ಮುರುಡೇಶ್ವರದಲ್ಲೂ ಇದೆ ಆತ್ಮಲಿಂಗದ ಒಂದು ಅಂಶ..!!

ಮುರುಡೇಶ್ವರದಲ್ಲೂ ಇದೆ ಆತ್ಮಲಿಂಗದ ಒಂದು ಅಂಶ..!!

ನಮಸ್ತೆ ಪ್ರಿಯ ಓದುಗರೇ, ಈ ಕಲಿಯುಗದಲ್ಲಿ ತನ್ನನ್ನು ನಂಬಿ ಬರುವ ಭಕ್ತರನ್ನೂ ಉದ್ಧರಿಸುತ್ತಿದ್ದಾನೇ ಈ ಪರಮೇಶ್ವರ ಇವನ ಸನ್ನಿಧಿಗೆ ಬಂದು ಶಿರಸಾ ವಹಿಸಿ ಭಾಗಿದರೆ ಸಾಕು ನಮ್ಮೆಲ್ಲ ಕಷ್ಟಗಳು ಸಮುದ್ರದ ಅಲೆಗಳ ರೀತಿ ಭಗವಂತನ ಚರಣ ಕಮಲದಲ್ಲಿ ಸೇರಿ ಹೋಗುತ್ತವೆ ಬನ್ನಿ ಇವತ್ತಿನ ಲೇಖನದಲ್ಲಿ ಮುರುಡೇಶ್ವರ ದ ಈಶ್ವರನ ದರ್ಶನ ಮಾಡಿ ಕೃತಾರ್ಥ ಆಗೋಣ. ಮುರುಡೇಶ್ವರ ಈ ದೇವಸ್ಥಾನದ ಹೆಸರು ಕೇಳುತ್ತಿದ್ದ ಹಾಗೆ ನಮಗೆ ನೆನಪಾಗೋದು 123 ಅಡಿ ಎತ್ತರದ ಶಿವನ ಪ್ರತಿಮೆ. ಮಂದಸ್ಮಿತ ಆಗಿ ಧ್ಯಾನ ಮಾಡುತ್ತಾ ಕುಳಿತ ಇವನನ್ನು ನೋಡ್ತಾ ಇದ್ರೆ,ಮನಸ್ಸು ಮತ್ತೆ ಮತ್ತೆ ಶಿವ ಧ್ಯಾನವನ್ನು ಸ್ಮರಿಸುವಂತೆ ಮಾಡುತ್ತೆ. ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಮಿಂದೆದ್ದು, ಚಂದ್ರ ಮೌಳೇಶ್ವರ ನನ್ನ ದರ್ಶನ ಮಾಡಿದ್ರೆ ನಮ್ಮೆಲ್ಲ ಪಾಪಗಳು ಪರಿಹಾರ ಆದಂತೆ. ಈ ದೇಗುಲಕ್ಕೆ ಬಂದು ಆ ಪರಶಿವನ ಎದುರಿಗೆ ನಿಂತು ಏನನ್ನೇ ಬೇಡಿದರೂ ಆ ದೇವ ಇಲ್ಲ ಎನ್ನದೇ, ನಮ್ಮ ಮನದ ಆಸೆಗಳನ್ನು ಪೂರ್ಣ ಮಾಡುತ್ತಾನೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನದಿ ಸ್ನಾನ ಮತ್ತು ಸಮುದ್ರ ಸ್ನಾನಕ್ಕೆ ವಿಶೇಷ ಸ್ಥಾನ ಇದೆ.

 

ಸಮುದ್ರ ರಾಜನ ಬಳಿ ನಮ್ಮೆಲ್ಲ ಅಂತರಂಗದ ಅಹಂಕಾರವನ್ನು ದೂರ ಮಾಡು ಎಂದು ಪ್ರಾರ್ಥಿಸಿ ಸದ್ಗತಿಯನ್ನು ದೇವರಲ್ಲಿ ಬೇಡಿದರೆ ನಮ್ಮ ಜನ್ಮ ಪಾವನ ಆಗುವಂತೆ ಮಾಡುತ್ತಾನೆ ಆ ಪರಮಾತ್ಮ. ಹೀಗಾಗಿ ವರ್ಷದಲ್ಲಿ ಒಂದು ಬಾರಿ ಆದ್ರೂ ಸಮುದ್ರ ಸ್ನಾನ ಮಾಡಬೇಕು ಎಂದು ನಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಮುರುಡೇಶ್ವರ ಕ್ಷೇತ್ರದಲ್ಲಿ ಮಹೇಶ್ವರ ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ಕಥೆ ಕೂಡ ಇದೆ. ಹಿಂದೆ ರಾವಣನು ಪರಮೇಶ್ವರನ ಆತ್ಮ ಲಿಂಗವನ್ನು ತಂದು ಲಂಕೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಅಂದುಕೊಳ್ಳುತ್ತಾನೆ. ಈ ವಿಷಯವನ್ನು ತಿಳಿದ ಗಣೇಶನು ಬ್ರಾಹ್ಮಣ ವಟುವಿನ ವೇಷದಲ್ಲಿ ಧರಿಸಿ ಉಪಾಯವಾಗಿ ರಾವಣ ತಂಡ ಆತ್ಮ ಲಿಂಗವನ್ನು ಗೋಕರ್ಣದಲ್ಲಿ ಪ್ರತಿಷ್ಠಾಪನೆ ಆಗುವಂತೆ ಮಾಡುತ್ತಾನೆ. ಈ ಸಮಯದಲ್ಲಿ ಆತ್ಮ ಲಿಂಗದ ಒಂದು ಅಂಶ ಈ ಮುರುಡೇಶ್ವರ ದಲ್ಲಿ ಬಂದು ಬಿತ್ತಂತೆ. ಹೀಗಾಗಿ ಜಗದೇಶ್ವರ ಇಲ್ಲಿ ಬಂದು ನೆಲೆ ನಿಂತ ಎಂದು ಹೇಳಲಾಗುತ್ತದೆ. ಮೃದೇಶ್ವರ ಎಂದು ಕರೆಯುತ್ತಿದ್ದ ಈ ಕ್ಷೇತ್ರವು ಮುಂದೆ ಜನರಿಂದ ಬಾಯಿಂದ ಬಾಯಿಗೆ ಹರಿದಾಡಿ ಮುರುಡೇಶ್ವರ ಎಂದು ಪ್ರಸಿದ್ಧಿ ಆಯ್ತು. ವಿಶಾಲವಾದ ಸಮುದ್ರ ಗಗನಕ್ಕೆ ಮುತ್ತಿಡುವಂತೆ ಕಾಣಿಸೂ ರಾಜ ಗೋಪುರ ಸದಾ ಹಸಿರಿನಿಂದ ಕೂಡಿದ ಉದ್ಯಾನವನ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಭಗವದ್ಗೀತೆ ಭೋದಿಸುತ್ತಿರುವ ಸುಂದರವಾದ ಕಲಾಕೃತಿ.

 

ಗಣೇಶನು ಆತ್ಮ ಲಿಂಗವನ್ನು ಭೂಮಿ ಮೇಲೆ ಸ್ಥಾಪನೆ ಮಾಡಿದ ಘಟನೆ ತೋರಿಸೋ ಚಂದವಾದ ಮೂರ್ತಿಗಳು. ಹೀಗೆ ಅನೇಕ ಸೌಂದರ್ಯದ ಕುರುಹು ಆಗಿರುವ ಈ ಕ್ಷೇತ್ರಕ್ಕೆ ಬಂದು ಇವೆಲ್ಲವನ್ನೂ ನೋಡ್ತಾ ಇದ್ರೆ ಬದುಕಿನ ಜಂಜಾಟಗಳ ಕ್ಷಣ ಕಾಲ ನಮ್ಮಿಂದ ದೂರ ಆಗುತ್ತೆ. ಇನ್ನೂ ಈ ಕ್ಷೇತ್ರದಲ್ಲಿ ಶುವರತ್ರಿಯನ್ನು ಅತ್ಯಂತ ವಿಂಗ್ರುಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ರಥೋತ್ಸವದ ದಿನ ಲಕ್ಷಾಂತರ ಭಕ್ತರು ಶಿವನನ್ನು ಕಣ್ಣು ತುಂಬಿಕೊಂಡು ಕೃತಾರ್ಥ ಆಗ್ತಾರೆ. ಈ ಕ್ಷೇತ್ರದಲ್ಲಿ ಇರುವ ಪಾರ್ವತಿ ಪತಿಯನ್ನು ಬೆಳಿಗ್ಗೆ 6 ರಿಂದ ಮಧ್ಯಾನ 12 ಗಂಟೆ ವರೆಗೆ ಸಂಜೆ 4 ರಿಂದ ರಾತ್ರಿ 8.15 ರ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ,ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಚಂದನ ಅಭಿಷೇಕ, ಏಕ ದಶ ರುದ್ರಾಭಿಷೇಕ, ಕುಂಕುಮಾರ್ಚನೆ ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಈ ಪುಣ್ಯ ದೇಗುಲವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಈ ದೇವಸ್ಥಾನ ಬೆಂಗಳೂರಿನಿಂದ 480 ಕಿಮೀ, ಹುಬ್ಬಳ್ಳಿಯಿಂದ 205 ಕಿಮೀ, ಭಟ್ಕಳ ದಿಂದಾ 13 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಆ ಪರಶಿವನ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ