ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಬ್ಬರಿಗೂ ನೆನಪಿನ ಶಕ್ತಿ ತುಂಬಾನೇ ಅವಶ್ಯಕತೆ ಆಗುತ್ತೆ. ಸೋ ಪರೀಕ್ಷೆ ಬರೆಯುವಾಗ ಒಳ್ಳೆಯ ನೆನಪಿನ ಶಕ್ತಿ ಇದ್ದರೆ ನಮಗೆ ಖುಶಿಯಾಗಿ ಉತ್ತರಗಳನ್ನು ಬರೆಯಲು ಪ್ರೇರಣೆ ಸಿಕ್ಕಂತೆ ಆಗುತ್ತದೆ. ಸೋ ಎಷ್ಟೊಂದು ಜನ ನೆನಪಿನ ಶಕ್ತಿ ಕಡಿಮೆ ಇರುವುದರಿಂದ ನರಳುತ್ತಾ ಇರುತ್ತಾರೆ. ಆದರ ಕಾರಣಗಳು ಏನು ? ಹಾಗೂ ಈ ಮರೆವಿನ ಸಮಸ್ಯೆ ಕಾರಣಗಳು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಹಾಗೆ ಈ ಟಿಪ್ಸ್ ನ ದಿನಾ ಫಾಲೋ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಪರೀಕ್ಷೆ ಸಮಯದಲ್ಲಿ ಈ ಎಲ್ಲಾ ಟಿಪ್ಸ್ ಹೆಲ್ಪ್ ಆಗಿ ನೀವು ನಿಮ್ಮ ಪರೀಕ್ಷೆಯನ್ನು ಸುಲಭವಾಗಿ ಬರೆಯಬಹುದು.
ಸ್ನೇಹಿತರೆ ಮೊದಲನೇ ಟಿಪ್ ಏನು ಅಂದ್ರೆ ಯಾವಾಗಲೋ ಹೊಸದನ್ನು ಕಲಿಯುತ್ತಾ ಇರಬೇಕು. ಹೊಸದನ್ನು ಕಲಿತ ಮೇಲೆ ಅದನ್ನು ನೆಕ್ಸ್ಟ್ ದಿನ ರಿವಿಷನ್ ಅಂದ್ರೆ ಸ್ಮರಣೆ ಮಾಡಬೇಕು. ನೀವು ಏನಾದರೂ ಹೊಸ ವಿಷಯ ಕಲಿತಿದ್ದರೆ ಅದನ್ನು ಮುಂದಿನ ದಿನ ಸ್ಮರಣೆ ಮಾಡಿ ನೆನಪಿಸಿಕೊಳ್ಳಬೇಕು. ಇದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಎರಡನೇ ಟಿಪ್ ಏನು ಅಂದ್ರೆ ಎಷ್ಟೊಂದು ಹೊಸ ವಿಷಯಗಳನ್ನು ಕಲಿಯುವಾಗ ಎಷ್ಟೊಂದು ಶಬ್ದಗಳನ್ನು ಬೇಗ ಮರೆತು ಹೋಗ್ತೀವಿ. ಅಂತಹ ಸಂದರ್ಭದಲ್ಲಿ ಸಮಾನಾರ್ಥಕ ಪದಗಳನ್ನು ಕಲಿಯುವುದು ಸಹಾಯ ಮಾಡುತ್ತೆ. ಮತ್ತೆ ನಾವು ಎಷ್ಟೊಂದು ವಿಚಾರಗಳನ್ನು ತಿಳಿದುಕೊಳ್ಳುವು ದಾರಿಂದ ನಾವು ಮರೆಯುವ ಚಾನ್ಸ್ ಇರುತ್ತೆ. ಅಂತಹ ಸಂದರ್ಭದಲ್ಲಿ ನೀವು ಏನು ಮಾಡಬೇಕು ಅಂದ್ರೆ ನೀವೇ ಒಂದು ಡೇಟಾ ನ ಕ್ರಿಯೇಟ್ ಮಾಡಿಕೊಳ್ಳಬೇಕು. ಅಂದ್ರೆ ಒಂದು ರೋಗದ ಕಾರಣಗಳು, ಸೂಚನೆಗಳು ಹಾಗೆ ಪರಿಣಾಮಗಳು ಹೀಗೆ ಪ್ರತಿ ಒಂದು ವಿಷಯದ ಬಗ್ಗೆ ಅದರ ಆಗು ಹೋಗುಗಳ ವಿಂಗಡನೆ ಮಾಡಿ ಮನಸಿನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಮರೆವಿನ ಸಮಸ್ಯೆ ಮಾಯವಾಗಿ ನೆನೆಪಿನ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ವಿಷಯದ ಪಾಸಿಟಿವ್ ಹಾಗೂ ನೆಗಟಿವ್ ಗಳನ್ನೂ ವಿಂಗಡಿಸಿ ಇಟ್ಟರೆ ಬೇಗ ನೆನಪಾಗುತ್ತದೆ. ಸ್ನೇಹಿತರೆ ನೆಕ್ಸ್ಟ್ ಟಿಪ್ ಏನು ಅಂದ್ರೆ, ಏನನ್ನೇ ಓಡುತ್ತಿದ್ದಿರ ಅಂದ್ರೆ ನಿಮ್ಮ ಮೈ ಮನಸ್ಸು ಹಾಗೂ ನಿಮ್ಮ ಮೆದುಳನ್ನು ಅಲ್ಲೇ ಇಡಿ.
ಅಂದ್ರೆ ಓದುತ್ತಾ ಕಲ್ಪನೆ ಮಾಡಿಕೊಳ್ಳೋಕೆ ಶುರು ಮಾಡಿ ಆಗ ವಿಷಯಗಳು ಬೇಗ ಅರ್ಥವಾಗಿ ಹಾಗೆಯೇ ನಿಮ್ಮ ಮೈಂಡ್ ಅಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹಾಗೆಯೇ ಯಾವುದೋ ಒಂದು ವಿಷಯ ತಿಳಿದುಕೊಳ್ಳು ವಾಗ ಅಥವಾ ಓದುತ್ತಾ ಇರುವಾಗ, ಬೇರೊಂದು ವಿಷಯದ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳಿ. ಅಂದ್ರೆ ಕಂಪೇರ್ ಮಾಡಿ ವಿಷ್ಯ ತಿಳಿದುಕೊಳ್ಳಿ. ಹೀಗೆ ಮಾಡುವುದರಿಂದ ನೀವು ಓದಿದ ವಿಚಾರ ಹಾಗೂ ಕಂಪೆರ್ ಮಾಡಿದ ವಿಚಾರ ಎರಡೂ ನೆನಪಿರುತ್ತದೆ. ಸ್ನೇಹಿತರೆ ನೆಕ್ಸ್ಟ್ ವಿಷಯ ಏನೆಂದರೆ ನಿಮಗೆ ಯಾವುದೇ ವಿಷಯ ನೆನಪಿಗೆ ಬರುತ್ತಾ ಇಲ್ಲ ಅಂದ್ರೆ ಗೂಗಲ್ ಓಪನ್ ಮಾಡಿ ನೋಡುವುದನ್ನು ಬಿಡಿ. ಆದಷ್ಟು ಆರಾಮಾಗಿ ಕುಳಿತು ನೀವೇ ನಿಧಾನವಾಗಿ ನೆನಪಿಸಿಕೊಳ್ಳಲು ಪ್ರಯತ್ನ ಮಾಡಿ. ಇದು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ ನೀವು ಆರಾಮಾಗಿ ನಿದ್ದೆ ಮಾಡಬೇಕು. ಪರೀಕ್ಷೆ ಇದೆ ಎಂದು ನಿದ್ದೆ ಮಾಡದೆ ಹೋದ್ರೆ ನಿಮಗೆ ನೆನಪಿನ ಶಕ್ತಿ ಕಡಿಮೆ ಆಗುತ್ತೆ. ರೈಟ್ ಟೈಂ ಅಲ್ಲಿ ನಿದ್ದೆ ಮಾಡಿ ಓದುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ದಿನಾ ಎಷ್ಟು ಹೊತ್ತು ಮಲಗಬೇಕು ಎಷ್ಟು ಹೊತ್ತು ಓದಿಕೊಳ್ಳಬೇಕು ಅಷ್ಟು ಹೊತ್ತು ಆ ಆ ಕೆಲಸಗಳನ್ನು ಮಾಡಿದರೆ ಒಳ್ಳೆಯದು. ಟೈಂ ಟೇಬಲ್ ಹಾಕಿಕೊಂಡು ಅದರ ಅನುಸಾರವಾಗಿ ನಿದ್ದೆ ಊಟಾ ಹಾಗೂ ಓದುವ ಸಮಯ ಇವೆಲ್ಲವನ್ನೂ ಒಟ್ಟಾಗಿ ಜೋಡಿಸಿ ಅಭ್ಯಾಸ ನಡೆಸಿದರೆ ಎಲ್ಲಾ ವಿಷಯಗಳು ನೆನಪಿಗೆ ಬರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.