ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ದಾಸ ಪರಂಪರೆಗೆ ವಿಶೇಷ ಸ್ಥಾನವಿದೆ. ದಾಸರು ಹೇಳಿದ ಒಂದೊಂದು ಸಾಲುಗಳು ನಮ್ಮ ವಾಸ್ತವದ ಬದುಕಿಗೆ ಅತ್ಯಂತ ಹತ್ತಿರವಾಗಿದ್ದು, ಜನರ ಮನಸ್ಸಿನಲ್ಲಿ ಭಕ್ತಿ ಭಾವದ ಸಿಂಚನವನ್ನು ಉಣ badisida ಕೀರ್ತಿ ದಾಸ ಪರಂಪರೆಗೆ ಸಲ್ಲುತ್ತದೆ. ಇಂತಹ ದಾಸ ಪರಂಪರೆಯಲ್ಲಿ ಆಗ್ರ ಗಣ್ಯ ಸ್ಥಾನ ಹೊಂದಿದ ಶ್ರೀ ಶ್ರೀಪಾದರಾಜರ ಮೂಲ ಬೃಂದಾವನವನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಂಡು ಪುನೀತರಾಗುವ. ಶ್ರೀ ಶ್ರೀಪಾದರಾಜರ ಮೂಲ ಬೃಂದಾವನ ಇರುವ ಸ್ಥಳವನ್ನು ನರಸಿಂಹ ತೀರ್ಥ ಅಥವಾ ಶ್ರೀ ಶ್ರೀಪಾದರಾಜರ ಮಠ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಶ್ರೀ ಶ್ರೀಪಾದರಾಜರು ವೃಂದಾವನಸ್ಥರಾಗೀ ಬೇಡಿ ಬಂದ ಭಕ್ತರನ್ನು ಸಲಹುತ್ತಿದ್ದಾರೆ. ಶ್ರೀ ಶ್ರೀಪ್ಪದರಾಜರನ್ನು ಧ್ರುವ ರಾಜರ ಅವತಾರ ಎಂದು ನಂಬಲಾಗಿದೆ. ಇವರು ರಂಗ ವಿಠಲ ಎಂಬ ಆಕಿಂತ ನಾಮವನ್ನು ಬಳಸಿ ಹಲವು ದೇವರ ನಾಮಗಳನ್ನು ಹಾಗೂ ಕೀರ್ತನೆಗಳನ್ನು ರಚಿಸಿದ್ದಾರೆ. ನಮಃ ಶ್ರೀಪಾದರಾಜರ ನಮಸ್ತೆ ವ್ಯಾಸಾಯೋಗಿನೆ, ನಮಃ ಪುರಂದರ ರಾರ್ಯಾಯ ವಿಜಯ ರಾಜಾಯ ಥೇ ನಮಃ. ಎಂಬ ಶ್ಲೋಕದಲ್ಲಿ ಶ್ರೀಪಾದರಾಜರ ಸ್ತುತಿಸಲಾಗಿದ್ದು, ಇವರನ್ನು ಹರಿದಾಸ ಪರಂಪರೆ ಕಂಡ ಶ್ರೇಷ್ಠ ಯತಿವರ್ಯ ಎಂದು ಹೇಳಲಾಗುತ್ತದೆ.
ವ್ಯಾಸರಾಯರಿಗೆ ಶಿಕ್ಷಣ ನೀಡಿನ ಗುರುಗಳಾದ ಶ್ರೀಪಾದರಾಜರು ಈ ಕ್ಷೇತ್ರದಲ್ಲಿ ಜಾಗೃತರಾಗಿ ಇದ್ದುಕೊಂಡು ಶಿಷ್ಯರನ್ನು ಹರಸುತ್ತಿದ್ದಾರೆ. ಈ ಕ್ಷೇತ್ರದ ಮುಖ್ಯ ಆಕರ್ಷಣೆ ಎಂದ್ರೆ ಅದು ಇಲ್ಲಿರುವ ನರಸಿಂಹ ತೀರ್ಥ. ಅತ್ಯಂತ ಸ್ವಚ್ಛ ಹಾಗೂ ಸುಂದರವಾದ ಈ ನರಸಿಂಹ ತೀರ್ಥದಲ್ಲಿ ಹರಿಯುವ ನೀರು ಸಾಕ್ಷಾತ್ ಗಂಗಾ ಮಾತೆಯ ನೀರು ಎಂದು ಹೇಳಲಾಗುತ್ತದೆ. ಶ್ರೀಪಾದರಾಜರು ಇಳಿ ವಯಸ್ಸಿನಲ್ಲಿ ಇದ್ದಾಗ ಒಮ್ಮೆ ಅವರಿಗೆ ಗಂಗಾ ಸ್ನಾನ ಮಾಡುವ ಬಯಕೆ ಉಂಟಾಯಿತು ಆದ್ರೆ ಉತ್ತರ ಭಾರತದ ಕಡೆ ಪ್ರಯಾಣ ಮಾಡಿ ಗಂಗಾ ಸ್ನಾನ ಮಾಡುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ಆಗ ಗಂಗಾ ಮಾತೆಯನ್ನು ಶ್ರೀಪಾದರಾಜರು ಸ್ಥಿತಿಸಿದಾಗ ಗಂಗಾ ಮಾತೆಯು ಕಾಣಿಸಿಕೊಂಡು ಭಕ್ತ ನೀನು ನನ್ನ ಸ್ನಾನಕ್ಕಾಗಿ ಕಾಶಿಗೆ ಬರುವುದು ಬೇಡ ನಾನೇ ನೀನಿರುವ ಸ್ಥಳದಲ್ಲಿ ಹರಿಯುತ್ತೇನೆ ಎಂದು ವಾಗ್ದಾನ ಇಟ್ಟಳು. ಶ್ರೀಪಾದರಾಜ ರಿಗೇ ಕೊಟ್ಟ ಮಾತಿನಂತೆ ಗಂಗಾ ಮಾತೆ ಇಲ್ಲಿ ಹರಿಯುತ್ತಿದ್ದಾಳೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ನರಸಿಂಹ ತೀರ್ಥದಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಎಂದು ಇಲ್ಲಿನ ಸ್ಥಳ ಮಹಾತ್ಮೆಯಲ್ಲಿ ತಿಳಿಸಲಾಗಿದೆ. ಈ ಕ್ಷೇತ್ರದಲ್ಲಿ ಶ್ರೀಪಾದರಾಜರ ಬೃಂದಾವನ ಮಾತ್ರವಲ್ಲದೆ ಮದ್ವಾ ಮೂರ್ತಿ ಇರುವ ಗುಡಿ, ಆಂಜನೇಯ ಸ್ವಾಮಿ, ಯೋಗ ನರಸಿಂಹ ದೇವರ ಸಾನಿಧ್ಯ ಕೂಡ ಇದೆ. ಇಲ್ಲಿ ನೆಲೆಸಿರುವ ಯೋಗ ನರಸಿಂಹ ಸ್ವಾಮಿಯನ್ನು ಅಂಗಾರ ನರಸಿಂಹ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿರುವ ಯೋಗ ನರಸಿಂಹ ಸ್ವಾಮಿ ಬಂಡೆಯ ಮೇಲೆ ಮೂಡಿದ ಸ್ವಾಮಿ ಆಗಿದ್ದು, ಈ ದೇವನು ಯೋಗ ಮುದ್ರೆಯಲ್ಲಿ ಕುಳಿತು ನಾಲ್ಕು ಕರಗಳನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.
ಇಲ್ಲಿಗೆ ಬಂದು ಯೋಗ ನರಸಿಂಹ ಸ್ವಾಮಿ ಗೆ ಭಕ್ತಿಯಿಂದ ಪ್ರಾರ್ಥಿಸಿದರೆ ಮನದ ಆಶೋತ್ತರಗಳು ಎಲ್ಲವೂ ನೆರವೇರುತ್ತದೆ ಎಂಬ ಪ್ರತೀತಿ ಇದೆ. ಅಲ್ಲದೆ ಇಲ್ಲಿರುವ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದರೆ ಆಂಜನೇಯ ಸ್ವಾಮಿಯ ಸಂಪೂರ್ಣ ಅನುಗ್ರಹ ದೊರಕುತ್ತದೆ ಎಂಬ ಮಾತುಗಳು ಇವೆ. ಸುಮಾರು 98 ವರ್ಷಗಳ ವರೆಗೆ ಜೀವಿಸಿದ್ದ ಶ್ರೀಪಾದರಾಜರು ಜೇಷ್ಠ ಶುದ್ಧ ಚತುರ್ದಶಿ ಅಂದು ಈ ಸ್ಥಳದಲ್ಲಿ ವೃಂದಾವನಸ್ಥಾ ರಾದರು ಹಾಗಾಗಿ ಪ್ರತಿ ವರ್ಷವೂ ಈ ಸ್ಥಳದಲ್ಲಿ ಶ್ರೀಪಾದರಾಜರ ಆರಾಧನಾ ಮಹೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಗಳಿಂದ ಶ್ರೀಪಾದರಾಜರ ಬೃಂದಾವನಕ್ಕೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಈ ಸ್ಥಳವನ್ನು ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಸಂಜೆ 5 ರಿಂದ ರಾತ್ರಿ 7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು ಹಸ್ಥೋದಕ ಸೇವೆ, ಮಹಾ ಪೂಜೆ, ಪಂಚಾಮೃತ ಅಭಿಷೇಕ, ದೀಪೋತ್ಸವ ಸೇವೆ, ಮಧು ಅಭಿಷೇಕ ಸೇವೆ, ಪಲ್ಲಕ್ಕಿ ಸೇವೆ ಹಾಗೂ ಕ್ಷೀರಾಭಿಷೇಕ ಸೇವೆಗಳನ್ನು ಮಾಡಿಸಬಹುದು. ಭಕ್ತಿ ಸಂಗಮದ ಕ್ಷೇತ್ರ ಎನಿಸಿಕೊಂಡಿರುವ ಶ್ರೀಪಾದರಾಜರ ಮಠ ವೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಲ್ಲಿದೆ. ಕೋಲಾರದಿಂದ 35 ಕಿಮೀ, ಮುಳಬಾಗಿಲು ಇಂದ 1 ಕಿಮೀ, ದೂರದಲ್ಲಿದೆ. ಮುಳಬಾಗಿಲು ಉತ್ತಮವಾದ ರಸ್ತೆ ಸಂಪರ್ಕ ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಬನ್ನಿ. ಶುಭದಿನ.