ನಮಸ್ತೆ ಪ್ರಿಯ ಓದುಗರೇ, ಆಂಜನೇಯ, ಮಾರುತಿ, ಪವನ ಸುತ ಹೀಗೆ ನಾನಾ ಹೆಸರುಗಳಿಂದ ಕರೆಯೂ ಈ ಸ್ವಾಮಿಯು ಕೇವಲ ಶಕ್ತಿವಂತ, ಯುಕ್ತಿವಂತ ಮಾತ್ರವಲ್ಲ ಜೊತೆಗೆ ನಂಬಿದವರ ಕೈ ಬಿಡದೇ ಅವರನ್ನು ಸಲಹುವ ಕರುಣಾ ಮೂರ್ತಿ ಇವನು. ಹನುಮಂತ ನಿನ್ನನ್ನು ಬಿಟ್ಟರೆ ನಂಗ್ಯಾರು ಇಲ್ಲ ಎಂದು ಭಕ್ತಿಯಿಂದ ಬೇಡಿದರೆ ಸಾಕು ಆತ ಯಾವುದಾದರೂ ಒಂದು ರೂಪದಲ್ಲಿ ನಮ್ಮ ಕಣ್ಣುದೇರು ಬಂದು ನಮಗೆ ಸಹಾಯ ಮಾಡುತ್ತಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧ್ಯ ದೈವ ಆದ ಪಂಚಮುಖಿ ಆಂಜನೇಯ ನನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಗುರು ರಾಘವೇಂದ್ರರು ಅವತಾರ ತಾಳಿದ್ದೆ ದಾನವರ ಕಣ್ಣೀರನ್ನು ಒರೆಸಿ ಅವರ ಬದುಕಿನಲ್ಲಿ ನೆಮ್ಮದಿ ತರುವುದಕ್ಕೆ. ಈ ಗುರುವಿನ ಮಹಿಮೆ ಅಪಾರವಾದದ್ದು. ರಾಘವೇಂದ್ರ ಸ್ವಾಮಿಗಳು ಪಂಚಮುಖಿ ಆಂಜನೇಯ ನ ಕ್ಷೇತ್ರದಲ್ಲಿ ಬರೋಬ್ಬರಿ 12 ವರ್ಷಗಳ ತಪಸ್ಸನ್ನು ಆಚರಿಸಿದರು ಎಂದು ಹೇಳಲಾಗುತ್ತದೆ. ಇವರ ತಪಸ್ಸಿಗೆ ಮೆಚ್ಚಿ ಆಂಜನೇಯನು ಬಂಡೆ ಗಲ್ಲಿನಿಂದಾ ಒಡಗೂಡಿ ದರ್ಶನವನ್ನು ನೀಡಿ ರಾಘವೇಂದ್ರ ರನ್ನು ಅನುಗ್ರಹಿಸಿದರು ಎಂದು ಇಂದಿಗೂ ಈ ಕ್ಷೇತ್ರದಲ್ಲಿ ಬಂಡೆ ಗಲ್ಲಿನ ಮೇಲೆ ಪಾದದ ಗುರುತುಗಳನ್ನು, ಕಲ್ಲಿನ ವಿಮಾನವನ್ನು, ಸ್ವಾಮಿಯು ವಿರಮಿಸುತ್ತಿದ್ದ ಹಾಸಿಗೆ ಹಾಗೂ ದಿಂಬುಗಳನ್ನು ನೋಡಬಹುದು.
ಐರಾವಣನನ್ನ ಸಂಹಾರ ಮಾಡುವುದಕ್ಕೆ ಆಂಜನೇಯ ಸ್ವಾಮಿಯು ಪಂಚಮುಖಿ ಆಂಜನೇಯ ನ ಅವತಾರ ಇತ್ತಿದ್ದು, ಈ ದೇವನು ವರಾಹ, ಗರುಡ ನರಸಿಂಹ, ಹಯಗ್ರೀವ, ಮತ್ತು ಭೀಮರಾಯನ ಮುಖಗಳನ್ನು ಹೊಂದಿದ್ದಾನೆ. ಇಲ್ಲಿಗೆ ಬಂದು ತಾಯತ ಕಟ್ಟಿಸಿಕೊಂಡು ಹೋದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದ್ದು, ಯಾವುದೇ ಅನಾರೋಗ್ಯ ಸಮಸ್ಯೆ ಇಂದ ಬಳಲುವವರು ಇಲ್ಲಿನ ಮುಖ್ಯ ಪ್ರಾಣ ಆಂಜನೇಯ ಸ್ವಾಮಿಗೆ ಶರಣಾಗಿ ಪೂಜೆ ಮಾಡಿಸಿದರೆ ಅವರ ಎಲ್ಲ ರೋಗಗಳನ್ನು ಈ ಶಾಂತ ಮೂರ್ತಿ ದೂರ ಮಾಡುತ್ತಾನೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ ಆಗಿದೆ. ಇನ್ನೂ ಬಂಡೆ ಕಲ್ಲಿನಲ್ಲಿ ನಿರ್ಮಿತವಾದ ಈ ದೇವಾಲಯದಲ್ಲಿ ಇರುವ ಆಂಜನೇಯ ಸ್ವಾಮಿಗೆ ಪ್ರತಿ ವರ್ಷ ಪಾದರಕ್ಷೆಗಳನ್ನು ಮಾಡಿಸಲಾಗುತ್ತದೆ. ಈ ಪಾದರಕ್ಷೆಗಳನ್ನು ಹಾಕಿಕೊಂಡು ಸ್ವಾಮಿಯು ನಿತ್ಯ ಊರ ತುಂಬ ಸಂಚರಿಸುತ್ತಾನೆ ಎಂಬ ಪ್ರತೀತಿ ಇದೆ. ಅಲ್ಲದೆ ದೇಗುಲದ ಪೂರ್ವ ದಿಕ್ಕಿನ ಮಂಟಪದಲ್ಲಿ ದೇವರ ವಿಶೇಷ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ 5 ವರ್ಷಗಳಿಗೆ ಒಮ್ಮೆ ಈ ಪಾದುಕೆಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ. ಆ ಸಮಯದಲ್ಲಿ ಇಲ್ಲಿಗೆ ಬಂದು ದೀಪ ಹಚ್ಚುವುದರಿಂದ ಮನೆಯಲ್ಲಿ ಧನ ಧಾನ್ಯ ಸಂಪತ್ತಿನ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಆಂಜನೇಯ ನೆಲೆಸಿರುವ ಈ ದೇಗುಲದಲ್ಲಿ ಪ್ರತಿ ವರ್ಷ ಹನುಮಾನ್ ಜಯಂತಿ, ರಾಮ ನವಮಿ, ಶ್ರಾವಣ ಮಾಸದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಇನ್ನೂ ಪ್ರತಿ ಶನಿವಾರ ದೇವರಿಗೆ ಸ್ವರ್ಣದ ಕವಚ ಧರಿಸಿ ಸೇವೆಯನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಸ್ವಾಮಿಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ಜೊತೆ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಇದ್ದು, ರಾಯರ ಬೃಂದಾವನಕ್ಕೆ ನಿತ್ಯ ಪೂಜೆ ಅಭಿಷೇಕ ಮಾಡಲಾಗುತ್ತದೆ. ಮಂಗಳವಾರ ಶನಿವಾರ ಅಮಾವಾಸ್ಯೆ ಹುಣ್ಣಿಮೆ ಯಾಂದು ಇಲ್ಲಿಗೆ ಭೇಟಿ ನೀಡಿದರೆ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತುಳಸಿ ಹಾರವನ್ನು ಸ್ವಾಮಿಗೆ ಅರ್ಪಿಸುವ ವಾಡಿಕೆ ಜಾರಿಯಲ್ಲಿದೆ. ಗುರು ರಾಘವೇಂದ್ರರಿಗೆ ಅನುಗ್ರಹಿಸಿ ಬದುಕಿಗೆ ಅರ್ಥವನ್ನು ತೋರಿದ ಈ ಪಂಚಮುಖಿ ಆಂಜನೇಯ ನನ್ನು ನಿತ್ಯ ಬೆಳಿಗ್ಗೆ 6 ರಿಂದ ಮಧ್ಯಾನ 1 ಗಂಟೆವರೆಗೂ ಸಂಜೆ 3 ರಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಪಂಚಮುಖಿ ಆಂಜನೇಯ ನೆಲೆಸಿರುವ ಈ ಕ್ಷೇತ್ರವು ರಾಯಚೂರು ಜಿಲ್ಲೆಯ ಗಾನಘನ್ ಊರಿನಲ್ಲಿ ಇದೆ. ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸಾಧ್ಯವಾದರೆ ನೀವು ಒಮ್ಮೆ ಈ ಪುಣ್ಯ ಕ್ಷೇತ್ರವನ್ನು ದರ್ಶನ ಮಾಡಿ ಪಂಚಮುಖಿ ಆಂಜನೇಯ ನ ಆಶೀರ್ವಾದ ಪಡೆಯಿರಿ. ಶುಭದಿನ.