ನಿಮ್ಮ ಮೊಬೈಲ್ ನಂಬರ್ ನಲ್ಲಿ 28 ಇದ್ದರೆ ಏನರ್ಥ ಗೊತ್ತಾ???

ನಿಮ್ಮ ಮೊಬೈಲ್ ನಂಬರ್ ನಲ್ಲಿ 28 ಇದ್ದರೆ ಏನರ್ಥ ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಇಂದಿನ ಲೇಖನದಲ್ಲಿ ಸಂಖ್ಯಾಶಾಸ್ತ್ರ ದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇವತ್ತಿನ ಲೇಖನದಲ್ಲಿ ಮೊಬೈಲ್ ನಂಬರ್ ಅಲ್ಲಿ 28 ಹಾಗೂ 78 ಬಂದಿದ್ದರೆ ಅದರ ಹಾಗೂ ಹೋಗುಗಳು, ಅಂದ್ರೆ ಪಾಸಿಟಿವ್ ಹಾಗೂ ನೆಗಟಿವ್ ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲಿಗೆ 28 ನಂಬರ್ ಬಗ್ಗೆ ತಿಳಿಯೋಣ. ಈ 28 ನಂಬರ್ ನಿಮ್ಮ ಮೊಬೈಲ್ ಸಂಖ್ಯೆಯ ಮೊದಲು,ಮಧ್ಯ ಅಥವಾ ಕೊನೆಗೆ ಬರಲಿ, ಒಟ್ಟು ನಿಮ್ಮ ಮೊಬೈಲ್ ಸಂಖ್ಯೆಯ ಲ್ಲಿ ಈ 28 ಬಂದಿದೆ ಅಂದ್ರೆ ಒಂದು ಚಿಕ್ಕ ವಿಷಯವನ್ನು ನೀವು ಅಬ್ಸಾರ್ ಮಾಡಬೇಕಾಗುತ್ತದೆ. ಮನೆಯ ಒಂದು ಕಡೆ ನೀರು ಮೂಡುವುದು, ಅಥವಾ ನಲ್ಲಿಯಲ್ಲಿನ ನೀರು ಲೀಕ್ ಆಗ್ತಾ ಇರುತ್ತೆ,ಅಥವಾ ಸೀಪೆಜ್ ಲೀಕ್ ಆಗ್ತಾ ಇರುತ್ತೆ. ಒಂಥರಾ ಫಂಗಸ್ ಮೂಡುವುದು, ಮನೆಯಲ್ಲಿ ಎಲ್ಲೋ ನೀರು ಲೀಕ್ ಆಗುವುದು ನೋಡಬೇಕು. ಒಟ್ಟು ಮನೆಯಲ್ಲಿ ಎಲ್ಲೋ ಒಂದು ಭಾಗದಲ್ಲಿ ನೀರು ಲೀಕ್ ಆಗ್ತಾ ಇರುತ್ತೆ. ಈ 28 ನಿಮ್ಮ ಮೊಬೈಲ್ ನಂಬರ್ ಅಲ್ಲಿ ಬಂದಿದೆ ಅಂದ್ರೆ ಮೇಲಿನ ಎಲ್ಲಾ ರೀತಿಯ ಸಮಸ್ಯೆಗಳು ಕಾಣಲು ಶುರು ಆಗುತ್ತದೆ.

 

ಅದಾದ ಮೇಲೆ ಇದರಿಂದ ಇನ್ನೂ ಏನೇನು ಸಮಸ್ಯೆಗಳು ಉಂಟಾಗಬಹುದು ಅಂದ್ರೆ, ನೆಗಟಿವ್ ಯೋಚನೆಗಳು ನಿಮ್ಮ ತಲೆಗೆ ಬರುತ್ತವೆ. ನಿಮ್ಮ ಯೋಚನೆಗಳು ಪಾಸಿಟಿವ್ ಆಗಿ ಥಿಂಕ್ ಮಾಡಲು ಬಿಡುವುದಿಲ್ಲ. ಒಂದಷ್ಟು ಆರೋಗ್ಯ ಸಮಸ್ಯೆಗಳು ಸಹ ಬರಬಹುದು. ಡಿಪ್ರೆಶನ್ ಗೆ ಸಹ ಹೋಗುವ ಚಾನ್ಸ್ ಇರುತ್ತೆ. ಈ ಲೀಕೆಜ್, ಸಿಪೆಜ್ ಅಂದ್ರೇನೆ ಒಂದು ನೆಗಟಿವ್ ಶೇಡ್. ಅದು ನಿಮ್ಮ ಮನಸನ್ನು ಪಾಸಿಟಿವ್ ಆಗಿ ಯೋಚನೆ ಮಾಡಲು ಬಿಡುವುದೇ ಇಲ್ಲ. ಮನೆಯ ವಾತಾವರಣ ಕೂಡ ಅಷ್ಟು ಚೆನ್ನಾಗಿ ಇರುವುದಿಲ್ಲ. ನಿಮ್ಮ ಮೊಬೈಲ್ ನಂಬರ್ 2 ಮತ್ತು 8 ಪಕ್ಕ ಪಕ್ಕ ಬರ್ತಾ ಇದ್ರೆ ನಿಮ್ಮ ಮೊಬೈಲ್ ನಂಬರ್ ಚೇಂಜ್ ಮಾಡುವುದು ಒಳ್ಳೆಯದು. ಎರಡನೇ ನಂಬರ್ 7 ಮತ್ತು 8. ನೀವು ಬೇಕಾದರೆ ಬರೆದು ಇಟ್ಟುಕೊಳ್ಳಿ ಈ ನಂಬರ್ ಚೇಂಜ್ ಮಾಡಿದ ನಂತರವೇ ನಿಮಗೆ ಒಳ್ಳೆಯದು ಆಗಲು ಮ್ಯಾಜಿಕ್ ಶುರು ಆಗುತ್ತದೆ. ಹೇಗೆ ಬದಲಾವಣೆ ಆಗುತ್ತೆ ಅಂದ್ರೆ ಈ ಮೊದಲೇ ಹೇಳಿದ ರೀತಿ ಈ ಒಂದು ನಂಬರ್ ಚೇಂಜ್ ಮಾಡಿದ ನಂತರ ನಿಮ್ಮ ಮನೆಯಲ್ಲಿನ ಸಿವೇಜ್, ಸೀಪೇಜ್,ಲೀಕ್ ಆಗೋ ಸಮಸ್ಯೆಗಳು ಒಂದೊಂದೇ ನಿಲ್ಲುತ್ತಾ ಹೋಗುತ್ತದೆ. ಅಂದ್ರೆ ಅದನ್ನು ನೀವು ಸರಿ ಮಾಡಿಸುತ್ತಿರೋ ಅಥವಾ ನಿಮ ಓನರ್ ಮಾಡುತ್ತಾರೋ ಒಟ್ಟು ನಿಮ್ಮ ಸಮಸ್ಯೆಗಳು ಒಂದೊಂದೇ ನಿಲ್ಲುತ್ತಾ ಹೋಗುತ್ತದೆ. ತಾನಾಗಿ ಲಿಕೆಜ್ ನಿಂತು ಹೋಗಬಹುದು. ಯಾವುದೋ ಕಾರಣದಿಂದ ಈ ಸಮಸ್ಯೆ ನಿಲ್ಲುವುದು ಶತ ಸಿದ್ಧ ಎಂದೇ ಹೇಳಬಹುದು.

 

28 ಇರೋ ನಂಬರ್ ಚೇಂಜ್ ಮಾಡಿದ ನಂತರದ 3 ತಿಂಗಳಲ್ಲಿ ಲಿಕೇಜ್ಜ್ ನಿಲ್ಲುತ್ತೆ. ಇವೆಲ್ಲಾ ಒಂಥರಾ ತರಂಗಗಳು. ಎಷ್ಟೋ ಜನರಿಗೆ ಈ ತರಹದ ಅನುಭವ ಆಗಿದೆ. ದಿನನಿತ್ಯ ನಮಗೆ ಗೊತ್ತಿಲ್ಲದೆ ಸಾಕಷ್ಟು ಬದಲಾವಣೆ ಆಗುತ್ತಾ ಇರುತ್ತದೆ. ಆ ಬದಲಾವಣೆ ಆಗುವಾಗ ನಾವು ಅದಕ್ಕೆ ಗಮನ ಕೊಟ್ಟಿರುವುದಿಲ್ಲ. ಆದ್ರೆ ಯಾವಾಗಲೋ ಆ ಸಮಸ್ಯೆ ಬಗೆ ಹರಿದಿರುತ್ತದೆ. 78 ನಂಬರ್ ಇದ್ರೆ ಇದನ್ನು ಪಾಸಿಟಿವ್ ನಂಬರ್ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕತೆ ಹಾಗೂ ವೈದ್ಯರು ಆಗಿದ್ದರೆ ಅವರಿಗೆ ಇದು ಒಳ್ಳೆಯ ತರಂಗ ಮೂಡುತ್ತದೆ. ವೈದ್ಯರ ಕೈಗುಣ ಕೂಡ ಚೆನ್ನಾಗಿ ಆಗಿ ಅವರ ಕೈ ಗುಣದಿಂದ ಅನಾರೋಗ್ಯ ಸಮಸ್ಯೆ ಎಲ್ಲವೂ ದೂರವಾಗುತ್ತದೆ. ಬೇಗನೆ ಗುಣಮುಖ ಆಗುತ್ತಾರೆ. ನೋಡಿದ್ರಾಲ್ವಾ ಸ್ನೇಹಿತರೆ ಕೇವಲ ಎರಡು ನಂಬರ್ ಗಳಿಂದ ನಿಮ್ಮ ಜೀವನದಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಹಾಗೂ ಅವುಗಳ ಬದಲಾವಣೆ ಇಂದ ಎಷ್ಟು ಒಳ್ಳೆಯ ಫಲಿತಾಂಶ ಕೊಡುತ್ತದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

 

ಉಪಯುಕ್ತ ಮಾಹಿತಿಗಳು