ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಸರಿಯಾದ ಸಮಯಕ್ಕೆ ಊಟಾ ತಿಂಡಿ ಮಾಡದೇ, ಇಲ್ಲ ಅಂತ ಹೇಳಿದ್ರೆ ಸರಿಯಾಗಿ ಡಯೆಟ್ ಫಾಲೋ ಮಾಡದೇ ಇದ್ರೆ ಸ್ವಲ್ಪ ತೂಕ ಹೆಚ್ಚು ಕಮ್ಮಿ ಆಗುತ್ತೆ. ಅಷ್ಟೇ ಅಲ್ಲದೇ ಹೊಟ್ಟೆಯಲ್ಲಿ ಕೊಬ್ಬಿನ ಅಂಶ ಜಾಸ್ತಿ ಆಗಿಬಿಡುತ್ತೆ. ಸೋ ಇವತ್ತು ನಾವು ನಿಮಗೆ ಬೆಳಗಿನ ತೂಕ ಕಡಿಮೆ ಮಾಡಿಸುವ ಮ್ಯಾಜಿಕ್ ಡ್ರಿಂಕ್ ಬಗ್ಗೆ ಹಾಗೂ ಆ ಡ್ರಿಂಕ್ ನ ಹೇಗೆ ತಾಯರಿಸಿಕೊಳ್ಳಬೇಕು ಎಂದು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಪಾನೀಯ ನಿಮ್ಮ ಹೊಟ್ಟೆಯಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ. ಬನ್ನಿ ನೈಸರ್ಗಿಕವಾಗಿ ಮನೆಯಲ್ಲೇ ಈ ಮ್ಯಾಜಿಕ್ ಡ್ರಿಂಕ್ ನ ಹೇಗೆ ತಯಾರಿಸುವುದು ಅಂತ ನೋಡೋಣ. ಸ್ನೇಹಿತರೆ ಈ ಡ್ರಿಂಕ್ ತಯಾರಿಸಲು ನಮಗೆ ಬೇಕಾದ ಅಡುಗೆ ಸಾಮಗ್ರಿಗಳನ್ನು ಒಂದೊಂದಾಗಿ ನೋಡೋಣ. ಮೊದಲನೆಯದಾಗಿ ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಚಕ್ಕೆ ಪುಡಿ. ಈಗ ಈ ಡ್ರಿಂಕ್ ತಯಾರಿಸುವ ವಿಧಾನ ತಿಳಿಯೋಣ.
ಮೊದಲು ನಿಂಬೆ ಹಣ್ಣನ್ನು ಕತ್ತರಿಸಿ ಅದರ ರಸವನ್ನು ಒಂದು ಬಟ್ಟಲು ಅಥವಾ ಚಿಕ್ಕ ಲೋಟದಲ್ಲಿ ಹಿಂಡಿ ಇಡಿ. ನಂತರ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆದು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಆಮೇಲೆ ಒಂದು ನೀರು ಕುಡಿಯುವ ಲೋಟದಷ್ಟು ನೀರನ್ನು ಒಂದು ಪಾತ್ರೆಗೆ ಹಾಕಿ ಕಾಯಲು ಇಡೀ. ಅದು ಸ್ವಲ್ಪ ಗುಳ್ಳೆ ಬಿಡುತ್ತಿದ್ದ ಹಾಗೆ ಒಂದೆರಡು ಚಮಚ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ, ಕೊತ್ತಂಬರಿ ಸೊಪ್ಪಿನಲ್ಲಿ ಉತ್ಕರ್ಷಣ ಗುಣಗಳು ಹೆಚ್ಚಾಗಿ ಇವೆ. ಹಾಗಾಗಿ ಜೀರ್ಣ ಕ್ರಿಯೆ ಸುಲಭವಾಗಿ ಆಗಲು ಸಹಾಯ ಮಾಡುತ್ತದೆ. ಅದಷ್ಟೇ ಅಲ್ಲದೇ ದೇಹದ ಕೊಬ್ಬನ್ನು ಕರಗಿಸಲು ಸಹ ಸೂಪರ್ ಆಗಿ ಕೆಲ್ಸ ಮಾಡುತ್ತೆ. ನಂತರ ಹಿಂಡಿಟ್ಟ ನಿಂಬೆ ಹಣ್ಣಿನ ರಸವನ್ನು ಹಿಂಡಿದ ಸಿಪ್ಪೆಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿಕೊಳ್ಳಿ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕ ಗಳು ಹೆಚ್ಚಾಗಿ ಇದೆ. ಹಾಗಾಗಿ ತೊಕ್ಕ ಕಮ್ಮಿ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ದೇಹದಲ್ಲಿರುವ ಟಾಕ್ಸಿನ್ ನ್ನೂ ಕಡಿಮೆ ಮಾಡಿ ಕೊಬ್ಬನ್ನು ಬರ್ನ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಅದಷ್ಟೇ ಅಲ್ಲದೇ ಚಯಾಪಚಯ ಕ್ರಿಯೆಯನ್ನು ಕೂಡ ಹೆಚ್ಚಿಸುತ್ತದೆ. ನಿಂಬೆ ಹಣ್ಣಿನ ರಸವನ್ನು ಹಿಂಡಿದ ಮೇಲೆ ಅದರ ಸಿಪ್ಪೆಯನ್ನು ಎಸೆಯುವ ಬದಲು ಆ ನಿಂಬೆ ಸಿಪ್ಪೆಯನ್ನು ಸಹ ಕುಡಿಯುವ ನೀರಿನಲ್ಲಿ ಹಾಕಬಹುದು.
ನಂತರ ಪಾತ್ರೆಗೆ ಚಕ್ಕೆ ಪುಡಿಯನ್ನು ಹಾಕಿಕೊಳ್ಳಿ. ನೀವು ಬೇಕಾದರೆ ಚಕ್ಕೆ ಪುಡಿ ಅಥವಾ ಚಕ್ಕೆಯನ್ನು ಹಾಗೆಯೇ ಹಾಕಬಹುದು. ಇದು ಕೂಡ ತೂಕ ಕಡಿಮೆ ಮಾಡಲು ತುಂಬಾ ಸಹಕಾರಿ. ಅಷ್ಟೇ ಅಲ್ಲದೇ ರಕ್ತದೊತ್ತಡ ವನ್ನಾ ಸಮತೋಲನದಲ್ಲಿ ಇಡುತ್ತದೆ. ಇದು ಸಹ ನಿಂಬೆಯ ರೀತಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇವೆಲ್ಲವನ್ನೂ ಕುದಿಯುತ್ತಿರುವ ನೀರಿಗೆ ಹಾಕಿದ ಮೇಲೆ ಇವೆಲ್ಲಾ ಚೆನ್ನಾಗಿ ಕುದ್ದು ಮಿಕ್ಸ್ ಆಗಬೇಕು. ಚೆನ್ನಾಗಿ ಕುದ್ದು, ಅವುಗಳ ಅಂಶ ನೀರಿನಲ್ಲಿ ಬಿಟ್ಟಾಗಿದೆ ಎಂದು ಅನಿಸಿದ ನಂತರ ಕೆಳಗಡೆ ಇಳಿಸಿ ಒಂದು ಲೋಟಕ್ಕೆ ಸೋಸಿಕೊಳ್ಳಿ. ಸ್ನೇಹಿತರೆ ನಾವು ಎಷ್ಟು ಹೊತ್ತು ಕುದಿಸಬೇಕು ಎಂದ್ರೆ ಒಂದು ಲೋಟ ಹಾಕಿದ ನೀರು ಅರ್ಧಕ್ಕೆ ಇಂಗಿ ಕಡಿಮೆ ಆಗಬೇಕು. ಅಲ್ಲಿಯವರೆಗೆ ಕುದಿಸಿಕೊಳ್ಳಿ. ಈಗ ಮೊದಲು ನಿಂಬೆ ಹಣ್ಣಿನ ರಸವನ್ನು ಹಿಂಡಿ ಇಟ್ಟಿದ್ದೇವು ಅಲ್ಲವೇ ಅದನ್ನು ಲೋಟಕ್ಕೆ ಹಾಕಿಕೊಳ್ಳಿ. ಒಂದು ಸಾರಿ ಸ್ಪೂನ್ ಇಂದ ಚೆನ್ನಾಗಿ ಕೈ ಆಡಿಸಿ. ಈಗ ನಮ್ಮ ತೂಕ ಕಡಿಮೆ ಮಾಡುವ ಡ್ರಿಂಕ್ ತಯಾರಾಗಿದೆ. ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದ್ರೆ ತುಂಬಾನೇ ಒಳ್ಳೆಯದು. ಸ್ನೇಹಿತರೆ ಈ ಡ್ರಿಂಕ್ ನ್ನೂ ದಿನಾಲು ಖಾಲಿ ಹೊಟ್ಟೆಗೆ ಒಂದು ತಿಂಗಳು ಕುಡಿಯಿರಿ. ಆವಾಗ ನಿಮಗೆ ಬೆಸ್ಟ್ ಫಲಿತಾಂಶ ಸಿಗುತ್ತದೆ. ಕೆಲವೊಮ್ಮೆ ವ್ಯಾಯಾಮ ಇಲ್ಲದೆ ನಾವು ತುಂಬಾನೇ ದಪ್ಪ ಆದಾಗ ಈ ತರಹ ಒಂದು ಡ್ರಿಂಕ್ ನ ತಯಾರಿಸಿ ಕುಡಿದು ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಶುಭದಿನ.