ಒಂದು ತೆಂಗಿನಕಾಯಿ ಬಟ್ಟಲು ಇದ್ರೆ ಸಾಕು ತುಂಬಾ ರುಚಿಯಾದ ತೆಂಗಿನಕಾಯಿ ಸಾರು ಅಥವಾ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸವಿಯಬಹುದು..

ಒಂದು ತೆಂಗಿನಕಾಯಿ ಬಟ್ಟಲು ಇದ್ರೆ ಸಾಕು ತುಂಬಾ ರುಚಿಯಾದ ತೆಂಗಿನಕಾಯಿ ಸಾರು ಅಥವಾ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸವಿಯಬಹುದು..

ನಮಸ್ತೆ ಪ್ರಿಯ ಓದುಗರೇ, ಮನೆ ಹೆಣ್ಣುಮಕ್ಕಳಿಗೆ ಪ್ರತಿದಿನ ಅದೇ ಸೊಪ್ಪಿನ ಸಾರು ಅಥವಾ ತರಕಾರಿ ಸಾರು ಮಾಡಿ ಮಾಡಿ ಬೇಜಾರು ಆಗಿದ್ರೆ ಅಥವಾ ಎಲ್ಲೋ ಊರಿನಿಂದ ಬಂದಾಗ ಮನೆಯಲ್ಲಿ ಏನೇ ತರಕಾರಿ ಇಲ್ಲ ಎಂದಾಗ ಒಂದು ತೆಂಗಿನ ಕಾಯಿ ಇದ್ರೆ ಈ ರೀತಿಯ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸಂತೋಷದಿಂದ ತಿನ್ನುತ್ತಿದ್ದರೆ ಸ್ವರ್ಗ ಮೂರೇ ಗೇಣು ಅಂತೀರಾ. ಹಾಗಾದರೆ ಬನ್ನಿ ತಡ ಮಾಡದೆ ಇಂದಿನ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ. ಧಿಡೀರ್ ಆಗಿ ಕೊಬ್ಬರಿ ಇದ್ರೆ ಸಾಕು, ತುಂಬಾ ರುಚಿಯಾಗಿ ಧಿಡೀರ್ ಆಗಿ ಕಾಯಿ ಸಾರು ಹೇಗೆ ಮಾಡೋದು ಎಂದು ನೋಡೋಣ. ಕೊಬ್ಬರಿ ಸಾರಿಗೆ ಏನೇನು ಸಾಮಗ್ರಿಗಳು ಬೇಕು ಹಾಗೂ ಏನು ಮಾಡೋದು ಎಂದು ಒಂದೊಂದಾಗಿ ನೋಡೋಣ.

 

ಮೊದಲು ಒಂದು ಮಿಕ್ಸಿ ಜಾರ್ ಗೆ ಒಂದು ಕಪ್ ಹಸಿ ಕಾಯಿಯನ್ನು ಅಂದ್ರೆ ಕೊಬ್ಬರಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿಕೊಳ್ಳಿ, ಒಂದು ಬೆಳ್ಳುಳ್ಳಿ ಗೆಡ್ಡೆಯನ್ನು ಸಿಲ್ಲೆ ತೆಗೆದು ಹಾಕಿ, ಒಂದು ಮೀಡಿಯಮ್ ಸೈಜಿನ ಈರುಳ್ಳಿ, ಒಂದು ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು, 2 ಚಮಚ ಸಾಂಬಾರ್ ಪುಡಿ, 2 ಚಮಚ ಹುರಿ ಕಡಲೆ ಹಾಕಿಕೊಳ್ಳಿ, ಅರ್ಧ ಚಮಚ ಜೀರಿಗೆ, ಒಂದು ಮುಷ್ಠಿಯಷ್ಟೂ ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಸಾರಿಗೆ ಬೇಕಾದ ಮಸಾಲೆ ಸಿದ್ಧವಾಗಿದೆ. ಈಗ ಇದಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಂದು ಬಾಣಲೆ ಬಿಸಿ ಇಟ್ಟು, ಕಾದ ನಂತರ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿ ಆದ ನಂತರ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, ಸ್ವಲ್ಪ ಕರಿಬೇವು, ಎರಡು ಒಣ ಮೆಣಸಿನ ಕಾಯಿಯನ್ನು ತುಂಡು ಮಾಡಿ ಸೇರಿಸಿ ಇವಿಷ್ಟನ್ನು ಸೇರಿಸಿ ಫ್ರೈ ಮಾಡಿ. ಸಾಸಿವೆ ಜೀರಿಗೆ ಸಿಡಿದು ಒಳ್ಳೆಯ ಘಮ ಬಂದಾಗ ಒಂದು ಮೀಡಿಯಮ್ ಸೈಜಿನ ಈರುಳ್ಳಿಯನ್ನು ಸೇರಿಸಿ ಬಣ್ಣ ಬದಲಾಗುವ ವರೆಗೆ ಹುರಿಯಿರಿ.

 

ಈರುಳ್ಳಿ ಚೆನ್ನಾಗಿ ಫ್ರೈ ಆದ ಮೇಲೆ ಮೊದಲೇ ಕಾರಿನಲ್ಲಿ ರುಬ್ಬಿ ಇಟ್ಟುಕೊಂಡ ಕೊಬ್ಬರಿ ಮಸಾಲೆಯನ್ನು ಬಾಣಲೆಗೆ ವರ್ಗಾಯಿಸಿ. ಒಂದು ಸಾರಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಅರ್ಧ ಚಮಚ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು. ಈಗ ಇದು ಸ್ವಲ್ಪ ಕುದಿಯಲು ಬಿಡಿ. ಕುದಿಯುತ್ತಿರುವ ಈ ಮಸಾಲೆಗೆ ನಿಮಗೆ ಎಷ್ಟು ತಿಳಿಯಾಗಿ ಬೇಕು ಅಷ್ಟು ನೀರು ಸೇರಿಸಿ ಉಪ್ಪು ಹುಲಿ ಖಾರ ಪರೀಕ್ಷಿಸಿ. ಏನಾದರೂ ಕಡಿಮೆ ಅನ್ನಿಸಿದರೆ ಈಗ ನೀವು ಸೇರಿಸಿ ಒಂದು ಹದಕ್ಕೆ ತರಬಹುದು. ಈಗ ಬಾಣಲೆಗೆ ಮುಚ್ಚಳ ಮುಚ್ಚಿ ಚೆನ್ನಾಗಿ 2-3 ನಿಮಿಷ ಕುದಿಯಲೀ. ಈಗ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಕೊನೆ ಸಾರಿ ಒಂದು ಒಳ್ಳೆಯ ಮಿಕ್ಸ್ ಕೊಟ್ಟು ಗ್ಯಾಸ್ ಸ್ಟೌವ್ ಆರಿಸಿ. ಈಗ ಬಿಸಿ ಬಿಸಿಯಾದ ರುಚಿಯಾದ ಕೊಬ್ಬರಿ ಸಾರು, ಅಥವಾ ಕಾಯಿ ಸಾರು ಬಿಸಿ ಬಿಸಿಯಾದ ಅನ್ನ ದ ಜೊತೆ ಸವಿಯಲು ಸಿದ್ಧ. ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಇನ್ನೂ ರುಚಿಯಾಗಿರುತ್ತದೆ ಸ್ನೇಹಿತರೆ. ನೋಡಿದ್ರಾಲ್ವ ಬಾರಿ ಕೊಬ್ಬರಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸಿ ಹೇಗೆ ರುಚಿ ರುಚಿಯಾದ ಸಾರು ಮಾಡಬಹುದು ಎಂದು. ಈ ರೆಸಿಪಿಯನ್ನು ತಪ್ಪದೇ ಖಂಡಿತ ನಿಮ್ಮ ನಿಮ್ಮ ಮನೆಗಳಲ್ಲಿ ಟ್ರೈ ಮಾಡಿ. ನೀವು ತಿಂದು ನಿಮ್ಮ ಮನೆ ಮಂದಿಗೆಲ್ಲ ಸವಿಯಲು ಕೊಡಿ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ