ನಮಸ್ತೆ ಪ್ರಿಯ ಓದುಗರೇ, ಸಾದಾ ಮ್ಯಾಗಿ ನೀವು ಬಹಳಷ್ಟು ಬಾರಿ ತಿಂಡಿರ್ಥಿರ ಆದ್ರೆ ಇಂದಿನ ಲೇಖನದಲ್ಲಿ ಹೇಳಿ ಕೊಡುವ ಮ್ಯಾಗಿ ರೆಸಿಪಿನ ನೀವು ಒಂದು ಸಾರಿ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಚಿಕ್ಕ ಮಕ್ಕಳಿಗೆ ಅಂತೂ ಇದು ಬಹಳ ಇಷ್ಟ ಆಗುತ್ತೆ. ಇವತ್ತು ನಾವು ತಿಳಿಸಿಕೊಡುವ ಮ್ಯಾಗಿ ರೆಸಿಪಿ ಚಿಕ್ಕ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೆ ಕೂಡ ಇಷ್ಟ ಆಗುತ್ತೆ ಅಷ್ಟು ಡೇಲಿಷಿಯಸ್ ಆಗಿರುತ್ತೆ. ಹಾಗಾದ್ರೆ ತಡ ಮಾಡದೆ ಇವತ್ತಿನ ಸಂಜೆ ಸಮಯದ ಒಂದು ಮುದ್ದಾದ ರುಚಿಕರವಾದ ಸ್ನಾಕ್ಸ್ ಮಾಡುವ ವಿಧಾನ ನೋಡೋಣ ಬನ್ನಿ. ನೀವು ಇಲ್ಲಿ ಮೂರು 5 ರೂಪಿ ಮ್ಯಾಗಿ ಪ್ಯಾಕೆಟ್ ತೆಗೆದುಕೊಳ್ಳಿ. ಇವುಗಳಲ್ಲಿ ಸದ್ಯಕ್ಕೆ ಎರಡು ಪ್ಯಾಕೆಟ್ ಬಳಸಿ ಇನ್ನೊಂದನ್ನು ಆಮೇಲೆ ಬಳಸಬೇಕಾಗುತ್ತದೆ. ಈಗ ಎರಡು ಮ್ಯಾಗಿ ಪ್ಯಾಕೆಟ್ ಓಪನ್ ಮಾಡಿ ಅದರಲ್ಲಿರುವ ಮ್ಯಾಗಿ ಮಸಾಲ ಪೌಡರ್ ನ ಒಂದು ಕಡೆ ಎತ್ತಿಡಿ ಇವುಗಳನ್ನು ಆಮೇಲೆ ಬಳಸಬೇಕಾಗುತ್ತದೆ. ಈಗ ಗ್ಯಾಸ್ ಮೇಲೆ ಒಂದು ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಒಂದು ಚಿಟಿಕೆ ಉಪ್ಪು ಹಾಕಿ ಕುದಿಯಲು ಇಡಿ.
ನೀರು ಕುದ್ಧ ಮೇಲೆ ಮೊದಲೇ ಓಪನ್ ಮಾಡಿದ ಮ್ಯಾಗಿ ನೂಡಲ್ಸ್ ಹಾಕಿ ಮುಕ್ಕಾಲು ಭಾಗ ಬೆಯುವಂತೆ ನೋಡಿಕೊಳ್ಳಿ. ಬೆಂದ ನಂತರ ಆ ನೀರನ್ನು ಬಸಿದು ಬರೀ ಬೆಂದ ಮ್ಯಾಗಿಯನ್ನು ಒಂದು ಬೌಲ್ ಗೆ ವರ್ಗಾಯಿಸಿ. ಇದಕ್ಕೆ ಒಂದು ಬಟ್ಟಲು ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 4 ಚಮಚ ಕಾರ್ನ್ ಫ್ಲೋರ್, ನಿಮ್ಮಲ್ಲಿ ಕಾರ್ನ್ ಫ್ಲೋರ್ ಸಿಕ್ಕಿಲ್ಲ ಅಂದ್ರೆ 2 ಚಮಚ ಅಕ್ಕಿ ಹಿಟ್ಟು 2 ಚಮಚ ಮೈದಾ ಹಿಟ್ಟು ಹಾಕಬಹುದು. ನಂತರ ಮೊದಲು ತೆಗೆದಿಟ್ಟ ಎರಡು ಮ್ಯಾಗಿ ಮಸಾಲ ಪೌಡರ್ ಪ್ಯಾಕೆಟ್ ಕಟ್ ಮಾಡಿ ಹಾಕಿ. ಇದನ್ನು ಚೆನ್ನಾಗಿ ಕಲಸಿ. ಹಾಗಂತ ಮುದ್ದೆ ರೀತಿ ಕಲಸಬೇಡಿ. ಮೆತ್ತಗೆ ಮೃದುವಾಗಿ ಎಲ್ಲಾ ಬೆರೆಯುವಂತೆ ಕಲಸಿ ಚಿಕ್ಕ ಚಿಕ್ಕ ಜಾಮೂನ್ ಆಕಾರದ ಉಂಡೆಗಳಾಗಿ ಕೈಯಲ್ಲಿ ಮಾಡಿಡಿ. ನಂತರ ಒಂದು ಬಟ್ಟಲಲ್ಲಿ ಒಂದು ಚಮಚ ಕಾರ್ನ್ ಫ್ಲೋರ್ ಅಥವಾ ಕಾರ್ನ್ ಫ್ಲೋರ್ ಸಿಕ್ಕಿಲ್ಲ ಅಂದ್ರೆ ಇಂದು ಚಮಚ ಮೈದಾ ಹಿಟ್ಟಿಗೆ 2 ಚಮಚ ನೀರು ಹಾಕಿ ಪೇಸ್ಟ್ ರೀತಿ ತಯಾರಿಸಿ.
ಮೊದಲು ಒಂದು ಪ್ಯಾಕೆಟ್ ಮ್ಯಾಗಿ ನ ಹಾಗೆ ಇಟ್ಟಿದ್ವಿ ಅಲ್ವಾ. ಆ ಪ್ಯಾಕೆಟ್ ನ ಹೊರಗಿಂದ ಚೆನ್ನಾಗಿ ಅದುಮಿ ಪುಡಿ ಮಾಡಿ ಪ್ಯಾಕೆಟ್ ಓಪನ್ ಮಾಡಿ ಒಂದು ಬಟ್ಟಲಿಗೆ ಹಾಕಿ. ಈಗ ರೆಡಿ ಮಾಡಿದ ಮ್ಯಾಗಿ ಉಂಡೆಗಳನ್ನು ಮೊದಲು ಕಾರ್ನ್ ಫ್ಲೋರ್ ಪೇಸ್ಟ್ ಅಲ್ಲಿ ಹೊರಳಾಡಿಸಿ ನಂತರ ಅದನ್ನು ಪುಡಿ ಮಾಡಿದ ಡ್ರೈ ಮ್ಯಾಗಿ ನೂಡಲ್ಸ್ ಅಲ್ಲಿ ಹೊರಳಾಡಿಸಿ ಮೊದಲೇ ಕಾಯಲು ಇಟ್ಟ ಎಣ್ಣೆಯಲ್ಲಿ ಮುದ್ದಾದ ಹೊಂಬಣ್ಣ ಬರುವ ಹಾಗೆ ಕರಿಯಿರಿ. ಗ್ಯಾಸ್ ಲೋ ಫ್ಲೇಮ್ ಅಲ್ಲಿಟ್ಟು ಕರಿಯಿರಿ. ಹೀಗೆ ಮಾಡುವುದರಿಂದ ಮ್ಯಾಗಿ ಬಾಲ್ ಒಳಗಿಂದ ಬೇಯುತ್ತದೆ. ನಂತರ ಒಂದು ಬಾಣಲೆ ಬಿಸಿಗಿಟ್ಟೂ ಅದಕ್ಕೆ ಒಂದು ದೊಡ್ಡದಾಗಿ ಕಟ್ ಮಾಡಿದ ಈರುಳ್ಳಿ, 8-10 ಎಸಳು ಚಿಕ್ಕದಾಗಿ ಕಟ್ ಮಾಡಿದ ಬೆಳ್ಳುಳ್ಳಿ, ಒಂದು ಹಸಿ ಮೆಣಸಿನಕಾಯಿ, ಸ್ವಲ್ಪ ಕ್ಯಾಪ್ಸಿಕಂ, ಒಂದು ಟೊಮೆಟೊ ಹಾಕಿ ಬಾಡಿಸಿ ನಂತರ ಇದಕ್ಕೆ ಉಪ್ಪು ಅಚ್ಚ ಖಾರದ ಪುಡಿ, ಟೊಮೆಟೊ ಸಾಸ್, ಸೋಯಾ ಸಾಸ್, ಹಾಗೂ ಉಳಿದ ಕಾರ್ನ್ ಫ್ಲೋರ್ ಪೇಸ್ಟ್ ಹಾಕಿ ನೀರು ನೀರಾಗಿ ಗ್ರೇವಿ ರೀತಿ ಮಾಡಿ. ಈಗ ಮೊದಲು ಕರಿದ ಮ್ಯಾಗಿ ಬಾಲ್ ಗಳನ್ನ ಅದರಲ್ಲಿ ಹಾಕಿ ಸೇಮ್ ಮಂಚೂರಿಯನ್ ರೀತಿ ಫ್ರೈ ಮಾಡಿ. ಈಗ ಬಿಸಿ ಬಿಸಿಯಾದ ಬಾಯಲ್ಲಿ ನೀರು ತರಿಸುವ ಮ್ಯಾಗಿ ಮಂಚೂರಿಯನ್ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.