ಮಹಾ ಭಾರತಕ್ಕೂ ಈ ಕ್ಷೇತ್ರಕ್ಕೂ ಇದೆ ಬಿಡಿಸಲಾಗದ ನಂಟು..!!!

ಮಹಾ ಭಾರತಕ್ಕೂ ಈ ಕ್ಷೇತ್ರಕ್ಕೂ ಇದೆ ಬಿಡಿಸಲಾಗದ ನಂಟು..!!!

ನಮಸ್ತೆ ಪ್ರಿಯ ಓದುಗರೇ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾನಿಸೋ ಹಚ್ಚ ಹಸುರಿನ ವನಸಿರಿ ಝುಳು ಝುಳು ಹರಿಯುವ ನೀರಿನ ನಿನಾದ ಹಕ್ಕಿಯ ಕಲರವ ಸ್ವರ್ಗವೇ ಧರೆಗಿಳಿದು ಬಂತೇನೋ ಎಂಬ ಇಂತಹ ಸುಂದರವಾದ ಪ್ರದೇಶದ ಮಧ್ಯದಲ್ಲಿ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ ಈ ಪರಮೇಶ್ವರ. ಬನ್ನಿ ಇವತ್ತಿನ ಲೇಖನದಲ್ಲಿ ಸಾಗರದ ಸಮೀಪದ ಭೀಮೇಶ್ವರ ದೇವಾಲಯ ದ ದರ್ಶನ ಮಾಡಿ ಪುನೀತ ಆಗೋಣ. ಒಂದು ಕಡೆ ನೀರಿನ ಜಲಪಾತ ಒಂದು ಕಡೆ ಶಿವನ ಸಾನಿಧ್ಯ ನಿಸರ್ಗದ ಮಡಿಲಲ್ಲಿ ಇರುವ ಇಂತಹ ಸುಂದರವಾದ ಅಲ್ಲಯಕ್ಕೆ ಬಂದರೆ ನಮ್ಮ ಹೃದಯದಲ್ಲಿ ಭಕ್ತಿಯ ಸಿಂಚನ ಆಗುತ್ತೆ. ಇಷ್ಟು ಮಾತ್ರವಲ್ಲ ಇಲ್ಲಿನ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಬಂದು ದೇವರನ್ನು ದರ್ಶನ ಮಾಡಿದರೆ ನಮ್ಮೆಲ್ಲ ತಪ್ಪುಗಳನ್ನು ಮಾನ್ಯ ಮಾಡುತ್ತಾನೆ ಈ ಪಾರ್ವತಿ ಪತಿ. ಈ ಕ್ಷೇತ್ರಕ್ಕೆ ಭೀಮೇಶ್ವರ ಎಂದು ಹೆಸರು ಬರಲು ಪುರಾಣದಲ್ಲಿ ಕಥೆ ಇದೆ.

 

ಮಹಾಭಾರತದಲ್ಲಿ ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬರುತ್ತಾರಂತೆ. ಆಗ ಭೀಮನು ಕಾಶಿ ಇಂದ ತಂಡ ಶಿವ ಲಿಂಗವನ್ನು ಧರ್ಮರಾಯನಿಗೆ ಈ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲು ಹೇಳ್ತಾನೆ. ಪಾಂಡವರು ಪ್ರತಿಷ್ಠಾಪಿಸಿದ ಈ ಶಿವ ಲಿಂಗಕ್ಕೆ ಅಭಿಷೇಕ ಮಾಡಲು ನೀರಿನ ಅಭಾವ ಉಂಟಾಗುತ್ತದೆ. ಆಗ ಮಾಧ್ಯಮ ಪಾಂಡವನಾದ ಅರ್ಜುನನು ತನ್ನ ಬಾಣವನ್ನು ಹೂಡುತ್ತಾನೆ. ಆಗ ಬಾಣದಿಂದ ನೀರಿನ ಝರಿ ಚಿಮ್ಮುತ್ತೆ. ಹೀಗೆ ಚಿಮ್ಮಿದ ನೀರಿನಿಂದ ಲಿಂಗಕ್ಕೆ ಅಭಿಷೇಕ ಮಾಡಿ ಪಾನದವರು ಧನ್ಯ ಆಗುತ್ತಾರೆ. ಭೀಮನು ತಂದ ಈಶ್ವರ ಲಿಂಗವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದರಿಂದ ಈ ಕ್ಷೇತ್ರಕ್ಕೆ ಭೀಮೇಶ್ವರ ಎಂಬ ಹೆಸರು ಬಂದಿತು. ಈ ಕ್ಷೇತ್ರದ ವಿಶೇಷತೆ ಏನೆಂದರೆ ಇಲ್ಲಿ ಹರಿಯುವ ನೀರು ಬಿರು ಬೇಸಿಗೆಯಲ್ಲಿ ಸಹ ಬತ್ತುವುದಿಲ್ಲ. ಸುಂದರವಾದ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವನ್ನು ಮೆಣಸಿನ ರಾಣಿ ಜೀರ್ಣೋದ್ಧಾರ ಮಾಡಿದಳು ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಶಿವರಾತ್ರಿ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಮೈ ಕೊರೆಯುವ ಚಳಿ ಭೋರ್ಗರೆಯುವ ನೀರಿನ ಶಬ್ಧ.

 

ಘಂಟಾನಾದ ದ ಮಧ್ಯದಲ್ಲಿ ಚಿನ್ಮಯ ಆದ ಪರ ಶಿವನಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರನ್ನು ನೋಡುವುದೇ ಒಂದು ಅನನ್ಯ ಅನುಭೂತಿ ಆಗಿರುತ್ತದೆ. ನಿತ್ಯ ದೇವರಿಗೆ ಬಿಲ್ವಾರ್ಚನೆ, ಕ್ಷೆರಾಭಿಷೇಕ, ಜಲ ಅಭಿಷೇಕ ಮಾಡಲಾಗುತ್ತದೆ. ಸೋಮವಾರ ಹುಣ್ಣಿಮೆ ಅಮಾವಾಸ್ಯೆ ದಿನ ಹೆಚ್ಚಿನ ಭಕ್ತರು ದೇವರನ್ನು ದರ್ಶನ ಮಾಡಿ ಕೃತಾರ್ಥ ಆಗ್ತಾರೆ. ಈ ಕ್ಷೇತ್ರಕ್ಕೆ ಬರುವವರು ಮುಂಚಿತವಾಗಿ ದೇವಸ್ಥಾನದ ಅರ್ಚಕರ ದೂರವಾಣಿ ಸಂಖ್ಯೆ ಆದ 9483642908 ಈ ದೂರವಾಣಿಗೆ ಸಂಪರ್ಕಿಸಿ ಪೂಜೆಗಳ ವಿವರಗಳನ್ನು ತಿಳಿದುಕೊಳ್ಳಬಹುದು. ಇತ್ತೀಚೆಗೆ ಈ ಕ್ಷೇತ್ರವು ಬಹಳಷ್ಟು ಜನರನ್ನು ಆಕರ್ಷಸುತ್ತಿದೆ. ಮುಂಗಾರು ಮಳೆ 2 ಚಿತ್ರದಲ್ಲಿ ಈ ದೇವಾಲಯದ ಸುಂದರವಾದ ಸ್ಥಳಗಳನ್ನು ಚಿತ್ರೀಕರಿಸಲಾಗಿದೆ. ಈ ಭೀಮೇಶ್ವರ ದೇವಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋಗಾರ್ ಎಂಬ ಪುಟ್ಟ ಗ್ರಾಮದಲ್ಲಿದೆ. ಕೊಗಾರ್ ಸಮೀಪದ ರಸ್ತೆ ತಲುಪಿ ಅಲ್ಲಿಂದ 2 ಕಿಮೀ ಕಡಿದಾದ ರಸ್ತೆ ಸಾಗಿದರೆ ಈ ದೇವಸ್ಥಾನ ತಲುಪಬಹುದು. ಪ್ರಕೃತಿಯ ಮಧ್ಯ ನೆಲೆ ನಿಂತ ಈ ಪರಮಾತ್ಮನನ್ನು ನೀವೂ ಒಮ್ಮೆ ದರ್ಶನ ಮಾಡಿ ಕೃತಾರ್ಥ ಆಗಿ. ಶುಭದಿನ.

ಭಕ್ತಿ