ಕಣ್ಣಿನ ಸುತ್ತದ ಡಾರ್ಕ್ ಸರ್ಕಲ್ ನಿವರಣೆಗೆ ಇಲ್ಲಿವೆ ಸರಳ ಪರಿಹಾರ.

ಕಣ್ಣಿನ ಸುತ್ತದ ಡಾರ್ಕ್ ಸರ್ಕಲ್ ನಿವರಣೆಗೆ ಇಲ್ಲಿವೆ ಸರಳ ಪರಿಹಾರ.

ನಮಸ್ತೆ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ನಾವು ಬಳಸುತ್ತಿರುವ ವಾಹನಗಳ ಪ್ರಭಾವದಿಂದ ಪ್ರಧೋಷಣೆ ಹೆಚ್ಚಾಗಿ ನಮ್ಮ ಓಝೋನ್ ಪದರದ ರಂಧ್ರಗಳು ಹೆಚ್ಚಾಗಿ ಸೂರ್ಯನ ಅತೀ ತೀಕ್ಷ್ಣ ಕಿರಣಗಳು ನಮ್ಮ ದೇಹದ ಮೇಲೆ ಮುಖದ ಮೇಲೆ ಬಿದ್ದು ನಮಗಿರುವ ತ್ವಚೆಯ ತೊಂದರೆಗಳ ಜೊತೆಗೆ ಸೂರ್ಯನ ಯುವಿ ಕಿರಣಗಳು ಸಾಕಷ್ಟು ಚರ್ಮದ ಕಪ್ಪಾಗುವುಕೆಗೆ ಕಾರಣವಾಗುತ್ತಿದೆ. ಅದರಲ್ಲಿ ನಮಗಿರುವ ವಿಟಮಿನ್ಸ್, ಕೆಲವೊಂದು ಆರೋಗ್ಯದ ಸಮಸ್ಯೆಗಳಿಂದ ನಮ್ಮ ಕಣ್ಣುಗಳ ಸುತ್ತ ಕಪ್ಪು ವರ್ತುಲ ಕಾಣಲು ಶುರು ಆಗಿದೆ. ಅದನ್ನು ಇತ್ತೀಚೆಗೆ ಪಾಂಡಾ ಐಯ್ಸ್ ಎಂದು ಕೂಡ ಕರೆಯುತ್ತಾರೆ. ಇನ್ನೂ ವಯಸ್ಸಿನಲ್ಲಿ ಇರುವ ಹೆಣ್ಣು ಮಕ್ಕಳಿಗೂ ಈ ತೊಂದರೆ ಬರುತ್ತಿದೆ. ಹೀಗಾಗಿ ಆ ಸಮಸ್ಯೆಗೆ ಒಂದು ಸರಳ ಮನೆ ಮದ್ದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ.

 

ಇದನ್ನು ಎಣ್ಣೆ ಹಾಗೂ ಒಣ ಚರ್ಮ ಇದ್ದವರು ಎರಡು ತರಹದ ಚರ್ಮ ಹೊಂದಿರುವವರು ಬಳಸಬಹುದು. ಬನ್ನಿ ಮೊದಲನೆಯದಾಗಿ ಒಣ ಹಾಗೂ ಎಣ್ಣೆ ಚರ್ಮ ಇದ್ದವರು ಕಣ್ಣಿನ ಸುತ್ತ ವರ್ತುಲಕ್ಕೆ ಯಾವ ಮನೆ ಮದ್ದನ್ನು ಮಾಡಿಕೊಳ್ಳಬಹುದು ಎಂದು ನೋಡೋಣ. ಇದಕ್ಕೆ ನಮಗೆ ಬೇಕಾಗಿರುವುದು ಆಲೂಗಡ್ಡೆ, ಅದನ್ನು ಹೊರಗಿನ ಚರ್ಮ ತೆಗೆದು ಸಣ್ಣದಾಗಿ ತುರಿದುಕೊಳ್ಳಿ, ಆಮೇಲೆ ಅರಿಶಿನ ಜೊತೆಗೆ ಮೊಸರು. ಮೊದಲು ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಬೇರೆ ಮಾಡಿಡಿ. ಆಲೂಗೆಡ್ಡೆ ಯಲ್ಲಿ ವಿಟಮಿನ್ ಸಿ, ವಿಟಮಿನ್ ಏ ಹೆಚ್ಚಾಗಿ ಇದೆ ಹಾಗಾಗಿ ಕಣ್ಣಿನ ಸುತ್ತ ಇರುವ ಚರ್ಮಕ್ಕೆ ಒಳ್ಳೆಯ ಪೋಷಕಾಂಶ ಕೊಟ್ಟು ಕಪ್ಪುಗಿರುವ ಚರ್ಮವನ್ನು ಬೆಳ್ಳಗೆ ಮಾಡಲು ಸಹಾಯ ಮಾಡುತ್ತದೆ.

 

ಕಣ್ಣು ಸುತ್ತ ಊದಿದ ರೀತಿ ಐ ಬ್ಯಾಗ್ ಆಗಿದ್ರೂ ಇದು ಕಡಿಮೆ ಮಾಡುತ್ತದೆ. ನಂತರ ಆ ರಸಕ್ಕೆ ಒಂದು ಚಮಚ ಮೊಸರನ್ನು ಹಾಕಿಕೊಳ್ಳಿ. ಮೊಸರನ್ನು ಬಳಸುವುದರಿಂದ ಕಣ್ಣು ಸುತ್ತ ಇರುವ ಚರ್ಮಕ್ಕೆ ಒಳ್ಳೆಯ ತೇವಾಂಶ ಕೊಟ್ಟು ಏನಾದರೂ ಡೆಡ್ ಸ್ಕಿನ್ ಇದ್ರೆ ಅದನ್ನು ತೆಗೆದು ಚರ್ಮವನ್ನು ಬಿಳಿಯಾಗಿ ಕಾಣುವಂತೆ ಮಾಡುತ್ತದೆ. ಈಗ ಇದಕ್ಕೆ ಒಂದು ಕಾಲು ಚಮಚ ಅರಿಶಿಣ ಹಾಕಿಕೊಳ್ಳಿ. ಅರಿಶಿನ ಚರ್ಮದಲ್ಲಿನ ಕಪ್ಪನ್ನು ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇವೆ. ಹಾಗಾಗಿ ಕಣ್ಣು ಸುತ್ತ ಇರುವ ಚರ್ಮ ಆರೋಗ್ಯವಾಗಿ ಇರಲು ಸಹಾಯ ಮಾಡುತ್ತದೆ. ಈ ಮೂರು ಸೇರಿಸಿದ ನಂತರ ನಮ್ಮ ಪ್ಯಾಕ್ ರೆಡಿ ಆಯ್ತು. ಈ ಪ್ಯಾಕ್ ನ ಬ್ರಷ್ ಸಹಾಯದಿಂದ ನಿಮ್ಮ ಕಣ್ಣುಗಳ ಸುತ್ತ ಲೇಪನ ಮಾಡಿ. ನೋಡಿದ್ರಲ್ವ ಸ್ನೇಹಿತರೆ ಹೇಗೆ ನಮ್ಮ ಅಡುಗೆ ಮನೆಯ ಸಾಧನಗಳನ್ನು ಬಳಸಿ ನಮ್ಮ ಮುಖದಲ್ಲಿನ ಕಪ್ಪು ವರ್ತುಲಗಳನ್ನೂ ಮಾಯ ಮಾಡಿಸಬಹುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

 

 

 

 

ಉಪಯುಕ್ತ ಮಾಹಿತಿಗಳು