ನಮಸ್ತೆ ಪ್ರಿಯ ಓದುಗರೇ, ಸಾವಿರಾರು ವರ್ಷಗಳಿಂದ ಹಾಗೂ ಅತ್ಯಂತ ಹಳೆಯ ಮಸಾಲೆ ವಸ್ತುಗಳಲ್ಲಿ ಈ ಜೀರಿಗೆ ಕೂಡ ಒಂದು. ಈ ಜೀರಿಗೆಯನ್ನು ಬಳಸಿಕೊಂಡು ನಾವು ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳನ್ನು ನಾವು ಮನೆಯಲ್ಲಿಯೇ ನಿವಾರಣೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ತೋರಿಸಿಕೊಳ್ಳಲು ಹೋಗುತ್ತಾರೆ. ಆಸ್ಪತ್ರೆಗೆ ಹೋಗಿ ತೋ ರಿಸಿಕೊಳ್ಳುವುದು ತಪ್ಪಲ್ಲ ಆದ್ರೆ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ನಾವು ಔಷಧಿಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಔಷಧಿಗಳನ್ನು ಕೊಟ್ರೂ ಅವುಗಳು ನಮಗೆ ನಾಟುವುದಿಲ್ಲ. ಹಾಗಾಗಿ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ನಾವು ಮನೆಯಲ್ಲಿಯೇ ಇರುವಂತಹ ಮನೆಮದ್ದುಗಳನ್ನು ನೋಡಿಕೊಳ್ಳಬೇಕು.
ಅವುಗಳಲ್ಲಿ ಈ ಜೀರಿಗೆ ಕೂಡ ನಮ್ಮ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಗಳನ್ನು ನಿವಾರಣೆ ಮಾಡುವಂತ ಶಕ್ತಿಯನ್ನು ಹೊಂದಿದೆ. ಹಾಗಿದ್ರೆ ಈ ಪುಟ್ಟ ಜೀರುಗೆಗೆ ಎಷ್ಟು ಶಕ್ತಿ ಇದೆ ಹಾಗೂ ಇದು ಯಾವೆಲ್ಲ ಕಾಯಿಲೆಗಳಿಗೆ ರಾಮಬಾಣ ಆಗಿ ಕೆಲಸ ಮಾಡುತ್ತದೆ ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಆರೋಗ್ಯಕ್ಕೆ ಸಂಂಧಿಸಿದ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ನಮ್ಮ ನ್ಯೂ ನ್ಯೂಸ್ ಕನ್ನಡ ಪೇಜ್ ಲೈಕ್ ಮಾಡಿ. ಸ್ನೇಹಿತರೆ ಈ ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಬೆವರಿನ ಗುಳ್ಳೆ ಆಗುತ್ತಾ ಇರುತ್ತದೆ. ಅಂತಹ ಸಮಸ್ಯೆ ಇರುವವರು ಈ ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಅದನ್ನು ಮೈಗೆಲ್ಲ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಬೆವರಿನ ಗುಳ್ಳೆ ಆಗುವುದಿಲ್ಲ. ಇನ್ನೂ ಈ ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಬಾಯಾರಿಕೆ ಉಂಟಾಗುತ್ತದೆ. ಎಷ್ಟು ನೀರು ಕುಡಿದರೂ ಸಮಾಧಾನ ಆಗುತ್ತಾ ಇರುವುದಿಲ್ಲ. ಅಂಥವರು ಈ ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಒಂದು ಲೋಟ ನೀರಿಗೆ ಈ ಹುರಿದು ಪುಡಿ ಮಾಡಿದ ಪುಡಿಯನ್ನು ಹಾಕಿ ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ಕುಡಿದರೆ ಬಾಯಾರಿಕೆ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಹೊತ್ತೇ ನೋವು ಅಥವಾ ವಾಂತಿ ಸಮಸ್ಯೆ ಇದ್ರೆ ಒಂದು ಚಮಚ ಜೀರಿಗೆ ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಬೇಕು. ಅದು ಅರ್ಧ ಲೋಟಕ್ಕೆ ಬಂದಾಗ ಈ ನೀರು ತಣ್ಣಗಾದ ನಂತರ ಅದಕ್ಕೆ ಸಕ್ಕರೆ ಹಾಗೂ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ಹಾಗೂ ವಾಂತಿ ಕಡಿಮೆ ಆಗುತ್ತದೆ.
ಇನ್ನೂ ಹಲ್ಲು ನೋವಿನ ಸಮಸ್ಯೆ ಇದ್ರೆ ಈ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಬೇಗನೆ ಶಮನವಾಗುವುದು. ಇನ್ನೂ ಈ ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಈ ಮಜ್ಜಿಗೆಗೆ ಉಪ್ಪು ಜೀರಿಗೆ ಪುಡಿ ಸೇರಿಸಿ ಕುಡಿಯುವುದರಿಂದ ಪಿತ್ತ ಕೂಡ ಕಡಿಮೆ ಆಗುತ್ತದೆ. ಸಾಕಷ್ಟು ಜನ ತಾಯಂದಿರು ತಮ್ಮ ಎದೆ ಹಾಲನ್ನು ಹೆಚ್ಚಿಸಲು ಹಲವಾರು ಮನೇಮದ್ದನ್ನು ಟ್ರೈ ಮಾಡುತ್ತ ಇರುತ್ತಾರೆ. ಒಂದು ಸಲ ಈ ಜೀರಿಗೆಯನ್ನು ಟ್ರೈ ಮಾಡಿ ನೋಡಿ ನಿಮ್ಮ ಎದೆ ಹಾಲು ಹೆಚ್ಚಾಗುತ್ತದೆ. ಅದಕ್ಕೆ ನೆನೆಸಿದ ಮೆಂತ್ಯ ಬೀಜ, ಜೀರಿಗೆ ಉಪ್ಪು ಹಾಗೂ ಖಾರ ಹಾಕಿ ಇದನ್ನು ಚಟ್ನಿ ರೀತಿ ತಯಾರು ಮಾಡಿಕೊಂಡು ಇದನ್ನು ರೊಟ್ಟಿ ಅಥವಾ ಚಪಾತಿ ಜೊತೆ ಸೇವನೆ ಮಾಡುತ್ತಾ ಬಂದರೆ ಒಂದು ವಾರದಲ್ಲಿ ನಿಮ್ಮ ಎದೆ ಹಾಲು ಹೆಚ್ಚಾಗುತ್ತದೆ. ಸಾಕಷ್ಟು ಜನರಿಗೆ ಹೊಟ್ಟೆಗೆ ಹಾಗೂ ಉದರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇರುತ್ತವೆ ಇವುಗಳು ನಿಮಗೆ ಬೇಗನೆ ಗುಣ ಆಗಬೇಕು ಅಂದ್ರೆ ಜೀರಿಗೆ ಸಕ್ಕರೆ, ಒಣ ಶುಂಠಿ, ಅಡುಗೆ ಉಪ್ಪು ಇವುಗಳನ್ನು ಒಂದು ಚಮಚದಷ್ಟು ತೆಗೆದುಕೊಂಡು ಸಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಿ ಹೋಳು ನಿಂಬೆ ಹಣ್ಣಿನ ರಸವನ್ನು ಹಿಂಡಿ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಹೊಟ್ಟೆಗೆ ಉದರಕ್ಕೆ ಸಂಬಂಧ ಪಟ್ಟ ರೋಗಗಳು ಬೇಗನೆ ಗುಣಮುಖವಾಗುತ್ತದೆ. ಈ ಜೀರಿಗೆಯನ್ನು ನಿಮ್ಮ ಮನೆ ಅಡುಗೆಗಳಲ್ಲಿ ಬಳಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನೀವು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ. ನೊಡಿದ್ರಲ್ವ ಸ್ನೇಹಿತರೆ ಈ ಪುಟ್ಟ ಜೀರಿಗೆಯಲ್ಲಿ ಎಷ್ಟು ಆರೋಗ್ಯಕರ ಪ್ರಯೋಜನಗಳು ಇವೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.