ಭಿನ್ನವಾದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪೂಜಿಸುವ ಹನುಮಂತನ ಏಕೈಕ ದೇವಾಲಯವಿದು..!!

ಭಿನ್ನವಾದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪೂಜಿಸುವ ಹನುಮಂತನ ಏಕೈಕ ದೇವಾಲಯವಿದು..!!

ನಮಸ್ತೆ ಪ್ರಿಯ ಓದುಗರೇ, ಆಂಜನೇಯ ಎಂಬ ದೇವನನ್ನು ನಂಬದೆ ಹೋದವರು ಯಾರಿದ್ದಾರೆ ಹೇಳಿ? ಈತನ ನಮ್ಮ ಸ್ಮರಣೆಯಿಂದ ಬಂದ ಕಷ್ಟಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ. ಅದ್ರಲ್ಲೂ ಶ್ರೀರಾಮಚಂದ್ರ ನಿಂದಾ ಚಿರಂಜೀವಿ ಆಗಿ ಭೂಮಿ ಮೇಲೆ ನೆಲೆಸು ಎಂಬ ವರ ಪಡೆದ ಸ್ವಾಮಿ ಕರ್ನಾಟಕದಲ್ಲಿ ಇಂದಿಗೂ ಜಾಗೃತನಾಗಿ ನೆಲೆಸಿ ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಇಡೆರಿಸುತ್ತ ಇದ್ದಾನೆ. ಬನ್ನಿ ತಡ ಮಾಡದೆ ಆ ಹನುಮನ ದರ್ಶನ ಪಡೆದು ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಸುಮಾರು 4500 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿರುವ ಭೋಗಾಪುರದಲ್ಲಿ ಪರೀಕ್ಷಿತ ಮಹಾರಾಜನ ಮಗ ರಾಜ ಜನಮೇಜಯ ಪ್ರತಿಷ್ಠಾಪಿಸಿ ಪೂಜಿಸಿದರು ಹನುಮಂತನ ವಿಗ್ರಹ ಇದ್ದು, ಈ ದೇಗುಲಕ್ಕೆ ಹೋಗಿ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದರೆ ಅಷ್ಟೈಶ್ವರ್ಯ ಸಿಗುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಒಡೆದು ಹೋದ, ಸೀಳಿ ಹೋದ ವಿಗ್ರಹವನ್ನು ಇಟ್ಟು ಪೂಜಿಸುವುದು ಇಲ್ಲ.

 

ಆದ್ರೆ ಈ ಕ್ಷೇತ್ರದ ವಿಶೇಷತೆ ಏನೆಂದರೆ ಹನುಮಂತನ ಒಡಕು ಮೂಡಿರುವ ವಿಗ್ರಹವನ್ನು ನಿತ್ಯ ಪೂಜೆ ಮಾಡಲಾಗುತ್ತದೆ ಎನ್ನುವುದು. ಈ ರೀತಿ ಆಂಜನೇಯ ಒಡಕು ವಿಗ್ರಹವನ್ನು ಇಲ್ಲಿ ಪೂಜೆ ಮಾಡುವುದರ ಹಿಂದೆ ಜನರು ರೋಚಕ ಕಥೆ ಇದೆ. ಬಹಳ ಹಿಂದೆ ಕಳ್ಳರು ಹಣದ ಆಸೆಗೆ ಬಿದ್ದು ಇಲ್ಲಿನ ಆಂಜನೇಯ ಮೂರ್ತಿಯನ್ನು ಒಡೆಯುತ್ತಾರೆ. ಆದ್ರೆ ಮೂರ್ತಿ ಒಳಗಡೆ ಯಾವ ಸಂಪತ್ತು ದೊರಕದ ಕಾರಣ ಹನುಮಂತನ ಮೂರ್ತಿಯನ್ನು ಒಡೆದ ರೀತಿಯಲ್ಲಿ ಕೆರೆಗೆ ಹಾಕಿ ಹೋಗುತ್ತಾರೆ. ನಂತರ ಆ ದೇಗುಲದ ಅರ್ಚಕರ ಕನಸಿನಲ್ಲಿ ಆಂಜನೇಯ ಕಾಣಿಸಿಕೊಂಡು ನನ್ನನ್ನು ಒಡೆದು ಕೆರೆಗೆ ಹಾಕಲಾಗಿದೆ, ನೀನು ನನ್ನನ್ನು ಹೊರ ತೆಗೆದು ನನ್ನ ಭಾಗಗಳನ್ನು ಜೋಡಿಸಿ ದೇಗುಲದ ಒಳಗಡೆ ಒಟ್ಟು, 11 ದಿನಗಳ ನಂತರ ದೇಗುಲದ ಬಾಗಿಲನ್ನು ತೆರೆ ನಿನಗೆ ಶುಭ ಆಗುತ್ತೆ ಎಂದು ಹೇಳಿದನಂತೆ. ನಂತರ ಅರ್ಚಕರು ಹನುಮಂತನ ಅಣತಿಯಂತೆ ಒಡೆದು ಚೂರಾದ ಮೂರ್ತಿಯನ್ನು ತಂದು ಪುನಃ ಜೋಡಿಸಿ ಗರ್ಭ ಗುಡಿಯಲ್ಲಿ ಇತ್ತು ಬಾಗಿಲು ಮುಚ್ಚುತ್ತಾರೆ. ಆದ್ರೆ ಹನುಮನ ಭಕ್ತನೊಬ್ಬ ಗರ್ಭ ಗುಡಿಯಲ್ಲಿ ಇರುವ ಆಂಜನೇಯನನ್ನು ನೋಡಬೇಕು ಎಂದು ಪರಿತಪಿಸಿದ ಕಾರಣ 10 ನೇ ದಿನಕ್ಕೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಸ್ವಾಮಿಯ ವಿಗ್ರಹದ ಎಲ್ಲಾ ಭಾಗಗಳು ಕೂಡಿದ್ರು ಒಂದು ದಿನ ಮುಂಚಿತವಾಗಿ ಬಾಗಿಲು ತೆರೆದಿದ್ದ ಕಾರಣ ಒಂದು ಸಣ್ಣ ಒಡಕು ವಿಗ್ರಹದಲ್ಲಿ ಹಾಗೆ ಉಳಿಯುತ್ತದೆ.

 

ಆದ್ರೆ ಸ್ವತಃ ಆಂಜನೇಯ ಸ್ವಾಮಿ ನನ್ನ ಈ ವಿಗ್ರಹವನ್ನು ನೀವು ಪೂಜಿಸಿ ಎಂದು ಹೇಳಿದರ ಪರವಾಗಿ ಈ ಕ್ಷೇತ್ರದಲ್ಲಿ ಇಂದಿಗೂ ದೇವರ ಭಿನ್ನವಾದ ಮೂರ್ತಿಯನ್ನು ಪೂಜೆ ಮಾಡಲಾಗುತ್ತದೆ. ಇನ್ನೂ ಈ ಕ್ಷೇತ್ರಕ್ಕೆ ಬಂದು ಏನೇ ಹರಕೆ ಹೊತ್ತರೆ ಅದು ಕೇವಲ 11 ದಿನದ ಒಳಗೆ ಪೂರ್ಣ ಆಗುತ್ತೆ ಎನ್ನುವುದು ಇಲ್ಲಿನ ಮತ್ತೊಂದು ವಿಶೇಷತೆ ಆಗಿದೆ. ಈ ದೇಗುಲಕ್ಕೆ ಬಂದು ಪವನಸುತನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಶನಿ ದೋಷ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ತನ್ನ ಬಳಿ ಬಂದು ಯಾರೇ ಭಕ್ತಿಯಿಂದ ಬೇಡಿದರೂ ಇಲ್ಲಿ ನೆಲೆಸಿರುವ ಹನುಮಪ್ಪ ನೆರವೇರಿಸುತ್ತಾರೆ ಎಂಬುದು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ಬದುಕಿನಲ್ಲಿ ಕಷ್ಟಗಳಿಂದ ಮುಕ್ತಿ ಪಡೆದ ಭಕ್ತ ಜನರ ಮನದ ಮಾತಾಗಿದೆ. ಪುಟ್ಟದಾದ ಗೋಪುರ, ಕಲ್ಲಿನ ಗರ್ಬಗೃಹ, ಸುಂದರವಾದ ಪ್ರಾಂಗಣ ಪ್ರದಕ್ಷಿಣಾ ಪಥ ಹೊಂದಿರುವ ಈ ದೇಗುಲದಲ್ಲಿ ಆಂಜನೇಯ ಸ್ವಾಮಿ ಅಭಯ ಹಸ್ತ ಹಿಡಿದು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಪ್ರತಿ ಶನಿವಾರ ಈ ದೇವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಹನುಮ ಜಯಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಈ ದೇಗುಲದಲ್ಲಿ ಪ್ರತಿ ವರ್ಷ ಸ್ವಾಮಿಯ ರಥೋತ್ಸವ ಜರುಗುತ್ತದೆ. ಶ್ರದ್ಧಾ ಭಕ್ತಿಯಿಂದ ಒಲಿಯುವ ಈ ಆಂಜನೇಯ ಸ್ವಾಮಿಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಅತ್ಯಂತ ಶಕ್ತಿಶಾಲಿ ಆದ ಆಂಜನೇಯ ಸ್ವಾಮಿಯ ಈ ಪುಣ್ಯ ಕ್ಷೇತ್ರವೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಹನುಮಪ್ಪನ ಆಶೀರ್ವಾದ ಪಡೆಯಿರಿ. ಶುಭದಿನ.

 

ಭಕ್ತಿ