ಆಷಾಢ ಮಾಸದಲ್ಲಿ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯ ವೈಶಿಷ್ಟ್ಯತೆಗಳೇನು ಗೊತ್ತಾ.???

ಆಷಾಢ ಮಾಸದಲ್ಲಿ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯ ವೈಶಿಷ್ಟ್ಯತೆಗಳೇನು ಗೊತ್ತಾ.???

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಮ್ಮ ಹಿಂದೂ ಧರ್ಮದಲ್ಲಿ ಆಷಾಢ ಮಾಸದಲ್ಲಿ ಮದುವೆಯಾದ ನೂತನ ಜೋಡಿಗಳು ಒಟ್ಟಿಗೆ ಇರಬಾರದು ಎಂಬ ಪ್ರತೀತಿ ಇದೆ. ಆದ್ರೆ ನಾವು ಇವತ್ತು ಮಾಹಿತಿ ಹೊತ್ತು ತಂದಿರುವ ದೇವಾಲಯದಲ್ಲಿ ಆಷಾಢ ಮಾಸದಲ್ಲಿ ನವ ಜೋಡಿಗಳು ಹೋಗಿ ದೇವರಿಗೆ ಪೂಜೆ ಸಲ್ಲಿಸಿ ಬರುವ ವಿಶೇಷ ಸಂಪ್ರದಾಯ ಇದೆ. ಅಲ್ಲದೆ ಈ ದೇಗುಲಕ್ಕೆ ಹೋದ್ರೆ ಗೃಹ ದೋಷಗಳಿಗೆ ಮುಕ್ತಿ ಸಿಗುತ್ತನತೆ. ಬನ್ನಿ ಹಾಗಾದರೆ ಆ ದೇವಾಲಯ ಯಾವುದು ಅಲ್ಲಿನ ಮಹಿಮೆಗಳು ಏನೇನು ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಆಂಜನೇಯ ಸ್ವಾಮಿ ಶ್ರೀ ಸಂಜೀವರಾಯ ಸ್ವಾಮಿ ಎಂಬ ನಾಮದಿಂದ ಪೂಜೆಗೊಳ್ಳುತ್ತಿರುವ ಈ ದೇಗುಲಕ್ಕೆ ಸುಮಾರು 500- 600 ವರ್ಷಗಳಷ್ಟು ಪುರಾತನವಾದ ಇತಿಹಾಸ ಇದೆ. ಈ ದೇವಾಲಯದ ಮುಖ್ಯ ಗರ್ಭಗುಡಿ ಒಳಗಡೆ ವ್ಯಾಸರಾಯರು ಇಂದ ಸ್ಥಾಪನೆಗೊಂಡ ಆಂಜನೇಯ ಸ್ವಾಮಿ ಮೂರ್ತಿ ಇದೆ. ಇಲ್ಲಿನ ಆಂಜನೇಯ ಸ್ವಾಮಿ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಈ ದೇಗುಲವು ಸುಂದರವಾದ ಗರ್ಭಗೃಹ, ಪ್ರದಕ್ಷಿಣಾ ಪಥ, ಪುಟ್ಟದಾದ ಗೋಪುರ ಒಳಗೊಂಡಿದೆ. ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಗ್ರಹದೋಷ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ ಹೀಗೆ ಯಾವುದೇ ಸಮಸ್ಯೆ ಇದ್ರೂ, ಈ ಕ್ಷೇತ್ರಕ್ಕೆ ಬಂದು ಪ್ರದಕ್ಷಿಣಾ ಸೇವೆ ಮಾಡ್ತೀವಿ ಎಂದು ಹರಕೆ ಹೊತ್ತು ಭಕ್ತಿಯಿಂದ ಪ್ರದಕ್ಷಿಣೆ ಹಾಕಿದ್ರೆ ಆ ಸಮಸ್ಯೆಗಳು ಸಂಜೀವರಾಯನ ಕೃಪೆಯಿಂದ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

 

ಇನ್ನೂ ಈ ಕ್ಷೇತ್ರದಲ್ಲಿ ವ್ಯಾಸರಾಯರು ಆಂಜನೇಯ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿರುವುದರ ಹಿಂದೆ ಒಂದು ಘಟನೆ ಕೂಡ ಇದೆ. ಬಹಳ ಹಿಂದೆ ದಟ್ಟಾರಣ್ಯ ಆಗಿದ್ದ ಈ ಸ್ಥಳದಲ್ಲಿ ಒಂದು ಬಾರಿ ವ್ಯಾಸರಾಯರು ಬಂದಾಗ ಅವರಿಗೆ ಕಾಡಿನ ಒಳಗಡೆ ರಾಮನ ಜಪ ಮಾಡುವುದು ಕೇಳಿಸಿತು ಆಗ ವ್ಯಾಸರಾಯರು ಆ ರಾಮನಾಮ ಜಪ ಕೇಳಿ ಬರುವುದನ್ನು ಕೇಳಿ ಅನುಸರಿಸಿ ಹೋದರು ಆಲ್ಲಿ ಆಂಜನೇಯ ಸ್ವಾಮಿ ದರ್ಶನ ಆಯಿತು. ಆಗ ವ್ಯಾಸರಾಯರು ಆಂಜನೇಯ ನನ್ನು ಭಕ್ತರನ್ನು ಉದ್ಧರಿಸುವುದಕ್ಕೆ ನೀವು ಈ ಕ್ಷೇತ್ರದಲ್ಲಿ ನೆಲೆ ನಿಲ್ಲಬೇಕು ಎಂದು ಪ್ರಾರ್ಥಿಸಿದರು. ಅವರ ಪ್ರಾರ್ಥನೆಗೆ ಮೆಚ್ಚಿ ಆಂಜನೇಯ ಸ್ವಾಮಿ ಇಲ್ಲಿಯೇ ನೆಲೆಸಲು ಒಪ್ಪಿದರು. ನಂತರ ವ್ಯಾಸರಾಯರು ದಟ್ಟ ಅರಣ್ಯದ ಮಧ್ಯೆ ಆಂಜನೇಯ ಸ್ವಾಮಿ ನ ಹೇಗೆ ಪ್ರತಿಷ್ಠಾಪಿಸುವ ದು ಎಂದು ಯೋಚನೆ ಮಾಡುವಾಗ. ವ್ಯಾಸರಾಯರ ಕನಸಿನಲ್ಲಿ ಆಂಜನೇಯ ಸ್ವಾಮಿ ಬಂದು ಅರಣ್ಯದಲ್ಲಿ ಸಿಗುವ ಗಿಡ ಮೂಲಿಕೆ ಹಾಗೂ ಮೃತ್ಯಿಕೆ ಇಂದ ನನ್ನ ಮೂರ್ತಿ ಪ್ರತಿಷ್ಟಾಪಿಸೂ ನಿನಗೆ ಮಂಗಳ ಆಗಲಿ ಎಂದು ಹೇಳಿದರಂತೆ. ಆಗ ವ್ಯಾಸರಾಯರು ಆಂಜನೇಯ ಸ್ವಾಮಿ ಹೇಳಿದಂತೆ ಗಿಡಮೂಲಿಕೆ ಹಾಗೂ ಮೃತ್ಯಿಕೇ ಬಳಸಿ ದೇವರ ಮೂರ್ತಿಯನ್ನು ಮಾಡಿ ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ.

 

ಮೃಥ್ಯಿಕೆ ಅಂದ್ರೆ ಮಣ್ಣಿನಿಂದ ತಯಾರಿಸಿದ ಮೂರ್ತಿ ಆಗಿರುವುದರಿಂದ ಇಲ್ಲಿನ ಆಂಜನೇಯ ಸ್ವಾಮಿಗೆ ಯಾವುದೇ ರೀತಿಯ ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ ವನ್ನಾ ಮಾಡುವುದಿಲ್ಲ. ಕೇವಲ ತೈಲಭಿಷೇಕ ವನ್ನಾ ಮಾತ್ರ ಈ ಸಂಜೀವರಾಯಾ ಸ್ವಾಮಿಗೆ ಮಾಡಲಾಗುತ್ತದೆ. ಈ ರೀತಿ ಗಿಡಮೂಲಿಕೆ ಹಾಗೂ ಮೃಥ್ಯಿಕೇ ಇಂದ ತಯಾರಿಸಲಾದ ಆಂಜನೇಯ ಮೂರ್ತಿಯನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಸಂಜೀವಾರಾಯ ಸ್ವಾಮಿ ಜೊತೆಗೆ ಉಗ್ರ ನರಸಿಂಹ ಶ್ರೀದೇವಿ ಭೂದೇವಿ ಸಮೇತನಾಗಿ ನೆಲೆ ನಿಂತ ಶ್ರೀ ಶ್ರೀನಿವಾಸ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ದೇವರ ಬ್ರಹ್ಮ ರಥೋತ್ಸವ ನಡೆಯುತ್ತದೆ. ಐದು ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿದರೆ ಉತ್ತಮ ಸಂತಾನ ಲಭಿಸುತ್ತದೆ ಹಾಗಾಗಿ ನವ ಜೋಡಿಗಳು ಆಷಾಢ ಮಾಸದಲ್ಲಿ ಇಲ್ಲಿಗೆ ಬಂದು ಸಂಜೀವರಾಯಾನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಆಂಜನೇಯ ಸ್ವಾಮಿ ಸಾಂಜೀವರಾಯ ಸ್ವಮಿಯಾಗಿ ನೆಲೆ ನಿಂತ ಈ ದೇವಾಲಯ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಎಂಬ ಪ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವರ ದರ್ಶನ ಪಡೆದು ಕೃತಾರ್ಥರಾಗೀ. ಶುಭದಿನ.

ಭಕ್ತಿ