ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಕಟ್ಟಿರುವ ಒಂದೊಂದು ದೇಗುಲಗಳು ಒಂದೊಂದು ಬಗೆಯ ವೈಶಿಷ್ಟ್ಯತೆ ಗಳನ್ನ ಒಳಗೊಂಡಿವೆ. ಅದ್ರಲ್ಲೂ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಈ ದೇಗುಲವು ತನ್ನ ಕಲಾ ಕೆತ್ತನೆಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಮತ್ತೆ ಮತ್ತೆ ನೋಡಬೇಕು ಅಂತ ಅನ್ಸಿಸುವ ಸುಂದರ ಕಲಾ ಕುಸಿರಿಗಳನ್ನು ಹೊಂದಿರುವ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಕುರಿತು ಮಾಹಿತಿ ಪಡೆದುಕೊಂಡು ಬರೋಣ. ಅರಸೀಕೆರೆ ಯ ಕಲಶಕ್ಕೆ ಪ್ರಾಯವಿತ್ತಂತೆ ಅತಿ ಹೆಚ್ಚು ಭಕ್ತರನ್ನು ತನ್ನತ್ತ ಸೆಳೆಯುವ ಅರಸೀಕೆರೆಯ ಶಿವಾಲಯ ವೂ ಅದ್ಭುತವಾದ ವಾಸ್ತು ಶಿಲ್ಪ ಕಲೆಗಳನ್ನು ಹೊಂದಿದ್ದು ದೇಗುಲದ ಮುಖ್ಯ ಗರ್ಭ ಗುಡಿಯಲ್ಲಿ ಮಹೇಶ್ವರ ನು ಲಿಂಗ ರೂಪಿಯಾಗಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ.
ಕಪ್ಪು ವರ್ಣದ ಶಿವ ಲಿಂಗದ ಮುಂದೆ ನಂದಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವನ ಬಳಿ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಮನದ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳ ನ ದಂಡ ನಾಯಕನಾಗಿದ್ದ ರಾಜಿಮಯ್ಯನಿಂದ ಕ್ರಿಶ 1220 ರಾಲ್ಲಿ ನಿರ್ಮಾಣವಾದ ಈ ದೇಗುಲವು ಹೊಯ್ಸಳರ ಕಾಲದ ವಾಸ್ತು ರಚನೆಯ ಶೈಲಿಯಲ್ಲಿ ವಿಶಿಷ್ಟ ವಿನ್ಯಾಸ ಹೊಂದಿದೆ. ಬೇರೆಲ್ಲಾ ಹೊಯ್ಸಳರ ಕಾಲದ ದೇವಾಲಯಗಳನ್ನು ಜಗತಿಯ ಮೇಲೆ ನಿರ್ಮಿಸಿದರೆ ಈ ದೇಗುಲವನ್ನು ಗಟ್ಟಿ ನೆಲದ ನೇಕೆ ತೊಲೆಗಳನ್ನು ಇಟ್ಟು ನಿರ್ಮಿಸಲಾಗಿದೆ. ದೇಗುಲವು ಸುಂದರವಾದ ಗರ್ಭಗೃಹ, ಸುಃಖಾಸೀನ, ನವರಂಗ ಮತ್ತು ಸಭಾ ಮಂಟಪವನ್ನು ಒಳಗೊಂಡಿದೆ. ಇನ್ನೂ ಈ ದೇಗುಲದ ಗೋಪುರವು 5 ಸ್ತರಗಳನ್ನು ಒಳಗೊಂಡಿದ್ದು, ಗೋಪುರವನ್ನು ವೇಸರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗೋಪುರದ ಮೇಲೆ ಕೆತ್ತಿರುವ ಸೂಕ್ಷ್ಮ ಕೆತ್ತನೆಗಳು ದೇಗುಲದ ಅಂದವನ್ನು ಹೆಚ್ಚಿಸುತ್ತದೆ. ಈ ಮಂದಿರದ ಮುಖ ಮಂಟಪ 16 ಮೂಲೆಗಳನ್ನು ಹೊಂದಿದ್ದು, ನಕ್ಷತ್ರ ಆಕಾರದಲ್ಲಿ ಮುಖ ಮಂಟಪವನ್ನು ನಿರ್ಮಿಸಲಾಗಿದೆ. ಇಲ್ಲಿನ ಮುಖ ಮಂಟಪ ತೆರೆದ ಮಂಟಪ ಆಗಿದ್ದು, ಮೇಲಿನಿಂದ ನೋಡಿದರೆ ಬೋರಲು ಹಾಕಿದ ಹರಿ ಗೋಲಿನಂತೆ ಈ ಮಂಟಪ ಕಾಣುತ್ತೆ. ಇಲ್ಲಿನ ಸುಖಾಸೀನಾ ಅಂದ್ರೆ ಗರ್ಭ ಗುಡಿಯ ಮುಂಬಾಗದ ಸ್ಥಳದ ಮೇಲ್ಛಾವಣಿಯಲ್ಲಿ ಪಾಂಡವರು ಪುರಾಣ ಶ್ರವಣ ಮಾಡುತ್ತಿರುವ ದೃಶ್ಯ, ದ್ರೋಣಾಚಾರ್ಯರು ಧನುರ್ವಿದ್ಯೆ ಕಲಿಯುತ್ತಿರುವ ದೃಶ್ಯ, ಕೌರವ ಪಾಂಡವರು ದ್ಯೂತ ಆಡುತ್ತಿರುವುದು ಸಮುದ್ರ ಮಂಥನದ ದೃಶ್ಯ ಹಾಗೂ ಶಿವ ತಾಂಡವ ದೃಶ್ಯದ ಕೆತ್ತನೆ ಮಾಡಲಾಗಿದೆ.
ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಇಲ್ಲಿನ ಹೊರ ಗೋಡೆಯ ಮೇಲೆ 120 ದೇವರ ಮೂರ್ತಿಗಳ ಶಿಲ್ಪವನ್ನು ಕೆತ್ತಲಾಗಿದೆ. ಪ್ರತಿಯೊಂದು ದೇವರ ಮೂರ್ತಿಯ ಕೆಳಗೆ ಆಯಾ ದೇವರ ಹೆಸರನ್ನು ಬರೆಯಲಾಗಿದೆ. ಈ ರೀತಿ ಪ್ರತಿಯೊಂದು ದೇವರ ಮೂರ್ತಿಯ ಕೆಳಗೆ ಆಯಾ ದೇವರ ಹೆಸರನ್ನು ಬರೆದಿರುವ ದೇಗುಲವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇನ್ನೂ ಇಲ್ಲಿನ ನವರಂಗದಲ್ಲಿ 8 ಕಂಬಗಳು ಇದ್ದು, ಹೊರಸುತ್ತಿನ 4 ಕಂಬಗಳು ಚೌಕಾಕಾರದಲ್ಲಿ ಇದ್ರೆ ಒಳಗಿನ 4 ಕಂಬಗಳು ಹೊಳೆಯುವ ಕಂಬಗಳು ಆಗಿವೆ. ಈ ಕಂಬಗಳ ಮೇಲೆ ಕೆತ್ತಿರುವ ಮಣಿ ಮಾಲೆಗಳು ನೋಡುಗರ ಕಣ್ಮನ ತಣಿಸುತ್ತದೆ. ಗರ್ಬಗುಡೀಯ ಶಿವನ ಲಿಂಗವು ನಮ್ಮನ್ನು ಭಕ್ತಿಯ ಸರೋವರದಲ್ಲಿ ಮಿಂದೇಳುವಂತೆ ಮಾಡುತ್ತದೆ. ಇನ್ನೂ ದೇವಾಲಯದ ಸುತ್ತ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ದೇವಾಲಯದ ಹೊರಗಡೆ ನಾಗ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ಶಿವರಾತ್ರಿಯಂದು ದೇಗುಲವನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಶಿವರಾತ್ರಿ ದಿನ ಇಲ್ಲಿ ನೆಲೆಸಿರುವ ಭಗಂತನಿಗೆ ರುದ್ರಾಭಿಷೇಕ ಹಾಗೂ ವಿವಿಧ ಪೂಜೆ ನಡೆಯುತ್ತದೆ. ಚಂದ್ರಮೌಳೇಶ್ವರ ಎಂಬ ನಾಮದಿಂದ ಭಕ್ತರನ್ನು ಸಲಹುತ್ತಿರುವ ಈ ದೇವನನ್ನು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೂ ದರ್ಶನ ಮಾಡಬಹುದು. ಸಾಧ್ಯವಾದರೆ ಅದ್ಭುತ ವಾಸ್ತುಶಿಲ್ಪ ಹಾಗೂ ಭಕ್ತಿಯ ಪರಾಕಾಷ್ಠೆಯ ಸಂಕೇತ ಆದ ಈ ದೇವಾಲಯಕ್ಕೆ ನೀವು ಒಮ್ಮೆ ಭೇಟಿ ನೀಡಿ. ಶುಭದಿನ.