ನಮಸ್ತೆ ಪ್ರಿಯ ಓದುಗರೇ, ಹೊಟ್ಟೆಯುಬ್ಬರ, ಹೊಟ್ಟೆ ನೋವು, ಗ್ಯಾಸ್ ಟ್ರಬಲ್ ಇಂಥ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಣಿಸಿಕೊಳ್ಳುವುದು ಸಾಮಾನ್ಯ ಆಗಿದೆ. ಯಾಕೆಂದ್ರೆ ಇಂದಿನ ದಿನಗಳಲ್ಲಿ ಜೀವನ ಶೈಲಿಯೂ ಹಾಗಿದೆ. ಒತ್ತಡ ಅನಾರೋಗ್ಯಕರ ಆಹಾರ ಕ್ರಮ ಹಾಗೂ ಅತಿಯಾದ ಔಷಧಿ ಸೇವನೆಯೂ ಹೊಟ್ಟೆಯುಬ್ಬರ ಇನ್ನೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಕಾರಣ ಆಗಿರಬಹುದು. ಇವೆಲ್ಲವೂ ನಮಗೆ ಕಿರಿ ಕಿರಿ ಉಂಟು ಮಾಡುತ್ತದೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರಕ್ಕೆ ಆಯುರ್ವೇದದಲ್ಲಿ ಒಳ್ಳೆಯ ಪರಿಹಾರ ಸೂಚಿಸಲಾಗಿದೆ. ಅದರೊಂದಿಗೆ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಗ್ಯಾಸ್ ಟ್ರಬಲ್ ಇಂದ ಮುಕ್ತಿ ಪಡೆಯಬಹುದು. ಆ ನಿಯಮಗಳು ಯಾವುವು ಅಂದ್ರೆ ಪ್ರತಿನಿತ್ಯ ಕನಿಷ್ಟ ಅರ್ಧ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಮಾಡಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮತ್ತು ಯೋಗ ಇವುಗಳನ್ನು ನಿತ್ಯವೂ ತಪ್ಪದೇ ಮಾಡಬೇಕು.
ನಾರಿನ ಅಂಶ ಅಧಿಕ ಇರುವ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಟೀ ಕಾಫಿ ಸೇವನೆಯನ್ನು ತ್ಯಜಿಸಬೇಕು. ಮಸಾಲ ಪದಾರ್ಥಗಳು ಕರಿದ ತಿಂಡಿಗಳು ಫಾಸ್ಟ್ ಫುಡ್ ಮಧ್ಯಪಾನ ಧೂಮಪಾನವನ್ನು ತ್ಯಜಿಸಬೇಕು. ಹಾಗೂ ಪ್ರತಿನಿತ್ಯ ಒಂದೇ ಸಮಯಕ್ಕೆ ಊಟಾ ತಿಂಡಿಗಳನ್ನು ಸೇವನೆ ಮಾಡಬೇಕು. ಸಾಕಷ್ಟು ನೀರನ್ನು ಕುಡಿಯಬೇಕು. ಉಪ್ಪಿನಕಾಯಿ ಹಾಗೂ ಶೇಖರಿಸಿ ಇಟ್ಟ ಆಹಾರವನ್ನು ತಿನ್ನುವುದನ್ನು ಬಿಡಬೇಕು. ಇನ್ನೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಇಂದ ಮುಕ್ತಿ ಪಡೆಯಲು ಕೆಲವೊಂದಿಷ್ಟು ಮನೆ ಮದ್ದುಗಳನ್ನು ಉಪಯೋಗ ಮಾಡಬಹುದು. ಆ ಮನೆಮದ್ದುಗಳು ಯಾವುವು ಅಂದ್ರೆ ವಿಲ್ಯೆದೆಲೆ. ಈ ವಿಲ್ಯೆದೆಲೆ ತೆಗೆದುಕೊಂಡು ಅದಕ್ಕೆ ಮೂರು ನಾಲ್ಕು ಲವಂಗವನ್ನು ಸೇರಿಸಿ ಜಗಿದು ತಿಂದರೆ ಹೊಟ್ಟೆಯುಬ್ಬರ ಕಡಿಮೆ ಆಗುತ್ತದೆ. ಹಸಿ ಶುಂಠಿ ಗೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಹೊಟ್ಟೆಯುಬ್ಬರ ಕಡಿಮೆ ಆಗುತ್ತದೆ. ಇನ್ನೂ ಮಜ್ಜಿಗೆ ಸೇವನೆ ಮಾಡಿದರೆ ಉತ್ತಮ. ಕೆಲವೊಂದು ಸಲ ನಾವು ಸೇವನೆ ಮಾಡುವ ಆಹಾರದ ಮೂಲಕ ದೇಹದ ಒಳಗೆ ಕಲ್ಮಶ ವಿಷ ಸೇರಿದ್ದಾರೆ ಮಜ್ಜಿಗೆ ಸೇವನೆಯಿಂದ ಸರಿ ಹೋಗುತ್ತದೆ ಎನ್ನುತ್ತಾರೆ.
ಹಾಗಾಗಿ ಊಟದ ಕೊನೆಯಲ್ಲಿ ಮಾಜಿಗೆ ಸೇವನೆ ಮಾಡುವ ಅಭ್ಯಾಸ ಹಿಂದಿನಿಂದ ರೂಢಿಯಲ್ಲಿದೆ. ಈ ಮಜ್ಜಿಗೆಗೆ ಚಿಟಿಕೆ ಇಂಗು ಸೇರಿಸಿ ಕುಡಿದರೆ ಹುಳಿ ತೆಗು, ಗ್ಯಾಸ್ ಸಮಸ್ಯೆ ಕಡಿಮೆ ಆಗುತ್ತದೆ. ಹೊಟ್ಟೆಯ ಬಹುತೇಕ ಸಮಸ್ಯೆಗಳಿಗೆ ಜೀರಿಗೆ ಒಂದು ರಾಮಬಾಣ ದಂತೆ ಕೆಲಸ ಮಾಡುತ್ತದೆ. ಅದು ಹೊಟ್ಟೆಯುಬ್ಬರ ಆಗಿರಬಹುದು ಗ್ಯಾಸ್ ಆಗಿರಬಹುದು, ಅಜೀರ್ಣ ಸಮಸ್ಯೆ ಇರಬಹುದು, ಈ ಎಲ್ಲಾ ಸಮಸ್ಯೆಗಳಿಗೆ ಜೀರಿಗೆ ಬಹಳ ಒಳ್ಳೆಯದು. ಈ ಜೀರಿಗೆ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪಾದನೆ ಆಗದಂತೆ ನೋಡಿಕೊಳ್ಳುತ್ತದೆ. ಹೊಟ್ಟೆಯ ಸಮಸ್ಯೆ ಆದಾಗ ಜೀರಿಗೆಯನ್ನು ನೀರಲ್ಲಿ ಕುದಿಸಿ ತಣ್ಣಗಾದ ಮೇಲೆ ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವ ಬ್ಯಾಕ್ಟೀರಿಯಾ ಸಾಯುತ್ತದೆ ಹಾಗೂ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್ ಸಮಸ್ಯೆ ಇದ್ದಾಗ ಅಜ್ವಾನ ಪುಡಿಯನ್ನು ಸೇವಿಸುತ್ತಾ ಬಂದರೆ ಹೊಟ್ಟೆಯುಬ್ಬರ ಹಾಗೂ ಗ್ಯಾಸ್ ಟ್ರಬಲ್ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ, ನಿಂಬೆ ರಸ ಸೇರಿಸಿ ಕುಡಿಯುವುರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.