ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಸ್ವಾಮಿ ಈ ದಂಡಗುಂಡ ಬಸವಣ್ಣ..!

ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಸ್ವಾಮಿ ಈ ದಂಡಗುಂಡ ಬಸವಣ್ಣ..!

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಶಿವನ ವಾಹನವಾದ ನಂದೀಶ್ವರ ನು ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಬನ್ನಿ ಇವತ್ತಿನ ಲೇಖನದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ದಂಡಗುಂಡ ಬಸವಣ್ಣನನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಗುಡ್ಡ ಬೆಟ್ಟಗಳಿಂದ ತುಂಬಿಕೊಂಡಿರುವ ವಿಶಾಲವಾದ ಪ್ರದೇಶವನ್ನು ಹೊಂದಿರುವ ದಂಡಗುಂಡದಲ್ಲಿ ಬಸವಣ್ಣನ ಪುರಾತನವಾದ ದೇವಾಲಯ ಇದ್ದು, ಇಲ್ಲಿ ಬಸವಣ್ಣನನ್ನು ಶಿವನ ವಾಹನವಾದ ನಂದಿಯ ಸ್ವರೂಪ ಎಂದೇ ಹೇಳಲಾಗುತ್ತದೆ. ಶಿವನ ವಾಹನವಾದ ನಂದೀಶನು ಶಿವನ ಸಮೇತ ಈ ಕ್ಷೇತ್ರಕ್ಕೆ ಬಂದು ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಪೊರೆಯುತ್ತಿದ್ದಾನೆ. ಕೌಟುಂಬಿಕ ಸಮಸ್ಯೆ ಇರಲಿ ಆರ್ಥಿಕ ಸಮಸ್ಯೆ ಇರಲಿ, ವಿಧ್ಯಾಭ್ಯಾಸ ಸಮಸ್ಯೆ ಇರಲಿ ಅದು ಯಾವುದೇ ಸಮಸ್ಯೆ ಇದ್ರು ಈ ಕ್ಷೇತ್ರಕ್ಕೆ ಬಂದು ಬಸವಣ್ಣನಿಗೆ ತಮ್ಮ ಕೈಲಾದ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ ಎಲ್ಲ ಸಮಸ್ಯೆಗಳು ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

 

ಇದುವರೆಗೂ ಈ ದೇವನನ್ನು ನಂಬಿ ಬಂದ ಭಕ್ತರು ಎಂದು ಬರಿ ಕೈಯಲ್ಲಿ ಹೋಗಿಲ್ಲ. ಈ ಬಸವಣ್ಣನನ್ನು ಇಷ್ಟಾರ್ಥ ಸಿದ್ದಿಸುವ ದೇವರು ಎಂದು ಪೂಜಿಸಲಾಗುತ್ತದೆ. ಸಾವಿರಾರು ಜನರಿಗೆ ಈ ದೇವಾ ಮನೆ ದೇವರು ಆಗಿದ್ದಾನೆ. ಇನ್ನೂ ಬಹಳ ಹಿಂದೆ ಈ ನಂದಿ ಬಸವಣ್ಣನು ಊರಿನ ಸ್ವಲ್ಪ ದೂರದಲ್ಲಿ ಇರುವ ಭೀಮನ ಕೊಳ್ಳದಲ್ಲಿ ಲಿಂಗ ಸಮೇತನಾಗಿ ನೆಲೆಸಿದ್ದನು. ಒಂದು ದಿನ ದನ ಮೆಸುವ ಹುಡುಗರು ಲಿಂಗ ನೀರಿನಲ್ಲಿ ಕಾಣಿಸಿತು ನಂತರ ಹುಡುಗಾಟಿಕೆ ಇಂದ ಆ ಕಲ್ಲನ್ನು ಜಜ್ಜಿ ಹೋಗುತ್ತಾರೆ. ಮತ್ತೆ ಹುಡುಗರು ದನ ಮೇಯಿಸಲು ಬಂದಾಗ ಹಿಂದಿನ ದಿನ ಜಜ್ಜಿ ಹೋದ ಕಲ್ಲು ಮತ್ತೇ ನಂದಿಯ ರೂಪದಲ್ಲಿ ಕಾಣಿಸಿಕೊಂಡಿತು. ಆಗ ಮಕ್ಕಳು ಈ ವಿಷಯವನ್ನು ಊರಿನವರಿಗೆ ಹೇಳಿದಾಗ ಆಗ ಅವರು ಬಂದು ಕಲ್ಲು ಗುಂಡನ್ನು ನೋಡಿದರೆ ಅವರಿಗೆ ಏನೊ ಕಾಣಿಸುವುದೇ ಇಲ್ಲ. ನಂತರ ಊರಿನವರು ಎಲ್ಲರೂ ಇದು ಮಕ್ಕಳ ಆಟ ಎಂದು ಸುಮ್ಮನೆ ಆಗಿಬಿಡುತ್ತಾರೆ. ಆಮೇಲೆ ಒಂದು ದಿನ ಊರಿನ ವ್ಯಕ್ತಿ ಒಬ್ಬರ ಕನಸಿನಲ್ಲಿ ಬಸವಣ್ಣ ಕಾಣಿಸಿಕೊಂಡು ನಾನು ಬಹು ಕಾಲದಿಂದ ಭೀಮನ ಕೊಳ್ಳದಲ್ಲಿ ಲಿಂಗ ಸಮೇತನಾಗಿ ನೆಲೆ ಸಿದ್ದೇನೆ ಹಾಗೂ ನಾನು ನಿಮ್ಮ ಊರಿನ ಗುಡ್ಡದಲ್ಲಿ ನೆಲೆಸಲು ಇಚ್ಚಿಸಿದ್ದೇನೆ. ನೀನು ನನ್ನನ್ನು ನಿಮ್ಮ ಊರಿನ ಗುಡ್ಡದಲ್ಲಿ ಪ್ರತಿಷ್ಠಾಪಿಸಿ ಪೂಜಿಸು. ನನ್ನನ್ನು ಯಾರೂ ಭಕ್ತಿಯಿಂದ ದೇಹ ದಂಡಿಸಿ ಆರಾಧಿಸಿದರೆ, ಯಾವುದೇ ಕಷ್ಟ ಕಾರ್ಪಣ್ಯ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದನಂತೆ. ದೇವರ ಮಾತಿನಂತೆ ಮುಂದೆ ಗ್ರಾಮಸ್ಥರು ಸೇರಿ ಭೀಮನ ಕೊಳ್ಳದಲ್ಲಿ ನೆಲೆಸಿದ್ದ ನಂದಿಯನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಹಿಂದೆ ಈ ಗ್ರಾಮಕ್ಕೆ ಒಡಕನ ಹಳ್ಳಿ ಎಂದು ಹೆಸರಿತ್ತು.

 

ದೇಹವನ್ನು ದಂಡಿಸಿ ನಿಮ್ಮೆಲ್ಲರನ್ನ ಬಲವಾಗಿ ಮಾಡುತ್ತೇನೆ ಎಂದು ಬಸವಣ್ಣ ಹೇಳಿದ ಕಾರಣದಿಂದ ಮುಂದೆ ಈ ಊರಿಗೆ ದಂಡಗುಂಡ ಎಂಬ ಹೆಸರು ಬಂದಿತು. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದಂದು ಬಸವಣ್ಣನ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಜಾತ್ರೆಗೆ ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರಪ್ರದೇಶ ತಮಿಳುನಾಡಿನಿಂದ ಭಕ್ತರು ಆಗಮಿಸುತ್ತಾರೆ. ಈ ಊರಿನಲ್ಲಿ ಮಳೆ ಆಗದೆ ಹೋದರೆ ಊರಿನವರಿಗೆ ಮನೆಯಿಂದ ಅಡುಗೆ ಮಾಡಿಕೊಂಡು ಬಂದು ಬಸವಣ್ಣನಿಗೆ ನೈವೇದ್ಯವಾಗಿ ನೀಡುತ್ತಾರೆ. ಆ ದಿನ ಸಂಜೆ ಮಳೆ ಬಂದೆ ಬರುತ್ತದೆ. ಇದನ್ನು ಬಸವಣ್ಣನ ಪವಾಡ ಎಂದು ಹೇಳಲಾಗುತ್ತದೆ. ನಿತ್ಯವೂ ಪೂಜೆಗೊಳ್ಳುತ್ತಿರುವ ಬಸವಣ್ಣನನ್ನು ಅಮಾವಾಸ್ಯೆ ದಿನಗಳಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶ್ರಾವಣ ಮಾಸ, ಕಾರ್ತಿಕ ಮಾಸ, ಎಳ್ಳು ಅಮಾವಾಸ್ಯೆ ದಿನ ಕೂಡ ಇಲ್ಲಿರುವ ಬಸವಣ್ಣನಿಗೆ ವಿಶೇಷ ಪೂಜೆ ಜೊತೆಗೆ ಅಲಂಕಾರ ನಡೆಯುತ್ತದೆ. ಬೇಡಿ ಬಂದ ಭಕ್ತರನ್ನು ಹರಸುತ್ತ ಇರುವ ದಂಡಗುಂಡ ಬಸವಣ್ಣನನ್ನು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದು. ಉತ್ತರಾಭಿಮುಖವಾಗಿ ದ್ವಾರ ಬಾಗಿಲನ್ನು ಹೊಂದಿರುವ ಈ ದೇವಸ್ಥಾನ ವಿಶಾಲವಾದ ಪ್ರಾಂಗಣ, ಗೋಪುರ ಹೊಂದಿದೆ. ಸಾಕ್ಷಾತ್ ಬಸವಣ್ಣನೇ ಇಷ್ಟ ಪಟ್ಟು ಬಂದು ನೆಲೆಸಿದ ಈ ಪುಣ್ಯ ಕ್ಷೇತ್ರವೂ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಬಸವಣ್ಣನ ದರ್ಶನ ಮಾಡಿ ಬನ್ನಿ. ಶುಭದಿನ.

 

 

 

 

 

 

 

 

 

 

 

ಭಕ್ತಿ