ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಗಣೇಶನ ಎಲ್ಲ ದೇವಾಲಯಗಳಲ್ಲಿ ಆನೆಯ ಮುಖವನ್ನು ಹೊಂದಿರುವ ವಕ್ರತುಂಡ ನನ್ನು ಪೂಜಿಸಲಾಗುತ್ತದೆ. ಆದ್ರೆ ನಾವು ಇವತ್ತು ಹೊತ್ತು ತಂದಿರುವ ದೇವಾಲಯದಲ್ಲಿ ಗಣೇಶನನ್ನು ಮನುಷ್ಯ ರೂಪದಲ್ಲಿ ಪೂಜಿಸಲಾಗುತ್ತದೆ. ಬನ್ನಿ ಹಾಗಾದರೆ ಆ ದೇವಾಲಯ ಎಲ್ಲಿದೆ ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ತಮಿನಾಡಿನ ಕುತುಮನೂರು ಇಂದ ಸುಮಾರು 2.6 ಕಿಮೀ, ದೂರದಲ್ಲಿರುವ ತಿಲ ತರ್ಪಣ ಪುರಿ ಎಂಬಲ್ಲಿ ಆದಿ ವಿನಾಯಕ ಹಾಗೂ ವಿಗ್ನೇಷ್ವರ ನ ದೇವಸ್ಥಾನ ಇದ್ದು, ಈ ದೇವಾಲಯದಲ್ಲಿ ಮಾನವ ರೂಪದಲ್ಲಿ ಪೂಜೆಗೊಳ್ಳುತ್ತಿರುವ ವಿನಾಯಕನ ಮೂರ್ತಿಯನ್ನು ನೋಡಬಹುದು. ಗಣೇಶನನ್ನು ಮನುಷ್ಯ ರೂಪದಲ್ಲಿ ಆರಾಧಿಸುವ ವಿಶ್ವದ ಏಕೈಕ ದೇವಾಲಯ ಇದಾಗಿದ್ದು, ಕಪ್ಪು ಶಿಲೆಯಲ್ಲಿ ಇರುವ ಗಣೇಶನ ವಿಗ್ರಹ ಅತ್ಯಂತ ಸುಂದರವಾಗಿದೆ. ಸಾಮಾನ್ಯವಾಗಿ ಗಣೇಶನ ಎಲ್ಲಾ ದೇವಾಲಯಗಳಲ್ಲಿ ಆನೆ ಮುಖವನ್ನು ಹೊಂದಿರುವ ಮೂರ್ತಿಯನ್ನು ಪೂಜಿಸಲಾಗುತ್ತದೆ. ಆದ್ರೆ ಈ ಕ್ಷೇತ್ರದಲ್ಲಿ ಗಣೇಶನನ್ನು ಶಿವನು ಶಿರಚ್ಛೇದನ ಮಾಡುವ ಮೊದಲು ಹೊಂದಿದ್ದ ಬಾಲಕನ ರೂಪದಲ್ಲಿ ಪೂಜಿಸಲಾಗುತ್ತದೆ.
ಹೀಗಾಗಿ ಇಲ್ಲಿರುವ ಗಣೇಶನನ್ನು ಆದಿ ವಿನಾಯಕ ಎಂದು ಕರೆಯಲಾಗುತ್ತದೆ. ಇಲ್ಲಿರುವ ಗಣೇಶನ ವಿಗ್ರಹ ಸುಮಾರು 6 ಅಡಿ ಎತ್ತರವಿದ್ದು ಗಣಪತಿಯ ಹೊಟ್ಟೆಯು ಹಾವಿನಿಂದ ಸುತ್ತುವರೆದಿದೆ. ಗಣೇಶನ ಕಾಲ ಬುಡದಲ್ಲಿ ಮೂಷಿಕ ಇದ್ದಾನೆ. ಅತ್ಯಂತ ಸುಂದರವಾದ ಇಲ್ಲಿರುವ ಮಾನವ ರೂಪಿ ಗಣೇಶನ ಮೂರ್ತಿಯನ್ನು ಅಗಸ್ತ್ಯರು ಪ್ರತಿಷ್ಠಾಪಿಸಿ ಪೂಜಿಸಿದರು ಎಂಬ ಪ್ರತೀತಿ ಇದ್ದು ಈ ಗಣೇಶನಿಗೆ ಗರಿಮೆಯನ್ನು ಅರ್ಪಿಸುವದಾರಿಂದ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ನಂಬಿಕೆ ಇದೆ. ಸುಮಾರು ಎರಡನೇ ಶತಮಾನದಲ್ಲಿ ನಿರ್ಮಿಸುವ ಈ ದೇಗುಲವು ಗರ್ಬಗೃಹ, ಪ್ರದಕ್ಷಿಣಾ ಪಥ, ಪುಟ್ಟದಾದ ಗೋಪುರ ವನ್ನಾ ಒಳಗೊಂಡಿದೆ. ಇನ್ನೂ ದೇವಾಲಯದಲ್ಲಿ ಮುಖ್ಯ ದೇವರಾಗಿ ಮುಕ್ತೇಶ್ವರನನ್ನು ಆರಾಧಿಸಲಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ಪಿತೃಗಳಿಗೆ ತರ್ಪಣ ನೀಡುವುದರಿಂದ ಪಿತೃ ದೋಷ ನಿವಾರಣೆ ಆಗಿ ಪಿತೃ ದೋಷಗಳಿಂದ ಶಾಂತಿ ದೊರಕುತ್ತದೆ ಎಂಬ ನಂಬಿಕೆ ಇದೆ. ಈ ಸ್ಥಳಕ್ಕೆ ತಿಲ ತರ್ಪಣ ಪುರಿ ಎಂಬ ಹೆಸರು ಬಂದಿರುವ ಹಿಂದೆ ಒಂದು ಘಟನೆ ಕೂಡ ಇದೆ. ಈ ಸ್ಥಳದ ಮೂಲ ಹೆಸರು ಮಂತ್ರ ವಾದಂ ಎಂಬುದಾಗಿದೆ. ಒಮ್ಮೆ ಶ್ರೀರಾಮನು ತನ್ನ ತಂದೆಯ ಪಿಂಡ ಕಾರ್ಯಗಳನ್ನು ನೆರವೇರಿಸುವಾಗ ನಾಲ್ಕು ಪಿಂಡಗಳು ಪದೇ ಪದೇ ಕೀಟಗಳ ರೂಪವನ್ನು ತೋರುತ್ತವೆ ಅಂತೆ. ತನ್ನ ತಂದೆಗೆ ತರ್ಪಣ ನೀಡಿದ್ದು ಸರಿಯಾಗಿಲ್ಲ ಎಂದು ಭಾವಿಸಿ ಶ್ರೀರಾಮಚಂದ್ರನು ಈಶ್ವರ ನ ಕುರಿತು ಪ್ರಾರ್ಥನೆ ಮಾಡಲು ಪರಮೇಶ್ವರನು ಮಂತ್ರ ವಾದಮ್ ಎಂಬ ಸ್ಥಳವಿದೆ. ಅಲ್ಲಿಗೆ ಹೋಗಿ ನೀನು ಪಿಂಡ ಪ್ರದಾನ ಮಾಡು ನಿನ್ನ ತಂದೆಗೆ ಸಂತೋಷವಾಗುತ್ತದೆ ಎಂದು ಹೇಳಿದರಂತೆ. ಶಿವನ ಅನತೆಯಂತೆ ಶ್ರೀರಾಮ ಚಂದ್ರನು ಮಂತ್ರ ವಾದಮ್ಮ್ ಎಂದು ಕರೆಯುತ್ತಿದ್ದ ಈ ಸ್ಥಳಕ್ಕೆ ಬಂದು ಪಿಂಡ ನೀಡುತ್ತಿದ್ದ ಹಾಗೆ ನಾಲ್ಕು ಪಿಂಡಗಳು ಶಿವ ಲಿಂಗವಾಗಿ ಬದಲಾದವು.
ಇಂದಿಗೂ ಕೂಡ ನಾವು ನಾಲ್ಕು ಶಿವ ಲಿಂಗಗಳನ್ನು ಕಾಣಬಹುದು. ಪಿತೃಗಳಿಗೆ ಇಲ್ಲಿ ನೆಲೆಸಿರುವ ಮುಕ್ತೇಶ್ವರ ಮುಕ್ತಿಯನ್ನು ದಯಪಾಲಿಸುವ ಕಾರಣ ಈ ಆಲಯದಲ್ಲಿ ಇರುವ ಈಶ್ವರನನ್ನು ಮೂಕ್ತೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ತಿಲ ಎಂದರೆ ಎಳ್ಳು ತರ್ಪಣ ಎಂದರೆ ಬಿಡುವುದು ಪುರ ಎಂದರೆ ಸ್ಥಳ ಎಂಬ ಅರ್ಥ ಇದ್ದು, ಶ್ರೀರಾಮ ಚಂದ್ರನು ಎಳ್ಳಿನಿಂದ ಮಾಡಿದ ಪಿಂಡವನ್ನು ತರ್ಪಣ ಈ ಸ್ಥಳದಲ್ಲಿ ಬಿಟ್ಟಿದ್ದರಿಂದ. ಮಂತ್ರ ವಾದಮ್ ಎಂದು ಕರೆಯುತ್ತಿದ್ದ ಈ ಸ್ಥಳಕ್ಕೆ ತಿಲ ತರ್ಪಣ ಪುರಿ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ಹುಣ್ಣಿಮೆ ದಿನ ಇಲ್ಲಿಗೆ ಬಂದು ಪಿತೃಗಳಿಗೆ ತರ್ಪಣ ನೀಡುವುದರಿಂದ ಎಷ್ಟೇ ಕಠಿಣವಾದ ಪಿತೃ ದೋಷ ಇದ್ರೂ ಅವು ದೂರಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಇಲ್ಲಿರುವ ಮುಕ್ತೇಷ್ವರ ನ ದರ್ಶನದಿಂದ ಸಕಲ ಪಾಪಗಳೂ ಕಳೆಯುತ್ತವೆ ಎಂಬ ಪ್ರತೀತಿ ಇದೆ. ಈ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ, ಸಂಕಷ್ಟಿ, ಗಣೇಶ ಚತುರ್ಥಿಯನ್ನು, ಸೋಮವಾರ ಹಾಗೂ ಬುಧವಾರ ದ ದಿನಗಳಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುಕ್ತೆಶ್ವರ ಸ್ವಾಮಿಗೆ ನಿತ್ಯ ಪೂಜೆ ಅಭಿಷೇಕ ಮಾಡಲಾಗುತ್ತದೆ. ಈ ಪುಣ್ಯ ಕ್ಷೇತ್ರದಲ್ಲಿ ಇರುವ ಮನುಷ್ಯ ರೂಪ ಗಣೇಶನನ್ನು ಬೆಳಿಗ್ಗೆ 6 ರಿಂದ ಮಧ್ಯಾನ 1.30 ರ ವರೆಗೆ ಸಂಜೆ 4.30 ರಿಂದ ರಾತ್ರಿ 8.30 ರ ವರೆಗೆ ದರ್ಶನ ಮಾಡಬಹುದಾಗಿದೆ. ತಮಿಳುನಾಡಿನ ಕುತನೂರು ಇಂದ ಸುಮಾರು 2.3 ಕಿಮೀ ದೂರದಲ್ಲಿರುವ ಈ ಸ್ಥಳ ತಲುಪಲು ಉತ್ತಮವಾದ ರಸ್ತೆ ಸಂಪರ್ಕ ಇದೆ. ಸಾಧ್ಯವಾದರೆ ಜೀವಮಾನದಲ್ಲಿ ನೀವು ಒಮ್ಮೆ ಈ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಬನ್ನಿ. ಶುಭದಿನ.