ಕಾಂತಿಯುತ ಚರ್ಮಕ್ಕೆ ಬಾದಾಮಿ ಫೇಸ್ ಪ್ಯಾಕ್ ಬೆಸ್ಟ್.

ಕಾಂತಿಯುತ ಚರ್ಮಕ್ಕೆ ಬಾದಾಮಿ ಫೇಸ್ ಪ್ಯಾಕ್ ಬೆಸ್ಟ್.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಬಾದಾಮಿಯಿಂದ ಹೇಗೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಈ ಬಾದಾಮಿ ಫೇಸ್ ಪ್ಯಾಕ್ ಇಂದ ನಿಮ್ಮ ಚರ್ಮ ಯಂಗ್ ಆಗಿ ಕಾಣಿಸುವಂತೆ ಸಹಾಯ ಮಾಡುತ್ತದೆ ಹಾಗೆ ಚರ್ಮ ಬ್ರೈಟ್ ಆಗುವಂತೆ ಮಾಡುತ್ತೆ. ಸೋ ಬನ್ನಿ ಈ ಬಾದಾಮಿ ಪ್ಯಾಕ್ ನ ಮಾಡೋದಕ್ಕೆ ಏನೆಲ್ಲಾ ಬೇಕು ಎಂದು ಮೊದಲು ನೋಡೋಣ. ನಮಗೆ ಮೊದಲು ಬೇಕಾಗಿರುವುದು ಬಾದಾಮಿ ಅದನ್ನು ಚೆನ್ನಾಗಿ ಹಸಿಯಾಗಿಯೇ ಪುಡಿ ಮಾಡಿಕೊಂಡು ಇಟ್ಟುಕೊಳ್ಳಿ. ಆಮೇಲೆ ನಮಗೆ ಬೇಕಾಗಿರುವುದು ಹಾಲು, ಜೇನುತುಪ್ಪ, ಮತ್ತು ಗುಲಾಬಿ ನೀರು. ಮೊದಲು ಒಂದು ಗಾಜಿನ ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಅಂದ್ರೆ 2-3 ಚಮಚ ಹಾಕಿಕೊಳ್ಳಿ.

 

ನಾವು ಬಾದಾಮಿಯನ್ನು ಬಳಸುವುದರಿಂದ ಇದರಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಹೆಚ್ಚಿನ ಪೋಷಕಾಂಶವನ್ನು ಕೊಡುತ್ತೆ. ಚರ್ಮನ ಸಾಫ್ಟ್ ಆಗಿ ಇರಿಸುತ್ತೆ ಹಾಗೆ ಚರ್ಮ ಸುಕ್ಕಾಗದೆ ಇರುವ ಹಾಗೆ ಕಾಪಾಡುತ್ತದೆ. ನಂತರ ಇದಕ್ಕೆ ನಾವು ಒಂದು ಚಮಚ ಜೇನುತುಪ್ಪವನ್ನು ಹಾಕಿ ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಹಾಗೆ ಆಂಟಿ ಸೆಪ್ಟಿಕ್ ಗುಣಗಳು ಜಾಸ್ತಿ ಇರುತ್ತವೆ. ಹಾಗಾಗಿ ಚರ್ಮವನ್ನು ಆರೋಗ್ಯವಾಗಿ ಇರಿಸಲು, ಚರ್ಮಕ್ಕೆ ಒಳ್ಳೆಯ ತೇವಾಂಶ ಒದಗಿಸಿ ಗ್ಲೊಯಿಂಗ್ ಆಗಿ ಕಾಣಿಸಲು ಸಹಾಯ ಮಾಡುತ್ತದೆ. ನಂತರ ಈ ಮಿಶ್ರಣಕ್ಕೆ ಹಾಲನ್ನು ಹಾಕಿಕೊಳ್ಳಿ. ಹಾಲು ಚರ್ಮವನ್ನು ಕ್ಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಮೇಲಿರುವ ಬ್ಯಾಕ್ಟೀರಿಯಾ ನ ತೆಗೆಯುತ್ತೆ ಅದಷ್ಟೇ ಅಲ್ಲದೇ ತೇವಾಂಶ ಒದಗಿಸಿ ಚರ್ಮವನ್ನು ಯಂಗ್ ಆಗಿ ಕಾಣಿಸುವುದಕ್ಕೆ ಸಹಾಯ ಮಾಡುತ್ತದೆ. ನಂತರ ಇದಕ್ಕೆ ಗುಲಾಬಿ ನೀರನ್ನು ಹಾಕಿಕೊಳ್ಳಿ. ಗುಲಾಬಿ ನೀರು ನಮ್ಮ ಚರ್ಮದ ಕಾಂಪ್ಲೆಕ್ಸನ್ ನ ಇನ್ನೂ ಇಂಪ್ರೂವ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಸ್ಕಿನ್ ಮೇಲೆ ಕೆಂಪಾಗಿ ಏನಾದ್ರೂ ಅಲರ್ಜಿ ಇದ್ರೆ ಅದನ್ನು ಗುಣ ಪಡಿಸುತ್ತದೆ.

 

ಈ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ನಮ್ಮ ಬಾದಾಮಿ ಫೆಸ್ ಪ್ಯಾಕ್ ರೆಡಿ ಆದಂತೆ. ಇದನ್ನು ನಿಮ್ಮ ಇಡೀ ಮುಖದ ಚರ್ಮಕ್ಕೆ ಹಚ್ಚಿಕೊಳ್ಳಿ. ಇಡೀ ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ಟೆಸ್ಟ್ ಮಾಡಲು ನಿಮ್ಮ ಕೈ ಮೇಲೆ ಹಚ್ಚಿಕೊಂಡು ಒಂದು ಟ್ರಯಲ್ ನೋಡಿ. ಏನೊ ಅಲರ್ಜಿ, ಉರಿ, ಇರ್ರಿಟೇಶನ್ ಇಲ್ಲ ಅಂದ್ರೆ ಏನು ಭಯ ಇಲ್ಲದೆ ಮುಖಕ್ಕೆ ಹಚ್ಚಿಕೊಳ್ಳಬಹುದು. ಇಡೀ ಮುಖಕ್ಕೆ ಹಚ್ಚಿಕೊಂಡ ನಂತರ 10 ನಿಮಿಷ ಹಾಗೆ ಬಿಡಿ. 10 ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ. ಮುಖ ತೊಳೆದ ನಂತರ ನೀವೇ ಮುಖವನ್ನು ಮುಟ್ಟಿ ನೋಡಿಕೊಳ್ಳಿ ತುಂಬಾ ಸ್ಮೂತ್ ಸಾಫ್ಟ್ ಅನಿಸಲು ಶುರು ಆಗುತ್ತೆ. ನೀವು ಕೂಡ ತಪ್ಪದೇ ಮನೆಯಲ್ಲಿ ಈ ಪ್ಯಾಕ್ ನ ಟ್ರೈ ಮಾಡಿ ನೋಡಿ. ನೊಡಿದ್ರಲ್ವ ಸ್ನೇಹಿತರೆ ಹೇಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು