ಜರಿ ನೋಡಿದ್ರೆ ಮೈ ಜುಮ್ಮ್ ಅನ್ಸುತ್ತೆ ಅಲ್ವಾ? ಹಾಗಾದ್ರೆ ಈ ಜರಿ ಕಡಿದರೆ ತಕ್ಷಣವೇ ಏನು ಚಿಕಿತ್ಸೆ ನೀಡಬೇಕು???

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ತಂಪು ಪ್ರದೇಶಗಳಲ್ಲಿ ಈ ಜರಿಯನ್ನೂ ನೀವು ನೋಡಿರುತ್ತೀರಿ. ಈ ಜರಿ ಒಂದು ವಿಚಿತ್ರ ಕ್ರಿಯೇಷನ್. ನೋಡಿದ್ರೆ ಸಾಕು ಮೈ ಜುಮ್ಮ್ ಅನ್ಸುತ್ತೆ. ಅದು ಮೈ ಮೇಲೆ ಓಡಾಡಿದರೆ ಮೈಯೆಲ್ಲ ಮುಳ್ಳು ಅನಿಸುವಷ್ಟು ಕಿರಿ ಕಿರಿ. ಜರಿ ಒಂದು ವಿಷ ಜಂತು. ಅದು ಕಡಿದರೆ ತುಂಬಾ ಅಪಾಯಕಾರಿ. ಹೀಗೆ ಮನೆಯಲ್ಲಿ ನೀರು ತುಂಬಿಸಿ ಇಡುವ ತೊಟ್ಟಿ, ಹಾಗೂ ತಂಪು ಇರುವ ಸ್ಥಳದಲ್ಲಿ ಈ ಜರಿ ಇದ್ದೆ ಇರುತ್ತದೆ. ನೀವು ನಿಮ್ಮ ಮನೆಗಳಲ್ಲಿ ನೋಡಿರಬಹುದು. ಕಂಡ ತಕ್ಷಣ ಹೊಡೆದು ಸಾಯಿಸಿ ಹೊರಗೆ ಹಾಕಿಯೇ ಇರುತ್ತಿರ. ಆದ್ರೆ ಕೆಲವೊಬ್ಬರಿಗೆ ಅದು ಕಡಿದರೆ ಯಾವ ರೀತಿ ಅದರ ವಿಷ ನಮ್ಮ ಮೈಯೊಳಗೆ ಸೇರುವುದನ್ನು ತಡೆಯಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಜರಿ, ಇದರ ಹೆಸರು ಕೇಳಿದರೆ ಸಾಕು ಬಹಳಷ್ಟು ಜನರ ಮೈ ಮೇಲೆ ಇರುವ ರೋಮಗಳು ಎದ್ದು ನಿಲ್ಲುತ್ತವೆ.

 

ಇದು ಹೆಚ್ಚು ತಂಪು ಇರುವ ಸ್ಥಳದಲ್ಲಿ ಜೀವಿಸುತ್ತದೆ ಹಾಗೂ ಮನೆಯ ಮೇಲಿನ ನೀರಿನ ತೊಟ್ಟಿ ಕೆಳಗಡೆ ಇರುತ್ತದೆ. ಇದು ಒಂದುವೇಳೆ ಕಡಿದರೆ ಕಾಡಿದ ಮೇಲಿನ ಸುಮಾರು ಮೂರು ಗಂಟೆಗಳ ಕಾಲ ನೀವು ಇರುತ್ತದೆ. ಜರಿ ಕಾಡಿದ ತಕ್ಷಣ ಆ ಜಾಗವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಜರಿ ಕಡಿದ ಜಾಗವನ್ನು ಬಿಸಿ ನೀರಿನಲ್ಲಿ ಮುಳುಗಿಸಿ, ಶುದ್ಧವಾದ ಬಟ್ಟೆಯಿಂದ ಒರೆಸಿ. ನೀರು ಬಿಸಿ ಇರುವುದರ ಪರಿಣಾಮ ನೋವಿನ ತೀವ್ರತೆ ಕಡಿಮೆ ಆಗುವ ಅವಕಾಶ ಇರುತ್ತದೆ. ಆ ಜಾಗಕ್ಕೆ ಬೆಳ್ಳುಳ್ಳಿ ಪೇಸ್ಟ್ ನ್ನೂ ಪಟ್ಟಿಯಂತೆ ಹಾಕುವುದರಿಂದ ನೋವು ಮತ್ತು ಉತ ಕಡಿಮೆಯಾಗುತ್ತದೆ. ಅಥವಾ ಜರಿ ಕಡಿದ ದೇಹದ ಭಾಗದ ಮೇಲೆ ಅರಿಶಿನವನ್ನು ಕೂಡ ಹಚ್ಚಬಹುದು. ಇಂತಹ ವಿಷ ಜಂತುಗಳು ಮನೆ ಒಳಗೆ ಬರಬಾರದು ಎಂದು ಹಿಂದಿನ ಕಾಲದಿಂದ ಮನೆಯ ದ್ವಾರ ಬಾಗಿಲಿಗೆ ಅರಿಶಿನ ಹಚ್ಚಿರಿತ್ತಾರೆ.

 

ಮನೆಯ ಹೋಸಿಲಿಗೆ ಅರಿಶಿನ ಹಚ್ಚುವುದರಿಂದ ಆಂಟಿ ಬಯೋಟಿಕ್ ಪ್ರಭಾವ ಜರಿಗಳು ಅಷ್ಟೇ ಅಲ್ಲದೆ ಇತರೆ ಕೀಟಗಳು ಮನೆಯ ಒಳಗೆ ಬಾರದಂತೆ ತಡೆಯುತ್ತದೆ. ಈ ಮೂಲಕ ವಿಷಯುಕ್ತ ಜರಿಗಳು ಮನೆಯ ಒಳಗೆ ಬಾರದಂತೆ ತಡೆಯಬಹುದು. ಇನ್ನೂ ಜರಿ ಕಡಿದಾಗ ಜೇನುತುಪ್ಪ ಒಂದು ಒಳ್ಳೆಯ ಮನೆಮದ್ದು. ಜೇನುತುಪ್ಪ ನಂಜು ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣ ಇದ್ದು, ಕೀಟಗಳು ಕಡಿದಾಗ ಉರಿಯನ್ನು ಶಮನ ಮಾಡುವುದರ ಜೊತೆಗೆ ಸೋಂಕು ಉಂಟಾಗದಂತೆ ತಡೆಯುತ್ತದೆ. ಇನ್ನೂ ತುಳಸಿ ಎಲೆಗಳನ್ನು ಕೂಡ ಉಪಯೋಗ ಮಾಡಬಹುದು. ತುಳಸಿ ಎಲೆಗಳಲ್ಲಿ ನೈಸರ್ಗಿಕ ರಾಸಾಯನಿಕ ಗಳು ಇದ್ದು , ಇವು ಕೀಟಗಳ ಕಡಿತಕ್ಕೆ ಉತ್ತಮ ರಾಮಬಾಣ ಆಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published.