ಬುದ್ಧನ ಮೂರ್ತಿ ಮನೆಯಲ್ಲಿಟ್ಟರೆ ಅದೃಷ್ಟ, ಆದ್ರೆ ಮೂರ್ತಿ ಹೇಗಿರಬೇಕು???

ಬುದ್ಧನ ಮೂರ್ತಿ ಮನೆಯಲ್ಲಿಟ್ಟರೆ ಅದೃಷ್ಟ, ಆದ್ರೆ ಮೂರ್ತಿ ಹೇಗಿರಬೇಕು???

ನಮಸ್ತೆ ಪ್ರಿಯ ಓದುಗರೇ, ಬುದ್ಧ ಶಾಂತಿಯ ಸ್ವರೂಪ. ಬುದ್ಧನ ಪ್ರತಿಮೆಯನ್ನು ನೋಡ್ತಾ ಇದ್ರೆ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಖುಷಿಯ ಭಾವ ಬರುವುದು ಖಂಡಿತ. ಆದ್ರೆ ಯಾವ ತರಹದ ಬುದ್ಧನ ಪ್ರತಿಮೆಯನ್ನು ತರಬೇಕು, ಹಾಗೆ ಮನೆಯ ಯಾವ ದಿಕ್ಕಿನಲ್ಲಿ ಈ ಪ್ರತಿಮೆ ಇಟ್ಟರೆ ಅದೃಷ್ಟ ಶಾಂತಿ ಮನೆಯಲ್ಲಿ ನೆಲೆಸುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಬುದ್ಧನ ಮೂರ್ತಿ ನೋಡಿದ್ರೆ ಖುಷಿ ಆಗುತ್ತೆ. ಆದ್ರೆ ಯಾವ ದಿಕ್ಕಿನಲ್ಲಿ ಇಟ್ರೆ ಅದರ ಪ್ರತಿಫಲ ಸಿಗುತ್ತದೆ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ. ಕೆಲವೊಬ್ಬರು ಬುದ್ಧನ ಮೂರ್ತಿ ನ ಶೋ ಗೆ ಎಂದು ಇಟ್ಟಿರುತ್ತಾರೆ. ಆದ್ರೆ ಅವರಿಗೆ ಗೊತ್ತಿಲ್ಲದ ಹಾಗೆ ಅದರ ಒಳ್ಳೆಯ ಪ್ರಭಾವ ಮನೆಯೊಳಗೆ ಬೀಳ್ತಾ ಇರುತ್ತದೆ. ಸಾಮಾನ್ಯವಾಗಿ ಐಐತಿಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿ ಶೋ ಗೆ ಆದ್ರೂ ಬುದ್ಧನ ಪ್ರತಿಮೆ ಇಟ್ಟೆ ಇರುತ್ತಾರೆ. ಬುದ್ಧನ ಮೂರ್ತಿ ನೋಡಿದ್ರೆ ಮೊದಲು ನಮಗೆ ಸಮಾಧಾನ ಅನ್ನಿಸುತ್ತೆ. ಸೋ ಇದನ್ನು ಯಾಕೆ ನಮ್ಮ ಮನೆಗಳಲ್ಲಿ ಇಡಬೇಕು ಅಂದ್ರೆ, ಒಂದು ನೆಗಟಿವಿಟಿ ಅಂದ್ರೆ ನಮ್ಮಲ್ಲಿರುವ ನೆಗಟಿವ್ ಅಂಶವನ್ನು ತೆಗೆದು ಹಾಕಬೇಕು ಅಂದ್ರೆ ನಮ್ಮ ತಲೆಯಲ್ಲಿ ನಡೆಯುವ ಕೆಟ್ಟ ಆಲೋಚನೆಗಳು ದೂರ ಹೋಗಬೇಕು ತಲೆಯಿಂದ ಹೊರಗೆ ಹೋಗಬೇಕು ಅಂದ್ರೆ ಈ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ನೋಡಿ ಇದನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಸಮಾಧಾನ ನೆಮ್ಮದಿ ಉಂಟಾಗುತ್ತದೆ.

 

ತುಂಬಾ ಜನರು ಒಂದು ತಪ್ಪು ಕಲ್ಪನೆ ಇಟ್ಟುಕೊಂಡಿರುತ್ತಾರೆ ಬುದ್ಧನ ಪ್ರತಿಮೆ ಮನೆಯಲ್ಲಿ ಇಡಬಾರದು, ಬುದ್ಧ ಒಬ್ಬ ಸನ್ಯಾಸಿ , ನಾವು ಕೂಡ ಬುದ್ಧನ ರೀತಿ ಸನ್ಯಾಸಿ ಆಗಿಬಿಡಬಹುದು, ಸಾಂಸಾರಿಕ ಜೀವನದಲ್ಲಿ ಸರಿ ಇರಲ್ಲ ಎಂದು ತಪ್ಪಾಗಿ ಹೇಳುವ ಜನರೂ ಇದ್ದಾರೆ. ಆ ತರಹ ಏನೋ ಇಲ್ಲ. ನೀವು ತುಂಬಾ ಖುಶಿಯಾಗಿ ಇರ್ಥೀರ ಇದನ್ನು ಮನೆಯಲ್ಲಿ ಇಡುವುದರಿಂದ. ಮನೆಯಲ್ಲಿ ತಂದು ಇಟ್ರೆ ಖಂಡಿತ ಸಮಾಧಾನ ಅನ್ನಿಸುತ್ತೆ. ಈಗ ಯಾವ ದಿಕ್ಕಿನಲ್ಲಿ ಈ ಮೂರ್ತಿ ಇಟ್ರೆ ಒಳ್ಳೆಯದು ಎಂದು ನೋಡುವುದಾದರೆ, ಉತ್ತರ ಹಾಗೂ ಉತ್ತರ ಪೂರ್ವ ದಿಕ್ಕಿನಲ್ಲಿ ಇಟ್ರೆ ತುಂಬಾ ಒಳ್ಳೆಯದು. ಆದ್ರೆ ಪೂರ್ವದಲ್ಲಿ ಇಡಬೇಕು ಅಂದ್ರೆ, ಬುದ್ಧನ ಪ್ರತಿಮೆ ಇಡುವ ಹಿಂದಿನ ಗೋಡೆ ಕೆಂಪು, ಗುಲಾಬಿ ಬಣ್ಣದಿಂದ ಇರಬಾರದು. ಅದನ್ನು ಆಂಟಿ ಕಲರ್ ಅಂತ ಹೇಳಲಾಗುತ್ತದೆ. ಸೋ ಹಾಗಾಗಿ ಬುದ್ಧನನ್ನು ಆ ದಿಕ್ಕಿನಲ್ಲಿ ಅಂದ್ರೆ ಪೂರ್ವ ದಿಕ್ಕಿನಲ್ಲಿ ಇಡಬೇಕು ಅಂದ್ರೆ ಅದರ ಹಿಂದಿನ ಗೋಡೆ ಗೋಲ್ಡ್ ಬಣ್ಣದಲ್ಲಿ ಇದ್ರೆ ಒಳ್ಳೆಯದು. ಇನ್ನೂ ಬುದ್ಧನ ಪ್ರತಿಮೆ ಬದಲು ಬುದ್ಧನ ಫೋಟೋ ಹಾಕ್ತೀರಾ ಅಂದ್ರೆ ಪೂರ್ವ ದಿಕ್ಕಿನಲ್ಲಿ ಹಾಕಿದ್ರೆ ಒಳ್ಳೆಯದು. ಅದೇ ರೀತಿ ಉತ್ತರ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಸಾಕ್ಷ್ಟು ನೆಮ್ಮದಿ ಸಿಗಲಿದೆ. ಕೆಲವೊಂದು ಬುದ್ಧನ ಪ್ರತಿಮೆ ಆಶೀರ್ವಾದ ನೀಡುವ ಭಂಗಿಯಲ್ಲಿ ಇರುತ್ತೆ, ಈ ರೀತಿಯ ಬುದ್ಧನ ಪ್ರತಿಮೆ ತಂದು ಮನೆಯಲ್ಲಿ ಇಟ್ರೆ ನಿಮ್ಮ ಮನೆಯಲ್ಲಿ ಆಧ್ಯಾತ್ಮಿಕತೆ ಜಾಸ್ತಿ ಆಗುತ್ತೆ. ಭಕ್ತಿಯ ಭಾವ ಸಿಂಚನ ಆಗುತ್ತೆ. ಯಾವುದೇ ಕಾರಣಕ್ಕೂ ಬುದ್ಧನ ಪ್ರತಿಮೆಯನ್ನು ನೆಲದ ಮೇಲೆ ಇಡಬೇಡಿ.

 

ಒಂದು ಟೇಬಲ್ ಅಥವ ಶೋ ಕೇಸ್ ಮೇಲೆ ಆದ್ರೂ ಇಡಬೇಕು. ಒಂದು ಸ್ಟ್ಯಾಂಡ್ ಮೇಲೆ ಇಟ್ಟರೂ ಒಳಿತು. ಯಾವುದೇ ಕಾರಣಕ್ಕೂ ನೆಲದ ಮೇಲಿಟ್ಟು ಅಗೌರವ ತೋರಿಸಬಾರದು. ಕೆಲವೊಂದು ಬ್ಯುಸಿನೆಸ್ ಮಾಡುವ ಜಾಗದಲ್ಲಿ ಬುದ್ಧನ ಮೂರ್ತಿ ಮೇಲಿನ ಕಿರೀಟ ಉದ್ದವಾಗಿ ಇರುತ್ತೆ ಅಂತಹ ಮೂರ್ತಿಯನ್ನು ನಿಮ್ಮ ಬ್ಯುಸಿನೆಸ್ ಮಾಡುವ ಆಫೀಸ್, ಕಾರ್ಯಾಲಯ, ಅಂಗಡಿ ಯಲ್ಲಿ ಇಟ್ರೆ ಬ್ಯುಸಿನೆಸ್ ಅಲ್ಲಿ ಸಾಕಷ್ಟು ಲಕ್, ಸಕ್ಸಸ್ ಬರುತ್ತೆ. ಬುದ್ಧನ ಮುಂದೆ ನೈವೇದ್ಯಕ್ಕೆ ಅನ್ನುವ ರೀತಿ ಗೋಲ್ಡ್ ಬಣ್ಣದಲ್ಲಿ ಇರುವ ಕಾಲ್ಪನಿಕ ಹಣ್ಣುಗಳನ್ನು ಇಟ್ಟರೆ ತುಂಬಾ ಅನುಕೂಲ ಆಗುತ್ತೆ. ಆದಷ್ಟು ಗೋಲ್ಡ್ ಬಣ್ಣ ಇರುವ ಬುದ್ಧನ ಮೂರ್ತಿಯನ್ನು ಆಯ್ಕೆ ಮಾಡಿ ಸ್ನೇಹಿತರೆ. ಹೀಗೆ ಮಾಡುವುದರಿಂದ ಐಶ್ವರ್ಯ, ಸಂಪತ್ತಿನ ಪ್ರತೀಕ ಆಗಿ ನಿಮ್ಮ ಮನೆಯ ಸಂಪತ್ತು, ಸಂತೋಷ, ನೆಮ್ಮದಿ, ಶಾಂತಿ, ಬೆಳೆಯುತ್ತದೆ. ಗೋಲ್ಡ್ ಬಣ್ಣದಲ್ಲಿ ಇರುವ ಬುದ್ಧನ ಪ್ರತಿಮೆ ತಂದು ಇಡುವುದರಿಂದ ಸುಖ ಶಾಂತಿ ನೆಮ್ಮದಿ ಸಂಪತ್ತು ಆರೋಗ್ಯ ಒಕ್ಕೆಯ ಧನಾತ್ಮಕ ಶಕ್ತಿ ಪ್ರವಹಿಸುತ್ತದೆ. ಮೂರ್ತಿಯನ್ನು ಮನೆಯ ಒಳಗೆ ಬರುವಾಗ ಎದುರಿಗೆ ಕಾಣುವ ಹಾಗೆ ಇಟ್ರೆ ಇನ್ನೂ ಒಳ್ಳೆಯದು. ಹೀಗೆ ಕಂಡರೆ ಮನೆಯ ಒಳಗೆ ಬರುವವರಿಗೆ ಕೆಟ್ಟ ಆಲೋಚನೆ ಇದ್ರೆ ಅದು ಪಾಸಿಟಿವ್ ಆಗಿ ತಿರುಗಿ ನಮಗೆ ಒಳ್ಳೆಯದೇ ಆಗುತ್ತದೆ. ಅವರ ಮನ ಪರಿವರ್ತನೆ ಮಾಡುವ ಶಕ್ತಿ ಈ ಬುದ್ಧನ ಪ್ರತಿಮೆ ಗೆ ಇದೆ ಸ್ನೇಹಿತರೆ. ನೊಡಿದ್ರಲ್ವ ಸ್ನೇಹಿತರೆ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಒಟ್ಟಾರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

 

ಉಪಯುಕ್ತ ಮಾಹಿತಿಗಳು