಿಯೋಣ ಸ್ನೇಹಿತರೆ. ಮೊದಲು ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಾ ಎನ್ನುವ ಆಧಾರದ ಮೇಲೆ ಅಕ್ಕಿಯನ್ನು ತೊಳೆದು ನೆನೆ ಇಟ್ಟುಕೊಳ್ಳಿ. ಬಾಸುಮತಿ ಅಕ್ಕಿ ಆದರೆ ಇನ್ನೂ ಚೆಂದ. ಅರ್ಧ ತೆಂಗಿನ ಬಟ್ಟಲು ಮಿಕ್ಸಿ ಮಾಡಿ ತೆಂಗಿನ ಹಾಲನ್ನು ಮಾಡಿಟ್ಟುಕೊಳ್ಳಿ. ಅಕ್ಕಿ ಬೇಯಿಸಲು ಒಂದು ನಾನ್ ಸ್ಟಿಕ್ ತವಾ ಬಾಣಲೆ ಇದ್ರೆ ಒಳ್ಳೆಯದು. ಅಥವಾ ನಾನ್ ಸ್ಟಿಕ್ ಕುಕ್ಕರ್ ಅಲ್ಲಿ ಸಹ ಅಕ್ಕಿ ಬೆಯಿಸಬಹುದು.

 

 

ನಾನ್ ಸ್ಟಿಕ್ ಬಾಣಲೆ ಬಿಸಿಗೀಟ್ಟು ಅಕ್ಕಿ ಹಾಕಿ ಅದಕ್ಕೆ ಸರಿಯಾಗಿ ಎರಡರಷ್ಟು ಪ್ರಮಾಣ ತೆಂಗಿನ ಹಾಲನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಲು ಇಡೀ. ಉದಾಹರಣೆಗೆ ಮುಕ್ಕಾಲು ಕಪ್ ಅಕ್ಕಿಗೆ ನಾಲ್ಕು ವರೆ ಕಪ್ ತೆಂಗಿನ ಕಾಯಿ ಹಾಲನ್ನು ಹಾಕಿದರೆ ಅನ್ನ ಬಿಡಿ ಬಿಡಿಯಾಗಿ ಬರುತ್ತದೆ. ಅರ್ಧ ಕಪ್ ಕಡಿಮೆಯೇ ಹಾಕಿ. ಯಾಕೆಂದ್ರೆ ಕಾಯಿ ಹಾಲಿನಲ್ಲಿ ಎಣ್ಣೆ ಇರುತ್ತದೆ ಆಗ ಅಂಟುವ ಸಾಧ್ಯತೆ ಇರುತ್ತದೆ. ಈಗ ಇನ್ನೊಂದು ಫ್ರೈಇಂಗ್ ಪಾನ್ ಅಲ್ಲಿ ಕೊಬ್ಬರಿ ಎಣ್ಣೆ ಹಾಕಿ ಇದಕ್ಕೆ ಕೊಬ್ಬರಿ ಎಣ್ಣೆಯನ್ನೆ ಉಪಯೋಗಿಸಿ ಆಗ ಮಾತ್ರ ಇದರ ಘಮ ರುಚಿ ಚೆನ್ನಾಗಿರುತ್ತದೆ. ಎಣ್ಣೆ ಬಿಸಿ ಆದ ಮೇಲೆ ಸಾಸಿವೆ ಹಾಕಿ ಸಿಡಿಯಲು ಬಿಡಿ ನಂತರ ಕಡ್ಲೆ ಬೇಳೆ ಹಾಕಿ ಫ್ರೈ ಮಾಡಿ ಶೇಂಗಾ ಹಾಕಿ ಚೆನ್ನಾಗಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

 

 

ಒಂದು ಚಮಚ ಉದ್ದಿನ ಬೇಳೆ, ಮೂರು ಬ್ಯಾಡಗಿ ಮೆಣಸಿನಕಾಯಿ ತುಂಡು ಮಾಡಿ ಸೇರಿಸಿ. ಇದರ ರುಚಿಯೇ ಒಂಥರಾ ಅದ್ಭುತ. ಒಂದು ಟೀ ಚಮಚದಷ್ಟು ಜೀರಿಗೆ ಎರಡು ದಂಟು ಕರಿಬೇವು ಸೊಪ್ಪು ಹಾಗೂ 5 ಹಸಿ ಮೆಣಸಿನಕಾಯಿಯನ್ನು ಸೀಳಿ ಹಾಕಿ ಫ್ರೈ ಮಾಡಿ. 8-10 ಗೋಡಂಬಿ ದ್ರಾಕ್ಷಿ ಹಾಕಿ. ತಿನ್ನುವಾಗ ಬಾಯಿಗೆ ಸಿಕ್ಕರೆ ಮಜಾ ಕೊಡುತ್ತದೆ. ಈ ಕೊಕೊನಟ್ ರೈಸ್ ಗೆ ಒಗ್ಗರಣೆ ಮುಖ್ಯ ಹಾಗಾಗಿ ಒಗ್ಗರಣೆ ಸಾಮಗ್ರಿಗಳು ಜಾಸ್ತಿ ಕಾಣಿಸುತ್ತವೆ. ಇವಾಗ ಅರ್ಧ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ರುಚಿಗೆ ಅನುಗುಣವಾಗಿ ಉಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ. ಈಗ ಅನ್ನ ಆಗಿದೆ. ಬೆಂದಿರುವ ಅನ್ನಕ್ಕೆ ಈ ಒಗ್ಗರಣೆ ಸೇರಿಸಿ ಚೆನ್ನಾಗಿ ಕಲಸಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಸ್ವಾದಿಷ್ಟಕರ ಕೊಕೊನಟ್ ತೆಂಗಿನನ್ನ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *