ನಾಯಿ ಕಡಿತಕ್ಕೆ ಮೊದಲು ಮಾಡಬೇಕಾದ ಪ್ರಥಮ ಚಿಕಿತ್ಸೆ. ನಾಯಿ ಕಡಿತವನ್ನು ನಿರ್ಲಕ್ಷಿಸಿದರೆ ರೇಬೀಸ್ ಸೋಂಕು ತಗುಲುವ ಸಾಧ್ಯತೆ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾಯಿ ಕಡಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಿಕೊಳ್ಳಬೇಕು ಹಾಗೂ ನಮ್ಮ ಭಾರತ ದೇಶದಲ್ಲಿ ಒಂದು ವರ್ಷಕ್ಕೆ ಎಷ್ಟು ಜನ ಈ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ ಎಂಬ ಕೆಲವೊಂದು ಪ್ರಮುಖ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ. ಸ್ನೇಹಿತರೆ ನಂಬಿಕೆಯ ಪ್ರಾಣಿ ಎಂದರೆ ಅದು ನಾಯಿ. ನೀಯತ್ತು ಇದ್ದರೆ ನಾಯಿಯ ತರಹ ಇರಬೇಕು ಎನ್ನುವ ಮಾತುಗಳನ್ನು ಕೇಳಿಯೇ ಇರುತ್ತೀರ. ಸಾಕಿದ ನಾಯಿಗಳು ತುಂಬಾ ನಿಯತ್ತಿನಿಂದ ಮನೆಯನ್ನು ಕಾಯುತ್ತಾ ಇರುತ್ತವೆ. ಆದರೆ ಎಲ್ಲ ನಾಯಿಗಳು ಮನೆಯ ನಾಯಿಗಳು ಆಗಿರುವುದಿಲ್ಲ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು ಎರಡರಿಂದ ಮೂರು ಕೋಟಿ ನಾಯಿಗಳು ಇವೆ.

 

 

ಇವುಗಳಲ್ಲಿ ಬೀದಿ ನಾಯಿಗಳೆ ಹೆಚ್ಚು ಇವೆ. ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ನಾಯಿಗಳಿಗೆ ರೇಬೀಸ್ ರೋಗದ ಲಸಿಕೆಯನ್ನು ಹಾಕಿಸಿಯೇ ಇರುತ್ತಾರೆ. ಆದರೆ ಬೀದಿ ನಾಯಿಗಳಿಗೆ ಯಾವುದೇ ರೀತಿಯ ಲಸಿಕೆಯನ್ನು ಹಾಕಿಸಿ ಇರುವುದಿಲ್ಲ ಹಾಗೂ ಯಾರೂ ಅವುಗಳನ್ನು ಶುಶ್ರೂಷೆ ಮಾಡುವುದಿಲ್ಲ. ಸಾಮಾನ್ಯವಾಗಿ ರಾತ್ರಿ ಕೆಲಸ ಮಾಡುವವರಿಗೆ ಹಾಗೂ ಬೆಳಗ್ಗೆ ಮುಂಜಾನೆ ವಾಕಿಂಗ್ ಮಾಡುವವರಿಗೆ, ಹಾಗೂ ಹಾಲು ಹಾಕುವವರಿಗೆ, ಪೇಪರ್ ಹಾಕುವವರಿಗೆ ಈ ಬೀದಿ ನಾಯಿಗಳ ಕಾಟ ಜಾಸ್ತಿ ಇರುತ್ತದೆ. ಯಾವಾಗ ಅದ ನಾಯಿಗಳು ಇವರುಗಳ ಮೇಲೆ ಅಟ್ಯಾಕ್ ಮಾಡುತ್ತವೆ ಎಂದು ಹೇಳಲು ಆಗುವುದೇ ಇಲ್ಲ. ಇನ್ನು ನಮ್ಮ ಭಾರತದಲ್ಲಿ ಪ್ರತಿ 2 ಸೆಕೆಂಡ್ ಗೆ ಒಬ್ಬರಂತೆ ಈ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಹಾಗೂ ಪ್ರತಿ 30 ನಿಮಿಷಕ್ಕೊಮ್ಮೆ ಒಬ್ಬರಂತೆ ನಾಯಿ ಕಡಿತಕ್ಕೆ ಒಳಗಾಗಿ ರೇಬೀಸ್ ರೋಗದಿಂದ ಸಾವಿಗೂ ಕೂಡ ಇಡಾಗುತ್ತಿದ್ದಾರೆ. ಹಾಗಾಗಿ ನಾಯಿ ಕಡಿತವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಇನ್ನೂ ನಾಯಿ ಕಡಿತಕ್ಕೆ ಒಳಗಾದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಿಕೊಳ್ಳಬೇಕು ಎಂದು ನೋಡುವುದಾದರೆ ನಾಯಿ ಕಚ್ಚಿದ ತಕ್ಷಣ ನಾಯಿ ಕಡಿದ ಜಾಗವನ್ನು ಕನಿಷ್ಠ ನಾಲ್ಕರಿಂದ ಐದು ಬಾರಿ ನೀರು ಹಾಗೂ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ನಂತರ ರಕ್ತ ಹೊರಗೆ ಹೋಗದಂತೆ ನಾಯಿ ಕಚ್ಚಿದ ಜಾಗವನ್ನು ಗಟ್ಟಿಯಾಗಿ ಅದುಮಿ ಇಟ್ಟುಕೊಳ್ಳಬೇಕು.

 

 

ಹೀಗೆ ಮಾಡಿದಾಗ ನಾಯಿ ಕಚ್ಚಿದಾಗ ಯಾವುದೇ ಸೋಂಕು ಉಂಟಾಗದಂತೆ ನಾಶ ಪಡಿಸಬಹುದು. ಇನ್ನೂ ಮನೆಯಲ್ಲಿ ಏನಾದರೂ ಹತ್ತಿ, ಬ್ಯಾಂಡೇಜ್, ಅಥವಾ ಶುದ್ಧವಾದ ಬಟ್ಟೆ ಇದ್ದರೆ ಗಾಯದಿಂದ ರಕ್ತ ಸೋರದಂತೆ ಗಟ್ಟಿಯಾಗಿ ಸುತ್ತಿ ಇಟ್ಟುಕೊಳ್ಳಬೇಕು. ನಂತರ ಕೂಡಲೇ ವೈದ್ಯರ ಬಳಿ ಹೋಗಿ ರೇಬೀಸ್ ವಿರುದ್ಧ ಚುಚ್ಚುಮದ್ದು ಪಡೆಯುವುದು ತುಂಬಾ ಸೂಕ್ತ. ಇನ್ನೂ ನೀವೇನಾದರೂ ಗ್ರಾಮೀಣ ಪ್ರದೇಶದಲ್ಲಿ ಇದ್ದರೆ ಅಥವಾ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಆಗದಿದ್ದರೆ ನೀವು ಇನ್ನೊಂದು ಮನೆ ಮದ್ದನ್ನು ಮಾಡಬಹುದು. ಅವುಗಳು ಯಾವುವು ಎಂದರೆ – ಬೇವು ಮತ್ತು ಅರಿಶಿನದ ಪೇಸ್ಟ್ ಅನ್ನು ಹಚ್ಚಬಹುದು. ಹೌದು ಬೇವು ಮತ್ತು ಅರಿಶಿನದ ಪೇಸ್ಟ್ ಅನ್ನು ನಾಯಿ ಕಡಿತಕ್ಕೆ ಸೋಂಕು ಉಂಟಾಗದಂತೆ ಹಚ್ಚಬಹುದು. ಇದು ಗಾಯ ಆದ ನಂತರ ನೀವು ಹಚ್ಚಬಹು ದಾದ ನೈಸರ್ಗಿಕ ಚಿಕಿತ್ಸೆ ಆಗಿರುತ್ತದೆ. ಬೇವಿನ ಎಲೆಗಳನ್ನು ತಂದು ಅದನ್ನು ಚೆನ್ನಾಗಿ ಅರೆದು ಅದಕ್ಕೆ ಅರಿಶಿನವನ್ನು ಹಾಕಿ ಪೇಸ್ಟ್ ರೀತಿ ತಯಾರಿಸಿ ಗಾಯ ಆದ ಸ್ಥಳಕ್ಕೆ ಹಚ್ಚಿ ಇದರಿಂದ ಗಾಯ ಬೇಗ ಗುಣ ಆಗುತ್ತದೆ. ಹಾಗೂ ನಂಜು ಕೂಡ ಏರುವುದು ಕಡಿಮೆ ಆಗುತ್ತದೆ. ಆದರೆ ಸ್ನೇಹಿತರೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಕಂಡು ರೇಬೀಸ್ ವಿರುದ್ಧ ಚುಚ್ಚುಮದ್ದು ಪಡೆದುಕೊಳ್ಳುವುದು ತುಂಬಾನೇ ಸೂಕ್ತ. ನಾಯಿ ಕಡಿತವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಇಂದಿನ ಲೇಖನದ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

 

 

Leave a comment

Your email address will not be published.