ದೇಹವನ್ನು ತಂಪಾಗಿಸಲು ಈ ಆಹಾರಗಳನ್ನು ಸೇವಿಸಿ.

ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದ ಉಷ್ಣತೆ 97 ಡಿಗ್ರಿ ಇಂದ 99 ಡಿಗ್ರಿ ವರೆಗೂ ಇದ್ರೆ ನಾರ್ಮಲ್. ಆದ್ರೆ ಕೆಲವೊಬ್ಬರಿಗೆ ಯಾವಾಗಲೂ 99 ಡಿಗ್ರಿ ಉಷ್ಣತೆ ಮಟ್ಟ ಇರುತ್ತದೆ. ಸೋ ಅದ ತರಹ ಆದಾಗ ಅವರ ಬಾಡಿ ಹೀಟ್ ಆಗಿದೆ ಎಂದರ್ಥ. ಬಾಡಿ ಹೀಟ್ ಆದ್ರೆ ತುಂಬಾನೇ ಬೇವರುತ್ತರೆ ತುಂಬಾನೇ ಕಿರಿ ಕಿರಿ ಆಗಿರುತ್ತಾರೆ. ಸ್ವಲ್ಪ ತುರಿಕೆ ಕೂಡ ಶುರು ಆಗುತ್ತೆ. ಸೋ ನೈಸರ್ಗಿಕವಾಗಿ ನಮ್ಮ ದೇಹದ ಉಷ್ಣತೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಸ್ನೇಹಿತರೆ ಇಂದು ನಾವು ಯಾವ ಮನೆ ಮದ್ದನ್ನು ಹೇಳಿ ಕೊಡುತ್ತಿಲ್ಲ. ನಾವು ಯಾವ ಆಹಾರ ತಿನ್ನುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಸ್ನೇಹಿತರೆ ಮೊದಲನೇ ಟಿಪ್ ಹಣ್ಣುಗಳು ಆದ ಕಲ್ಲಂಗಡಿ, ಕರ್ಭುಜ ಹಣ್ಣು, ಮತ್ತು ಸೌತೆಕಾಯಿಯನ್ನು ಹೆಚ್ಚಾಗಿ ತಿನ್ನಬೇಕು. ಇದನ್ನು ಯಾವಾಗ ತಿನ್ನಬೇಕು ಎಂದು ಹೇಳುವುದಾದರೆ, ಮೊದಲನೆಯ ಅರ್ಧ ಅಂದ್ರೆ ಬೆಳಗಿನಿಂದ ಮಧ್ಯಾನದ ಒಳಗಡೆ ಈ ಹಣ್ಣುಗಳನ್ನು ತಿನ್ನುವುದರಿಂದ ನಮಗೆ ಇಡೀ ದೇಹವನ್ನು ತಂಪಾಗಿ ಇರಿಸುವುದಕ್ಕೆ ಸಹಾಯ ಮಾಡುತ್ತದೆ. ಈ ಮೂರು ಹಣ್ಣು ಹಾಗೂ ತರಕಾರಿಯಲ್ಲಿ ನೀರಿನ ಅಂಶ ಜಾಸ್ತಿ ಇರುತ್ತದೆ. ಹಾಗಾಗಿ ತಂಪಾಗಿ ಇರಿಸಲು ಸಹಕಾರಿ.

 

 

 

ನಮ್ಮ ಜೀರ್ಣ ಕ್ರಿಯೆಗೂ ಕೂಡ ಇದು ತುಂಬಾ ಒಳ್ಳೆಯದು. ತಿಂದ ಆಹಾರ ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ. ಎರಡನೆಯದು ನೀವು ಆದಷ್ಟು ಎಳನೀರು, ಮಜ್ಜಿಗೆ ಇಲ್ಲ ನಿಂಬೆ ಹಣ್ಣಿನ ಜ್ಯೂಸ್ ನ್ನೂ ಕುಡಿಯಬೇಕು. ಇವುಗಳನ್ನು ಮಧ್ಯನ ದಿಂದ ಸಂಜೆಯ ಒಳಗಡೆ ಕುಡಿದರೆ ತುಂಬಾನೇ ಒಳ್ಳೆಯದು. ಇದನ್ನು ಕುಡಿಯುವುದರಿಂದ ಇದರಲ್ಲಿನ ಎಲೆಕ್ಟ್ರೋ ಲೈಟ್ ನಮ್ಮ ದೇಹವನ್ನು ಇಡೀ ದಿನ ಚೈತನ್ಯದಿಂದ ಇರಿಸಲು ಸಹಾಯ ಮಾಡುತ್ತದೆ. ಅದಷ್ಟೇ ಅಲ್ಲದೇ ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಹಕಾರಿ. ಸ್ನೇಹಿತರೆ ಈ ಬಿಸಿಲು ಗಾಲದಲ್ಲಿ ನಮ್ಮ ದೇಹವನ್ನು ಯಾವ ಯಾವ ಆಹಾರಗಳಿಂದ ದೂರವಿಡಬೇಕು ಎಂದು ತಿಳಿದುಕೊಳ್ಳೋಣ. ಎಳೆನೀರು, ಮಜ್ಜಿಗೆ ಬದಲಾಗಿ ಯಾವುದೇ ಸಾಫ್ಟ್ ಡ್ರಿಂಕ್ ನ ಕುಡಿಯಲು ಹೋಗಬೇಡಿ. ಎಲ್ಲರಿಗೂ ಬೆಸಿ ಕಾಲದಲ್ಲಿ ಹೊರಗೆ ಹೋದಾಗ ಬಿಸಿಲಿನ ತಾಪಕ್ಕೆ ಸಾಫ್ಟ್ ಡ್ರಿಂಕ್ಸ್ ನ ಕುಡಿಬೇಕೂ ಅನಿಸುತ್ತೆ. ಆದ್ರೆ ಅಂತಹ ಸಂದರ್ಭದಲ್ಲಿ ಆದಷ್ಟು ನಿಂಬೆ ಹಣ್ಣಿನ ಜ್ಯೂಸ್ ಮಜ್ಜಿಗೆ ಅಥವಾ ಎಳೆನೀರು ಕುಡಿಯಲು ಪ್ರಯತ್ನ ಮಾಡಿ. ನಾನ್ ವೆಜ್ ಸಂಪೂರ್ಣವಾಗಿ ಬಿಟ್ಟುಬಿಡಿ. ನಾನ್ ವೆಜ್ ತಿಂದ್ರೆ ಅದು ಜೀರ್ಣ ಆಗುವುದು ತುಂಬಾ ಕಷ್ಟ. ಇದರಿಂದ ದೇಹದ ಉಷ್ಣತೆ ಜಾಸ್ತಿ ಆಗುತ್ತೆ. ಸ್ನೇಹಿತರೆ ಇನ್ನೂ ಪ್ರಿಸರ್ವೇಟಿವ್ ಹಾಕಿರುವ ಆಹಾರವನ್ನು ತಿನ್ನುವುದನ್ನು ಬಿಡಿ. ಬಿಸ್ಕೆಟ್, ರೆಡಿ ಮೇಡ್ ನೂಡಲ್ಸ್,ಅವುಗಳನ್ನು ಖಂಡಿತವಾಗಿ ಅವಾಯ್ಡ್ ಮಾಡಿ.

 

 

 

ಇನ್ನೂ ಆದಷ್ಟು ಅತಿಯಾದ ಉಪ್ಪು ಹಾಗೂ ಮಸಾಲೆ ಪದಾರ್ಥಗಳನ್ನು ಅವಾಯ್ಡ್ ಮಾಡಿ. ನಿಂಬೆ ಹಣ್ಣು ಹಾಗೂ ಹುಳಿ ಬಿಟ್ಟು ಬೇರೆ ಉಪ್ಪು ಮಸಾಲ ಇರುವ ಐಟಂ ನ ತಿನ್ನುವುದನ್ನು ಬಿಡಿ. ನೀರಿನ ಅಂಶ ಇರುವ ತರಕಾರಿಗಳು ಯಾವುದು ಎಂದು ತಿಳಿಸಿ ಕೊಡುತ್ತೇವೆ. ಹಾಗಾಗಿ ಈ ತರಕಾರಿಗಳು ಕೂಡ ದೇಹದಲ್ಲಿ ಆಗಿರುವ ಹೀಟ್ ಅನ್ನು ಕಮ್ಮಿ ಮಾಡಿಕೊಳ್ಳಬಹುದು. ಸೋರೆಕಾಯಿ, ಹಾಗಲಕಾಯಿ,ಕುಂಬಳಕಾಯಿ ಈ ಎಲ್ಲಾ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಸೋ ಇದನ್ನು ಬಳಸಿ ಆಹಾರ ತಯಾರಿಸಿ ಸೇವನೆ ಮಾಡುವುದರಿಂದ ಬಾಡಿ ಹೀಟ್ ನ ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಆದಷ್ಟು ಜಾಸ್ತಿ ನೀರನ್ನು ಕುಡಿಯಿರಿ ಆದ್ರೆ ಫ್ರಿಡ್ಜ್ ಅಲ್ಲಿ ಇಟ್ಟಿರುವ ನೀರನ್ನು ಕುಡಿಯುವುದು ಬೇಡ. ಫ್ರಿಡ್ಜ್ ಅಲ್ಲಿಟ್ಟ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವ ಹೀಟ್ ಇನ್ನೂ ಜಾಸ್ತಿ ಆಗುತ್ತೆ. ಹಾಗಂತ ಬೇಸಿಗೆ ಕಾಲದಲ್ಲಿ ತಣ್ಣನೆ ನೀರು ಕುಡಿಯಬೇಕು ಎನ್ನಿಸಿದರೆ ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರನ್ನು ಕುಡಿಯಿರಿ. ಈ ಬಿಸಿಲು ಕಾಲದಲ್ಲಿ ಡ್ರೈ ಫ್ರೂಟ್ಸ್ ಅಂದ್ರೆ ಒಣಗಿದ ಯಾವುದೇ ಹಣ್ಣನ್ನು ತಿನ್ನಲು ಹೋಗಬೇಡಿ. ಸ್ವಲ್ಪ ಹೊತ್ತು ನೆನೆಸಿ ಆಮೇಲೆ ನೀವು ಅವುಗಳನ್ನು ತಿನ್ನಬಹುದು. ಆದಷ್ಟು ಬೆಲ್ಲದಿಂದ ಮಾಡಿದ ಸಿಹಿ ಅಡುಗೆ ತಿನ್ನುವುದರಿಂದ ಬಾಡಿ ಹೀಟ್ ಕಮ್ಮಿ ಆಗುತ್ತೆ. ನೋಡಿದ್ರಲ್ವ ಸ್ನೇಹಿತರೆ ಯಾವ ಯಾವ ಆಹಾರಗಳನ್ನು ಸೇವಿಸಿ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published.