ನಮಸ್ತೆ ಪ್ರಿಯ ಓದುಗರೇ, ಜೀವನ ಅನ್ನುವುದು ನಿಂತ ನೀರಲ್ಲ ಅದು ಸದಾ ಸಾಗುತ್ತಾ ಇರುತ್ತದೆ. ಜೀವನ ಅಂದಮೇಲೆ ಅಲ್ಲಿ ಕಷ್ಟಗಳು ಬರುತ್ತೆ ಸುಖವೂ ಬರುತ್ತೆ, ಆದ್ರೆ ಕೆಲವೊಂದು ಕಷ್ಟಗಳಿಗೆ ನಮ್ಮ ಬಳಿ ಪರಿಹಾರ ಇರುವುದಿಲ್ಲ. ಅಂತಹ ಸಮಯದಲ್ಲಿ ನಾವು ಮೊರೆ ಹೋಗೋದು ದೇವರ ಬಳಿ ಬನ್ನಿ ಇವತ್ತಿನ ಲೇಖನದಲ್ಲಿ ಬದುಕಿನಲ್ಲಿ ಬರುವ ಎಲ್ಲಾ ಬಗೆಯ ಕಷ್ಟಗಳನ್ನು ದೂರ ಮಾಡುವ ಅನಂತ ಪದ್ಮನಾಭ ಸ್ವಾಮಿಯ ದರ್ಶನ ಮಾಡಿ ಪುನೀತರಾ ಗೋಣ. ದಕ್ಷಿಣ ಭಾರತದಲ್ಲಿ ನಾಗಾರಾಧನೆ ಗೆ ಬಹಳಷ್ಟು ಖ್ಯಾತವಾದ ಪರಶುರಾಮ ರ ಸೃಷ್ಠಿ ಎಂದೇ ಕರೆಯುವ ತುಳುನಾಡಿನಲ್ಲಿ ಇರುವ ಕುಡುಪು ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಹೆಚ್ಚು ಖ್ಯಾತವಾಗಿದ್ದು, ಈ ಕ್ಷೇತ್ರದಲ್ಲಿ ಅನಂತ ಪದ್ಮನಾಭ ಸ್ವಾಮಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಅಲ್ಲದೆ ಈ ದೇಗುಲದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ನಾಗ ದೇವತೆಗಳು ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಕಷ್ಟಗಳಿಂದ ದೂರ ಮಾಡುತ್ತಿದ್ದಾನೆ. ದೇಗುಲದಲ್ಲಿ ಇರುವ ಭದ್ರಾ ಸರಸ್ವತಿ ತೀರ್ಥದಲ್ಲಿ ಮಿಂದೆದ್ದರೇ ಸಕಲ ಚರ್ಮ ರೋಗಗಳು ವಾಸಿ ಆಗುತ್ತೆ ಹಾಗೂ ಪಾಪಗಳು ಕಳೆದು ಮೋಕ್ಷ ದೊರಕುತ್ತದೆ ಎಂಬ ಪ್ರತೀತಿ ಇದೆ. ಅಲ್ಲದೆ ಸಂತಾನ ಸಮಸ್ಯೆ, ವ್ಯವಹಾರ ಸಮಸ್ಯೆ, ವಿಧ್ಯಾಭ್ಯಾಸ ಸಮಸ್ಯೆ, ಉದ್ಯೋಗ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಈ ಕ್ಷೇತ್ರಕ್ಕೆ ಬಂದು ಭದ್ರಾ ಸರಸ್ವತಿ ತೀರ್ಥದಲ್ಲಿ ಮಿಂದೆದ್ದು, ಅನಂತ ಪದ್ಮನಾಭ ಸ್ವಾಮಿಯನ್ನು ಪೂಜಿಸುವುದರಿಂದ ಆ ಸಮಸ್ಯೆಗಳು ಎಲ್ಲವೂ ಶೀಘ್ರವಾಗಿ ದೂರ ಆಗುತ್ತೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳಲ್ಲಿ ಮನೆ ಮಾಡಿದೆ. ಎಷ್ಟೇ ಕಠಿಣವಾದ ಸರ್ಪ ದೋಷಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ.
ಸಾಕ್ಷಾತ್ ಸುಬ್ರಮಣ್ಯ ಸ್ವಾಮಿ ಇಷ್ಟ ಪಟ್ಟು ಬಂದು ನೆಲೆಸಿದ ಈ ಕ್ಷೇತ್ರಕ್ಕೆ ಬಂದು ಆಶ್ಲೇಷ ಬಲಿ ಪೂಜೆ ಮಾಡುವುದರಿಂದ ನಾಗ ದೋಷಗಳು ನಿವಾರಣೆ ಆಗುತ್ತದೆ. ಹೀಗಾಗಿ ನಿತ್ಯ ಸಾವಿರಾರು ಮಂದಿ ಈ ದೇಗುಲಕ್ಕೆ ಭೇಟಿ ನೀಡಿ ಸುಬ್ರಮಣ್ಯ ಸ್ವಾಮಿಗೆ ತಮ್ಮ ಸಮಸ್ತ ಸಮಸ್ಯೆಗಳನ್ನು ದೂರ ಮಾಡುವಂತೆ ಹರಕೆ ಹೊರುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ ಮಹಾ ವಿಷ್ಣು, ಮಹಾ ಶೇಷ ಹಾಗೂ ಸುಬ್ರಮಣ್ಯ ಸ್ವಾಮಿ ಬಂದು ನೆಲೆಸಿರುವ ಹಿಂದೆ ಒಂದು ಘಟನೆ ಕೂಡ ಇದೆ. ಬಹಳ ಹಿಂದೆ ಕುಡುಪು ಸ್ಥಳವು ಕದಳಿ ವನ ಎಂಬ ಅರಣ್ಯ ಪ್ರದೇಶವಾಗಿತ್ತು. ಈ ಅರಣ್ಯದ ಮಧ್ಯೆ ಭದ್ರಾ ಸರಸ್ವತಿ ನದಿ ಇತ್ತು, ಈ ಸರೋವರದ ಸೌಂದರ್ಯ ಕಂಡು ದೇವತೆಗಳು ಋಷಿಮುನಿಗಳು ಕಂಡು ಇಲ್ಲಿ ಸ್ನಾನವನ್ನು ಮಾಡುತ್ತಿದ್ದರು. ಇಂದು ದಿನ ಕೇದಾರ ಎಂಬ ಬ್ರಾಹ್ಮಣ ನನಗೆ ಮಕ್ಕಳು ಆಗಿಲ್ಲ ಎಂಬ ಕೊರಗಿನಲ್ಲಿ ಚಿಂತೆ ಮಾಡುತ್ತಾ ಈ ಪ್ರದೇಶಕ್ಕೆ ಬಂದನು ಆಗ ಅವನಿಗೆ ಶೃಂಗ ಮುನಿಗಳು ಕಾಣಿಸಿಕೊಂಡರು. ಶೃಂಗ ಮುನಿಗಳ ಬಳಿ ತನ್ನ ಸಮಸ್ಯೆಗೆ ಪರಿಹಾರ ಕೇಳಿದಾಗ ಶೃಂಗ ಮುನಿಗಳು ಈ ಸರೋವರ ಇರುವ ಜಾಗ ಅಂತ್ಯಂತ ಪುನೀತವಾದದ್ದು. ನೀನು ಈ ತೀರ್ಥದಲ್ಲಿ ಸ್ನಾನ ಮಾಡಿ ಸುಬ್ರಮಣ್ಯ ಸ್ವಾಮಿಯ ಧ್ಯಾನ ಮಾಡು ನಿನ್ನ ಕೋರಿಕೆಗಳು ಈಡೇರುತ್ತವೆ ಎಂದು ಹೇಳಿದರು. ಶೃಂಗ ಮುನಿಗಳು ಮಾತಿನಂತೆ ಕೇದಾರರು ಸುಬ್ರಮಣ್ಯ ಸ್ವಾಮಿ ಕುರಿತು ಘೋರ ತಪಸ್ಸು ಮಾಡಲು, ಆತನ ಭಕ್ತಿಗೆ ಮೆಚ್ಚಿ ಸುಬ್ರಮಣ್ಯ ಸ್ವಾಮಿಯು ಸಂತಾನ ವರವನ್ನು ನೀಡುತ್ತಾರೆ.
ದೇವರ ಕೃಪಯಿಂದ ಕೇದಾರನ ಪತ್ನಿ ಒಂದು ವರ್ಷದ ಒಳಗೆ ಗರ್ಭವತಿ ಆಗಿ ಮೂರು ಹಾವಿನ ಮೊಟ್ಟೆಗೆ ಜನ್ಮ ನೀಡುತ್ತಾಳೆ. ಹಾವಿನ ಮೊಟ್ಟೆ ನೋಡಿ ಕೇದಾರ ದುಖಿಸಿದಾಗ ಕೇದಾರ ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು, ಮಹಾಶೇಶ, ಮತ್ತು ಸುಬ್ರಮಣ್ಯ ಸ್ವಾಮಿಗಳು ನಿನ್ನ ಪತ್ನಿಯ ಹೊಟ್ಟೆಯಲ್ಲಿ ಜನ್ಮ ಹೆತ್ತಿದ್ದಾರೆ. ಈ ಮೊಟ್ಟೆಗಳನ್ನು ನೀನು ತಪಸ್ಸು ಮಾಡಿದ ಭದ್ರಾ ಸರಸ್ವತಿ ಸರೋವರ ಬಳಿ ಪ್ರತಿಷ್ಠೆ ಮಾಡು ನಿನಗೆ ಒಳ್ಳೆಯದಾಗಲಿ ಎಂಬ ಅಶರೀರ ವಾಣಿ ಕೇಳಿಸುತ್ತದೆ ನಂತರ ಕೇದಾರರು ಬಿದಿರಿನ ಪುಟ್ಟಿಯಲ್ಲಿ ಮೂರು ಮೊಟ್ಟೆಗಳನ್ನು ಇಟ್ಟುಕೊಂಡು ಬಂದು ಭದ್ರಾ ಸರಸ್ವತಿ ಸರೋವರ ಬಳಿ ಪ್ರತಿಷ್ಠೆ ಮಾಡುತ್ತಾರೆ. ನಂತರ ಈ ಸರೋವರದ ತೀರದಲ್ಲಿ ಅನಂತ ಪದ್ಮನಾಭ ಸ್ವಾಮಿ ಕುರಿತು ತಪಸ್ಸು ಮಾಡಿ ಮುಕ್ತಿಯನ್ನು ಪಡೆಯುತ್ತಾನೆ. ಈ ರೀತಿಯಾಗಿ ಮಹಾವಿಷ್ಣು ಮಹಾಷೇಶ ಹಾಗೂ ಸುಬ್ರಮಣ್ಯ ಸ್ವಾಮಿಗಳು ಈ ಕ್ಷೇತ್ರಕ್ಕೆ ಬಂದು ನೆಲೆಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ವರ್ಷ ಈ ಸ್ಥಳದಲ್ಲಿ ಡಿಸೆಂಬರ್ ತಿಂಗಳಲ್ಲಿ ಷಷ್ಠಿ ಉತ್ಸವವನ್ನು ಅದ್ಧೂರಿಯಿಂದ ಆಚರಿಸುತ್ತಾರೆ. ನಾಗರ ಪಂಚಮಿಯನ್ನು ಕೂಡ ಈ ದೇಗುಲದಲ್ಲಿ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಅನಂತ ಪದ್ಮನಾಭ ಸ್ವಾಮಿ ಹಾಗೂ ಸುಬ್ರಮಣ್ಯ ಸ್ವಾಮಿಯನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಸಂಜೆ 4 ಗಂಟೆಯಿಂದ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಎಲ್ಲಾ ಬಗೆಯ ಕಷ್ಟಗಳನ್ನು ಬಗೆಹರಿಸುವ ಕ್ಷೇತ್ರವೆಂದು ಖ್ಯಾತವಾದ ಕುಡುಪು ಕ್ಷೇತ್ರವೂ ಮಂಗಳೂರು ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಡುಪು ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಾಲಯವನ್ನು ದರ್ಶನ ಮಾಡಿ ಬನ್ನಿ. ಶುಭದಿನ.