ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಡಯಾಬಿಟಿಕ್ ನೆಫ್ರೋಪತಿ ಅಂದ್ರೆ ಏನು? ಈ ತರಹದ ಸಮಸ್ಯೆ ಆದಾಗ ನೀವು ಯಾವ ರೀತಿ ಡಯೆಟ್ ಫಾಲೋ ಮಾಡ್ಬೇಕು ಎಂದು ತಿಳಿದುಕೊಳ್ಳೋಣ. ಡಯಾಬಿಟಿಕ್ ನೆಫ್ರೋಪತಿ ಅಂದ್ರೆ ಯಾರಿಗೆ ಅನಿಯಂತ್ರಿತ ಸಕ್ಕರೆ ಕಾಯಿಲೆ ಮಟ್ಟ ಇರುತ್ತದೆ, ಹಾಗೂ ಕೆಲವೊಬ್ಬರಿಗೆ ತನಗೆ ಡಯಾಬಿಟಿಸ್ ಇದೆ ಅಂತ ಗೊತ್ತಿದ್ದೂ ಏನು ಕಂಟ್ರೋಲ್ ಮಾಡಿಕೊಳ್ಳದೆ ನೆಗ್ಲೆಕ್ಟ್ ಮಾಡುತ್ತಾರೆ, ಶುಗರ್ ಪ್ರಮಾಣ ಕಂಟ್ರೋಲ್ ಅಲ್ಲಿರದೆ, ಯಾವುದೇ ಮಾತ್ರೆ ತೆಗೆದುಕೊಂಡರೂ ಕಂಟ್ರೋಲ್ ಗೆ ಬರುವುದಿಲ್ಲವೋ, ಹಾಗೆ ಯಾವಾಗಲೂ ಸಕ್ಕರೆ ಪ್ರಮಾಣ ಜಾಸ್ತಿ ಇರುತ್ತದೆ ಅಂಥವರಿಗೆ ಈ ಸಮಸ್ಯೆ ಖಂಡಿತ. ಹೀಗೆ ಶುಗರ್ ಲೆವೆಲ್ ಹೆಚ್ಚಾಗಿದ್ದಾರೆ ಅದು ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಕಿಡ್ನಿ ಗೆ ಆಪತ್ತು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಡಯಾಬಿಟಿಸ್ ಇಂದ ಕಿಡ್ನಿ ಮೇಲೆ ಆಗುವ ಕೆಟ್ಟ ಪರಿಣಾಮವನ್ನು ಡಯಾಬಿಟಿಕ್ ನಿಫ್ರೋಪತಿ ಎಂದು ಹೇಳಲಾಗುತ್ತದೆ. ಸೋ ಹೀಗೆಲ್ಲಾ ಆದಾಗ ನಾವು ಯಾವ ರೀತಿಯ ಆಹಾರ ಕ್ರಮಗಳನ್ನು ಅನುಸರಿಸಬೇಕು. ಡಯಾಬಿಟಿಸ್ ಕಾಯಿಲೆ ಇರುವವರಿಗೆ ಉತ್ತಮ ಆಹಾರ ಕ್ರಮ ಅನುಸರಿಸುವುಡು ತುಂಬಾ ಮುಖ್ಯ. ಯಾಕೆಂದ್ರೆ ಒಂದು ಕಡೆ ಡಯಾಬಿಟಿಸ್ ನ ಮ್ಯಾನೇಜ್ ಮಾಡಬೇಕು ಇನ್ನೊಂದು ಕಡೆ ಕಿಡ್ನಿ ಅರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು. ಸೋ ಹಾಗಾಗಿ ಆಹಾರ ಕ್ರಮ ಯೋಜನೆ ಅಂತ ಬಂದಾಗ ಸ್ವಲ್ಪ ಕಟುವಾಗಿ ಸ್ಟ್ರಿಕ್ಟ್ ಆಗಿ ಇರಬೇಕಾಗುತ್ತದೆ.
ಯಾವ ರೀತಿ ಆಹಾರ ಪದ್ಧತಿ ಅನುಸರಿಸಬೇಕು ಅಂತ ಹೇಳುವುದಾದರೆ, ಮುಖ್ಯವಾಗಿ ನೀವು ಡಯಾಬಿಟೀಸ್ ಗೆ ಸರಿ ಹೊಂದುವಂಥ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಂಥ ಆಹಾರವನ್ನು ಡಯೆಟ್ ಅನ್ನು ಫಾಲೋ ಮಾಡಬೇಕು. ಲೋ ಕಾರ್ಬ್ ಫುಡ್, ಹೈ ಫೈಬರ್ ಹಾಗೂ ಮಾಡರೇಟ್ ಪ್ರೊಟೀನ್ ಆಹಾರ ಕ್ರಮ ಅನುಸರಿಸಿ. ಸಾಮಾನ್ಯವಾಗಿ ಡಯಾಬಿಟೀಸ್ ತೊಂದರೆ ಇರುವವರಿಗೆ ವೈದ್ಯರು ಹೈ ಪ್ರೊಟೀನ್ ಫುಡ್ ಅನ್ನು ರೆಕಮಂಡ್ ಮಾಡುತ್ತಾರೆ. ಆದ್ರೆ ಡಯಾಬಿಟಿಕ್ ನೆಫ್ರೋಪತೀ ಅಲ್ಲಿ ಮಾಡರೇಟ್ ಪ್ರೊಟೀನ್ ಫುಡ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆ ನಿಮಗೆ ಕಿಡ್ನಿ ಯಾವ ಮಟ್ಟಕ್ಕೆ ತೊಂದರೆಯಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಎಷ್ಟು ಪ್ರೊಟೀನ್ ತೆಗೆದುಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಊಟಾದಲ್ಲಿ ಯಾವುದನ್ನು ಜಾಸ್ತಿ ತಿನ್ನಬೇಕು ಯಾವುದನ್ನು ಕಡಿಮೆ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಉಪ್ಪಿನ ಅಂಶವನ್ನು ಕಡಿಮೆ ಸೇವಿಸಬೇಕು. ಕಡಿಮೆ ಉಪ್ಪನ್ನು ಬಳಸಿದಷ್ಟೊ ಡಯಾಬಿಟೀಸ್ ಹಾಗೂ ನೆಫ್ರೋಪಥಿ ಗೆ ತುಂಬಾ ಒಳ್ಳೆಯದು. ಯಾಕೆಂದರೆ ಕಿಡ್ನಿ ನಿಮ್ಮ ಸೋಡಿಯಂ ಹಾಗೂ ನೀರಿನ ಪ್ರಣಾಮಗಳನ್ನು ಸಮತೋಲನದಲ್ಲಿ ಇಡುವ ಕೆಲಸ ಮಾಡುತ್ತದೆ. ಯಾವಾಗ ಸೋಡಿಯಂ ಅಂದ್ರೆ ಉಪ್ಪು ಜಾಸ್ತಿ ಆದಾಗ ಸೋಡಿಯಂ ಹಾಗೂ ನೀರಿನ ಪ್ರಮಾಣಗಳು ಏರು ಪೇರು ಆಗುತ್ತೆ. ನೀವು ಕೇಳಿರುತ್ತೀರಿ ಕೆಲವರಿಗೆ ಕಾಲು ಊತ ಕೈ ಊತ ಆಗುತ್ತಾ ಇರುತ್ತದೆ. ಇದನ್ನು ವಾಟರ್ ಸ್ಟೋರೇಜ್ ಅಂತ ಕರೆಯತ್ತೇವೆ.
ಸೋಡಿಯಂ ಹಾಗೂ ನೀರಿನ ಪ್ರಮಾಣಗಳು ಏರು ಪೇರು ಆದಾಗ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿ ಆಗ್ತಾ ಇರುತ್ತೆ. ಇದು ನಿಮ್ಮ ಕಾಲು ಕೈ ಊತಕ್ಕೆ ಕಾರಣ ಆಗಬಹುದು. ಹಾಗಾಗಿ ಸೋಡಿಯಂ ಪ್ರಮಾಣ ಕಡಿಮೆ ದೇಹಕ್ಕೆ ಸೇರುವ ಹಾಗೆ ನೋಡಿಕೊಳ್ಳಿ. ಇದರಿಂದ ಬಿಪಿ ಕೂಡ ಸರಿಯಾಗಿ ಆಗುತ್ತದೆ. ಪ್ರಮುಖವಾಗಿ ಈ ಡಯಾಬಿಟೀಸ್ ಹಾಗೂ ನೆಫ್ರೋಪತಿ ಯಲ್ಲಿ ಬಿಪಿ ಏರು ಪೇರು ಆಗ್ತಾ ಇರುತ್ತೆ. ಹಾಗಾಗಿ ಸೋಡಿಯಂ ನ ಕಂಟ್ರೋಲ್ ಅಲ್ಲಿ ಇಟ್ಟುಕೊಂಡಾಗ ಬಿಪಿ ಸಮಸ್ಯೆ ಬರುವುದಿಲ್ಲ. ಹಾಗಾಗಿ ಮನೆಯ ಅಡುಗೆಯನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಸೋಡಿಯಂ ಬೇಕು ಅಷ್ಟೇ ಸೇರುತ್ತದೆ ಆದ್ರೆ ರೆಸ್ಟೋರೆಂಟ್ ಫುಡ್ ತಿಂದ್ರೆ ಸೋಡಿಯಂ ಸಿಕ್ಕಾಪಟ್ಟೆ ಏರುತ್ತದೆ. ಹರ್ಬಲ್ ಸಪ್ಲಿಮೆಂಟ್ ಗಳನ್ನೂ ಜಾಸ್ತಿ ತೆಗೆದುಕೊಳ್ಳಲು ಹೋಗಬೇಡಿ ಇವು ನಿಮ್ಮ ಕಿಡ್ನಿಯ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಕೆಲವರು ವಿಟಮಿನ್ಸ್ ಗುಳಿಗೆಗಳನ್ನು ತೆಗೆದುಕೊಳ್ಳುತ್ತಾರೆ ಅದು ಕೂಡ ಒಳ್ಳೆಯದಲ್ಲ. ನೀವು ಯಾವುದೇ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ಒಮ್ಮೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಫಾಸ್ಫರಸ್, ಪೊಟ್ಯಾಸಿಯಂ, ಮಿನರಲ್ಸ್, ಪ್ರೊಟೀನ್ ಇವುಗಳನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಮಾಹಿತಿ ನಿಮಗೆ ಇರಬೇಕು. ಪೊಟ್ಯಾಸಿಯಂ ಅಂಶ ಪೊಟಾಟೋ, ಕಿತ್ತಳೆ ಹಣ್ಣಲ್ಲಿ ಜಾಸ್ತಿ ಇರುತ್ತೆ. ಈ ಮೇಲಿನ ಹಣ್ಣು ತರಕಾರಿ ಜಾಸ್ತಿ ನೀವು ತೆಗೆದುಕೊಂಡಾಗ ಪೊಟ್ಯಾಸಿಯಂ ದೇಹದಲ್ಲಿ ಜಾಸ್ತಿ ಆಗಿ ಕಿಡ್ನಿ ಮೇಲೆ ಒತ್ತಡ ಬಿದ್ದು, ಮೂತ್ರ ಸರಿಯಾಗಿ ಫಿಲ್ಟರ್ ಆಗುವುದಿಲ್ಲ. ಇದರಿಂದ ನಿಮ್ಮ ಹಾರ್ಟ್, ಐಯ್ಸ್ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ. ಪೊಟ್ಯಾಸಿಯಂ ನ ಆದಷ್ಟು ಕಡಿಮೆ ಬಳಸಿದರೆ ಒಳ್ಳೆಯದು. ಫಾಸ್ಪರಸ್ ನಿಮ್ಮ ಮೂಳೆಗಳಿಗೆ ಶಕ್ತಿ ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಎಲ್ಲರೂ ಹೇಳುವಂತೆ ಕಿಡ್ನಿ ಅಪಾಯದಲ್ಲಿ ಇರುವಾಗ ಪ್ರೊಟೀನ್ ಕಡಿಮೆ ಮಾಡಬೇಕು. ಕಿಡ್ನಿ ತೊಂದರೆ ಇದ್ದಾಗ ನೀವು ಜಾಸ್ತಿ ಪ್ರೊಟೀನ್ ಫುಡ್ ತೆಗೆದುಕೊಂಡರೆ ಕಿಡ್ನಿ ಇನ್ನೂ ಜಾಸ್ತಿ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ಕಿಡ್ನಿ ತೊಂದರೆ ಅಲ್ಲಿರುವಾಗ ಹೆಚ್ಚು ಪ್ರೊಟೀನ್ ಸೇವಿಸಿ ಕಿಡ್ನಿಗೆ ಇನ್ನೂ ತೊಂದರೆ ನೀಡಿದಂತೆ ಆಗುತ್ತದೆ. ಹಾಗಾಗಿ ಕಿಡ್ನಿ ವೈಫಲ್ಯ ಅಥವಾ ನೆಫ್ರೋಪತಿ ಆದಾಗ ಆದಷ್ಟು ಪ್ರೊಟೀನ್ ನ ಅವಾಯ್ಡ್ ಮಾಡುವುದು ಒಳ್ಳೆಯದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.