ಮೊಬೈಲ್ ಕಳೆದು ಹೋದ್ರೆ ಮೊದಲು ಇದನ್ನು ಮಾಡಿ..

ಮೊಬೈಲ್ ಕಳೆದು ಹೋದ್ರೆ ಮೊದಲು ಇದನ್ನು ಮಾಡಿ..

ನಮಸ್ತೆ ಪ್ರಿಯ ಓದುಗರೇ, ಮೊಬೈಲ್, ಇದೊಂದು ಟೆಕ್ನಾಲಜಿ ಬಂದಿಲ್ಲ ಅಂದ್ರೆ ಜನ ಅಕ್ಷರಶಃ ಹುಚ್ಚರಾಗಿ ಹೋಗ್ತಾ ಇದ್ರು. ಕೆಲವರು ಮೊಬೈಲ್ ಹಿಡಿದುಕೊಂಡೇ ಹುಚ್ಚರಾಗಿದ್ದಾರೆ. ಈಗ ವಿಷ್ಯ ಅದಲ್ಲ. ಈ ಮೊಬೈಲ್ ನ ಸಾವಿರದಿಂದ ಲಕ್ಷ ಲಕ್ಷ ಕೊಟ್ಟು ತೆಗೆದುಕೊಳ್ಳುತ್ತೇವೆ. ಅಕಸ್ಮಾತ್ ಕಳೆದು ಹೋದ್ರೆ ಗೊಳೋ ಅಂತ ಅಳುತ್ತೇವೆ. ಸೋ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಫೋನ್ ಕಳೆದು ಹೋದ್ರೆ ಮತ್ತೆ ಹೇಗೆ ವಾಪಸ್ ಪಡೆಯಬಹುದು ಎಂದು ತಿಳಿದುಕೊಳ್ಳೋಣ. ತುಂಬಾ ಜನಕ್ಕೆ ಮೊಬೈಲ್ ಅಲ್ಲಿರುವ ಸಾಕಷ್ಟು ಫೀಚರ್ ಬಗ್ಗೆ ಗೊತ್ತಿರುವುದಿಲ್ಲ. ಫೋನ್ ಮಾಡೋಕೆ, ಫೋನ್ ಕಾಲ್ ಅಟೆಂಡ್ ಮಾಡೋಕೆ, ಸೋಶಿಯಲ್ ಮೀಡಿಯಾ ನೋಡೋದಕ್ಕೆ, ಫೋಟೋ ತೆಗೆಯುವುದಕ್ಕೆ ಇಷ್ಟಕ್ಕೆ ಸೀಮಿತ ಆಗಿರುತ್ತಾರೆ. ಆದ್ರೆ ಆ ಮೊಬೈಲ್ ದೊಡ್ಡ ಪ್ರಪಂಚ ಅಲ್ಲಿ ಸಿಕ್ಕಾಪಟ್ಟೆ ಬೇರೆ ಬೇರೆ ಫೀಚರ್ ಇದೆ. ಆದರಲ್ಲಿ ಒಂದು ಫೈಂಡ್ ಮೈ ಡಿವೈಸ್.

 

ಫೋನ್ ಕಳೆದುಕೊಳ್ಳುವುದು ಎಂಥ ನೋವು ಅಲ್ವಾ? ಮೊನ್ನೆ ತೋಗೊಂಡಿದ್ದೆ, ನನ್ನ ಗಂಡ ಗಿಫ್ಟ್ ಕೊಟ್ಟಿದ್ರು, ನನ್ ಫಸ್ಟ್ ಸಂಬಳದಲ್ಲಿ ತೋಗೊಂಡಿದ್ದೇ, ಫೋನ್ ಇನ್ನೂ ಇಎಂಐ ಅಲ್ಲಿ ಇತ್ತು, ಆದ್ರೆ ಅಷ್ಟರಲ್ಲೇ ಕಳೆದು ಹೋಯ್ತು ಅಂತ ಹೊಟ್ಟೆ ಉರಿದುಕೊಳ್ಳುತ್ತೇವೆ. ಕಳೆದುಕೊಂಡು ಗೊಳೋ ಅಂತ ಅಳುವುದಕ್ಕಿಂತ. ಫೈಂಡ್ ಮೈ ಡಿವೈಸ್ ಫೀಚರ್ ಮೂಲಕ ಮತ್ತೆ ಮೊಬೈಲ್ ಫೋನ್ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಲ್ವಾ? ಆಂಡ್ರಾಯ್ಡ್ ಫೋನ್ ಇದ್ರೆ ನಿಮ್ಮ ಬಳಿ ಜಿಮೇಲ್ ಅಕೌಂಟ್ ಇದ್ದೆ ಇರುತ್ತೆ. ಅದೊಂದು ಇದ್ರೆ ಅರ್ಧ ಕೆಲಸ ಸುಲಭ ಆದ ಹಾಗೆ. ನಿಮ್ಮ ಆಂಡ್ರಾಯ್ಡ್ ಫೋನ್ ಮನೆಯಲ್ಲಿ ಎಲ್ಲೋ ಇಟ್ಟು, ಸೈಲೆಂಟ್ ಅಲ್ಲಿದ್ದು, ಕೈಗೆ ಸಿಗದೆ ಇದ್ರೆ, ಕಳೆದು ಹೋದಾಗ ಅದರ ಡೇಟಾ ಅಳಿಸಬೇಕು ಅಂದ್ರೆ ಮೊಬೈಲ್ ಅನ್ನು ನೀವು ಇದ್ದ ಜಾಗದಿಂದಲೆ ಲಾಕ್ ಮಾಡಬಹುದು. ಅದ್ಕೆ ರಾಮಬಾಣ ಫೈಂಡ್ ಮೈ ಡಿವೈಸ್.

 

ನಿಮ್ಮ ಮೊಬೈಲ್ ಕಳೆದು ಹೋದಾಗ ನಿಮ್ಮ ಫ್ರೆಂಡ್, ಫ್ಯಾಮಿಲಿ ಮೆಂಬರ್ ದೊ ಫೋನ್ ಇಸ್ಕೊಂಡು, ಅದರಲ್ಲಿ ಪ್ಲೇ ಸ್ಟೋರ್ ಅಲ್ಲಿ ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್ ನನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಅದ್ರಲ್ಲಿ ನಿಮ್ಮ ಕಳೆದು ಹೋದ ಮೊಬೈಲ್ ಅಲ್ಲಿ ಲಾಗ್ ಇನ್ ಆಗಿರುವ ಜಿಮೇಲ್ ಐಡಿ ಪಾಸ್ ವರ್ಡ್ ಬರೆಯಿರಿ. ನೀವು ನಿಮ್ಮ ಫೋನ್ ನ ಲೊಕೇಶನ್ ನ ತಿಳಿದುಕೊಳ್ಳಬಹುದು. ಒಂದುವೇಳೆ ಫೋನ್ ಆಫ್ ಆಗಿದ್ರೆ ಲಾಸ್ಟ್ ಅಂದ್ರೆ ಆಫ್ ಆಗುವಾಗ ಆ ಫೋನ್ ಎಲ್ಲಿತ್ತು ಅದರ ಲೊಕೇಶನ್ ನೋಡಬಹುದು. ಫೋನ್ ನ್ನೂ ಅದರಲ್ಲಿರುವ ಸೆಕ್ಯೂರ್ ಡಿವೈಸ್ ಮೂಲಕ ಡೇಟಾ ಸೇಫ್ ಮಾಡಬಹುದು. ಮತ್ತು ಮೊಬೈಲ್ ಅನ್ನು ಲಾಕ್ ಮಾಡಿ ಕಳೆದು ಹೋದ ಮೊಬೈಲ್ ಅಲ್ಲಿ ನಿಮ್ಮ ಮೆಸೇಜ್ ಅವರಿಗೆ ಕಾಣುವ ಹಾಗೆ ಮಾಡಬಹುದು. ಮತ್ತು ಮನೆಯಲ್ಲಿ ಎಲ್ಲೋ ಸೈಲೆಂಟ್ ಆಗಿರುವ ಫೋನ್ ಪ್ಲೇ ಸೌಂಡ್ ಆಪ್ಷನ್ ಅನ್ನು ಕ್ಲಿಕ್ ಮಾಡಿದ್ರೆ ಸೈಲೆಂಟ್ ಅಲ್ಲಿದ್ರೆ ಮೊಬೈಲ್ ಸದ್ದು ಮಾಡುತ್ತೆ. ಎಷ್ಟು ಸೂಪರ್ ಅಲ್ವಾ. ನಿಮ್ಮ ಮೊಬೈಲ್ ಅಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು ಅಂದಿಲ್ಲ. ಯಾಕೆಂದ್ರೆ ಇದು ಬೇರೆಯವರ ಫೋನ್ ಹುಡುಕೋಕೆ ಹೆಲ್ಪ್ ಮಾಡುತ್ತೆ ಅಷ್ಟೇ. ನಿಮ್ಮ ಫೋನ್ ಕಳೆದುಕೊಂಡರೆ ಬೇರೆಯವರ ಫೋನ್ ಅಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ ಅಷ್ಟೇ. ನೋಡಿದ್ರಲ್ವ ಫ್ರೆಂಡ್ಸ್ ಎಷ್ಟು ಸುಲಭವಾಗಿ ಕಳೆದು ಹೋದ ಮೊಬೈಲ್ ಅನ್ನು ನಿಮಿಷಗಳಲ್ಲಿ ಎಲ್ಲಿದೆ ಎಂದು ಕಂಡು ಹಿಡಿಯಬಹುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು