ಈ ದೇಗುಲದ ಅಡಿಪಾಯವನ್ನು ಪಿರಮಿಡ್ ಆಕಾರದಲ್ಲಿ ಕಟ್ಟಿಸಿದ್ದು ಯಾಕೆ ಗೊತ್ತಾ..??

ಈ ದೇಗುಲದ ಅಡಿಪಾಯವನ್ನು ಪಿರಮಿಡ್ ಆಕಾರದಲ್ಲಿ ಕಟ್ಟಿಸಿದ್ದು ಯಾಕೆ ಗೊತ್ತಾ..??

ನಮಸ್ತೆ ಪ್ರಿಯ ಓದುಗರೇ, ದೇವಾಲಯ ಎಂದರೆ ಅದು ಕೇವಲ ಭಕ್ತಿಯ ಸಂಗಮ ಮಾತ್ರವಲ್ಲ. ಅವು ನಮ್ಮ ಭಾರತದ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಅದ್ಭುತವಾದ ವಾಸ್ತುಶಿಲ್ಪ ಹೊಂದಿದ ಗಳಗನಾಥ ದೇವಾಲಯದ ದರ್ಶನ ಮಾಡಿ ಪುನೀತ ರಾಗೊಣ. ಗಳಗೇಶ್ವರ ಮುನಿ ಎಂಬುವವರು ಇಲ್ಲಿರುವ ಶಿವ ಲಿಂಗವನ್ನು ಸ್ಥಾಪಿಸಿರುವುದ ರಿಂದ ಇಲ್ಲಿನ ಕ್ಷೇತ್ರಕ್ಕೆ ಗಳಗನಾಥ ಎಂಬ ಹೆಸರು ಬಂದಿದ್ದು, ತುಂಗಾ ಭದ್ರಾ ನದಿಗಳ ಸಂಗಮದ ಮಧ್ಯದಲ್ಲಿ ಈ ದೇಗುಲವಿದೆ. ಕಲ್ಯಾಣ ಚಾಲುಕ್ಯರು ಈ ಸುಂದರವಾದ ದೇವಾಲಯವನ್ನು ನಿರ್ಮಿಸಿದರು ಎಂಬ ಮಾಹಿತಿಯನ್ನು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

 

ದೇವಸ್ಥಾನವು 28 ಮೀಟರ್ ಉದ್ದ 17 ಮೀಟರ್ ಅಗಲವಾಗಿದ್ದು, ಈ ದೇವಾಲಯವನ್ನು ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ಈ ದೇವಾಲಯದ ಕಟ್ಟಡದ ವೈಶಿಷ್ಟ್ಯತೆ ಏನು ಅಂದ್ರೆ ಇದರ ಅಡಿಪಾಯ. ಅಡಿಪಾಯ ಪಿರಮಿಡ್ ಆಕಾರದಲ್ಲಿ ಕಟ್ಟಲಾಗಿದ್ದು, ನದಿಯ ನೆರೆ ಹಾವಳಿಯಿಂದ ರಕ್ಷಿಸಲು ಗೋಡೆಗಳನ್ನು ಈ ರೀತಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ದೇಗುಲವು ವಿಶೇಷವಾದ ಗೋಪುರ, ನವರಂಗ, ಮುಖ ಮಂಟಪ ಹೊಂದಿದ್ದು, ನವರಂಗವನ್ನು ಮೂರು ದಿಕ್ಕುಗಳಿಂದ ಪ್ರವೇಶಿಸಬಹುದು. ದೇಗುಲದ ಒಳಗಡೆ ಒಟ್ಟು ಎರಡು ದೊಡ್ಡದಾದ ನಂದಿಯ ವಿಗ್ರಹವಿದೆ. ದೇಗುಲವು 12 ಅಡಿ ಎತ್ತರದ ಸುಂದರವಾದ ಬಾಗಿಲನ್ನು ಹೊಂದಿದೆ. ಎತ್ತರವಾದ ಪಾಣಿ ಪೀಠದ ಮೇಲೆ ಸುಂದರವಾದ ಶಿವ ಲಿಂಗ ಇದ್ದು, ದೇವನ ಜೊತೆಗೆ ವಿಷ್ಣು, ಗಣಪತಿ, ಸೂರ್ಯ, ಪಾರ್ವತಿಯ ವಿವಿಧ ರೀತಿಯ ಶಿಲ್ಪಗಳು, ಜಾಟಾಧಾರಿ ಶಿವನ ಶಿಲ್ಪ ಇವೆ.

 

 

ಇನ್ನೂ ದೇವಸ್ಥಾನದ ಒಳ ಗೋಡೆಗಳಲ್ಲಿ ಕಂಬಗಳು ಇವೆ. ಕಂಬಗಳ ಮೇಲೆ ಸುಂದರವಾದ ಕಲಾತ್ಮಕ ಕುಸಿರಿಯನ್ನು ಕೆತ್ತಲಾಗಿದೆ. ಈ ದೇವಾಲಯವನ್ನು ಸುತ್ತುವರೆದರೆ ಅಗಾಧವಾದ ವಾಸ್ತುಶಿಲ್ಪದ ಕಲೆ ನೋಡಬಹುದು. ಇನ್ನೂ ಈ ದೇವಸ್ಥಾನದ ನವರಂಗದಲ್ಲಿ ಕುಳಿತುಕೊಂಡರೆ ಮುಂದೆ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿ ಕಾಣಿಸುತ್ತದೆ. ಈ ನದಿಯಲ್ಲಿ ಮಿಂದೆದ್ದು, ಗಳಗೇಶ್ವರನನ್ನು ಪೂಜೆ ಮಾಡಿದರೆ, ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ನಂಬಿಕೆ ಆಗಿದೆ. ಶಿವರಾತ್ರಿಯಂದು ಇಲ್ಲಿನ ದೇವರಿಗೆ ವಿಶೇಷ ಪೂಜೆ ಪುನ್ಕಾರಗಳನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಸಾವಿರಾರು ಭಕ್ತರು ದೇವರನ್ನು ದರ್ಶನ ಮಾಡಿ ಕೃತಾರ್ಥ ಆಗುತ್ತಾರೆ. ವಾಸ್ತುಶಿಲ್ಪಕ್ಕೆ ಪ್ರಸಿದ್ಧಿ ಆದ ಈ ದೇವಾಲಯವನ್ನು 6 ಗಂಟೆಯಿಂದ 12 ಗಂಟೆವರೆಗೂ ಸಂಜೆ 5 ರಿಂದ 8 ಗಂಟೆವರೆಗೂ ದರ್ಶನ ಮಾಡಬಹುದು. ಈ ಪುಣ್ಯ ಕ್ಷೇತ್ರವೂ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನ ದರ್ಶನ ಮಾಡಿ ಪುನೀತರಾಗಿ. ಶುಭದಿನ.

 

 

ಭಕ್ತಿ