ಈ ಕ್ಷೇತ್ರದಲ್ಲಿ ನಡೆಯುತ್ತೆ ಗೋಧಿ ಹುಗ್ಗಿ ಅಕ್ಷಯವಾಗುವ ವಿಶಿಷ್ಟ ಪವಾಡ..!

ಈ ಕ್ಷೇತ್ರದಲ್ಲಿ ನಡೆಯುತ್ತೆ ಗೋಧಿ ಹುಗ್ಗಿ ಅಕ್ಷಯವಾಗುವ ವಿಶಿಷ್ಟ ಪವಾಡ..!

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕದಲ್ಲಿ ಇರುವ ಪ್ರತಿಯೊಂದು ಊರು ಒಂದೊಂದು ಬಗೆಯ ವಿಶೇಷತೆಗಳನ್ನು ಹೊಂದಿದೆ. ಒಂದೊಂದು ಊರುಗಳು ದೇವರ ಹೆಸರುಗಳಿಂದ ಖ್ಯಾತವಾದ ರೆ ಮತ್ತೊಂದಿಷ್ಟು ಊರುಗಳು ಪವಾಡ ಪುರುಷರ ಪಾದ ಧೂಳಿನಿಂದ ಪ್ರಸಿದ್ಧಿ ಆಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಸಿದ್ಧಿ ಪುರುಷರಾದ ಮೊರಬದ ಶ್ರೀ ಯೋಗೇಶ್ವರ ಅಜ್ಜಯ್ಯನವರು ನೆಲೆ ನಿಂತಿರುವ ಕ್ಷೇತ್ರವನ್ನು ದರ್ಶನ ಮಾಡಿ ಪುನೀತ ರಾಗೊಣ. 900 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿರುವ ಮೊರಬದಲ್ಲಿ ಪವಾಡ ಪುರುಷರು ಶ್ರೀ ಯೋಗೇಶ್ವರ ಸ್ವಾಮಿಗಳು ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಭಕ್ತರು ಯೋಗೇಶ್ವರ ರನ್ನ ಯೋಗಪ್ಪಾಜ್ಜ ಎಂದು ಪ್ರೀತಿಯಿಂದ ಕರೆಯುತ್ತಾರೆ. ತುಪ್ಪದ ಹಳ್ಳದ ತಟದ ಮೇಲೆ ನಿರ್ಮಿಸಲಾದ ಯೋಗೇಶ್ವರ ರ ದೇವಾಲಯ ಗೋಪುರ, ಗರ್ಬಗೃಹ, ಪ್ರದಕ್ಷಿಣಾ ಪಥ ಹೊಂದಿದೆ. ಆಲಯದ ಗರ್ಭ ಗುಡಿಯಲ್ಲಿ ಯೋಗೇಶ್ವರ ಗದ್ದುಗೆ ಹಾಗೂ ಮೂರ್ತಿಯನ್ನು ನೋಡಬಹುದು. ತುಂಬು ಭಕ್ತಿಯಿಂದ ಯೋಗೇಶ್ವರ ರನ್ನ ಬೇಡಿಕೊಂಡರೆ ಮನಸ್ಸಿನ ಆಶೋತ್ತರಗಳು ನೆರವೇರುತ್ತವೆ ಎಂಬ ಪ್ರತೀತಿ ಇದೆ.

 

 

ಹೀಗಾಗಿ ನಿತ್ಯ ನೂರಾರು ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಅಜ್ಜಯ್ಯನವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಈ ಊರಿಗೆ ಮೊರಬ ಎಂಬ ಹೆಸರು ಬಂದಿರುವುದರ ಹಿಂದೆ ಯೋಗೇಶ್ವರ ರ ಪವಾಡ ಕೂಡ ಇದೆ. ಹಿಂದೆ ಈ ಊರಿನಲ್ಲಿದ್ದ ಜಡಯ್ಯನವರು, ಹುಚಾಯ್ಯನವರು, ಗೂರೆ ಸ್ವಾಮಿಗಳು ನಮ್ಮ ಊರಿಗೆ ಹೆಸರನ್ನು ಸೂಚಿಸಬೇಕು ಎಂದು ಕೇಳಿಕೊಂಡಾಗ. ಯೋಗೇಶ್ವರ ರು ಯಜ್ಞವನ್ನು ಮಾಡಲು ಶುರು ಮಾಡಿದರು. ಯಜ್ಞ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲಿ ಯಜ್ಞಕ್ಕೆ ಹಾಕುತ್ತಿದ್ದ ಕಟ್ಟುಗೆಗಳು ಮುಗಿದು ಹೋದವು ಆಗ ಯೋಗೇಶ್ವರ ರು ಅಲ್ಲೇ ಇದ್ದ ಮರಕ್ಕೆ ಮರ ಬಾ ಮರ ಬಾ ಎಂದು ಕರೆದರಂತೆ. ಆಗ ಆ ಮರವು ಬೇರು ಸಮೇತ ಕಿತ್ತುಕೊಂಡು ಯೋಗೇಶ್ವರ ರ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಜನರು ಮರ ತಲೆ ಬಾಗಿ ಬಿದ್ದ ಸ್ಥಳವನ್ನು ತಲೆ ಮರಬಾ ಎಂದು ಮರದ ಬುಡ ಬಿದ್ದ ಜಾಗವನ್ನು ಮರಬ ಎಂದು ಕರೆಯತೊಡಗಿದರು. ಯೋಗೇಶ್ವರ ರು ಮರ ಬಾ ಎಂದು ಕರೆದದ್ದು ಮುಂದೆ ಜನರ ಬಾಯಿಂದ ಬಾಯಿಗೆ ಹರಿದಾಡಿ ಮೊರಬಾ ಎಂದಾಯಿತು ಎಂದು ಹೇಳಲಾಗುತ್ತದೆ. ಹಾವು ಕಚ್ಚಿ ಸತ್ತು ಹೋದ ಮಗುವನ್ನು ಬದುಕಿಸಿದ್ದು, ರೋಗ ರುಜಿನಗಳಿಂದ ಬಳಲುತ್ತಿದ್ದ ಜನರನ್ನು ಮತ್ತೆ ಆರೋಗ್ಯವಂತರಾಗಿ ಮಾಡಿದ್ದು, ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿ ಸಿದ್ದು ಹೀಗೆ ಹಲವಾರು ಪವಾಡಗಳನ್ನು ಯೋಗೇಶ್ವರ ರು ಈ ಊರಿನಲ್ಲಿ ನೆಲೆ ನಿಂತ ಸಮಯದಲ್ಲಿ ಮಾಡಿದ್ದಾರೆ. ಇಂದಿಗೂ ಈ ಕ್ಷೇತ್ರದಲ್ಲಿ ಒಂದಿಲ್ಲ ಒಂದು ಪಾವದ ನಡೆಯುತ್ತವೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಬರುವ ಮೂರನೇ ಸೋಮವಾರ ಯೋಗಪ್ಪಾಜ್ಜಾ ಅವರ ಜಾತ್ರೆಯನ್ನು ನಡೆಸಲಾಗುತ್ತದೆ.

 

 

ಜಾತ್ರೆ ನಡೆಯುವ ಒಂದು ವಾರದ ಮುಂಚೆ ದಿನದ 24 ಗಂಟೆಯೂ ಓಂ ನಮಃ ಶಿವಾಯ ಮಂತ್ರವನ್ನು ಪಠಣ ಮಾಡಲಾಗುತ್ತದೆ. ಜಾತ್ರೆ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನೀಡಲು ಗೋದಿ ಹುಗ್ಗಿ ನ ಮಾಡಲಾಗುತ್ತೆ. ಅಚ್ಚರಿ ಏನು ಅಂದ್ರೆ ಪ್ರಸಾದಕ್ಕೆ ಮಾಡಿಸಿದ ಗೋದಿ ಹುಗ್ಗಿ ಅಕ್ಷಯ ಆಗುತ್ತೆ. ಲಕ್ಷಾಂತರ ಜನರು ಪ್ರಸಾದವನ್ನು ತಿಂದರೂ ಗೋದಿ ಹುಗ್ಗಿ ಖಾಲಿ ಆಗೋದೇ ಇಲ್ಲ. ಎಷ್ಟೇ ಕಡಿಮೆ ಹುಗ್ಗಿ ಮಾಡಿದರೂ ಅದು ಅಕ್ಷಯವಾಗುತ್ತೆ. ಈ ಪವಾಡವನ್ನು ನೋಡಲು ದೂರ ದೂರದ ಊರಿನಿಂದ ಭಕ್ತರು ಆಗಮಿಸುತ್ತಾರೆ. 2 ಲಕ್ಷಕ್ಕಿಂತ ಹೆಚ್ಚು ಜನರು ಜಾತ್ರೆಗೆ ಆಗಮಿಸಿ ಯೋಗೇಶ್ವರ ರ ದರ್ಶನ ಪಡೆಯುತ್ತಾರೆ. ಅಲ್ಲದೆ ಈ ಊರು ಹಿಂದೂ ಮುಸ್ಲಿಂ ಭಾವೈಕ್ಯದ ಸಂಗಮ ಆಗಿದ್ದು, ಮೊಹರಂ ಹಬ್ಬದ ಕೊನೆಯ ದಿನ ಮುಸ್ಲಿಂ ದೇವರುಗಳು ಜೋಗಪ್ಪಾಜ್ಜನ ದೇವಸ್ಥಾನಕ್ಕೆ ಬಂದು ರೈತರಿಗೆ ಮಳೆ ಭವಿಷ್ಯವನ್ನು ಹೇಳುತ್ತಾರೆ. ಇಂತಹ ವಿಶಿಷ್ಟ ಆಚರಣೆ ಬೇರೆ ಎಲ್ಲೋ ನೋಡಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಇಲ್ಲಿ ನಲೆಸಿರುವ ಯೋಗೇಶ್ವರ ರಿಗೆ ನಿತ್ಯ ಅಭಿಷೇಕ ಸಹಿತ ಪೂಜೆಯನ್ನು ಮಾಡಲಾಗುತ್ತದೆ. ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಬೆಳಗ್ಗೆ 7-8 ಗಂಟೆ ವರೆಗೆ ಅಜ್ಜಯ್ಯನವರುಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಈ ಪುಣ್ಯ ಕ್ಷೇತ್ರವನ್ನು ಬೆಳಿಗ್ಗೆ 7 ರಿಂದ ರಾತ್ರಿ 10 ರ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುಣ್ಯ ಕ್ಷೇತ್ರವೂ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬಾ ಎಂಬ ಸ್ಥಳದಲ್ಲಿದೆ. ಸಾಧ್ಯವಾದರೆ ನೀವು ನಿಮ್ಮ ಜೀವನದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಯೋಗೇಶ್ವರ ರ ಪವಾಡಗಳನ್ನು ಅರಿಯಿರಿ. ಶುಭದಿನ.

ಭಕ್ತಿ