ಗೌತಮ ಕ್ಷೇತ್ರ ಎಂದೇ ಖ್ಯಾತವಾಗಿರುವ ಈ ಸ್ಥಳದಲ್ಲಿ ನೆಲೆ ನಿಂತಿದ್ದಾನೆ ಸಾಕ್ಷಾತ್ ತಿಮ್ಮಪ್ಪ ಸ್ವಾಮಿ..!!

ಗೌತಮ ಕ್ಷೇತ್ರ ಎಂದೇ ಖ್ಯಾತವಾಗಿರುವ ಈ ಸ್ಥಳದಲ್ಲಿ ನೆಲೆ ನಿಂತಿದ್ದಾನೆ ಸಾಕ್ಷಾತ್ ತಿಮ್ಮಪ್ಪ ಸ್ವಾಮಿ..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿ ನಮ್ಮ ರಾಜರುಗಳು ನಿರ್ಮಾಣ ಮಾಡಿ ಹೋದ ಕೊತೆಗಳಿಗೆ ಲೆಕ್ಕವೇ ಇಲ್ಲ. ಕೋಟೆಗಳು ಕೇವಲ ಯುದ್ಧದ ಕಥೆಯನ್ನು ಮಾತ್ರ ಸಾರುವುದಿಲ್ಲ,ಅವು ಹಲವಾರು ದೇವರುಗಳ ತಾಣ ಆಗಿ ಜನರ ಧಾರ್ಮಿಕತೆಯ ಭಾವವನ್ನು ಒದಗಿಸಿ ಕೊಡುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಗೌತಮ ಕ್ಷೇತ್ರ ಎಂದೇ ಕರೆಯುವ ಬೆಟ್ಟ ದಾಸನ ಪುರದ ಕೋಟೆ ಶ್ರೀ ತಿಮ್ಮರಾಯ ಸ್ವಾಮಿಯ ಚರಣನದವನ್ನು ದರ್ಶನ ಮಾಡಿ ಪುನೀತರಾಗೋಣ. ಗೌತಮ ಕ್ಷೇತ್ರ ಎಂದೇ ಖ್ಯಾತವಾದ ಬೆಟ್ಟದಾಸನ ಪುರದ ಕೋಟೆಯ ಮೇಲೆ ಪುರಾತನವಾದ ತಿಮ್ಮಾರಾಯ ನ ದೇವಸ್ಥಾನ ಇದ್ದು, ಕಲ್ಲು ಬಂಡೆಗಳ ಮೇಲೆ ಈ ದೇಗುಲವನ್ನು ನಿರ್ಮಿಸಲಾಗಿದೆ. ಗರುಡ ಗಂಬ ಗೋಪುರ, ಗರ್ಬಗೃಹ, ಪ್ರದಕ್ಷಿಣಾ ಪಥ ಒಳಗೊಂಡಿರುವ ಈ ದೇಗುಲದಲ್ಲಿ ತಿಮ್ಮರಾಯ ಸ್ವಾಮಿಯು ಶ್ರೀದೇವಿ ಭೂದೇವಿ ಸಮೇತನಾಗಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ವಿಧ್ಯಾಭ್ಯಾಸ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಈ ಕ್ಷೇತ್ರಕ್ಕೆ ಬಂದು ಸ್ವಾಮಿಗೆ ಮುಡಿಯನ್ನು ನೀಡ್ತಿವಿ ಎಂದು ಹರಕೆ ಹೊತ್ತರೆ ಎಲ್ಲ ರೀತಿಯ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

 

 

ಇನ್ನೂ ಈ ಕ್ಷೇತ್ರದಲ್ಲಿ ಗೌತಮ ಮುನಿಗಳ ತಪಸ್ಸಿಗೆ ಮೆಚ್ಚಿ ಸಾಕ್ಷಾತ್ ತಿಮ್ಮಪ್ಪ ಸ್ವಾಮಿಯೇ ಶ್ರೀದೇವಿ ಭೂದೇವಿ ಸಮೇತನಾಗಿ ಬಂದು ನೆಲೆಸಿದ ಎಂಬ ಐತಿಹ್ಯ ಇದ್ದು, ಈ ಕ್ಷೇತ್ರಕ್ಕೆ ಹೋಗಿ ದೇವರನ್ನು ದರ್ಶನ ಮಾಡಿದರೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಪ್ರಸಿದ್ಧ ಈ ದೇವಾಲಯದ ಸುತ್ತ ಚಕ್ರತೀರ್ಥ, ಶಂಕರ ತೀರ್ಥ ಎಂಬ ತೀರ್ಥಗಳು ಇದ್ದು, ಇಲ್ಲಿಗೆ ಭೇಟಿ ನೀಡುವ ಭಕ್ತರು ತೀರ್ಥದ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡು ದೇವರ ದರ್ಶನ ಮಾಡುತ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ಯುಗಾದಿ ಹಬ್ಬ ಮುಗಿದ ಎಂಟನೇ ದಿನಕ್ಕೆ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಪಲ್ಲಕ್ಕಿ ಉತ್ಸವ, ಬೆಲ್ಲದ ಆರತಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರತಿ ವರ್ಷವೂ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಶ್ರಾವಣ ಮಾಸದ ಮೂರನೇ ಶನಿವಾರ ಸುತ್ತಲಿನ ಮೂರು ಹಳ್ಳಿಯವರು ಮನೆಯಿಂದ ಊಟಾವನ್ನು ತಂದು ರಾಶಿ ಹಾಕಿ ಅನ್ನಕ್ಕೆ ಪೂಜೆ ಮಾಡಿ ಊಟಾವನ್ನೂ ಹಂಚುತ್ತಾರೆ.

 

 

ಆ ದಿನ ಎಷ್ಟೇ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದರೂ ಅವರಿಗೆ ಊಟಾ ವನ್ನಾ ನೀಡಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸಾಕಷ್ಟು ಜನರು ಬಂದು ದೀಪವನ್ನು ಬೆಳಗಿ ದೇವರ ಆಶೀರ್ವಾದ ಪಡೆಯುತ್ತಾರೆ. ಈ ದೇಗುಲದ ಸಮೀಪದಲ್ಲಿ ಶ್ರೀ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವನಾಥ ದೇವರ ದೆಗುಲವಿದ್ದು, ಈ ಕ್ಷೇತ್ರವನ್ನು ಹರಿಹರ ಸಂಗಮ ಕ್ಷೇತ್ರ ಎಂದು ಹೇಳಲಾಗುತ್ತದೆ. ನಿತ್ಯವೂ ಪೂಜೆಗೊಳ್ಳುತ್ತಿರುವ ತಿಮ್ಮರಾಯ ಸ್ವಾಮಿಗೆ ಶನಿವಾರ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಭಿಷೇಕ ಸೇವೆ, ಪಂಚಾಮೃತ ಅಭಿಷೇಕ, ಪುಷ್ಪ ಅಲಂಕಾರ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಇಲ್ಲಿ ನೆಲೆಸಿರುವ ತಿಮ್ಮರಾಯ ಸ್ವಾಮಿಯನ್ನು ಬೆಳಿಗ್ಗೆ 8 ರಿಂದ 10 ಗಂಟೆ ವರೆಗೆ ಸಂಜೆ 5 ರಿಂದ ಸಂಜೆ 7 ರವರೆಗೆ ದರ್ಶನ ಮಾಡಬಹುದು. ಈ ದೇಗುಲಕ್ಕೆ ಹೋದರೆ ದೇವರ ದರ್ಶನ ಜೊತೆಗೆ ಕೋಟೆಯ ಬಾಗಿಲುಗಳು ಹಾಗೂ ಸುಂದರವಾದ ಸೂರ್ಯಾಸ್ತವನ್ನು ನೋಡಬಹುದು. ಸಾಕ್ಷಾತ್ ತಿಮ್ಮಪ್ಪ ಸ್ವಾಮಿಯೇ ನೆಲೆಸಿರುವ ಈ ಕ್ಷೇತ್ರವು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೇಟ್ಟದಾಸನ ಪುರ ಎಂಬಲ್ಲಿದೆ. ಸಾಧ್ಯವಾದರೆ ಬೆಂಗಳೂರಿಗೆ ಭೇಟಿ ಇಟ್ಟಾಗ ನೀವು ಒಮ್ಮೆ ಈ ಪುಣ್ಯ ಕ್ಷೇತ್ರ ದರ್ಶನ ಮಾಡಿ ಕೃತಾರ್ಥರಾಗಿ. ಶುಭದಿನ.

ಭಕ್ತಿ