ಮನೆಯಲ್ಲಿ ಕಾಮಧೇನು ವಿಗ್ರಹ ಇಟ್ಟರೆ ಇಷ್ಟಾರ್ಥ ಸಿದ್ಧಿ ಆಗುತ್ತೆ..!!!

ಮನೆಯಲ್ಲಿ ಕಾಮಧೇನು ವಿಗ್ರಹ ಇಟ್ಟರೆ ಇಷ್ಟಾರ್ಥ ಸಿದ್ಧಿ ಆಗುತ್ತೆ..!!!

ನಮಸ್ತೆ ಪ್ರಿಯ ಓದುಗರೇ, ಹಿಂದೂ ಸಂಪ್ರದಾಯದಲ್ಲಿ ಆಕಳು ಮತ್ತು ಕರುವಿಗೆ ವಿಶೇಷ ಮಹತ್ವ ಇದೆ. ಕಾಮಧೇನು ಎಂದು ನಾವು ಹಸುವನ್ನು ಪೂಜಿಸುತ್ತೇವೆ. ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸುವುದರಿಂದ ನಿಮ್ಮೆಲ್ಲ ಆಸೆಗಳಿಗೆ ಹಾರೈಕೆ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವು ಮನೆಯಲ್ಲಿ ಕಾಮಧೇನು ವಿನ ವಿಗ್ರಹ ಇಟ್ಟರೆ ಯಾವೆಲ್ಲ ಪ್ರಯೋಜನ ಇದೆ ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗೋವಿನಲ್ಲೀ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ಪ್ರತೀತಿ ಹಾಗೂ ನಂಬಿಕೆ ಇದೆ. ಹೀಗೆ ಇರುವುದರಿಂದ ಗೋವಿಗೆ ವಿಶೇಷ ಪ್ರಾಮುಖ್ಯತೆ ಕೊಟ್ಟು ವರ್ಷಕ್ಕೆ ಒಂದು ಬಾರಿ ಆದರೂ ಗೋಮಾತೆ ಗೆ ಪೂಜೆ ಮಾಡಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಹೀಗೆ ವರ್ಷದಲ್ಲಿ ಯಾವುದಾದ್ರೂ ಒಂದು ದಿನ ಹಸುವಿಗೆ ಪೂಜೆ ಮಾಡಿದ ಮನೆಗಳಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ, ಹಣಕಾಸಿನ ಯಾವುದೇ ತೊಂದರೆ ಇರಲಾರದು, ಹಾಗೆ ಆರೋಗ್ಯದಿಂದ ಕೂಡಿರುತ್ತದೆ. ನಾವು ಕೆಳಿದ್ದೆಲ್ಲ ಕೊಡುವ ಒಂದು ಪ್ರಾಣಿ ಅಂದ್ರೆ ಅದು ಕಾಮಧೇನು. ಈ ಕಾಮಧೇನು ವಿಗೆ ಅದರದ್ದೇ ಆದ ಮಹತ್ವ ಇದೆ. ಇದು ಯಾವ ರೀತಿ ನಮ್ಮ ಜೀವನಕ್ಕೆ ಶುಭ ಎನ್ನುವುದನ್ನು ತಿಳಿಯುವುದು ಬಲು ಮುಖ್ಯ. ಮೊದಲೆಲ್ಲ ದಕ್ಷಿಣ ಆಗ್ನೇಯ ದಿಕ್ಕಿಗೆ ಮನೆಯ ಅಡುಗೆ ಮನೆ ಬರುತ್ತಾ ಇತ್ತು. ಅಡಿಗೆ ಮನೆಯ ಹಿಂದೆ ಒಂದು ಕೊಟ್ಟಿಗೆಯನ್ನು ಸಹ ಮಾಡಿಕೊಳ್ಳುತ್ತ ಇದ್ದರು. ಈಗೆಲ್ಲಾ ನಾವು ಸಿಟಿಯಲ್ಲಿ ಮನೆ ಮಾಡಿಕೊಂಡಿದ್ದರಿಂದ ಈಗೆಲ ಯಾವ ಕೊಟ್ಟಿಗೆಗಳು ಇರುವುದಿಲ್ಲ. ದಕ್ಷಿಣ ಆಗ್ನೇಯ ಸ್ಥಾನವನ್ನು ತುಂಬುತ್ತಿದ್ದ ಹಸು ಇರುವುದೇ ಇಲ್ಲ.

 

 

ಯಾಕೆಂದ್ರೆ ನಾವು ಇರುವುದು ಮಹಡಿ ಮನೆ ಹಾಗೂ ಸಿಟಿಯಲ್ಲಿ ಈ ತರಹದ ಕಟ್ಟಡ ಯಾರೋ ನಿರ್ಮಾಣ ಮಾಡಲ್ಲ. ಈ ಕೊರತೆಯನ್ನು ಯಾವುದರಿಂದ ನೀಗಿಸುವುದು? ನಿಮ್ಮ ಮನೆಗಳಲ್ಲಿ ಹಣ ಕಾಸಿನ ತೊಂದರೆ ಉಂಟಾಗುವುದು ಎಲ್ಲಿಂದ ಅಂದ್ರೆ ಈ ಕುಬೇರ ಮೂಲೆಯಲ್ಲಿ ತೊಂದರೆ ಆದಾಗ ಅಥವಾ ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ತೊಂದರೆ ಆದಾಗ. ಮನೆಯಲ್ಲಿ ಲಕ್ಷ್ಮಿಯ ಸ್ಥಾನ ತುಂಬುವ ಗೋವು ಇರದೇ ಹೋದರೆ ಈ ಎಲ್ಲಾ ಸಮಸ್ಯೆಗಳು ಉಂಟಾಗಬಹುದು. ಮೊದಲೆಲ್ಲ ಒಂದು ಮನೆಯಲ್ಲಿ ಒಂದು ಗೋವು ಇತ್ತು ಎಂದರೆ ಆ ಮನೆ ಹೇಗೋ ನಡೆದು ಹೋಗುತ್ತಿತ್ತು. ಹಸುವಿನ ಹಾಲು ಮೊಸರು ಬೆಣ್ಣೆ ತುಪ್ಪ ಹೀಗೆ ಅವರ ಜೀವನವೇ ನಡೆದು ಹೋಗುತ್ತಿತ್ತು. ಇವೆಲ್ಲಾ ದೋಷಗಳ ನಿವಾರಣೆ ಆಗಬೇಕು ಅಂದ್ರೆ ನಿಮ್ಮ ಅಡುಗೆ ಮನೆಯಲ್ಲೇ ಈ ಕಾಮಧೇನು ಮೂರ್ತಿ ತಂದು ಪ್ರತಿಷ್ಠಾಪನೆ ಮಾಡಿ ಪ್ರತಿದಿನ ಪೂಜೆ ಮಾಡಿದರೆ ನಿಮಗೆ ಯಾವುದೇ ರೀತಿ ಕಷ್ಟ ಕಾರ್ಪಣ್ಯಗಳು ಬರೋದಿಲ್ಲ. ಅದಕ್ಕೊಂದು ಪದ್ಧತಿ ಇದೆ. ಅದನ್ನು ಎಲ್ಲಿ ಹೇಗೆ ಇಟ್ಟು ಪೂಜೆ ಮಾಡಬೇಕು ಎಂದು ತಿಳಿಯೋಣ. ಕಾಮಧೇನು ವಿನ ಮೂರ್ತಿ ತಂದು ಅದನ್ನು ಒಂದು ದಿನ ನಿಮ್ಮ ತಿಜೋರಿ, ಬೀರು ಅಥವಾ ನೀವು ದುಡ್ಡು ಇಡುವ ಕುಬೇರ ಮೂಲೆಯಲ್ಲಿ ಇಟ್ಟು ನಂತರ ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ಇಡಬೇಕು.

 

 

ನಂತರ ನಿಮಗೆ ಏನೆಲ್ಲಾ ಮನಸ್ಸಿನ ಇಚ್ಛೆ ಇದೆ ಅವೆಲ್ಲವನ್ನೂ ಉದಾಹರಣೆಗೆ ನಿಮ್ಮ ಕಷ್ಟ ಕಡಿಮೆ ಆಗಬೇಕಾ? ನಿಮ್ಮ ಸಾಲ ತೀರಬೇಕ? ನಿಮಗೆ ಹಣ ಕಾಸಿನ ಸಮಸ್ಯೆ ಮುಗಿದು ಹೋಗಬೇಕಾ? ಅಥವಾ ಇನ್ನೇನಾದರೂ ಕೆಲಸ ಆಗಬೇಕು ಎಂದಿದ್ದಾರೆ ಅವೆಲ್ಲವನ್ನೂ ಒಂದು ಚೀಟಿಯಲ್ಲಿ ಬರೆದು ಕಾಮಧೇನು ವಿನ ಮೂರ್ತಿಯ ಕೆಳಗಡೆ ಈ ಚೀಟಿ ಇತ್ತು ಆಮೇಲೆ ಕಾಮಧೇನು ಹಾಗೂ ಹಸು ಇರುವ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತ ಬಂದರೆ 21 ದಿನದಲ್ಲಿ ನಿಮ್ಮ ಕಾರ್ಯ ಮನಸ್ಸಿನ ಇಚ್ಛೆ, ವಾಂಛೇ, 100% ಈಡೇರುತ್ತವೆ. ಕೆಲವರು ಬರಿ ಗೋವಿನ ಮೂರ್ತಿ ಇಟ್ಟಿರುತ್ತಾರೆ ಆದ್ರೆ ಅದು ತಪ್ಪು, ಅಷ್ಟು ಸಮಂಜಸ ಅಲ್ಲ. ಗೋವು ಮತ್ತು ಹಸು ಎರಡು ಇರುವ ಮೂರ್ತಿಯನ್ನು ಇಟ್ಟರೆ ಒಳ್ಳೆಯದು. ಹಸುವಿನ ಜೊತೆಗೆ ಕರುವು ಇದ್ದರೆ ಅತೀ ಉತ್ತಮ. ಬಾರಿ ಹಸುವಿನ ಮೂರ್ತಿ ಇಟ್ಟರೆ ಅದು ಹಾಲು ಕೊಡುತ್ತಿಲ್ಲ, ಏನು ಫಲ ಕೊಡುತ್ತಿಲ್ಲ ಎಂದಾಗುತ್ತದೆ. ಅದೇ ಹಸು ಜೊತೆ ಕರು ಇದ್ದರೆ ಹಾಲು ಕ್ಕೊಡುವುದರಿಂದ ಫಲ ಉಕ್ಕಿ ಬರುತ್ತದೆ. ನಿಮಗೆ ವಿವಾಹ ವಿಳಂಬ ಆಗುತ್ತಿದೆ ಎಂದಾಗಲೂ ಈ ಹಸು ಕರುವಿನ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ಮಾಡಿ, ದಿನವೂ ಪೂಜೆ ಮಾಡುತ್ತ ಬಂದರೆ ಅದೂ ಸಹ ನೆರವೇರುತ್ತದೆ. ಮಕ್ಕಳು ಆಗಿಲ್ಲ ಎನ್ನುವವರೂ ಸಹ ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸುವುದರಿಂದ ಆ ಸಮಸ್ಯೆಯೂ ದೂರಾಗುತ್ತದೆ. ಮೊದಲೆಲ್ಲ ಒಂದು ಮನೆಯಲ್ಲಿ ಗೋವು ಇತ್ತು ಅಂದ್ರೆ ಆ ಮನೆಯ ಯಜಮಾನ ಅಥವಾ ಆರೋಗ್ಯ ಸಮಸ್ಯೆ ಇರುವ ಯಾರಾದರೂ ಅದನ್ನು ಸವರುತ್ತಾ ಬಂದರೂ ಆ ಎಲ್ಲಾ ಅನಾರೋಗ್ಯದ ಸಮಸ್ಯೆ ಕಡಿಮೆ ಆಗ್ತಾ ಇತ್ತು. ಅದರ ಗೋಮೂತ್ರ ಕುಡಿಯುವುದರಿಂದ ಸಹ ನಾನಾ ರೋಗಗಳು ನಿವಾರಣೆ ಸಾಧ್ಯ. ಕಾಮಧೇನುವಿನ ಮಹತ್ವ ಅರಿತು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉತ್ತಮ ಜೀವನ ಸಾಗಿಸಿ. ಶುಭದಿನ.

ಉಪಯುಕ್ತ ಮಾಹಿತಿಗಳು