ಒಂದು ಲೋಟ ಜೀರಿಗೆ ನೀರು ಕುಡಿದರೆ ಆಗುವ ಲಾಭಗಳ ಪಟ್ಟಿ ನೋಡಿದ್ರೆ ನೀವೇ ಜೀರಿಗೆ ನೀರು ಕುಡಿಯುವಿರಿ

ಒಂದು ಲೋಟ ಜೀರಿಗೆ ನೀರು ಕುಡಿದರೆ ಆಗುವ ಲಾಭಗಳ ಪಟ್ಟಿ ನೋಡಿದ್ರೆ ನೀವೇ ಜೀರಿಗೆ ನೀರು ಕುಡಿಯುವಿರಿ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ವಿಷಯದ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀರಿಗೆ ಅಡುಗೆಯಲ್ಲಿ ಮಾತ್ರ ಬಳಕೆ ಮಾಡುವುದಲ್ಲದೆ ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಒಂದು ಲೋಟ ಜೀರಿಗೆ ನೀರು ಕುಡಿದರೆ ಎಷ್ಟೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಆಯುರ್ವೇದದಲ್ಲಿ ಜಲಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ನಾವೇನಾದರೂ ಖಾಲಿ ಹೊಟ್ಟೆಯಲ್ಲಿ ಏನಾದ್ರೂ ಸೇವನೆ ಮಾಡಿದರೆ ಖಂಡಿತವಾಗಿ ಅದರಿಂದ ನಮಗೆ ಲಾಭಗಳು ಉಂಟಾಗುತ್ತವೆ ಅನ್ನುವುದು ಸತ್ಯವಾದ ವಿಷಯ. ಅಡುಗೆಗೆ ಮಾತ್ರವಲ್ಲದೆ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಕೂಡ ಜೀರಿಗೆ ರಾಮಬಾಣ. ಜೀರಿಗೆ ತಿನ್ನುವ ಬದಲು ಅದರ ನೀರಿನ ಸೇವನೆ ಮಾಡುವುದರಿಂದ ಇನ್ನೂ ಅನೇಕ ಲಾಭಗಳನ್ನು ಗಳಿಸಬಹುದು. ಅದಕ್ಕಾಗಿ ರಾತ್ರಿ ಒಂದು ಲೋಟ ನೀರಿನಲ್ಲಿ ಜೀರಿಗೆ ಹಾಕಿ ಕುಡಿದರೆ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಮೊದಲನೆಯ ಲಾಭ ಏನೆಂದರೆ ಇದು ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

 

ನಾವು ಸೇವನೆ ಮಾಡಿದ ಆಹಾರವೂ ಸರಿಯಾಗಿ ಜೀರ್ಣವಾಗದೇ ಇದ್ದಾಗ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಅದಕ್ಕಾಗಿ ನಮ್ಮ ಜೀರ್ಣ ಕ್ರಿಯೆ ಸರಿಯಾಗಿ ಕಾರ್ಯ ವಹಿಸುವಂತೆ ನೋಡಿಕೊಳ್ಳಬೇಕು. ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಗೆ ಸಂಭಂದಿಸಿದ ಎಲ್ಲ ಸಮಸ್ಯೆಗಳಿಗೆ ಇದು ಪರಿಣಾಮವಾಗಿ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಏಕೆಂದ್ರೆ ಇದರಲ್ಲಿ ಇರುವ ಕ್ಯಾಲ್ಷಿಯಂ ಪೊಟ್ಯಾಶಿಯಂ ಸೋಡಿಯಂ ಮ್ಯಾಗ್ನಿಷಿಯಂ ನಮ್ಮ ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ. ಮತ್ತು ಜೀರಿಗೆಯಲ್ಲಿ ಇರುವಂತಹ ಉತ್ತಮವಾದ ಪೋಷಕಾಂಶಗಳು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ತುಂಬಾನೇ ಸಹಾಯ ಮಾಡುತ್ತವೆ. ಹೊಟ್ಟೆಗೆ ಸಂಭಂದಿಸಿದ ವಾಕರಿಕೆ ಹೊಟ್ಟೆ ನೋವು ಉಬ್ಬರ ಉರಿ ಅಸಿಡಿಟಿ ಎಲ್ಲವನ್ನು ಕಡಿಮೆ ಮಾಡುವ ಶಕ್ತಿ ಇದೆ. ಇನ್ನೂ ನೀವೇನಾದರೂ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ವ್ಯಾಯಾಮದ ಜೊತೆಗೆ ಜೀರಿಗೆ ನೀರು ಕುಡಿಯಿರಿ.

 

ಜೀರಿಗೆ ನೀರು ಮಹಿಳೆಯರ ಮುಟ್ಟಿನ ಸಮಯದಲ್ಲಿ ಆಗುವ ನೋವಿಗೆ ಹಾಗೂ ಇದಕ್ಕೆ ಸಂಭಂದ ಪಟ್ಟ ಸಮಸ್ಯೆಗಳು ನೀವು ಎದುರಿಸುತ್ತಿದ್ದಾರೆ ಇದೊಂದು ದಿವ್ಯ ಔಷಧವಾಗಿದೆ ಅಂತ ಹೇಳಬಹುದು. ಎದೆ ಹಾಲುಣಿಸುವ ತಾಯಂದಿರಿಗೆ ಜೀರಿಗೆ ನೀರು ಬಹಳ ಉತ್ತಮ. ತಾಯಿಯ ಎದೆ ಹಾಲನ್ನು ಹೆಚ್ಚಿಸುತ್ತದೆ. ಹಾಗೂ ಮಗುವಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ಇಂದು ಲೋಟ ನೀರಿಗೆ ಜೀರಿಗೆ ಹಾಕಿ ಕುದಿಸಿ ಕುಡಿದರೆ ನಮ್ಮ ದೇಹದಲ್ಲಿ ರಕ್ತ ಶುದ್ಧವಾಗುತ್ತದೆ. ಹಾಗೂ ಆರೋಗ್ಯವೂ ಬಹಳ ಚೆನ್ನಾಗಿ ಇರುತ್ತದೆ. ಅಷ್ಟೇ ಅಲ್ಲದೇ ಕೂದಲಿನ ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ಇರುವ ಪ್ರೊಟೀನ್ ಮತ್ತು ಕಾರ್ಭೋಹೈಡ್ರೇಟ್ ಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಜೊತೆಗೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಇದರಲ್ಲಿ ಇರುವ ಪೊಟ್ಯಾಶಿಯಂ ಮತ್ತು ಕಬ್ಬಿನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ನಮ್ಮ ದೇಹದಲ್ಲಿ ಬೇಡವಾದ ಬ್ಯಾಕ್ಟೀರಿಯಾ ಅನ್ನು ನಾಶ ಮಾಡುತ್ತದೆ.ವಿಟಮಿನ್ ಎ ಮತ್ತು ಸಿ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಜೀರಿಗೆ ನೀರು ಕನಿಷ್ಠ ಪಕ್ಷ ವಾರದಲ್ಲಿ ಮೂರು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಶುಭದಿನ.

 

ಆರೋಗ್ಯ