ನಮಸ್ತೆ ಪ್ರಿಯ ಓದುಗರೇ, ಮೊದಲೆಲ್ಲ ವಯಸ್ಸಾದ ಮೇಲೆ ಮಂಡಿ ನೋವಿನಂತಹ ಸಮಸ್ಯೆಗಳು ಬರುತ್ತಾ ಇದ್ದವು ಆದ್ರೆ ಇತ್ತೀಚಿನ ದಿನಗಳಲ್ಲಿ ವಯಸ್ಸು 25 ರಿಂದ 30 ದಾಟಿರುವುದಿಲ್ಲ ಆಗಲೇ ಈ ಮಂಡಿ ನೋವು ಸೊಂಟ ನೀವು ಅನೇಕ ಥರದ ಸಮಸ್ಯೆಗಳು ಕಾಡುತ್ತಾ ಇದೆ. ಒಮ್ಮೆ ಈ ಮಂಡಿ ನೋವು ಬಂದ್ರೆ ಸಾಕಪ್ಪಾ ಸಾಕು ಅನಿಸಿಬಿಡುತ್ತದೆ. ಕುಳಿತುಕೊಂಡರೆ ಮೇಲೆ ಏಳಲು ಕಷ್ಟ ಆಗುತ್ತದೆ ಅಷ್ಟೊಂದು ನೋವು ಬರುತ್ತಾ ಇರುತ್ತದೆ. ಈ ಮಂಡಿ ನೋವು ಯಾರಿಗೆ ಯಾವಾಗ ಯಾವ ಸಮಯದಲ್ಲಿ ಬರುತ್ತದೆ ಎಂಬುದರ ಅರಿವು ಇರುವುದಿಲ್ಲ. ಕೆಲವೊಮ್ಮೆ ಸಣ್ಣಗೆ ನೋಯಲು ಶುರುವಾಗಿ ಕೊನೆಗೆ ದೀರ್ಘ ಕಾಲದ ನೋವಾಗಿ ಬದಲಾಗಿ ವರ್ಷಗಟ್ಟಲೆ ಇದು ಕಾಟ ಕೊಡುತ್ತದೆ. ಆದ್ರೆ ಇದ್ದಕ್ಕಿದ್ದಂತೆ ಮಂಡಿ ನೋವು ಬರಲು ಕಾರಣ ಪತ್ತೆ ಹಚ್ಚುವುದು ತುಂಬ ಕಷ್ಟ. ಮೂಳೆಗಳ ಸಾಂದ್ರತೆ ಕಡಿಮೆ ಆಗಿ ದೇಹದಲ್ಲಿ ಕ್ಯಾಲ್ಸಿಯಂ ಕಬ್ಬಿಣ ಅಂಶ ಕಡಿಮೆ ಆದಾಗ ಈ ನೋವುಗಳು ಬರುತ್ತವೆ. ವಯಸ್ಸಾದವರಲ್ಲಿ ಸಾಮಾನ್ಯವಾಗಿ ಮೂಳೆಗಳ ಸವೆತದಿಂದ ಕೂಡ ಮಂಡಿ ನೋವು ಬರಬಹುದು. ತಜ್ಞರು ಹೇಳುವ ಪ್ರಕಾರ ಮಂಡಿ ನೋವಿಗೆ ಅನೇಕ ರೀತಿಯ ಕಾರಣಗಳು ಇವೆ. ಅದ್ರಲ್ಲಿ ವಿಟಮಿನ್ ಡೀ ಕೊರತೆ ಕ್ಯಾಲ್ಸಿಯಂ ಅಂಶ ಕಡಿಮೆ ಆದಂತೆ ದೇಹದಲ್ಲಿ ಮಂಡಿ ನೋವು ಆರಂಭ ಆಗುತ್ತವೆ.
ಈ ಮಂಡಿ ನೋವಿಗೆ ಯಾವುದೇ ವಯಸ್ಸಿನ ಬೇಧ ಇರುವುದಿಲ್ಲ. ಯಾರಿಗೆ ಈ ಕಬ್ಬಿಣ ಕ್ಯಾಲ್ಸಿಯಂ ಅಂಶ ಕಡಿಮೆ ಆಗುತ್ತದೋ ಅಂಥವರಿಗೆ ಈ ಮಂಡಿ ನೋವು, ಬಾಡಿ ಪೇನ್ಸ್ ಬರೆದು ಇಟ್ಟಿದ್ದೆ. ಸಾಮಾನ್ಯವಾಗಿ ವಿಟಮಿನ್ ಡೀ ದೇಹದಲ್ಲಿ ಮೂಳೆಗಳ ರಕ್ಷಣೆ ಮಾಡುತ್ತದೆ. ಮಂಡಿ ನೋವಿಗೆ ಗುರಿಯಾದ ವಿಟಮಿನ್ ಡೀ ಕೊರತೆ ಆದರೆ ಅನೇಕ ರೋಗಗಳು ನಮ್ಮ ದೇಹದ ಇತರೆ ಭಾಗಗಳಿಗೆ ನೋವನ್ನು ಉಂಟು ಮಾಡುತ್ತದೆ. ನೀವು ಅಧಿಕ ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಒಳ್ಳೆಯ ಪೌಷ್ಟಿಕಾಂಶ ಇರುವಂಥ ಆಹಾರಗಳನ್ನು ಸೇವಿಸಬೇಕು. ಹಾಗೂ ಒಳ್ಳೆಯ ವಿಟಮಿನ್ ಇರ್ವಂತ ಹಣ್ಣು ತರಕಾರಿ ಸೇವಿಸಬೇಕು. ಸೊಪ್ಪು ತರಕಾರಿ ಹಾಲು ಮೊಸರು ತುಪ್ಪ ಬೆಣ್ಣೆ ಬಾದಾಮಿ ಗೋಡಂಬಿ ಇಂತಹ ರಿಚ್ ಫುಡ್ ಗಳನ್ನ ಸೇವಿಸಬೇಕು. ಇದರಿಂದ ನಿಮ್ಮ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ. ಅದ್ರಲ್ಲೂ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಇಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೇಲಿನ ಸಿಪ್ಪೆ ತೆಗೆದು ಸೇವಿಸುವುದರಿಂದ ಅಧಿಕ ಕ್ಯಾಲ್ಸಿಯಂ ಸಿಕ್ಕು ಮೂಳೆಗಳಿಗೆ ಹಾಗೂ ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಇನ್ನೂ ನೋವು ಇರುವ ಜಾಗಕ್ಕೆ ಲವಂಗದ ಎನ್ನೆಯನ್ನು ಹಚ್ಚಬೇಕು ಈ ಲವಂಗದ ಎಣ್ಣೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಅಥವಾ ಲವಂಗವನ್ನು ಜಜ್ಜಿ ಅದರಿಂದ ರಸವನ್ನು ತೆಗೆದು ನೋವು ಇರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ನೋವು ಬೇಗನೆ ಶಮನವಾಗುವುದು. ಅಡುಗೆಗೆ ಬಳಸುವ ಅರಿಷಿನದಲ್ಲಿ ನೋವನ್ನು ಗುಣಪಡಿಸುವ ಗುಣ ಹೊಂದಿದೆ. ಈ ಅರಿಶಿನವನ್ನು ಬಿಸಿಯಾದ ಹಾಲಿನೊಂದಿಗೆ ಸೇವಿಸುತ್ತಾ ಬಂದರೆ ಕೀಲು ನೋವು, ಮಂಡಿ ನೋವು, ಸಂಧಿವಾತಕ್ಕೆ ಸಂಬಂಧಿಸಿದ ನೋವುಗಳು ಕ್ರಮೇಣ ದೂರವಾಗುತ್ತದೆ.
ಈ ಅರಿಶಿನವನ್ನು ಚೆನ್ನಾಗಿ ನೀರಿನೊಂದಿಗೆ ಕಲಸಿ ಅದನ್ನು ಪೇಸ್ಟ್ ರೀತಿ ತಯಾರಿಸಿ ಅದನ್ನು ನೋವು ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಇದರಿಂದ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಮಂತ್ಯ ಕಾಳು ಕೂಡ ಮಂಡಿ ನೋವನ್ನು ಬೇಗ ಕಡಿಮೆ ಮಾಡುವಂಥ ಶಕ್ತಿಯನ್ನು ಹೊಂದಿದೆ. ಈ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಎದ್ದು ಆ ನೀರನ್ನು ಸೋಸಿಕೊಂಡು ಕುಡಿಯುವುದರಿಂದ ಹಾಗೂ ಕಾಳನ್ನು ಸೇವನೆ ಮಾಡುವುದರಿಂದ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಈ ಮೆಂತ್ಯ ಕಾಳನ್ನು ರುಬ್ಬಿ ಪೇಸ್ಟ್ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ನೋವು ಬೇಗನೆ ಶಮನವಾಗುವುದು. ಈ ಮೆಂತ್ಯ ಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಮಂಡಿ ನೋವು ಮಾತ್ರವಲ್ಲದೆ ನಿಮಗೆ ಶುಗರ್ ಇದ್ರೆ ಅದನ್ನೂ ಕಂಟ್ರೋಲ್ ಮಾಡುತ್ತೆ. ಅಷ್ಟೊಂದು ಶಕ್ತಿ ಈ ಮೆಂತ್ಯ ಕಾಳಿಗೆ ಇದೆ. ಓಂ ಕಾಳನ್ನು ಅರಿದು ನೋವು ಇರುವ ಜಾಗಕ್ಕೆ ಹಚ್ಚುವುದರಿಂದ ನೋವು ಬೇಗನೆ ವಾಸಿ ಆಗುತ್ತೆ. ದೇಹದ ಬೇರೆ ಎಲ್ಲಾದರೂ ನೋವುಗಳು ಇದ್ರೆ ಸ್ನಾನ ಮಾಡುವ ಅರ್ಧ ಗಂಟೆ ಮುಂಚೆ ಈ ಕೊಬ್ಬರಿ ಎಣ್ಣೆಯನ್ನು ಹದವಾಗಿ ಬಿಸಿ ಮಾಡಿ ನಂತರ ಆ ಕೊಬ್ಬರಿ ಎಣ್ಣೆ ತೆಗೆದುಕೊಂಡು ನೀವು ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಈ ಕೊಬ್ಬರಿ ಎಣ್ಣೆಗೆ ನೀವು ಕರ್ಪೂರ ಬೆರೆಸಿ ಮಸಾಜ್ ಮಾಡಿಕೊಂಡರೆ ನಿಮಗೆ ಬೇಗನೆ ನೋವು ಗುಣ ಆಗುತ್ತದೆ. ಈ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿದ ತಕ್ಷಣ ಸ್ನಾನ ಮಾಡಬೇಡಿ. ಮಸಾಜ್ ಮಾಡಿದ ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ಅದರ ಸಂಪೂರ್ಣ ಲಾಭ ಸಿಕ್ಕಂತೆ ಆಗುತ್ತದೆ. ಮಂಡಿ ನೋವು ಕಡಿಮೆ ಆಗಲು ಇನ್ನೊಂದು ಉತ್ತಮ ಉಪಾಯ ಏನು ಅಂದ್ರೆ ಬೆಳ್ಳುಳ್ಳಿಯ ಎಸಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಒಂದಿಷ್ಟು ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಸೇವನೆ ಮಾಡುವುದರಿಂದ ಮಂಡಿ ನೋವು ಬೇಗನೆ ವಾಸಿ ಆಗುತ್ತೆ. ಇವಿಷ್ಟೂ ಮಂಡಿ ನೋವಿಗೆ ಇರುವಂತಹ ಸುಲಭವಾದ ಮನೆಮದ್ದುಗಳು. ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಅದನ್ನು ಬಳಸಿ ನೋವಿನಿಂದ ಉಪಶಮನ ಪಡೆಯಿರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.