ನಮಸ್ತೆ ಪ್ರಿಯ ಓದುಗರೇ, ಹಲವಾರು ಜನರಿಗೆ ಊಟಾ ಆದ ತಕ್ಷಣ ಮತ್ತೆ ಹಸಿವು ಆಗುತ್ತಾ ಇರುತ್ತದೆ. ಎಷ್ಟೋ ಹೊಟ್ಟೆ ತುಂಬಾ ತಿಂದರೂ ಕೂಡ ಅವರಿಗೆ ಹಸಿವು ಜಾಸ್ತಿ ಆಗುತ್ತಾ ಇರುತ್ತದೆ. ಹೀಗೆ ಆಗಲು ಕಾರಣಗಳೇನು? ಇದಕ್ಕೆ ಪರಿಹಾರ ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಅದಕ್ಕೂ ಮುಂಚೆ ಈ ರೀತಿಯ ಅರೋಗ್ಯದ ಮಾಹಿತಿಯನ್ನು ಪ್ರತಿದಿನ ಪಡೆಯಲು ನಮ್ಮ ನ್ಯೂ ನ್ಯೂಸ್ ಕನ್ನಡ ಪೇಜ್ ನ ಲೈಕ್ ಮಾಡಿ. ಸ್ನೇಹಿತರೆ ಒಬ್ಬ ಆರೋಗ್ಯಕರ ವ್ಯಕ್ತಿಯಲ್ಲಿ ಒಮ್ಮೆ ಊಟಾ ಮಾಡಿದ ನಂತರ ಸುಮಾರು 3 ಗಂಟೆಗಳ ಬಳಿಕ ಅವರಿಗೆ ಹಸಿವು ಆದ್ರೆ ಅದನ್ನು ಸಾಮಾನ್ಯ ಹಸಿವು ಎಂದುಕೊಳ್ಳಬಹುದು. ಆದ್ರೆ ಇದಕ್ಕೂ ಮೊದಲು ಅವರಿಗೆ ಹಸಿವು ಆದ್ರೆ ಅವರ ಆರೋಗ್ಯದಲ್ಲಿ ಏನಾದರೂ ತೊಂದರೆ ಇರಬಹುದು ಎಂದರ್ಥ. ಉದಾಹರಣೆಗೆ ಅವರಿಗೆ ಪ್ರೊಟೀನ್ ಕೊರತೆ ಇರಬಹುದು ಅಥವಾ ಆಹಾರದಲ್ಲಿ ನಾರಿನ ಅಂಶ ಕಡಿಮೆ ಇರಬಹುದು, ನಿದ್ರಾ ಹೀನತೆ ಸಮಸ್ಯೆ ಇರಬಹುದು ಅಥವಾ ಅವರ ಜೀವನ ಶೈಲಿ ಆಹಾರ ಕ್ರಮ ಸರಿಯಾಗಿ ಇಲ್ಲದಿದ್ದರೆ ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಊಟಾ ಆದ ತಕ್ಷಣ ನಿಮಗೆ ಹಸಿವು ಆಗುವುದರ ಮುಖ್ಯ ಕಾರಣ ಅಂದ್ರೆ ನಾವು ಸೇವನೆ ಮಾಡುವಂತಹ ಆಹಾರ ಬೇಗ ಬೇಗನೆ ಸೇವನೆ ಮಾಡಿದರೆ ಇಡೀ ಆಹಾರವು ನಮ್ಮ ಜಠರ ತಲುಪುತ್ತದೆ. ಹೀಗೆ ಬೇಗ ಬೇಗ ಬಂದ ಆಹಾರ ಬೇಗ ಬೇಗನೆ ಜೀರ್ಣ ಆಗಿ ಹೊಟ್ಟೆ ಇನ್ನಷ್ಟು ತಿನ್ನಿ ಎಂದು ಸೂಚನೆ ನೀಡುತ್ತದೆ.
ಆದ ಕಾರಣ ನಾವು ಸೇವನೆ ಮಾಡಿದ ಆಹಾರವನ್ನು ಸಂಪೂರ್ಣವಾಗಿ ಜಗಿದು ಆಗಿದು ತಿಂದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ನಮ್ಮ ಜೀರ್ಣ ಕ್ರಿಯೆ ಸಮಸ್ಯೆಗೆ ಒಳ್ಳೆಯದು. ಇನ್ನೂ ಊಟಾ ಆದ ತಕ್ಷಣ ಬೇಗ ಹಸಿವು ಆಗಲು ಕಾರಣ ಏನು ಅಂದ್ರೆ ಕೆಲವೊಂದಿಷ್ಟು ಜನರು ಆಹಾರದ ಜೊತೆ ಈ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಈ ಕೋಲ್ಡ್ ಡ್ರಿಂಕ್ಸ್ ನೂರೆ ಬರಲು ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸುತ್ತಾರೆ. ಈ ಇಂಗಾಲದ ಡೈಆಕ್ಸೈಡ್ ಬೇಡವೆಂದು ನಮ್ಮ ಉಸಿರಿನ ಮೂಲಕ ಹೊರಗೆ ಹಾಕುತ್ತಾ ಇರುತ್ತೇವೆ ಈಗ ಇದನ್ನು ನಾವು ನೀರಿನಲ್ಲಿ ಕರಗಿಸಿ ಕುಡಿಯುತ್ತೇವೆ. ಇದು ನಮ್ಮ ಹೊಟ್ಟೆಯಲ್ಲಿ ಜೀರ್ಣ ಕ್ರಿಯೆಯನ್ನು ಬಾಧಿಸುತ್ತದೆ. ಮತ್ತು ಊಟದ ಕೊಂಚ ಹೊತ್ತಿನ ಬಳಿಕ ಎಲ್ಲಾ ಗಾಳಿಯು ಹೊರಗೆ ಹೋದ ಮೇಲೆ ಅಲ್ಲಲ್ಲಿ ಖಾಲಿ ಜಾಗ ತುಂಬಿಸಿಕೊಳ್ಳಲು ಹೊಟ್ಟೆಗೆ ಹೆಚ್ಚಿನ ಆಹಾರ ಸೇವಿಸಿ ಎಂದು ಸೂಚನೆ ನೀಡುತ್ತದೆ. ಹಾಗಾಗಿ ಊಟಾದ ಜೊತೆಗೆ ಪ್ರತಿಷ್ಠೆಗೆ ಅಂತ ಕೋಲ್ಡ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ನಿಮಗೆ ಇದ್ದರೆ ಇದನ್ನು ಬಿಟ್ಟುಬಿಡುವುದು ಒಳ್ಳೆಯದು. ಇನ್ನೂ ಕೆಲವರು ಮನೆಯಲ್ಲಿ ಊಟಾ ಮಾಡುವ ಬದಲು ಪ್ರತಿನಿತ್ಯ ಹೋಟೆಲ್ ಅಲ್ಲಿ ಊಟಾ ಮಾಡುತ್ತಾರೆ. ಈ ಹೋಟೆಲ್ ಗಳಲ್ಲಿ ಆಹಾರ ರುಚಿ ಹೆಚ್ಚಿಸಲು ಆಹರಕ್ಕೆ ಟೆಸ್ಟಿಂಗ್ ಪೌಡರ್, ಡಾಲ್ದ ಮತ್ತು ನಮ್ಮ ನಾಲಿಗೆಗೆ ರುಚಿ ಹೆಚ್ಚಿಸುವ ಕೆಲವು ಪದಾರ್ಥಗಳನ್ನು ಬಳಸಿರುತ್ತಾರೆ.
ಈ ಹೋಟೆಲ್ ಗಳಲ್ಲಿ ಆಹಾರ ಸೇವನೆ ಮಾಡಿದ ತಕ್ಷಣ ಹೊಟ್ಟೆ ತುಂಬಿದ ಭಾವ ಬರುತ್ತದೆ. ಆದ್ರೆ ಅರ್ಧ ಗಂಟೆ ಒಂದು ಗಂಟೆ ಆದ್ರೆ ಮತ್ತೆ ನಮಗೆ ಹೊಟ್ಟೆ ಹಸಿಯುತ್ತದೆ. ಹಾಗಾಗಿ ಪ್ರತಿನಿತ್ಯ ಹೋಟೆಲ್ ಗಳಲ್ಲಿ ನೀವು ಊಟಾ ಮಾಡುತ್ತಿದ್ದರೆ, ನಿಮ್ಮ ಆರೋಗ್ಯಕ್ಕೆ ನಿಮ್ಮ ಜೀರ್ಣ ಕ್ರಿಯೆಗೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಇರುವಂಥ ಆಹಾರವನ್ನು ಸೇವಿಸಿ ಆರೋಗ್ಯದಿಂದ ಇರಿ. ಹಾಗೂ ನೀವೇನಾದರೂ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಇದು ನಿಮಗೆ ಹಸಿವನ್ನು ಹೆಚ್ಚಿಸುತ್ತದೆ. ಮಧ್ಯಪಾನ ಮಾಡಿದ ನಂತರ ನಮ್ಮ ಮೆದುಳಿಗೆ ಮಂಪರು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಹೀಗಾಗಿ ಅನಗತ್ಯವಾಗಿ ಹಸಿವು ಭಾವನೆ ಮೂಡುತ್ತದೆ. ಇನ್ನೂ ನಿಮ್ಮ ಆಹಾರದಲ್ಲಿ ನೀವು ಸರಿಯಾಗಿ ನಾರಿನ ಅಂಶ ಇರುವ ಪದಾರ್ಥ ಸೇವನೆ ಮಾಡದಿದ್ದರೆ ಆಗ ನಿಮಗೆ ಹಸಿವು ಜಾಸ್ತಿ ಆಗುತ್ತದೆ. ನೀವು ಬೇಕರಿ ಪದಾರ್ಥಗಳು ಕರಿದಿರುವ ಪದಾರ್ಥಗಳನ್ನು ಸೇವನೆ ಮಾಡಿದರೆ ಆಗ ನಿಮಗೆ ಹಸಿವು ಜಾಸ್ತಿ ಆಗುತ್ತೆ. ನಿಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದ ನಾರು ಇಲ್ಲದೆ ಹೋದರೆ ಇದು ಸತತವಾಗಿ ಹಸುವಿಗೆ ಕಾರಣ ಆಗಬಹುದು. ನಾರಿನ ಪ್ರಮಾಣ ಹೆಚ್ಚಿರುವ ಆಹಾರ ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಹೆಚ್ಚಿನ ಸಮಯದ ವರೆಗೆ ನಡೆಯುತ್ತದೆ ಹಾಗೂ ಈ ಮೂಲಕ ಸಾಕಷ್ಟು ಹೊತ್ತಿನವರೆಗೆ ಹಸಿವನ್ನು ನಿಯಂತ್ರಿಸಬಹುದು. ಹೊಟ್ಟೆ ತುಂಬಿದ ಸೂಚನೆ ನೀಡುವ ರಸದೂತಗಳ ಉತ್ಪತ್ತಿ ಆಗುವ ನೆರವಾಗುವ ಮೂಲಕ ಹಸಿವು ಆಗದಂತೆ ತಡೆಯುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಗೆ ನಾರಿನ ಅಂಶ ಇರುವ ಆಹಾರವನ್ನು ಸೇವನೆ ಮಾಡುವುದು ಉತ್ತಮ. ಇನ್ನೂ ಬಹಳಷ್ಟು ಜನಕ್ಕೆ ಬೇಗ ಹಸಿವು ಆಗಲು ಕಾರಣ ಏನು ಅಂದ್ರೆ ಊಟಾ ಆದ ಬಳಿಕ ಅಷ್ಟೇ ನೀರು ಕುಡಿದು ಇನ್ನೂ ಬೇರೆ ಸಮಯದಲ್ಲಿ ನೀರನ್ನು ಕುಡಿಯುವುದಿಲ್ಲ. ಈ ಕಾರಣದಿಂದ ಅವರಿಗೆ ಹಲವಾರು ಬಾರಿ ಹಸಿವು ಆಗುತ್ತೆ. ನೀರು ನಮ್ಮ ದೇಹಕ್ಕೆ ಆರೋಗ್ಯಕ್ಕೆ ತುಂಬಾ ಮುಖ್ಯ. ನಿಮಗೆ ಹಸಿವನ್ನು ನಿಯಂತ್ರಿಸಲು ನೀರು ಕುಡಿಯುವುದು ಒಳ್ಳೆಯ ವಿಧಾನ. ಇದು ನಿಮ್ಮ ತೂಕ ಇಳಿಕೆಗೆ ನೆರವಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.