ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಆರೋಗ್ಯಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ನ್ಯೂ ನ್ಯೂಸ್ ಕನ್ನಡ ವೆಬ್ಸೈಟ್ ಗೆ ಭೇಟಿ ನೀಡಿ. ಸ್ನೇಹಿತರೆ ನಾವು ಖಾಲಿ ಹೊಟ್ಟೆಯಲ್ಲಿ ಏನಾದರೂ ಕುಡಿದರೆ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ ಮತ್ತು ಆಯುರ್ವೇದದಲ್ಲಿ ಈ ಜೀರಿಗೆ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಜೀರಿಗೆಯನ್ನು ಅಡುಗೆಯಲ್ಲಿ ಬಳಕೆ ಮಾಡುತ್ತೇವೆ. ಹಾಗೂ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಕೂಡ ಬಳಕೆ ಮಾಡುತ್ತೇವೆ. ಈ ಜೀರಿಗೆಯನ್ನು ನಾವು ಹಾಗೆ ಸೇವನೆ ಮಾಡುವುದಕ್ಕಿಂತ ಈ ಜೀರಿಗೆ ನೀರು ಮಾಡಿ ಕುಡಿಯುವುದರಿಂದ ಇನ್ನೂ ಹೆಚ್ಚಿನ ಲಾಭವನ್ನು ಗಳಿಸಬಹುದು. ಅದಕ್ಕಾಗಿ ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನಮ್ಮ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ನಾವು ಕಾಣಬಹುದು.
ಹಾಗಾದ್ರೆ ಈ ಜೀರಿಗೆ ನೀರು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎಂದೂ ನೋಡುವುದಾದರೆ ಮೊದಲನೆಯದಾಗಿ ಇದು ನಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ನಾವು ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದರೆ ನಮಗೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನಮ್ಮ ಜೀರ್ಣ ಕ್ರಿಯೆ ಸರಿಯಾಗಿ ಇರಬೇಕಾಗುತ್ತದೆ. ಒಂದು ಲೋಟ ಜೀರಿಗೆ ನೀರು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ಜೀರ್ಣ ಕ್ರಿಯೆ ವೃದ್ಧಿಯಾಗುತ್ತದೆ ಮತ್ತು ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನೂ ಕೂಡ ಇದು ಪರಿಣಾಮಕಾರಿಯಾಗಿ ನಿವಾರಣೆ ಮಾಡುತ್ತದೆ. ಏಕೆಂದರೆ ಜೀರಿಗೆಯನ್ನು ಇರುವಂಥ ಕೆಲವೊಂದು ಪೌಷ್ಟಿಕಾಂಶಗಳು,ಮಗ್ನಿಸಿಯಮ್, ಸೋಡಿಯಂ ಇವುಗಳು ನಮ್ಮ ಜೀರ್ಣ ಕಾರ್ಯಕ್ಕೆ ಸಹಾಯವಾಗುತ್ತದೆ. ಜೀರಿಗೆಯಲ್ಲಿ ಇರುವಂತಹ ಉತ್ತಮವಾದ ಪೌಷ್ಟಿಕಾಂಶಗಳು ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕಲು ನೆರವಾಗುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಕೆಲವೊಂದು ಸಮಸ್ಯೆಗಳು, ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅಸಿಡಿಟಿ ಮತ್ತು ವಾಕರಿಕೆ ಅಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವ ಶಕ್ತಿ ಈ ಜೀರಿಗೆ ನೀರಿಗೆ ಇದೆ. ನೀವೇನಾದರೂ ನಿಮ್ಮ ದೇಹದ ತೂಕವನ್ನು ಇಳಿಕೆ ಮಾಡಲು ಪ್ರಯತ್ನ ಮಾಡ್ತಾ ಇದ್ದರೆ ವ್ಯಾಯಾಮದ ಜೊತೆಗೆ ನೀವು ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ಈ ಜೀರಿಗೆ ನೀರು ಕುಡಿದರೆ ನಿಮ್ಮ ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಇನ್ನೂ ಜೀರಿಗೆ ನೀರು ಕುಡಿಯುವುದರಿಂದ ನಮ್ಮ ಹೊಟ್ಟೆ ಶುದ್ಧವಾಗುತ್ತದೆ. ಮಾತು ಮತ್ತು ಮಹಿಳೆಯರಿಗೆ ಮುಟ್ಟಿನ ಚಕ್ರದ ಸಮಸ್ಯೆ ಇದ್ರೆ ಅದು ಕೂಡ ಸುಧಾರಿಸುತ್ತದೆ.
ಹಾಲು ಉಣಿಸುವ ತಾಯಂದಿರಿಗೆ ಸ್ತನದಲ್ಲಿ ಹಾಲು ಉತ್ಪತ್ತಿ ಆಗಲು ಸಹಾಯ ಆಗುತ್ತದೆ ಮತ್ತು ಮಗುವಿಗೆ ಬೇಕಾದ ಪೌಷ್ಟಕಾಂಶಯುಕ್ತ ಆಹಾರ ಇದಾಗಿದೆ. ಇನ್ನೂ ಅರ್ಧ ಚಮಚ ಜೀರಿಗೆ ಯಾನ್ನ ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಆರಿಸಿ ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ನಮ್ಮ ರಕ್ತ ಶುದ್ಧಿ ಆಗುತ್ತದೆ ಜೊತೆಗೆ ನಮ್ಮ ಆರೋಗ್ಯ ಕೂಡ ಸುಧಾರಿಸುತ್ತದೆ. ನಿಯಮಿತವಾಗಿ ಜೀರಿಗೆ ನೀರು ಕುಡಿಯುವುದರಿಂದ ಇದು ನಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಜೀರಿಗೆಯಲ್ಲಿರಿವ ಪ್ರೊಟೀನ್ ಹಾಗೂ ಕಾರ್ಬೋಹೈಡ್ರೇಟ್ ಗಳು ನಮ್ಮ ಕೂದಲಿನ ಬೆಳವಣಿಗೆಗೆ ಅವಶ್ಯಕ ಆಗಿದೆ. ಜೊತೆಗೆ ಕೂದಲು ಉದುರುವ ಸಮಸ್ಯೆಗೆ ರಾಮಬಾಣ. ಇನ್ನೂ ಬಹಳ ಮುಖ್ಯವಾಗಿ ಈ ಜೀರಿಗೆ ನೀರನ್ನು ನಿಯಮಿತವಾಗಿ ನಾವು ಕುಡಿಯುತ್ತಾ ಬಂದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರಿಗೆಯಲ್ಲಿನ ಪೊಟ್ಯಾಸಿಯಂ, ಕಬ್ಬಿಣ ಅಂಶಗಳು ಕೂಡ ಸಮೃದ್ಧವಾಗಿದೆ ಜೊತೆಗೆ ಉತ್ಕರ್ಶಕ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ ಇದು ನಮ್ಮ ದೇಹದಲ್ಲಿನ ಬೇಡವಾದ ಬ್ಯಾಕ್ಟೀರಿಯಾ ವನ್ನಾ ನಾಶ ಮಾಡುತ್ತದೆ. ಇದರಲ್ಲಿನ ಮಾಗ್ನಿಸಿಯಂ, ಕ್ಯಾಲ್ಸಿಯಂ, ವಿಟಮಿನ್ ಏ, ವಿಟಮಿನ್ ಬಿ, ವಿಟಮಿನ್ ಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನೋಡಿದ್ರಲ್ವ ಸ್ನೇಹಿತರೆ ಈ ಚಿಕ್ಕ ಅಡುಗೆ ಮನೆಯ ಜೀರಿಗೆ ಹೇಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.