ಧಿಡೀರ್ ಆಗಿ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಎಗ್ ಪಪ್ಸ್ ಮಾಡಿ..!!!

ಧಿಡೀರ್ ಆಗಿ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಎಗ್ ಪಪ್ಸ್ ಮಾಡಿ..!!!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಬೇಕರಿಗಳಲ್ಲಿ ಬೆಣ್ಣೆ ಹಾಕಿ ಓವನ್ ಗಳಲ್ಲಿ ಮಾಡಿದ ಎಗ್ ಪಪ್ಸ್ ತಿಂದೆ ಇರ್ತೀವಿ. ಈಗಂತೂ ಮೊಟ್ಟೆಯ ತಿಂಡಿ ತಿನಿಸುಗಳು ಅತೀ ದುಬಾರಿ ಆಗಿಬಿಟ್ಟಿದೆ. ಹಾಗಾಗಿ ಇಂದಿನ ಲೇಖನದಲ್ಲಿ ಯಾವುದೇ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಮನೆಯಲ್ಲಿ ಧಿಡೀರ್ ಆಗಿ ಎಗ್ ಪಪ್ಸ್ ಮಾಡುವ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ ಸ್ನೇಹಿತರೆ. ಹಾಗಾದ್ರೆ ತಡ ಯಾಕೆ ಎಗ್ ಪಪ್ಸ್ ಮಾಡುವ ವಿಧಾನ ತಿಳಿಯೋಣ ಬನ್ನಿ. ಇದು ತುಂಬಾ ಸುಲಭ ಹಾಗೆ ತುಂಬಾ ರುಚಿಯಾಗಿ ಕೂಡ ಬರುತ್ತೆ. ಒಂದು ಮಿಕ್ಸಿಂಗ್ ಬೌಲ್ ಅಲ್ಲಿ ಒಂದು ಕಪ್ ಮೈದಾ ಹಿಟ್ಟು ಹಾಕಿಕೊಂಡು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಹಾಗೆ ಒಂದು ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತುಪ್ಪ ಮೈದಾ ಹೊತ್ತಿನಲ್ಲಿ ಎಲ್ಲಾ ಕಡೆ ಬೆರೆಯಬೇಕು ಹಾಗೆ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ಬೆಣ್ಣೆ ಇದ್ರೆ ಬೆಣ್ಣೆ ಹಾಕಿಕೊಳ್ಳಿ ಇಲ್ಲ ಅಂದ್ರೆ ತುಪ್ಪ ಹಾಕಿಕೊಳ್ಳಿ.

 

ಈ ರೀತಿ ಮಿಕ್ಸ್ ಮಾಡಿದ ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟು ಕಲಸಿಕೊಳ್ಳಿ. ಒಮ್ಮೆಗೆ ನೀರು ಹಾಕಿದರೆ ಹಿಟ್ಟು ತೆಳು ಆಗಿಬಿಡುತ್ತೆ. ಸ್ವಲ್ಪ ಸ್ವಲ್ಪ ಹಾಕಿ ತುಂಬಾ ಗಟ್ಟಿ ಅಲ್ಲದೆ ತುಂಬಾ ತೆಳು ಅಲ್ಲದೆ ಮೀಡಿಯಮ್ ಆಗಿ ಕಲಸಿ ಇಟ್ಟುಕೊಳ್ಳಿ. ಹಿಟ್ಟಿನ ಮೇಲ್ಭಾಗಕ್ಕೆ ಸ್ವಲ್ಪ ಎಣ್ಣೆ ಸವರಿ 10 ನಿಮಿಷ ಪಕ್ಕಕ್ಕಿಡಿ. ನಂತರ ಒಂದು ಪ್ಯಾನ್ ಬಿಸಿ ಮಾಡಿ 2 ಚಮಚ ಎಣ್ಣೆ, ಎಣ್ಣೆ ಬಿಸಿ ಆದ ನಂತರ ಎರೆಡು ದೊಡ್ಡ ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿ ಹಾಕಿ, ಚಿಟಿಕೆ ಉಪ್ಪು ಹಾಕಿ ಬಾಡಿಸಿ. ಈರುಳ್ಳಿ ಸ್ವಲ್ಪ ಸಾಫ್ಟ್ ಆದ ಮೇಲೆ ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನ ಕಾಯಿ, ನಿಮ್ಮ ಖಾರಕ್ಕೆ ಅನುಗುಣವಾಗಿ ಬೆರೆಸಿಕೊಳ್ಳಿ. ಕಾಳು ಚಮಚ ಅರಿಶಿಣ, ಅರ್ಧ ಜೀರಿಗೆ ಜೀರಿಗೆ ಪುಡಿ, ಅರ್ಧ ಚಮಚ ಅಚ್ಚ ಖಾರದ ಪುಡಿ, ಅರ್ಧ ಚಮಚ ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕಾಲು ಚಮಚ ಗರಂ ಮಸಾಲ, ಅಷ್ಟೇ ಪ್ರಮಾಣದ ಕರಿ ಮೆಣಸಿನ ಪುಡಿ ಹಾಕಿ ಬಾಡಿಸಿ ಕೊನೆಗೆ ಕೊತ್ತಂಬರಿ ಸೊಪ್ಪು, ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ. ಈಗ ರುಚಿ ನೋಡಿ ಬೇಕು ಅಂದೇನಿಸಿದರೆ ಉಪ್ಪು ಹಾಕಿ ಸ್ಟೋವ್ ಆಫ್ ಮಾಡಿ. ಈಗ ಎಗ್ ಪಪ್ ಗೆ ತುಂಬಲು ಸ್ಟಫ್ ರೆಡಿ ಆಯ್ತು. ಹಿಟ್ಟು ಕೂಡ ಚೆನ್ನಾಗಿ ನೇನೆದಿದೆ. ಚಪಾತಿ ಉರುಳಿಯಷ್ಟು ಹಿಟ್ಟು ತೆಗೆದುಕೊಂಡು ತುಂಬಾ ದಪ್ಪಕ್ಕೆ ತುಂಬಾ ತೆಳ್ಳಗೆ ಬೇಡ.

 

ಮೀಡಿಯಮ್ ಆಗಿ ಒಣ ಹಿಟ್ಟು ಹಾಕಿ ಉದ್ದಿಕೊಳ್ಳಿ. ಹೀಗೆ ನೀವು ಕಲಸಿದ ಎಲ್ಲ ಹಿಟ್ಟನ್ನು ಚಪಾತಿ ಅಳತೆಗೆ ಉದ್ದಿ ಇಟ್ಟುಕೊಳ್ಳಿ. ಇನ್ನೊಂದು ಕಡೆ ಎಗ್ ಬೇಯಲು ಇಟ್ಟು, ಅವುಗಳ ಸಿಪ್ಪೆ ತೆಗೆದು ಇಡೀ. ಒಂದು ಮೊಟ್ಟೆಯಲ್ಲಿ ನಾಲ್ಕು ಭಾಗಗಳಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಈಗ ಮಣೆ ಮೇಲೆ ಸ್ವಲ್ಪ ಹಿಟ್ಟು ಉದುರಿಸಿ ಉದ್ದಿರುವ ಚಪಾತಿ ಅಳತೆಯ ಮೈದಾ ಹಿಟ್ಟಿನ ಹಾಳೆಯನ್ನು ಹರಡಿ. ಚಾಕುವಿನಿಂದ ತ್ರಿಕೋನ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ಒಂದು ಮೈದಾ ಹಾಳೆಯಲ್ಲಿ ಸುಮಾರು 6 ಪಪ್ ಮಾಡಬಹುದು. ಒಂದು ತ್ರಿಕೋನ ಆಕಾರದ ಹಾಳೆಯಲ್ಲಿ ಮೊದಲೇ ಮಾಡಿರುವ ಈರುಳ್ಳಿ ಮಿಶ್ರಣ ಹಾಗೂ ಎಗ್ ಇಟ್ಟು, ಹಾಳೆಯ ಮೂಲೆಗೆ ನೀರನ್ನು ಹಚ್ಚಿ ಲಾಕ್ ಮಾಡಿ. ಹೀಗೆ ಎಲ್ಲವುಗಳನ್ನು ಮೊಟ್ಟೆ ಈರುಳ್ಳಿ ಮಿಶ್ರಣ ಹಾಕಿ ರೋಲ್ ಮಾಡಿ ನೀಟಾಗಿ ಲಾಕ್ ಮಾಡಿ ಮೀಡಿಯಮ್ ಕಾದಿರುವ ಎಣ್ಣೆಯಲ್ಲಿ ಹಾಕಿ ಗೋಲ್ಡ್ ಬಣ್ಣ ಬರುವ ಹಾಗೆ ಕರಿಯಿರಿ. ಎಣ್ಣೆ ಹೈ ಫ್ಲೇಮ್ ಆಲ್ಲಿದ್ರೆ ಪಪ್ಸ್ ಗರಿ ಗರಿ ಆಗೋದಿಲ್ಲ. ಹೀಗೆ ಎಲ್ಲ ಪಪ್ಸ್ ಗಾಳನ್ನೂ ಕರಿದರೆ ಬಿಸಿ ಬಿಸಿಯಾದ ಬೆಣ್ಣೆ ಹಾಕದೆ ಓವನ್ ಇಲ್ಲದೆ ರುಚಿಯಾಗಿ ಇರುವ ಎಗ್ ಪಪ್ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ನಿಮ್ಮ ಪ್ರೀತಿ ಪಾತ್ರರಿಗೆ ಹಂಚಿಕೊಳ್ಳಿ. ಶುಭದಿನ.

ಆಹಾರ