ಬ್ರೈನ್ ಟ್ಯೂಮರ್ ಗೆ ಕಾರಣಗಳು ಮತ್ತು ಲಕ್ಷಣಗಳು.

ಬ್ರೈನ್ ಟ್ಯೂಮರ್ ಗೆ ಕಾರಣಗಳು ಮತ್ತು ಲಕ್ಷಣಗಳು.

ನಮಸ್ತೆ ಪ್ರಿಯ ಓದುಗರೇ, ಮೊದಲೆಲ್ಲ ಈ ಬ್ರೈನ್ ಟ್ಯೂಮರ್ ಅಂದ್ರೆ ತುಂಬಾ ಅಪಾಯಕಾರಿ ಹಾಗೂ ಎಲ್ಲೋ ಕೆಲವೊಬ್ಬರಿಗೆ ಬಂದಿರುವುದನ್ನು ಕೇಳುತ್ತಿದ್ದೆವು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಾವು ನೀವೆಲ್ಲ ನಮ್ಮ ಸುತ್ತ ಮುತ್ತಲಿನ ಅನೇಕ ಜನರಲ್ಲಿ ಈ ಸಮಸ್ಯೆ ಬಂದಿರುವುದನ್ನು ಕಾಣಬಹುದು. ತೀರ ಸಾಮಾನ್ಯವಾಗಿ ಬಿಟ್ಟಿದೆ ಈ ಬ್ರೈನ್ ಟ್ಯೂಮರ್. ಸೋ ಇಂದಿನ ಲೇಖನದಲ್ಲಿ ಈ ಬ್ರೈನ್ ಟ್ಯೂಮರ್ ಅಂದ್ರೆ ಏನು? ಈ ಬ್ರೈನ್ ಟ್ಯೂಮರ್ ಉಂಟಾಗಲು ಕಾರಣವೇನು? ಹಾಗೆ ಬ್ರೈನ್ ಟ್ಯೂಮರ್ ಬಂದಿದ್ದೆ ಆದ್ರೆ ಯಾವ ತರಹದ ಲಕ್ಷಣಗಳು ಕಾಣಿಸುತ್ತವೆ ಎಂದು ತಿಳಿದುಕೊಳ್ಳೋಣ. ಈಗ ಸಾಮಾನ್ಯವಾಗಿ ಜನರಿಗೆ ತಲೆನೋವು ಬಂದ್ರೆ ಅಥವಾ ಫೋನ್ ಅಲ್ಲಿ ಜಾಸ್ತಿ ಮಾತಾಡಿದ್ರೆ ಅದರಿಂದ ತಲೆನೋವು ಆದ್ರೂ ಸಹಿತ ಓಹ್ ನನ್ನ ತಲೆಯಲ್ಲಿ ಗಡ್ಡೆ ಆಗಿದೆ ಟ್ಯೂಮರ್ ಬೆಳೆದಿದೆ ಎಂದು ಅವರಿಗೆ ಅವರು ಅಂದುಕೊಂಡು ಭಯ ಬೀಳ್ತಾ ಇರ್ತಾರೆ. ತಲೆನೋವು ಈಗ ಕಾಮನ್ ಆಗಿದೆ ಹಾಗಂತ ಎಲ್ಲ ತರಹದ ತಲೆನೋವು ಟ್ಯೂಮರ್ ಆಗಿರುವುದಿಲ್ಲ.

 

ಆದ್ರೆ ಯಾರಿಗಾದ್ರೂ ತುಂಬಾ ತಲೆ ನೋವು ಸಹಿಸಲಾರದ ನೋವು ತಲೆಯಲ್ಲಿ ಕಾಣಿಸಿಕೊಂಡರೆ, ಅಥವಾ ಯಾವುದೋ ಕಾರಣಕ್ಕೆ ಬಂದ ತಲೆನೋವು ಎರಡು ಮೂರು ವಾರಗಳು ಆದರೂ ಹೋಗದೇ ಇದ್ರೆ, ಆ ತಲೆನೋವಿನಿಂದ ವಾಂತಿ ಆಗುತ್ತಿದ್ದರೆ, ಕಣ್ಣು ಮಂಜಾಗುವುದು, ನಡೆಯುವಾಗ ಸಮತೋಲನ ಕಾಪಾಡಿಕೊಳ್ಳಲು ಆಗದೆ ಹೋದರೆ, ಕೈ ಕಾಲುಗಳಲ್ಲಿ ವೀಕ್ ನೆಸ್ ಅಂದ್ರೆ ಕೈ ಕಾಲುಗಳು ಸೋಲುವುದು, ಈ ತರಹ ಎಲ್ಲಾ ತೊಂದರೆಗಳು ಕಾಣಿಸಿಕೊಂಡರೆ ಅದು ತಲೆಯಲ್ಲಿ ಏನೋ ಟ್ಯೂಮರ್ ಗಡ್ಡೆ ಆಗಿರಬಹುದು ಎಂದು ಹೇಳಲಾಗುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಒಮ್ಮೆಲೇ ಕಾಣಿಸಿಕೊಂಡರೆ ಅದು ಟ್ಯೂಮರ್ ಇರಬಹುದು ಎಂದು ಊಹಿಸಬಹುದು. ಹಾಗಂತ ಈ ಎಲ್ಲಾ ಲಕ್ಷಣಗಳು ಕಂಡರೆ ಅದು ಬ್ರೈನ್ ಟ್ಯೂಮರ್ ಆಗಿರುವುದಿಲ್ಲ. ಬೇರೆ ದೇಹದ ತೊಂದರೆ ಇಂದಲೂ ಇವೆಲ್ಲಾ ಲಕ್ಷಣಗಳು ಬ್ರೈನ್ ಗೆ ಬಂದಿರಬಹುದು. ಆದ್ರೆ ಬ್ರೈನ್ ಅಲ್ಲಿಯೇ ತೊಂದರೆ ಶುರು ಆದ್ರೆ ಅದನ್ನು ಟ್ಯೂಮರ್ ಅಂತ ಹೇಳಬಹುದು. 10-15% ಬೇರೆ ದೇಹದ ಕಾಯಿಲೆಗಳಿಂದ ಈ ಎಲ್ಲ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ, ಉದಾಹರಣೆಗೆ ಲಂಗ್ ಕ್ಯಾನ್ಸರ್ ಆದ್ರೆ ಸಹ ಆ ರೋಗದಿಂದ 20% ಬ್ರೈನ್ ಗೆ ಹೋಗಿರುತ್ತದೆ ಆಗ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತವೆ ಆದ್ರೆ ಅದು ಬ್ರೈನ್ ಅಲ್ಲಿ ಆದ ತೊಂದರೆ ಅಲ್ಲ. ಅದನ್ನು ಪರೀಕ್ಷಿಸಿದಾಗ ಯಾವ ಸಮಸ್ಯೆ ಇಂದ ಬ್ರೈನ್ ಗೆ ಬಂದಿದೆ ಎಂದು ಹೇಳಬಹುದು. ಯಾರಿಗಾದರೂ ಈ ಮೇಲಿನ ಗುಣ ಲಕ್ಷಣಗಳು ಕಾಣಿಸಿದರೆ ತಕ್ಷಣ ಸೂಕ್ತ ವೈದ್ಯರನ್ನು ಸಂಪರ್ಕಿಸಿ.

 

ಆಗ ವೈದ್ಯರು ಸಿಟಿ ಸ್ಕ್ಯಾನ್ ಅಥವಾ ಏಮ್ ಆರ್ ಐ ಸ್ಕ್ಯಾನ್ ಮಾಡಿದಾಗ ಟ್ಯೂಮರ್ ಕಾಣಿಸಿಕೊಂಡರೆ ಅವರೇ ತಿಳಿಸುತ್ತಾರೆ. ಬ್ರೈನ್ ಅಲ್ಲಿ ಗಡ್ಡೆ ಕಾಣಿಸಿಕೊಂಡ ತಕ್ಷಣ ಅದು ಕ್ಯಾನ್ಸರ್ ಗಡ್ಡೆಯೇ ಆಗಿರುವುದಿಲ್ಲ. ಅದು ಕೆಲವೊಮ್ಮೆ ಟಿಬಿ ಅಥವಾ ಬೇರೆ ಬೇರೆ ಇನ್ಫೆಕ್ಷನ್ ಇಂದ ಕೂಡ ಗಡ್ಡೆ ಬೇಳೆದಿರಬಹುದು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗಿ ಕ್ಯಾನ್ಸರ್ ಮೊದಲನೇ ಸ್ಟೇಜ್ ಅಲ್ಲಿದ್ರೇ ಕೇವಲ ಮಾತ್ರೆಗಳ ಮೂಲಕ ಗುಣ ಪಡಿಸಬಹುದು. ಇನ್ನೂ ಕೆಲವೊಮ್ಮೆ ಸರ್ಜರಿ ಮಾಡಿ ನಂತರ ದ ಟ್ರೀಟ್ಮೆಂಟ್ ಕೊಡಲಾಗುತ್ತದೆ. ರೇಡಿಯೇಶನ್, ಕಿಮೋ ಥೆರಪಿ ಕೊಡುವುದರ ಮೂಲಕ ಚಿಕಿತ್ಸೆ ಕೊಡಬಹುದು. ಒಂದುವೇಳೆ ಬ್ರೈನ್ ನ ತುಂಬಾ ಮುಖ್ಯ ಭಾಗದಲ್ಲಿ ಟ್ಯೂಮರ್ ಇದ್ರೆ ಅದನ್ನು ಆಪರೇಷನ್ ಮಾಡಲು ಆಗುವುದಿಲ್ಲ. ಒಂದುವೇಳೆ ಹಾಗೇನಾದರೂ ಮಾಡಿದರೆ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಮಾತ್ರೆ, ಇಂಜೆಕ್ಷನ್, ಕಿಮೊ ಥೆರಪಿ ಮೂಲಕ ಚಿಕಿತ್ಸೆ ಕೊಡಬಹುದು. ಈಗ ಹಳೇ ಕಾಲದಲ್ಲಿ ಇದ್ದ ಹಾಗೆ ಇಲ್ಲ. ಸಾಕಷ್ಟು ಹೊಸ ಆವಿಷ್ಕಾರ ಬಂದಿರುವುದರಿಂದ ಈಗ ಟ್ಯೂಮರ್ ಆಗಿದ್ರೂ ಹೆದರಬೇಕಿಲ್ಲ, ಆ ರೋಗ ಗೆದ್ದು ಬರಬಹುದು. ಸೋ ಯಾರಿಗಾದರೂ ಈ ತರಹದ ಲಕ್ಷಣಗಳು ಕಂಡರೆ, ಹೆದರದೇ ಅತೀ ಬೇಗ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ಪಡೆಯಬಹುದು. ಕಾಲ ಬದಲಾಗಿದೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆತ್ಮವಿಶ್ವಾಸ ಇರಬೇಕು ಅಷ್ಟೇ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

 

 

 

 

 

ಉಪಯುಕ್ತ ಮಾಹಿತಿಗಳು