ಈ ಕ್ಷೇತ್ರದಲ್ಲಿ ಇರುವ ಗರುಡ ಸ್ವಾಮಿಯ ವಿಗ್ರಹಕ್ಕೂ ಬೇಲೂರಿಗೂ ಇರುವ ನಂಟೆನು ಗೊತ್ತಾ???

ಈ ಕ್ಷೇತ್ರದಲ್ಲಿ ಇರುವ ಗರುಡ ಸ್ವಾಮಿಯ ವಿಗ್ರಹಕ್ಕೂ ಬೇಲೂರಿಗೂ ಇರುವ ನಂಟೆನು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ವಿಷ್ಣುವಿನ ವಾಹನವಾದ ಗರುಡ ದೇವನನ್ನು ದೇವಾಲಯದ ದ್ವಜ ಸ್ಥಂಬದ ಮೇಲೆಯೂ ದೇವಾಲಯದ ಮುಂದಿರುವ ಕಂಬಗಳ ಮೇಲೆಯೂ ಚಿತ್ರಿಸಿರುವ ದನ್ನು ನೋಡಿರುತ್ತೇವೆ. ಆದ್ರೆ ನಾವು ಇವತ್ತು ನಿಮಗೆ ಮಾಹಿತಿ ಹೊತ್ತು ತಂದಿರುವ ದೇವಾಲಯದಲ್ಲಿ ಗರುಡ ಸ್ವಾಮಿಗೆ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಅನೇಕ ವುಷೇಶತೆಗ್ಗಳಿಂದ ಕೂಡಿದ ಚನ್ನಕೇಶವ ಹಾಗೂ ಗರುಡ ಸ್ವಾಮಿ ನೆಲೆಸಿರುವ ಅಪರೂಪದ ಕ್ಷೇತ್ರವನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಸುಮಾರು 1000 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದ ಬಿಂಡಿಗ ನವಿಲೆಯ ಶ್ರೀ ಚನ್ನಕೇಶವ ದೇವಾಲಯ ವನ್ನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಆಲಯವು ಸುಂದರವಾದ ರಾಜ ಗೋಪುರವನ್ನು ಒಳಗೊಂಡಿದೆ. ಈ ಆಲಯದಲ್ಲಿ 3 ಗರ್ಭಗೃಹದಲ್ಲಿ ಇದ್ದು ಆವರಣ, ಪ್ರಾಕಾರ,ದ್ವಜ ಸ್ತಂಭ, ಗರ್ಭಗೃಹ ವನ್ನಾ ಒಳಗೊಂಡಿದೆ. ಚನ್ನಕೇಶವ ಸ್ವಾಮಿಯು ಸೌಮ್ಯ ನಾಯಕಿ ಅಮ್ಮನವರು ಹಾಗೂ ಗರುಡ ದೇವನ ಸಮೇತ ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದು, ಈ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ಬೇದಿಕೊಂದರೆ ಸಲಕ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ರಾಮನಜೂಜಾಚರ್ಯರು ಮೇಲುಕೋಟೆ ಇಂದ ಬೇಲೂರಿಗೆ ಹೋಗುವ ಮುನ್ನ ಈ ಕ್ಷೇತ್ರದಲ್ಲಿ ಕೆಲ ಕಾಲ ತಂಗಿದ್ದರು ಎಂದು ಹೇಳಲಾಗುತ್ತದೆ. ಇನ್ನೂ ಇಲ್ಲಿರುವ ಚನ್ನಕೇಶವ ಸ್ವಾಮಿಯು ಶಂಖ ಚಕ್ರ ಗದಾ ದಾರಿ ಆಗಿ ವರದ ಹಸ್ತವನ್ನು ಹಿಡಿದು ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾನೆ.

 

ಈ ಕ್ಷೇತ್ರದ ವಿಶೇಷತೆ ಏನೆಂದರೆ ಇಲ್ಲಿ ಪ್ರತಿಷ್ಠಾಪಿಸಿರುವ ಗರುಡ ದೇವನ ಮೂರ್ತಿ ಗಂಧದ ಮೂರ್ತಿ ಆಗಿದೆ. ಬಹಳ ಹಿಂದೆ ಬೇಲೋರಿನ ಚನ್ನಕೇಶವ ಸ್ವಾಮಿ ಗರುಡ ದೇವನ ಮೂರ್ತಿಯನ್ನು ಕಾಂಚೀಪುರಂ ಇಂದ ನಿರ್ಮಿಸಿಕೊಂಡು ಅದನ್ನು ಬೇಲೂರಿಗೆ ತೆಗೆದುಕೊಂಡು ಹೋಗ್ತಾ ಇದ್ರು, ಆದ್ರೆ ಬೇಲೂರಿಗೆ ತೆರಳುವಾಗ ವಿಶ್ರಾಂತಿಗೆ ಎಂದು ರಾತ್ರಿ ಸಮಯದಲ್ಲಿ ಈ ಸ್ಥಳದಲ್ಲಿ ತಂಗಿದ್ದರು. ರಾತ್ರೀ ಕಳೆದು ಗರುಡ ದೇವನ ಮೂರ್ತಿಯನ್ನು ಜನರು ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಮೂರ್ತಿಯು ಕಿಂಚಿತ್ತೂ ಅಲ್ಲಾಡಲಿಲ್ಲ. ಆಗ ಅಲ್ಲಿದ್ದ ಜನರ ಬಳಿ ಊರಿನ ಪಾಳೆಗಾರ ಬಂದು ನೆನ್ನೆ ರಾತ್ರಿ ನನ್ನ ಕನಸಿನಲ್ಲಿ ಗರುಡ ದೇವರು ಕಾಣಿಸಿಕೊಂಡು ನಾನು ನಿಮೂರಿನಲ್ಲಿ ನೆಲೆಸಬೇಕು ಎಂಬ ಇಚ್ಛೆಯನ್ನು ಹೊಂದಿದ್ದೇನೆ ಹೀಗಾಗಿ ನೀನು ನನ್ನ ಮೂರ್ತಿ ಇರುವ ಸ್ಥಳಕ್ಕೆ ಹೋಗಿ ಆ ಸ್ಥಳದಲ್ಲೇ ನನ್ನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಎಂದು ಹೇಳಿದ್ದಾನೆ. ಹೀಗಾಗಿ ಈ ಮೂರ್ತಿಯನ್ನು ಇಲ್ಲಿಯೇ ಬಿಟ್ಟು ಹೋಗಿ ಎಂದು ಹೇಳುತ್ತಾನೆ ಆಗ ಮೂರ್ತಿಯನ್ನು ಹೊತ್ತುಕೊಂಡು ಬಂದ ಜನರು ಭಗವಂತನಿಗೆ ಈ ಸ್ಥಳ ಇಷ್ಟ ಆದ್ದರಿಂದ ಇಲ್ಲಿಯೇ ನೆಲೆಸಲು ಇಚ್ಚಿಸಿದ್ದಾರೆ ಅದನ್ನು ತಡೆಯಲು ನಾವು ಯಾರು ಎಂದು ಅಂದುಕೊಂಡು ಗರುಡ ದೇವರ ಮೂರ್ತಿಯನ್ನು ಈ ಸ್ಥಳದಲ್ಲಿ ಬಿಟ್ಟು ಹೋದರೂ.

 

ನಂತರ ಪಾಳೆಗಾರ ಗರುಡ ದೇವರ ಮೂರ್ತಿಯನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಗರುಡ ದೇವನಿಗೆ ಪೂಜೆ ಮಾಡಿಸುವುದರಿಂದ ಸಕಲ ಸರ್ಪ ದೋಷಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಕೂಡ ಇಲ್ಲಿಗೆ ಭೇಟಿ ನೀಡುವ ಭಕ್ತರಲ್ಲಿ ಮನೆ ಮಾಡಿದೆ. ಪ್ರತಿ ವರ್ಷ ಈ ಸ್ಥಳದಲ್ಲಿ ಫೆಬ್ರುವರಿ ಅಲ್ಲಿ ಹತ್ತು ದಿನಗಳ ಕಾಲ ಚನ್ನಕೇಶವ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ಸಮಯದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿ ಮಾಡು ಎಂದು ಸ್ವಾಮಿಯನ್ನು ಬೇಡಿಕೊಳ್ಳುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ಪ್ರತಿ ವರ್ಷ ಮಕರ ಮಾಸದ ದಿನಂದಂಡು ಗರುಡ ದೇವನ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ವಿಧಿವತ್ತಾಗಿ ಆಚರಿಸಲಾಗುತ್ತದೆ. ಗರುಡ ದೇವನ ಕಲ್ಯಾಣೋತ್ಸವ ವನ್ನಾ ಆಚರಿಸುವ ಅಪರೂಪದ ದೇವಾಲಯ ಎಂಬ ಕ್ಯಾತಿಗೆ ಈ ದೇವಾಲಯ ಭಾಜನವಾಗಿದೆ. ಸೌಮ್ಯ ನಾಯಕಿ ಅಮ್ಮನವರು ಗರುಡ ದೇವ ಹಾಗೂ ಚನ್ನಕೇಶವ ಸ್ವಾಮಿಗೆ ನಿತ್ಯವೂ ಶ್ರೀ ವೈಷ್ಣವ ಪದ್ಧತಿಯಂತೆ ಪೂಜೆಯನ್ನು ಮಾಡಲಾಗುತ್ತದೆ. ವಿಶೇಷ ದಿನಗಳಲ್ಲಿ ಇಲ್ಲಿಗೆ ಬರುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಈ ಪುಣ್ಯ ಕ್ಷೇತ್ರವನ್ನು ಬೆಳಿಗ್ಗೆ 8.30 ರಿಂದ ಮಧ್ಯಾನ 12 ಗಂಟೆವರೆಗೂ ಸಂಜೆ 5.30 ರಿಂದ 7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಸಲ್ಲಿಸಬಹುದು. ಪುರಾಣ ಪ್ರಸಿದ್ಧ ಚನ್ನಕೇಶವ ದೇವಾಲಯ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗ ನವಿಲೇ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ಅತಿ ಅಪರೂಪದ ಈ ದೇವಾಲಯವನ್ನು ದರ್ಶನ ಮಾಡಿ ಪುನೀತರಾಗೀ. ಶುಭದಿನ.

ಭಕ್ತಿ