ದೇಶದ ಎರಡನೆಯ ಅತೀ ಎತ್ತರದ ಶಿವ ಮೂರ್ತಿ ಸ್ಥಾಪನೆಯಾದ ಸ್ಥಳವಿದು..!!

ದೇಶದ ಎರಡನೆಯ ಅತೀ ಎತ್ತರದ ಶಿವ ಮೂರ್ತಿ ಸ್ಥಾಪನೆಯಾದ ಸ್ಥಳವಿದು..!!

ನಮಸ್ತೆ ಪ್ರಿಯ ಓದುಗರೇ, ಶಿವ ಎಂದರೆ ಅನನ್ಯ ಅನುಭೂತಿ. ಅವನಿಲ್ಲದ ಜಗತ್ತು ಅಂಧಕಾರದಲ್ಲಿ ಮುಳುಗುತ್ತದೆ. ಲಿಂಗ ರೂಪಿಯಾಗಿ ಭೂಮಿ ಮೇಲೆ ಸ್ಥಾಪಿತ ಆದ ಈ ದೇವನಿಗೆ ಕಟ್ಟಿರುವ ಗುಡಿ ಗೋಪುರಗಳಿಗೆ ಲೆಕ್ಕವೇ ಇಲ್ಲ. ಸ್ಮಶಾನವಾಸಿ ಆದ ಈ ದೇವನನ್ನು ಭಕ್ತಿಯಿಂದ ಶಂಭೋ ಶಂಕರ ಎಂದು ಕೂಗಿದರೆ ಸಾಕು ಆತ ಕರೆಗೊಟ್ಟು ನಾವಿರುವಲ್ಲಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಶಿವಗಿರಿಯ ಶಿವ ದೇವಾಲಯವನ್ನು ದರ್ಶನ ಮಾಡಿ ಆತನ ಕೃಪೆಗೆ ಪಾತ್ರರಾಗೊಣ. ಸುಮಾರು 18 ಎಕರೆ ಪ್ರದೇಶದಲ್ಲಿ ನಿರ್ಮಿತವಾದ ಈ ದೇವಸ್ಥಾನವನ್ನು ಬಸಂತ ಕುಮಾರ್ ಪಾಟೀಲ್ ಹಾಗೂ ಅವರ ಕುಟುಂಬದವರು ನಿರ್ಮಾಣ ಮಾಡಿದ್ದು ಈ ಕ್ಷೇತ್ರದ ಮುಖ್ಯ ಆಕರ್ಷಣೆ 85 ಅಡಿ ಉದ್ದವಿರುವ ಶಿವನ ಮೂರ್ತಿ. ಮುರುಡೇಶ್ವರ ಧಲ್ಲಿ ಸಮುದ್ರ ತೀರದ ಮೇಲೆ ಶಿವನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿರುವ ಹಾಗೆ ಇಲ್ಲಿಯೂ ಎತ್ತರದ ಸ್ಥಳದ ಮೇಲೆ ಪರಮೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೂರ್ತಿಯ ಅಡಿ ಭಾಗದಲ್ಲಿ ಶಿವನ ಲಿಂಗವಿದ್ದೂ, ದೇವರ ಎದುರಿನಲ್ಲಿ ನಂದಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಶಾಲವಾದ ಪ್ರದಕ್ಷಿಣಾ ಪಥವನ್ನು ಹೊಂದಿರುವ ಈ ದೇವಾಲಯ ವರ್ಷದ ಎಲ್ಲ ದಿನಗಳಲ್ಲಿಯೂ ಭಕ್ತರನ್ನು ತನ್ನತ್ತ ಸೆಳೆಯುತ್ತದೆ.

 

ಇಲ್ಲಿ ಸ್ಥಾಪನೆ ಮಾಡಿರುವ ಶಿವನ ಮೂರ್ತಿಯು ಭಾರತದಲ್ಲಿ ನಿರ್ಮಾಣವಾದ ಎರಡನೇ ಅತೀ ಎತ್ತರದ ಶಿವ ಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿವನ ಈ ದಿವ್ಯ ಮೂರ್ತಿಯನ್ನು ಶಿವಮೊಗ್ಗದ 6 ಜನ ಶಿಲ್ಪಿಗಳು 100 ಜನ ಸಹಾಯಕರನ್ನು ಬಳಸಿ ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡು ಕೆತ್ತಿದ್ದಾರೆ. ಸಿಮೆಂಟ್ ಹಾಗೂ ಸ್ಟೀಲ್ ಇಂದ ಕಟ್ಟಿರುವ ಈ ದೇವನ ಮೂರ್ತಿಯು ಬರೋಬಾರಿ 1500 ಟನ್ ತೂಕವಿದೇ. ಧ್ಯಾನ ಭಂಗಿಯಲ್ಲಿ ಕುಳಿತಿರುವ ದೇವನು ಕೈಯಲ್ಲಿ ತ್ರಿಶೂಲ ಡಮರು ಹಿಡಿದು ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಭಕ್ತರನ್ನು ಹರಿಸುತ್ತಿದ್ದಾರೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿ 50 ಕೆಜಿ ತೂಕ ಹೊಂದಿದ್ದು ಶಿವನ ಕೊರಳಲ್ಲಿ ಹಾಸೀನ ಆದ ಸರ್ಪವು 145 ಅಡಿ ಉದ್ದವಿದೆ. ಶಿವನ ಈ ಸುಂದರವಾದ ಈ ಮೂರ್ತಿಯನ್ನು ಈ ಕ್ಷೇತ್ರದಲ್ಲಿ 2006 ರಲ್ಲೀ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ದೇವಾಲಯದ ಒಳ ಗೋಡೆಯ ಮೇಲೆ ಶಿವ ಚರಿತೆಯನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.

 

ಇಲ್ಲಿಗೆ ಬಂದರೆ ಮನಸ್ಸು ಶಿವನ ಸಾನಿಧ್ಯದಲ್ಲಿ ಪುಳಕಿತ ಆಗುತ್ತದೆ. ಹಾಗೂ ದೇಗುಲದ ಸುತ್ತ ನಿರ್ಮಿಸಿರುವ ಬಸಂತ ವನ ಪುಟ್ಟ ಪುಟ್ಟ ಮಕ್ಕಳಿಗೆ ಸಂತಸವನ್ನು ನೀಡುತ್ತೆ. ಶಿವರಾತ್ರಿ ಸಮಯದಲ್ಲಿ ಈ ದೇಗುಲವನ್ನು ಮದುವಣಗಿತ್ತಿ ಅಂತೆ ಅಲಂಕಾರ ಮಾಡಲಾಗುತ್ತದೆ. ಆ ದಿನ ದೇವರಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಪಂಚ ಕಳಸ ಅರ್ಚನೆ ಮಾಡಲಾಗುತ್ತದೆ. ಶಿವರಾತ್ರಿಯಂದು ಇಲ್ಲಿ ಜಾತ್ರೆ ಮಾಡಲಾಗುತ್ತಿದ್ದು, ಇಲ್ಲಿ ಸುವರ್ಣ ರಥವನ್ನು ದೇಗುಲದ ಸುತ್ತ ಎಳೆಯಲಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ಶಿವನನ್ನು ಭಕ್ತಿಯಿಂದ ಕೈ ಮುಗಿದು ಬಿಲ್ವಾರ್ಚನೆ ಮಾಡಿಸುವುದರಿಂದ ಮನಸಿನ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ ಆಗಿದೆ. ಶಿವಾಗಿರಿಯ ಈ ದೇಗುಲವನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಅಣತಿ ದೂರದಿಂದಲೇ ಭಕ್ತರನ್ನು ತನ್ನತ್ತ ಆಕರ್ಷಿಸುವ ಈ ಪುಣ್ಯ ಕ್ಷೇತ್ರವೂ ವಿಜಯಪುರ ಜಿಲ್ಲೆಯ ಶಿವಗಿರಿ ಎಂಬ ಸ್ಥಳದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಅಪರೂಪದ ದೇವಾಲಯ ದರ್ಶನ ಮಾಡಿ ಬನ್ನಿ. ಶುಭದಿನ.

 

 

 

 

 

 

ಭಕ್ತಿ