ಕನ್ನಡ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿರುವ ಅದ್ಭುತ ದೇವಾಲಯವಿದು..!!

ಕನ್ನಡ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿರುವ ಅದ್ಭುತ ದೇವಾಲಯವಿದು..!!

ನಮಸ್ತೆ ಪ್ರಿಯ ಓದುಗರೇ, ದೇವಸ್ಥಾನಗಳು ಅಂದ್ರೆ ಕೇವಲ ಭಕ್ತಿಯ ಕೇಂದ್ರ ಮಾತ್ರವಲ್ಲ ಅವು ನಮ್ಮ ನಾಡಿನ ಹೆಮ್ಮೆ ಕೂಡ ಹೌದು. ಪ್ರತಿ ದೇಗುಲಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇರುತ್ತದೆ. ಕಲಾ ಕೆತ್ತನೆಗಳು ನಮ್ಮ ಪೂರ್ವಜರ ಕಲಾ ಪ್ರೌಢಿಮೆಯನ್ನು ನಮಗೆ ಸಾರಿ ಸಾರಿ ಹೇಳುತ್ತವೆ. ಬಾದಾಮಿ,ಐಹೊಳೆ, ಪಟ್ಟದಕಲ್ಲು, ಹಂಪಿ ಅಂತಹ ಸುಂದರವಾದ ಕೆತ್ತನೆಗಳಿಂದ ಕೂಡಿದ ದೇವಾಲಯವನ್ನು ಹೊಂದಿರುವ ನಮ್ಮ ನಾಡಿನಲ್ಲಿ ಇಂದಿಗೂ ಅದೆಷ್ಟು ದೇಗುಲಗಳು ಮಾಹಿತಿಯ ಕೊರತೆಯಿಂದ ನಿಗೂಢವಾಗಿ ಉಳಿದಿದೆ. ಬನ್ನಿ ಇವತ್ತಿನ ಲೇಖನದಲ್ಲಿ ವಾಸ್ತು ಶಿಲ್ಪದ ಸೌಂದರ್ಯದ ಜೊತೆಗೆ ಮನದಲ್ಲಿ ಭಕ್ತಿಯ ಸಿಂಚನವನ್ನಾ ಉಂಟು ಮಾಡುವ ಕಿಕ್ಕೇರಿಯ ಶ್ರೀ ಬ್ರಹ್ಮೇಶ್ವರ ದೇವಾಲಯ ದರ್ಶನ ಮಾಡಿ ಕೃತಾರ್ಥ ಆಗೋಣ. ಕಿಕ್ಕೇರಿ ಎಂಬ ಸ್ಥಳವನ್ನು ಹಿಂದೆ ಕಾಳಿಕಾ ಪುರಿ ಎಂದು ಕರೆಯಲಾಗುತ್ತ ಇತ್ತು. ಈ ಕ್ಷೇತ್ರದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಆದ ಸುಂದರವಾದ ಬ್ರಹ್ಮೇಶ್ವರ ದೇವಾಲಯ ಇದೆ. ಈ ಆಲಯವು ಸುಂದರವಾದ ನಂದಿ ಮಂಟಪ, ಗರ್ಬಗೃಹ, ಸುಖಾಸೀನ,ನವ ಗ್ರಹಗಳ ಮಂಟಪವನ್ನು ಒಳಗೊಂಡಿದ್ದು, ಈ ಕ್ಷೇತ್ರದ ಪ್ರಧಾನ ದೇವತೆ ಆಗಿ ಬ್ರಹ್ಮೇಶ್ವರ ದೇವರು ಪೂಜಿಸಲ್ಪಡುತ್ತದೇ. ಇನ್ನೂ ಈ ದೇವಾಲಯವು ಒಂದೇ ಗೋಪುರವನ್ನು ಹೊಂದಿದ್ದು, ಈ ಆಲಯವನ್ನು ದೂರದಿಂದ ನೋಡಿದ್ರೆ ಆಮೆ ಆಕರಾದ ರೀತಿ ಕಾಣಿಸುತ್ತೆ ಎಂದು ಹೇಳಲಾಗುತ್ತದೆ. ಗೋಪುರದ ತುಂಬೆಲ್ಲ ಸೂಕ್ಷ್ಮವಾದ ಕೆತ್ತನೆಗಳು ಇದ್ದು, ನವರಂಗಗಳಲ್ಲಿ ಲೇಥ್ ನಿಂದಾ ತಿರುಗಿಸಿ ಮಾಡಿದ ಸುಂದರವಾದ ಕಲ್ಲಿನ ಕಂಬಗಳ ಇವೆ. ಇಲ್ಲಿನ ಪ್ರತಿಯೊಂದು ಕಂಬದಲ್ಲಿ ಬೇಲೂರಿನಲ್ಲಿ ಕೆತ್ತಿರುವ ರೀತಿಯಲ್ಲಿ ಮೌನ ಮದಲಿಕೆಯರನ್ನು ಸುಂದರವಾಗಿ ಕೆತ್ತಲಾಗಿದೆ.

 

ಗರ್ಬಗುಡಿಯ ಬಾಲೀಗಾ ವಾಡದಲ್ಲಿ ಗಜಲಕ್ಷ್ಮಿ ಕೆತ್ತನೆಯನ್ನು ನಾವು ಕಾಣಬಹುದು. ಈ ಕ್ಷೇತ್ರದಲ್ಲಿ ಬ್ರಹ್ಮೇಶ್ವರ ದೇವರು ನೆಲೆ ನಿಂತಿದ್ದು ಈ ಆಲಯ ನಿರ್ಮಾಣ ಆಗುವುದರ ಹಿಂದೆ ಒಂದು ಸ್ವಾರಸ್ಯಕರವಾದ ಘಟನೆ ಕೂಡ ಇದೆ. ಬಮ್ಮಾರಿ ಚೆನ್ನಮ್ಮ ನಾಯಕಿ ಎಂಬ ಮಹಿಳೆ ಮೊದಲು ಈ ಪ್ರದೇಶವನ್ನು ಆಳ್ವಿಕೆ ಮಾಡ್ತಾ ಇದ್ರು. ಅವರಿಗೆ ಬ್ರಹ್ಮ ದೇವರಿಗೆ ದೇವಸ್ಥಾನ ನಿರ್ಮಿಸಬೇಕು ಎಂಬ ಮಹಾನ್ ಆಸೆ ಇರುತ್ತೆ. ಹೀಗಾಗಿ ಬ್ರಹ್ಮನಿಗೆ ಸುಂದರವಾದ ಆಲಯವನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡ್ತಾಳೆ. ಆದ್ರೆ ಒಂದಲ್ಲಾ ಒಂದು ತೊಂದರೆ ಬಂದು ಆಲಯವನ್ನು ಸಂಪೂರ್ಣ ಮಾಡೋಕೆ ಆಗೋದೇ ಇಲ್ಲ. ಇದ್ರಿಂದ ದುಖಿತಳಾದ ನಾಯಕಿಯೂ ದೇವರ ಮೊರೆ ಹೋಗುತ್ತಾಳೆ. ಅವಳ ಕನಸಿನಲ್ಲಿ ಶಿವನು ಬಂದು ನೀನು ಕಟ್ಟುವ ಆಲಯದಲ್ಲಿ ನನ್ನನ್ನೂ ಪ್ರತಿಷ್ಠಾಪನೆ ಮಾಡಿ ಎಲ್ಲವೂ ಒಳ್ಳೆಯದಾಗುತ್ತೆ ಎಂದು ಹೇಳಿದನಂತೆ. ನಂತರ ನಾಯಕಿ ಶಿವನ ಲಿಂಗವನ್ನು ದೇಗುಲದ ಒಳಗಡೆ ಪ್ರತಿಷ್ಠಾಪನೆ ಮಾಡಿ ಆ ಲಿಂಗವನ್ನು ಬ್ರಹ್ಮೇಶ್ವರ ಎಂದು ಕರೆದಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಒಮ್ಮೆ ಬ್ರಹ್ಮ ದೇವರಿಗೆ ಬುದ್ಧಿ ವಿಕಲ್ಪ ಆಯಿತಂತೆ ಆಗ ಬ್ರಹ್ಮ ದೇವನು ಈ ಸ್ಥಳಕ್ಕೆ ಬಂದು ಶಿವ ಲಿಂಗವನ್ನು ಸ್ಥಾಪನೆ ಮಾಡಿ ಪೂಜಿಸಿದರು ಆಗ ಅವರ ಬುದ್ಧಿ ಸ್ಥಿರ ಆಯಿತು ಎಂದು ಹೇಳಲಾಗುತ್ತದೆ.

 

ಬ್ರಹ್ಮ ದೇವನು ಪ್ರತಿಷ್ಠಾಪಿಸಿದ ಕಾರಣ ಇಲ್ಲಿನ ಶಿವ ಲಿಂಗಕ್ಕೆ ಬ್ರಹ್ಮೇಶ್ವರ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರವು ಶಂಕರಾಚಾರ್ಯರ ಪಂಚಾಯತನ ತತ್ವದ ಆಧಾರದ ಮೇಲೆ ನಿರ್ಮಾಣ ಆಗಿತ್ತು. ಈ ಕ್ಷೇತ್ರದಲ್ಲಿ ಗಣಪತಿ ಶಿವ ಮಹಿಷಾಸುರ ಮರ್ಧಿನಿ ಚನ್ನಕೇಶವ ಸೂರ್ಯ ನಾರಾಯಣರ ಮೂರ್ತಿಗಳನ್ನು ಪ್ರತಿಷ್ಠಾಪಿಸ ಕಾಗಿದೆ. ಅತ್ಯಂತ ಕಲಾ ಶ್ರೀಮಂತಿಕೆಯಿಂದ ಕೂಡಿದ ಆಲಯದ ಹೊರ ಭಿತ್ತಿಯಲ್ಲಿ ಅರೆ ಕಂಬಗಳನ್ನು ಭೂದೇವಿಯನ್ನು ಸಮುದ್ರದಿಂದ ಎತ್ತಿಕೊಂಡು ಬರುತ್ತಿರುವ ವರಾಹ ಸ್ವಾಮಿ ಮದಲಿಕೆಯರು, ಶಿವ ಪಾರ್ವತಿ, ದರ್ಪಣ ಸುಂದರಿ, ನಾಟ್ಯ ಗಣೇಶ, ನವಿಲಿನ ಮೇಲೆ ಕುಳಿತ ಸುಬ್ರಮಣ್ಯ ನ ಮೂರ್ತಿ ಹೀಗೆ ಹಲವಾರು ಸೂಕ್ಷ್ಮ ಕೆತ್ತನೆಗಳನ್ನು ಕೆತ್ತಲಾಗಿದ್ದು, ಇಲ್ಲಿಗೆ ಬಂದರೆ ವಾಸ್ತು ಶಿಲ್ಪದ ಮಹಾನ್ ಅನಾವರಣ ಆಗುತ್ತೆ. ಕೃಷ್ಣ ವರ್ಣದಲ್ಲಿರುವ ಇಲ್ಲಿನ ಬ್ರಹ್ಮೇಶ್ವರ ದೇವರಿಗೆ ನಿತ್ಯ ಅಭಿಷೇಕ ಮತ್ತು ಪೂಜೆಯನ್ನು ಮಾಡಲಾಗುತ್ತದೆ. ಕಾರ್ತಿಕ ಮಾಸ ಹಾಗೂ ಶಿವರಾತ್ರಿಯಂದು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿಗೆ ಬಂದು ಭಕ್ತಿಯಿಂದ ಪೂಜಿಸಿದರೆ ಬ್ರಹ್ಮೇಶ್ವರ ದೇವರು ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಪೂರ್ತಿ ಮಾಡ್ತಾನೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ಅಚಲವಾದ ನಂಬಿಕೆ ಆಗಿದೆ. ಈ ದೇವಾಲಯವನ್ನು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ದರ್ಶನ ಮಾಡಬಹುದಾಗಿದೆ. ಈ ದೇವಾಲಯ ಮಂಡ್ಯ ಜಿಲ್ಲೆಯ ಕಿಕ್ಕೇರಿ ಎಂಬ ಪ್ರದೇಶದಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಅದ್ಭುತ ಕಲಾ ಕೆತ್ತನೆಗಳನ್ನು ನೋಡಿ ಅ ಪರಶಿವನ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ