ಶ್ರೀ ರಾಘವೇಂದ್ರ ಸ್ವಾಮಿಗಳ ಹೆಂಡತಿ ಬಾವಿಗೆ ಹಾರಿ ಪ್ರಾಣ ಬಿಡಲು ಕಾರಣವೇನು? ಪ್ರಾಣಬಿಟ್ಟ ನಂತರ ಪಿಶಾಚಿ ರೂಪ ತಾಳಿದ್ದು ನಿಜಾನಾ?

ಶ್ರೀ ರಾಘವೇಂದ್ರ ಸ್ವಾಮಿಗಳ ಹೆಂಡತಿ ಬಾವಿಗೆ ಹಾರಿ ಪ್ರಾಣ ಬಿಡಲು ಕಾರಣವೇನು? ಪ್ರಾಣಬಿಟ್ಟ ನಂತರ ಪಿಶಾಚಿ ರೂಪ ತಾಳಿದ್ದು ನಿಜಾನಾ?

ನಮಸ್ತೆ ಪ್ರಿಯ ಓದುಗರೇ, ರಾಘವೇಂದ್ರ ಸ್ವಾಮಿಗಳ ಮೊದಲ ಹೆಸರು ಏನಾಗಿತ್ತು, ರಾಘವೇಂದ್ರ ಸ್ವಾಮಿಗಳ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣವೇನು? ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರೇನು ಇಂಥ ಕುತೂಹಲ ವಿಶೇಷ ಹಾಗೂ ವಿಶಿಷ್ಟ ನಿಗೂಢ ವಿಷಯಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಂದಿನ ಲೇಖನದಲ್ಲಿ ಹೆಚ್ಚುವರಿ ತಿಳಿದುಕೊಳ್ಳೋಣ. ನೀವು ರಾಘವೇಂದ್ರ ಸ್ವಾಮಿಗಳ ಆರಾಧಕರು ಆಗಿದ್ದರೆ, ಹಾಗೂ ಈ ಘಟನಾವಳಿಗಳನ್ನು ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಶ್ರೀ ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದ ಬ್ರಾಹ್ಮಣ ಮಧ್ವ ಸನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನ ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೇ ಅವತಾರವು ಶ್ರೀ ವ್ಯಾಸರಾಯರದ್ದು. ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಶ್ರೀ ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ. ಇವರ ಮೂಲ ಬೃಂದಾವನವು ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿಯ ತಟದ ಮಂತ್ರಾಲಯದಲ್ಲಿ ಇದೆ. ಕರ್ನಾಟಕದ ರಾಯಚೂರಿನಿಂದಾ ಈ ಸ್ಥಳವು ಒಂದು ಘಂಟೆಯ ಪ್ರಯಾಣವಾಗಿದೆ. ಇಲ್ಲಿಗೆ ನಿತ್ಯವೂ ಸಾವಿರಾರು ಜನರು ಭೇಟಿ ನೀಡುತ್ತಾರೆ.

 

 

ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷದಿಂದ ಶ್ರಾವಣ ಕೃಷ್ಟಪಕ್ಷದ ವರೆಗೂ ದೇವರ ದಿವ್ಯ ಆರಾಧನೆ ಇಲ್ಲಿ ನಡೆಯುತ್ತದೆ. ಶ್ರೀ ಗುರು ರಾಘವೇಂದ್ರರ ಪೂರ್ವಾಶ್ರಮದ ಹೆಸರು ಶ್ರೀ ವೆಂಕಟನಾಥ. ಶ್ರೀ ವೆಂಕಟನಾಥರು 1595 ರಲ್ಲಿ ಈಗಿನ ತಮಿಳುನಾಡಿನ ಭುವನ ಗಿರಿಯಲ್ಲಿ ಜನಿಸುತ್ತಾರೆ. ವೆಂಕಟನಾಥರು ಬಾಲ್ಯದಿಂದ ತುಂಬಾ ಬುದ್ಧಿವಂತ ಬಾಲಕ ಆಗಿದ್ದರು, ಇವರ ತಂದೆ ಚಿಕ್ಕವಯಸ್ಸಿನಲ್ಲಿ ವಿಧಿವಶ ಆಗಿದ್ದರಿಂದ ಮನೆಯ ಜವಾಬ್ದಾರಿಯನ್ನು ಇವರ ಅಣ್ಣ ಗುರುರಾಜರು ಹೊತ್ತಿದ್ದರು. ಇವರ ಆರಂಭಿಕ ವಿಧ್ಯಾಭ್ಯಾಸ ಇವರ ಸೋದರಮಾವ ಆದ ಮದುರೈನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವರ ಬಳಿ ನಡೆಯುತ್ತದೆ. ಇದಾದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆ ಜೊತೆಗೆ ನಡೆಯುತ್ತದೆ. ವಿವಾಹ ನಂತರ ಅವರು ಕುಂಬಕೊಣಕ್ಕೆ ಬಂದು ಶ್ರೀ ಸುಧೀಂದ್ರತೀರ್ಥರ ಬಳಿ ದ್ವೈತ ಸಿದ್ಧಾಂತದ ವ್ಯಾಸಂಗವನ್ನು ಮಾಡತೊಡಗುತ್ತಾರೆ. ಅಲ್ಲಿನ ವಿಧ್ಯಾರ್ಥಿಗಳಿಗೆ ಸಂಸ್ಕೃತ ಹಾಗೂ ವೇದಗಳ ಅಭ್ಯಾಸವನ್ನು ಕಳಿಸುತ್ತಾರೆ. ಯಾರಿಂದ ಫಲಾಪೇಕ್ಷೆ ಇಲ್ಲದೆ ಎಲ್ಲರಿಗೂ ವಿದ್ಯೆ ದಾನ ಮಾಡುತ್ತಿದ್ದರು. ಅವರ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ. ಎಷ್ಟೋ ಸಾರಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿ ಬಂದರೂ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮ ಸ್ಮರಣೆ ಬಿಡಲಿಲ್ಲ.

 

 

ಶ್ರೀ ರಾಘವೇಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಾ ಇರುವ ಸಮಯದಲ್ಲಿ ಅವರ ಕನಸಿನಲ್ಲಿ ದೇವರು ಬಂದು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕುತ್ತಿದ್ದಿಯಾ. ನಿನ್ನ ಪರಮ ಶಿಷ್ಯ ವೆಂಕಟನಾಥನೇ ಉತ್ತರಾಧಿಕಾರಿ ಎಂದು ದೇವರು ಸೂಚಿಸುತ್ತಾರೆ. ಈ ವಿಷಯವನ್ನು ಶ್ರೀ ಸುಧೀಂದ್ರತೀರ್ಥರು ಶ್ರೀ ವೆಂಕಟನಾಥರಿಗೆ ಹೇಳಿದಾಗ, ವೆಂಕಟನಾಥರು ಪತ್ನಿ ಮತ್ತು ಮಕ್ಕಳನ್ನು ನೆನೆಸಿಕೊಂಡು ನಕಾರಾತ್ಮಕ ಉತ್ತರವನ್ನು ಕೊಡುತ್ತಾರೆ. ಆದ್ರೆ ಮನೆಯಲ್ಲಿ ಸಾಕ್ಷಾತ್ ಸರಸ್ವತಿ ದೇವಿ ಪ್ರತ್ಯಕ್ಷ ಆಗಿ ಸ್ವಪ್ನದಲ್ಲಿ ಕಂಡು ಸನ್ಯಾಸತ್ವ ಸ್ವೀಕರಿಸಲು ಆಜ್ಞೆ ನೀಡುತ್ತಾರೆ. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥರು ಪಾಲ್ಗುಣ ಶುಕ್ಲಪಕ್ಷ ತಿಥಿಯಂದು ತಂಜಾವೂರಿನಲ್ಲಿ ತಮ್ಮ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸತ್ವ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ನಾಮಾಂಕಿತ ಆಗುತ್ತಾರೆ. ಮನನೊಂದ ಪತ್ನಿ ಬಾವಿಗೆ ಬಿದ್ದು ಪಿಶಾಚಿ ರೂಪ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳು ಇದ್ದ ಜಾಗಕ್ಕೆ ಬರುತ್ತಾರೆ. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಕಂಡು ಈ ಅವಸ್ಥೆಯಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಪ್ರೋಕ್ಷಿಸಿ ಆಕೆಗೆ ಮುಕ್ತಿ ದೊರಕಿಸಿ ಮೋಕ್ಷ ದೊರೆಯುವಂತೆ ಮಾಡುತ್ತಾರೆ. ನೋಡಿದ್ರಲ್ವ ಸ್ನೇಹಿತರೆ ಯಾಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಹೆಂಡತಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು