ನಮಸ್ತೆ ಪ್ರಿಯ ಓದುಗರೇ, ವಿಘ್ನ ನಿವಾರಕನಾದ ಗಣೇಶನನ್ನು ಮೋದಕ ಪ್ರಿಯ ಎಂದು ಕರೆಯಲಾಗುತ್ತದೆ. ಮಾಡುವ ಕೆಲಸಗಳಲ್ಲಿ ಯಾವುದೇ ಅಡೆ ತಡೆ ಬರದೇ ಇರಲಿ ಎಂಬ ಕಾರಣಕ್ಕೆ ಪೂಜಿಸುವ ಈ ದೇವನಲ್ಲಿ ಬಂಡೆ ಗಲ್ಲಿನಂತೆ ಇರುವ ಕೆಲಸಗಳು ಗರಿಕೆ ಹುಲ್ಲು ಎತ್ತಿದಂತೆ ಸುಲಭ ಆಗುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಧುರಿತವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುವ ಬಲಮುರಿ ವಿನಾಯಕನ ಸಾನಿಧ್ಯ ದರ್ಶನ ಮಾಡಿ ಪುನೀತ ರಾಗೋಣ. ಸ್ವಚ್ಛ ಹಾಗೂ ಪ್ರಶಾಂತವಾಗಿ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಹರಿಯುತ್ತಿರುವ ನೇತ್ರಾವತಿ ನದಿಯ ತೀರದಲ್ಲಿ ಇರುವ ನಂದಾವರದಲ್ಲಿ ಸುಮಾರು 10 ನೇ ಶಂತನಾದಕ್ಕಿಂತ ಪೂರ್ವದಲ್ಲಿ ನಿರ್ಮಿಸಲಾದ ವಿನಾಯಕ ನಾರಾಯಣ ದುರ್ಗಾಂಬಾ ದೇವಸ್ಥಾನ ಇದ್ದು, ಈ ಕ್ಷೇತ್ರವನ್ನು ಸ್ವಲ್ಪ ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಇರುವ ಬಲಮುರಿ ಗಣಪನ ಮೂರ್ತಿಯನ್ನು ಶೃಂಗ ಮುನಿಗಳು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದ್ದು, ಈ ದೇಗುಲದಲ್ಲಿ ಇರುವ ಗಣೇಶನು ಚತುರ್ಭುಜ ದಾರಿಯಾಗಿ ಕರಂಡಕಾ ಮಾದರಿ ಕಿರೀಟ ಧರಿಸಿ ಉತ್ಕಟಾಸನದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಇಲ್ಲಿಗೆ ಬಂದು ಮಹಾಗಣಪತಿ ಗೆ ಪ್ರಿಯವಾದ ಅಪ್ಪವನ್ನು ನೀಡುತ್ತೇವೆ ಎಂದು ಹರಕೆ ಹೊತ್ತರೆ ಅದೆಷ್ಟೇ ಕಷ್ಟಕರ ಸಮಸ್ಯೆ ಇದ್ರೂ ಗಣೇಶನ ಅನುಗ್ರಹದಿಂದ ಬಹು ಬೇಗ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವುದೇ ಶುಭ ಸಮಾರಂಭ ಇರಲಿ ಅಥವಾ ವಯಕ್ತಿಕ ಸಮಸ್ಯೆ ಇರಲಿ ನಂದಾವರ ದ ಗಣಪತಿಗೆ ಆಪ್ಪದ ಪೂಜೆ ಹೇಳಿದರೆ ಸಾಕು ಕೆಲಸ ಆದಂತೆ ಎಂದು ಅರ್ಥ. ಹಾಗಾಗಿ ಇಲ್ಲಿನ ಅಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.
ಅಪ್ಪ ಎಂದರೆ ಅದು ನಂದಾವರ ಗಣಪತಿ ಬಪ್ಪನದೆ ಎಂಬ ಮಾತುಗಳು ಈ ಕ್ಷೇತ್ರದಲ್ಲಿ ಹೇಳಲ್ಪಟ್ಟಿವೆ. ಇನ್ನೂ ಈ ಕ್ಷೇತ್ರದಲ್ಲಿ ಶಂಕರ ನಾರಾಯಣ ನ ಸಾನಿಧ್ಯ ಇದ್ದು, ಇಲ್ಲಿನ ಶಂಕರ ನಾರಾಯಣ ನ ಮೂರ್ತಿಯು ಉದ್ಭವ ಲಿಂಗ ಎಂದು ನಂಬಲಾಗಿದೆ. ಲಿಂಗದ ವಿಭಾಜಕ ರೇಖೆ ಇದ್ದು, ಲಿಂಗದ ಬಲ ಭಾಗವನ್ನು ಶಂಕರ ಎಂದು ಲಿಂಗದ ಎಡ ಭಾಗವನ್ನು ನಾರಾಯಣ ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿನ ಶಿವನ ಲಿಂಗವನ್ನು ಶಂಕರ ನಾರಾಯಣ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಹರಿಹರ ಕ್ಷೇತ್ರ ಎಂದೇ ಕರೆಯಲಾಗುತ್ತದೆ. ಅಲ್ಲದೆ ಶಂಕರ ನಾರಾಯಣ ನ ಎಡ ಭಾಗದಲ್ಲಿ ದುರ್ಗಾಂಬಾ ದೇವಿಯನ್ನು ಪ್ರತಿಷ್ಠಾಪಿಸಿದ್ದು, ಅಮ್ಮನವರು ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾರೆ. ಗೋಪುರ ಮುಖ ಮಂಟಪ, ಪ್ರದಕ್ಷಿಣಾ ಪಥ, ಗರ್ಭ ಗೃಹ ಒಳಗೊಂಡಿರುವ ನಂದಾವರ ದ ಈ ದೇವಾಲಯಕ್ಕೆ ಹೋದರೆ ಮನಸ್ಸಿನ ದುಗುಡ ದುಮ್ಮಾನ ಎಲ್ಲ ದೂರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಈ ಕ್ಷೇತ್ರದ ಭಕ್ತರ ಮನದ ಮಾತಾಗಿದೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಫೆಬ್ರವರಿ ತಿಂಗಳಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.
ಈ ಸಮಯದಲ್ಲಿ ಪಲ್ಲಕ್ಕಿ ಉತ್ಸವ, ದೇವರ ಬಲಿ, ಲಲಿತಾ ತ್ರಿಪುರ ಸುಂದರಿ ಯಾಗಗಳನ್ನು ಮಾಡಲಾಗುತ್ತದೆ. ಇಲ್ಲಿನ ಜಾತ್ರಾ ಸಮಯದಲ್ಲಿ ಪೂಜೆ ಮಾಡುವ ಮೊದಲು ಇಲ್ಲಿನ ಮಾಗಣೆಯ ನಾಲ್ ಕೈ ದೈವಗಳಿಗೆ ಮೊದಲು ಪೂಜೆಯನ್ನು ಸಲ್ಲಿಸಿ ನಂತರ ಪೂಜೆಯನ್ನು ಮಾಡಲಾಗುತ್ತದೆ. ಹುಣ್ಣಿಮೆಯಂದು ಪ್ರಾರಂಭ ಆಗುವ ಜಾತ್ರೆಯನ್ನು 5 ದಿನಗಳ ಕಾಲ ವಿಧಿವತ್ತಾಗಿ ಆಚರಿಸಲಾಗುತ್ತದೆ. ನಿತ್ಯವೂ ಇಲ್ಲಿ ನೆಲೆಸಿರುವ ಗಣಪತಿ, ಶಂಕರ ನಾರಾಯಣ, ಹಾಗೂ ದುರ್ಗಾಂಬಾ ದೇವಿಯನ್ನು ಪೂಜಿಸಲಾಗುತ್ತದೆ. ಸಂಕಷ್ಟಿ, ಗಣೇಶ ಚತುರ್ಥಿಯನ್ನು, ಶಿವರಾತ್ರಿ, ನವ ರಾತ್ರಿ ಹಬ್ಬಗಳನ್ನು ಕೂಡ ಇಲ್ಲಿ ಆವಹರಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಅನೇಕ ವಿಶೇಷತೆಗಳಿಂದ ಕೂಡಿದ ಈ ಪುಣ್ಯ ಕ್ಷೇತ್ರವನ್ನು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅಪ್ಪ ಪೂಜೆ, ರಂಗ ಪೂಜೆ, ಅಲಂಕಾರ ಸೇವೆ, ರುದ್ರಾಭಿಷೇಕ, ಗಣಪತಿ ಹೋಮ, ಕಾರ್ತಿಕ ಪೂಜೆ, ಬಿಲ್ವರ್ಚನೆ, ಪಂಚಾಮೃತ ಅಭಿಷೇಕ ಸೇವೆಗಳನ್ನು ಮಾಡಿಸಬಹುದು. ಈ ದೇವಸ್ಥಾನಕ್ಕೆ ಹೋದರೆ ದೇವಾಲಯದಿಂದ 4.8 ಕಿಮೀ ದೂರದಲ್ಲಿರುವ ನರಹರಿ ಪರ್ವತ ನೋಡಿಕೊಂಡು ಬರಬಹುದು. ಈ ಪುಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಪುಣ್ಯ ಕ್ಷೇತ್ರ ವನ್ನಾ ದರ್ಶನ ಮಾಡಿ ಬನ್ನಿ. ಶುಭದಿನ.