ನವಜಾತ ಶಿಶುವಿನಲ್ಲಿ ಈ ಯಾವುದಾದರೂ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆಯಾ???

ನವಜಾತ ಶಿಶುವಿನಲ್ಲಿ ಈ ಯಾವುದಾದರೂ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆಯಾ???

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನವಜಾತ ಶಿಶುವಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದೂ ಅಪಾಯಕರ. ಈ ವಿಷಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ನೀವು ನಿಮ್ಮ ಮನೆಯ ಮಗುವಿನಲ್ಲಿ ಇಂದಿನ ಲೇಖನದಲ್ಲಿ ಹೇಳುವ ಲಕ್ಷಣಗಳು ಕಂಡ ತಕ್ಷಣ ವೈದ್ಯರಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ. ಸೋ ಯಾವುವು ಆ ಅಪಾಯದ ಲಕ್ಷಣಗಳು ಹೇಗೆ ಅವುಗಳನ್ನು ಮಕ್ಕಳಲ್ಲಿ ಗುರುತಿಸುವುದು ಎಂದು ಹೇಳುವ ಪ್ರಯತ್ನ ಮಾಡೋಣ. ಸೋ ಯಾವುದೇ ಮಗು ಚೆನ್ನಾಗಿ ಹಾಲು ಕುಡಿಯುವ ಮಗು ಹಾಲೇ ಕುದಿಯುತ್ತಿಲ್ಲ, ಎದೆ ಹಾಲನ್ನು ಕಚ್ಚುತ್ತಲೆ ಇಲ್ಲ ಎಂದು ನಿಮಗೆ ಕಂಡು ಬಂದರೆ ಇದು ಅಪಾಯದ ಲಕ್ಷಣ. ಅಥವಾ ಯಾವುದೇ ಮಗು ನಿರಂತರವಾಗಿ ವಾಂತಿ ಆಗುತ್ತಿದೆ ಅಂದ್ರೆ ಅದು ಕೂಡ ಅಪಾಯದ ಲಕ್ಷಣವೇ ಆಗಿರುತ್ತದೆ. ಚಿಕ್ಕ ಮಕ್ಕಳು ಶಿಶುಗಳು ಅಂದ್ರೆ ದಿನಕ್ಕೆ ಒಂದು ಎರಡು ಬಾರಿ ಕಕ್ಕುವುದು ಸಾಮಾನ್ಯ ಆದ್ರೆ ನಿರಂತರವಾಗಿ ದಿನ ಪೂರ್ತಿ ವಾಂತಿ ಆಗುತ್ತಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ. ಮಗುವಿನ ಹೊಟ್ಟೆ ಊದುವಿಕೆ ಅದು ಕೂಡ ಅಪಾಯಕರ. ಮಗು ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಇದು ಕೂಡ ಅಪಾಯದ ಲಕ್ಷಣವೇ. ಮಗು ಕಣ್ಣಿನ ಗುಡ್ಡೆಯನ್ನು ಮೇಲೆ ಮಾಡಿ ಒಂದೇ ಕಡೆ ನೋಡುತ್ತಿದೆ ಅಂದ್ರೆ ಅದು ಕೂಡ ಅಪಾಯದ ಲಕ್ಷಣವೇ. ಫಿಡ್ಸ್ ಆಗಿದೆ ಅಂದ್ರೆ, ಅಂಗಾಲು ಹಾಗೂ ಅಂಗೈಗಳಲ್ಲಿ ಏನಾದರೂ ಜಾಂಡೀಸ್ ಅಂಶ ಕಾಣಿಸಿದರೆ ಅದು ಕೂಡ ಅಪಾಯ. ಮತ್ತೆ ಮಗು ನೀಲಿ ಬಣ್ಣಕ್ಕೆ ತಿರುಗುವುದು ಅಪಾಯದ ಲಕ್ಷಣ. ಮಗು ಕೆಲವೊಮ್ಮೆ ಏದುಸಿರು ಬಿಡುತ್ತಾ ಇದ್ದರೆ ಅದು ಕೂಡ ಅಪಾಯ.

 

 

ಕೆಲವೊಮ್ಮೆ ಮಗು ಏನೇನೋ ತಿನ್ನುತ್ತಿಲ್ಲ ಅಂದ್ರೆ ಮಾತ್ರ ತುಂಬಾ ಪ್ರಮಾದಕರ. ಸೋ ಯಾವುದೇ ಮಗುವಿಗೆ ಈ ಎಲ್ಲ ಅಪಾಯದ ಲಕ್ಷಣಗಳು ಕಾಣಿಸಿಕೊಂಡರೆ ಅದು ಅಪಾಯದ ಲಕ್ಷಣ. ಕೆಲವೊಮ್ಮೆ ಮಗು ಚೆನ್ನಾಗಿಯೇ ಎದೆ ಹಾಲು ಕುಡಿಯುತ್ತಾ ಇರುತ್ತದೆ ಆಗ ಸಹಜವಾಗಿ ಊಟಾ ಕಡಿಮೆ ಮಾಡುತ್ತದೆ ಅದು ಅಪಾಯದ ಲಕ್ಷಣ ಅಲ್ಲ. ಮಗು ಎದೆಯನ್ನು ಕಚ್ಚುತ್ತಲೇ ಇಲ್ಲ ಅಂದ್ರೆ ಅದು ಖಂಡಿತ ಅಪಾಯ. ಮಗುವಿನ ಮೈ ಮುಟ್ಟಿದರೆ ಯಾವಾಗಲೋ ತುಂಬಾ ತಣ್ಣಗಿರುವುದೂ ಅಥವಾ ತುಂಬಾ ಬಿಸಿ ಇರುವುದು, ಆಗ ಜ್ವರ ಬಂದಿರಬಹುದು ಅಥವಾ ಇನ್ಫೆಕ್ಷನ್ ಆಗಿರಬಹುದು, ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಅತಿ ತುರ್ತಾಗಿ ವೈದ್ಯರ ಬಳಿ ಕರೆದೊಯ್ಯುವುದು ಒಳ್ಳೆಯದು. ಕಿವಿ ಸೋರುವುದು, ಅದರಿಂದ ಕೀವು ಹೊರಗೆ ಬರುತ್ತಿದ್ದರೆ ಅಪಾಯದ ಲಕ್ಷಣ. ಇವೆಲ್ಲಾ ಅಪಾಯದ ಲಕ್ಷಣಗಳು. ಇವೆಲ್ಲಾ ಗಮನಿಸಿದ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ. ಹೀಗೆಲ್ಲ ಆದಾಗ ಅಜಾಗರೂಕತೆ ಇಂದ ವೈದ್ಯರ ಬಳಿ ನಾಳೆ ಹೋದರಾಯಿತು, ನಾಡಿದ್ದು ಹೋದರಾಯಿತು ಎಂದು ತಡ ಮಾಡದೇ ಅಥವಾ ಮನೆಯ ಹಳೆಯ ಮಂದಿ ಮನಿಮದ್ದನ್ನು ಹಾಕಿ ನೋಡೋಣ ಎಂದು ಕಾಯುತ್ತಾ ಕುಳಿತುಕೊಳ್ಳದೆ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಈ ಎಲ್ಲಾ ಅಂಶಗಳ ಬಗ್ಗೆ ಪ್ರತಿ ತಾಯಂದಿರು ತಿಳಿದುಕೊಳ್ಳಲೆ ಬೇಕು. ತುಂಬಾ ಸರಿ ಹಲವು ತಾಯಂದಿರಿಗೆ ಇರುವ ಒಂದೇ ಸಮಸ್ಯೆ ಅಂದ್ರೆ ಅದು ಮಗು ಹಾಲು ಕೂಡಿದ ತಕ್ಷಣ ವಾಂತಿ ಮಾಡುತ್ತೆ ಅನ್ನುವುದು. ಆದ್ರೆ ವಾಂತಿ ಮಾಡಿ ಸಹ ಆಕ್ಟೀವ್ ಆಗಿದೆ ಅಂದ್ರೆ ಏನೋ ಭಯ ಪಡಬೇಕಿಲ್ಲ.

 

 

ಈ ತರಹ ಯಾವಾಗ ಆಗುತ್ತೆ ಅಂದ್ರೆ ಮಗು ಜಾಸ್ತಿ ಹಾಲು ಕುಡಿದರೆ ಆಗ ತಕ್ಷಣ ಹೆಗಲಿಗೆ ಹಾಕಿಕೊಂಡರೆ ಸ್ವಲ್ಪ ಹಾಲು ಹೊರ ಬರುವುದು ಸಹಜ. ಅದು ಒಂದೆರಡು ಸರಿ ಹೀಗಾದರೆ ತಿಂದರೆ ಏನಿಲ್ಲ ಆದ್ರೆ ಮಗು ಹಾಲನ್ನು ದಕ್ಕಿಸಿಕೊಳ್ಳುತ್ತಿಲ್ಲ ಅಂದ್ರೆ ಅದು ಅಪಾಯಕರ. ಮಗುವಿನ ಗಂಟಲಿನಿಂದ ಏನಾದರೂ ಸೌಂಡ್ ಬರುವುದು ಪಕ್ಕೆಲುಬುಗಳಿಂದ ಸೌಂಡ್ ಬರುವುದು ಅಪಾಯಕರ. ಮಗುವಿಗೆ ಹೃದಯದ ತೊಂದರೆ ಇದ್ರೆ ಮಗು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದರ ಬಗ್ಗೆ ಮಾಹಿತಿ ಇರಬೇಕು. ಮೂತ್ರ ವಿಸರ್ಜನೆ ಸರಿಯಾಗಿ ಮಾಡುತ್ತಿಲ್ಲ ಅಂದ್ರೆ ಕಿಡ್ನಿ ಗೆ ತೊಂದರೆ ಆಗಿರಬಹುದು ಎಂದು ಅರ್ಥ ಮಾಡಿಕೊಳ್ಳಬೇಕು. ತುಂಬಾ ಮುಖ್ಯವಾದದ್ದು ಅಂದ್ರೆ ಮಗು ಊಟಾನೆ ಮಾಡ್ತಿಲ್ಲ ಎನ್ನುವುದು ತುಂಬಾ ಅಪಾಯಕರ ಸೂಚನೆ. ಲೂಸ್ ಮೋಷನ್ ಅಂದ್ರೆ ಬೇದಿ ನಿರಂತರವಾಗಿ ಆಗ್ತಿದೆ, ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಅಂದ್ರೆ ಇದು ಕೂಡ ಅಪಾಯದ ಲಕ್ಷಣ. ಕೆಲವೊಮ್ಮೆ ನಾರ್ಮಲ್ ಡೆಲಿವರಿ ಆದಮೇಲೆ ಮಗುವನ್ನು ಮನೆಗೆ ಕರೆದುಕೊಂಡು ಹೋದ 24 ಗಂಟೆ ಆದ್ರೂ ಮೂತ್ರ ವಿಸರ್ಜನೆ ಮಾಡಿಯೇ ಇರುವುದಿಲ್ಲ ಇದು ಕೂಡ ಅಪಾಯ. ಇವೆಲ್ಲಾ ಅಪಾಯದ ಲಕ್ಷಣಗಳನ್ನೂ ಸೂಕ್ಷ್ಮವಾಗಿ ಗುರುತಿಸಿ ಆದಷ್ಟು ಬೇಗ ವೈದ್ಯರ ಬಳಿ ಸಮಾಲೋಚನೆ ನಡೆಸಿ ಆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದೂ ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

 

 

 

ಆರೋಗ್ಯ