ನಮಸ್ತೆ ಪ್ರಿಯ ಓದುಗರೇ, ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನನಮ್ ಕುರುಮೆದೇವ ಸರ್ವ ಕಾಯೇಶು ಸರ್ವದಾ.. ಹೀಗೆ ಎಲ್ಲಾ ಕಾರ್ಯಗಳನ್ನು ಪ್ರಾರಂಭ ಮಾಡುವ ಮೊದಲು ಸ್ತುತಿಸುವ ದು ಈ ಪಾರ್ವತಿ ತನಯನನ್ನು. ಗಣಪತಿಯ ಗುಡಿಗಳು ಇಲ್ಲದ ಊರುಗಳಿಲ್ಲ. ಇವನನ್ನು ನಂಬದ ಜನರಿಲ್ಲ. ಇವನನ್ನು ಆರಾಧಿಸುವ ಸಕಲರಿಗೂ ಸದಾ ವಿಧ್ಯೆ ಬುದ್ಧಿಯನ್ನು ಕೊಟ್ಟು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾನೆ ಈ ಗಣನಾಥ. ಬನ್ನಿ ಇವತ್ತಿನ ಲೇಖನದಲ್ಲಿ ಮಹಾ ಗಣಪತಿ ಅಟ್ಟಿ ಅಂಗಡಿಯ ಗಣಪತಿಯ ದರ್ಶನ ಮಾಡಿ ಕೃತಾರ್ಥ ಆಗೋಣ. ಸುಮಾರು 7 ನೆ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ವಾರಾಹಿ ನದಿಯ ದಂಡೆಯ ಮೇಲಿದೆ. ಗರ್ಭ ಗೃಹದಲ್ಲಿ ಇರುವ ಗಣೇಶನು ದ್ವಿಬಾಹು ಆಗಿದ್ದು, ಸಾಲಿಗ್ರಾಮ ದಾಲ್ಲಿ ಈ ದೇವನ ಮೂರ್ತಿಯನ್ನು ಕೆತ್ತಲಾಗಿದೆ. ತಲೆಯಲ್ಲಿ ಜಟೆಯನ್ನು ಹೊಂದಿದ ವಿಶ್ವದ ಏಕೈಕ ವಿಜ್ಞೆಶ್ವರ ನ ದೇವಾಲಯ ಇದಾಗಿದೆ.
ಮುದ್ದು ಗಣೇಶನ ಸೊಂಡಿಲು ಎಡ ಭಾಗದಲ್ಲಿ ಇದ್ದು, ದೇವನು ಎಡ ಕೈಯಲ್ಲಿ ಮೋದಕ ಹಿಡಿದು ಕುಳಿತುಕೊಂಡ ಭಂಗಿಯಲ್ಲಿ ಸ್ಥಾಪಿತ ಆಗಿದ್ದಾನೆ. ಸಿದ್ಧಿ ವಿನಾಯಕ ಎಂದೇ ಖ್ಯಾತವಾಗಿರುವ ಈ ಗಣೇಶನ ವುಗ್ರಹ ವರ್ಷದಿಂದ ವರ್ಷಕ್ಕೆ ಬೆಳೆಯುತ್ತದೇ ಎನ್ನುವುದು ಈ ಕ್ಷೇತ್ರದ ವಿಶೇಷತೆ ಆಗಿದೆ. ಇಲ್ಲಿನ ಗಣಪತಿ ದೇವನು ಹಲಸಿನ ಕಡುಬಿನ ಪ್ರಿಯನಾಗಿದ್ದು ದೇವರಿಗೆ ಕಡುಬು ಅರ್ಪಿಸುತ್ತುವಿ ಎಂದು ಹರಕೆ ಹೊತ್ತರೆ ನಮ್ಮೆಲ್ಲ ಮನದ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತದೆ. ಅಲ್ಲದೆ ಭಕ್ತರ ಫಲಿಸುತ್ತದೆ ಎನ್ನುವುದಾದರೆ ಈ ಗಣೇಶನ ವಿಗ್ರಹದಿಂದ ಹೂವಿನ ಪ್ರಸಾದ ಬೀಳುತ್ತದೆ. ಹೀಗಾಗಿ ಸಾಕಷ್ಟು ಮಂದಿ ಇಲ್ಲಿಗೆ ಬಂದು ಗಣಪತಿಯ ಎದುರಿಗೆ ನಿಂತು ಪ್ರಸಾದವನ್ನು ಕೇಳುವ ವ್ಯವಸ್ಥೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇನ್ನೂ ಇಲ್ಲಿನ ಸ್ಥಳ ಪುರಾಣದ ಪ್ರಕಾರ ಗೋವಿಂದ ರಾಮ ಎನ್ನುವ ಸನ್ಯಾಸಿಗೆ ಗಣಪತಿ ವಟುವಿನ ರೂಪದಲ್ಲಿ ದರ್ಶನ ನೀಡಿದ ಹೀಗಾಗಿ ಅವರೇ ಈ ಗಣೇಶನಿಗೆ ಸಣ್ಣದಾದ ಗುಡಿ ಕಟ್ಟಿಸಿದರು ಎಂದು ಹೇಳಲಾಗುತ್ತದೆ. ಮುಂದೆ 1980 ತಳ್ಳಿ ರಾಜ್ಯದ ಅಂದಿನ ಮುಖ್ಯ ಮಂತ್ರಿಗಳಾದ ದೇವರಾಜ್ ಅರಸ್ ಈ ದೇವಾಲಯದ ಜೀರ್ಣೋದ್ಧಾರ ಮಾಡಿದರು. ಈ ದೇಗುಲದಲ್ಲಿ ಮುದ್ಗಾಲ ಪುರಾಣದ ಪ್ರಕಾರ ಗಣೇಶನ 32 ಭಂಗಿಗಳ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಈ ದೇವಸ್ಥಾನಕ್ಕೆ ಬಂದರೆ ದ್ವಿಮುಖ ಗಣಪತಿ, ದುರ್ಗಾ ಗಣಪತಿ, ಸಿಂಹ ಗಣಪತಿ, ಯೋಗ ಗಣಪತಿ ಹೀಗೆ ಬಾಗೆ ಬಗೆಯ ಗಣಪತಿ ಮೂರ್ತಿಗಳನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಇಲ್ಲಿ ಗಣೇಶನ ಜೊತೆಗೆ ನವ ಗ್ರಹಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಿತ್ಯ ದೇವರಿಗೆ ಆಗಮ ತಂತ್ರ ವೈದಿಕ ವಿಧಾನದಂತೆ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ದಿನ ಅಷ್ಟ ದ್ರವ್ಯ ಗಣಪತಿ ಹವನವನ್ನು ಮಾಡುವುದು ಈ ದೇವಾಲಯದ ವಿಶೇಷತೆ ಆಗಿದೆ. ಇಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ಪ್ರತಿ ತಿಂಗಳು ಸಂಕಷ್ಟಿ ದಿನ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಏಕಾದಶಿ ಹೊರತುಪಡಿಸಿ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮಧ್ಯಾನದ ಸಮಯದಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಈ ದೇವನ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಸಹಸ್ರ ನಾರಿನ ಕೇಳ, ಹೋಮ, ಶ್ರೀ ಸತ್ಯ ಗಣಪತಿ ವ್ರತ, ಲಕ್ಷ ರುವಾರ್ಚನೆ, ಸಿಂಧೂರ ಅರ್ಚನೆ, ಉಪನಿಷತ್ ಅಭಿಷೇಕ ಸೇವೆ, ಹೂವಿನ ಪೂಜೆ, ಅಲಂಕಾರ ಸೇವೆ, ರಂಗ ಪೂಜೆಗಳನ್ನು ಮಾಡಿಸಬಹುದು. ಅತ್ಯಂತ ಶಕ್ತಿಶಾಲಿ ಆದ ಗಣಪತಿಯ ಈ ದೇವಾಲಯವು ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿ ಎಂಬ ಪುಟ್ಟ ಗ್ರಾಮದಲ್ಲಿದೆ. ಕುಂದಾಪುರದಿಂದ 9 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನನ್ನು ದರ್ಶನ ಮಾಡಿ ಪುನೀತರಾಗಿ. ಶುಭದಿನ.