ಕುದುರೆಯ ಶಕ್ತಿ ನಿಮ್ಮಲ್ಲಿ ಬರಬೇಕು ಅಂದ್ರೆ ವಾರದಲ್ಲಿ ಒಂದು ಸಲ ಈ ಕಾಳನ್ನು ಸೇವನೆ ಮಾಡಿ. ಫಲಿತಾಂಶ ಗಮನಿಸಿ..!!

ಕುದುರೆಯ ಶಕ್ತಿ ನಿಮ್ಮಲ್ಲಿ ಬರಬೇಕು ಅಂದ್ರೆ ವಾರದಲ್ಲಿ ಒಂದು ಸಲ ಈ ಕಾಳನ್ನು ಸೇವನೆ ಮಾಡಿ. ಫಲಿತಾಂಶ ಗಮನಿಸಿ..!!

ನಮಸ್ತೆ ಪ್ರಿಯ ಓದುಗರೇ, ಆರೋಗ್ಯ ಎನ್ನುವುದು ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಪ್ರಮುಖವಾದ ಉಡುಗೊರೆ ಎಂದು ಹೇಳಿದರೆ ತಪ್ಪಾಗಲಾರದು. ದೇವರು ನೀಡಿರುವ ಈ ಅಮೂಲ್ಯವಾದ ವರವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯ. ನಾವು ಸೇವಿಸುವ ಆಹಾರದಲ್ಲಿ ಕೂಡ ನಮ್ಮ ದೇಹಕ್ಕೆ ಬೇಕಾದ ಹಾಗೂ ಬೇಡವಾದ ಅಂಶಗಳು ಇರುತ್ತವೆ. ಇವತ್ತಿನ ಲೇಖನದಲ್ಲಿ ನಾವು ಕಬ್ಬಿಣ, ಕ್ಯಾಲ್ಸಿಯಂ, ಪ್ರೊಟೀನ್ ಹೇರಳವಾಗಿ ಇರುವ ದ್ವಿದಳ ಧಾನ್ಯ ವಾದ ಹುರುಳಿಕಾಳು ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. ಹುರುಳಿ ಎನ್ನುವುದು ಅತ್ಯಂತ ಪೌಷ್ಟಿಕ ಧಾನ್ಯಗಳಲ್ಲಿ ಒಂದಾಗಿದೆ. ಆಯುರ್ವೇದ ದ ಪ್ರಕಾರ ಹುರುಳಿಕಾಳು ಸೇವನೆ ಮಾಡುವುದರಿಂದ ದೇಹದ ತೂಕವನ್ನು ನಷ್ಟ ಮಾಡಲು ಸಹಕರಿಸುತ್ತದೆ.

 

ಹಾಗೂ ಸಕ್ಕರೆ ಕಾಯಿಲೆ ತಡೆಗಟ್ಟುತ್ತದೆ. ಇದಷ್ಟೇ ಅಲ್ಲದೇ ನಿಯಮಿತವಾಗಿ ಸೇವನೆ ಮಾಡುವುದರಿಂದ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ನಿಮಿರು ದೌರ್ಬಲ್ಯ, ಶೀಗ್ರ ಸ್ಕಲನ, ಪಿಸಿಒಡಿ ಹಾಗೂ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಬಹಳ ಉಪಯುಕ್ತ ಈ ಹುರುಳಿಕಾಳು. ದೇಹದ ಶಕ್ತಿ ವರ್ಧಕವಾಗಿ ಇದನ್ನು ಬಳಸಲಾಗುತ್ತದೆ. ಇದನ್ನು ಅಡುಗೆಗಳಲ್ಲಿ ಬಳಸಿ ಸೇವನೆ ಮಾಡುವುದರಿಂದ ದೇಹಕ್ಕೆ ಎನರ್ಜಿ ಸಿಗುತ್ತದೆ. ಇದು ದೇಹಕ್ಕೆ ಉಷ್ಣವನ್ನು ನೀಡುವ ಕಾಳು. ಇದನ್ನು ಶೀತ ಪ್ರಕೃತಿ ಹೊಂದಿರುವ ಜನರು ಬಳಸಿದರೆ ತುಂಬಾ ಒಳ್ಳೆಯದು. ಶೀತ ಪ್ರಕೃತಿ ಅಂದ್ರೆ ಕಫ ಉಳ್ಳವರು ಹಾಗೂ ಪದೇ ಪದೇ ನೆಗಡಿ ಶೀತ ಬರುವವರು ಇದನ್ನು ಸೇವನೆ ಮಾಡುವುದರಿಂದ ಇದು ದೇಹಕ್ಕೆ ಉಷ್ಣತೆ ನೀಡಿ ಶೀತ ಕೆಮ್ಮು ನೆಗಡಿ ನಿವಾರಣೆಯಾಗುತ್ತದೆ. ಹುರುಳಿ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಕೂಡ ಸಹಕರಿಸುತ್ತದೆ. ಹಾಗಾಗಿ ಯಾರಿಗೆ ಸಕ್ಕರೆ ಕಾಯಿಲೆ ಇದೆಯೋ ಅವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. ಕೆಲವರಿಗೆ ಹೆಚ್ಚಿನ ಬೊಜ್ಜಿನ ಕಾರಣದಿಂದ ಉಂಟಾಗುವ ನಿಮಿರು ದೌರ್ಬಲ್ಯ ದಿಂದ ಬಳಲುತ್ತಾ ಇರುವವರಿಗೆ ಇದು ಉತ್ತಮ ಔಷಧಿ.

 

ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಸಾಮಾನ್ಯ ಲೈಂಗಿಕ ಕ್ರಿಯೆಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ. ಇನ್ನೂ ಮಲಬದ್ದತೆ ಸಮಸ್ಯೆ ಇದ್ದರೆ ಈ ಹುರುಳಿ ಕಾಳಿನಲ್ಲಿ ಅಧಿಕ ನಾರಿನ ಅಂಶ ಇರುವುದರಿಂದ ಮಲಬದ್ದತೆ ನಿವಾರಿಸಲು ಹಾಗೂ ಕರುಳಿನ ಚಲನೆಯನ್ನು ಸರಾಗಾಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಮಲಗುವ ಮುಂಚೆ ಹುರುಳಿ ಕಾಳನ್ನು ನೀರಲ್ಲಿ ನೆನೆಸಿ ಇಡಬೇಕು ಬೆಳಿಗ್ಗೆ ಎದ್ದು ಅದನ್ನು ಬೇಯಿಸಿಕೊಂಡು ತಿನ್ನಬೇಕು ಇದರಿಂದ ಕಿಡ್ನಿಯಲ್ಲಿನ ಹರಳುಗಳು ಕ್ರಮೇಣವಾಗಿ ಕರಗಿ ಹೋಗುತ್ತದೆ. ಇನ್ನೂ ಸಂಧಿವಾತ ಆಗಿದ್ದರೆ, ಸಂಧಿವಾತ ಆಗಿರುವ ಜಾಗಕ್ಕೆ ಹುರುಳಿ ಕಾಳಿನ ಪೇಸ್ಟ್ ಹಚ್ಚುವುದರಿಂದ ಬೇಗ ನೋವು ಊತ ಕಡಿಮೆ ಆಗುತ್ತದೆ. ಇನ್ನೂ ನಿಮಗೆ ಕಫ ಹಾಗೂ ನೆಗಡಿ ಆಗಿಂದಾಗ ಬರುತ್ತಿದ್ದರೆ ಈ ಹುರುಳಿ ಕಾಳಿನ ಪಲ್ಯ ಮಾಡಿ ತಿನ್ನುತ್ತಾ ಬಂದರೆ ಕಫ ಕೆಮ್ಮು ಶೀತ ಎಲ್ಲಾ ಮಾಯವಾಗುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಹೊಟ್ಟೆಯಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುತ್ತದೆ. ಎಲ್ಲಾ ಕಡೆ ಕಡಿಮೆ ಬೆಲೆಯಲ್ಲಿ ಸಿಗುವ ಈ ಹುರುಳಿ ಕಾಳು ಉತ್ತಮವಾದ ಪ್ರಯೋಜನಗಳನ್ನು ಹೊಂದಿದೆ ಆದ್ದರಿಂದ ವಾರಕ್ಕೆ ಒಮ್ಮೆ ಆದ್ರೂ ಸೇವನೆ ಮಾಡಿ ದೇವರು ಕೊಟ್ಟ ಆರೋಗ್ಯವನ್ನು ಚೆನ್ನಾಗಿ ಉಳಿಸಿಕೊಳ್ಳಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು