ಜಗತ್ತಿನ ಬೆಸ್ಟ್ ಕೂಲಿಂಗ್ ಜ್ಯೂಸ್. ಕುಂದಾಪುರದ ಫೇಮಸ್ ಬಾಳೆಹಣ್ಣಿನ ಅಮೃತದಂತಹ ರಸಾಯನ…!!!

ಜಗತ್ತಿನ ಬೆಸ್ಟ್ ಕೂಲಿಂಗ್ ಜ್ಯೂಸ್. ಕುಂದಾಪುರದ ಫೇಮಸ್ ಬಾಳೆಹಣ್ಣಿನ ಅಮೃತದಂತಹ ರಸಾಯನ…!!!

ನಮಸ್ತೆ ಪ್ರಿಯ ಓದುಗರೇ, ಬಿಸಿಲು ಗ ಕಾಲಕ್ಕೆ ನಿಮ್ಮ ದೇಹವನ್ನು ಕೂಲ್ ಮಾಡುವಂಥ ಇನ್ನೊಂದು ಇದಕ್ಕಿಂತ ಬೆಸ್ಟ್ ರೆಸಿಪಿ ನಿಮಗೆ ಬೇರೆ ಯಾವುದೂ ಸಿಗಲ್ಲ. ಹಾಗೂ ಇದಕ್ಕಿಂತ ರುಚಿಯಾದ ಬೇರೆ ಯಾವ ರೆಸಿಪಿ ನಿಮಗೆ ಸಿಗಲ್ಲ. ಇದು ಏನು ಹೇಗೆ ಮಾಡುವುದು ಎಂದು ತಿಳಿಯಬೇಕಾದರೆ ಸಂಪೂರ್ಣ ಲೇಖನವನ್ನು ಓದಿ. ಹಾಗಾದ್ರೆ ಈ ವಿಶೇಷವಾದ ರೆಸಿಪಿಯನ್ನು ಹೇಗೆ ಮಾಡುವುದು ಎಂದು ನೋಡೋಣ. ಇವತ್ತು ಒಂದು ಬಾಳೆಹಣ್ಣಿನ ರಸಾಯನ ಮಾಡುವುದನ್ನು ಕಲಿಯೋಣ. ಈ ರಸಾಯನ ನೀವು ಉಡುಪಿ ಹಾಗೂ ಕುಂದಾಪುರಕ್ಕೆ ಹೋದ್ರೆ ಇದು ತುಂಬಾ ಫೇಮಸ್ ರಸಾಯನ. ಬಾಳೆಹಣ್ಣಿನಲ್ಲಿ ಇದನ್ನು ತಯಾರಿಸುತ್ತಾರೆ. ಬಾಳೆಹಣ್ಣಿನ ಜೊತೆಗೆ ಇನ್ನಿ ಕೆಲವು ಸಾಮಗ್ರಿಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದರ ರುಚಿಯನ್ನು ಹೇಳಿದರೆ ಗೊತ್ತಾಗಲ್ಲ ಅದನ್ನು ಕುಡಿದಾಗಲೆ ಅದರ ಅದ್ಭುತ ರುಚಿ ನಿಮಗೆ ಸಿಕ್ಕುತ್ತದೆ. ಇದನ್ನು ತಯಾರಿಸಲು ಬಳಸುವ ಅಡುಗೆ ಸಾಮಗ್ರಿಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

 

 

 

ಇದನ್ನು ಹೇಗೆ ಸಿಂಪಲ್ ಆಗು ಸುಲಭವಾಗಿ ಯಾರು ಬೇಕಾದರೂ ಮಾಡಿಕೊಂಡು ಅವರ ಮನೆಯಲ್ಲಿ ಸವಿಯಬಹುದು. ಬನ್ನಿ ತಡ ಯಾಕೆ ಬಾಳೆಹಣ್ಣಿನ ರಸಾಯನ ಮಾಡುವ ವಿಧಾನ ಕಲಿಯೋಣ. ಮೊದಲಿಗೆ ಒಂದೆರಡು ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಳ್ಳಿ. ನೀವು ಯಾವ ಬಾಳೆಹಣ್ಣನ್ನು ಆದ್ರೆ ಏಲಕ್ಕಿ, ಪಚ್ಚೆ,ಸಕ್ರೆ ಬಾಳೆ ಯಾವುದಾದ್ರೂ ಬಳಸಬಹುದು. ಜಾಸ್ತಿ ಹಣ್ಣಗಿರುವ ಬಾಳೆಹಣ್ಣನ್ನು ಆಯ್ಕೆ ಮಾಡಿ ಅದರ ರುಚಿ ತುಂಬಾ ಚೆನ್ನಾಗಿರುತ್ತದೆ. ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಸ್ಲೈಸ್ ರೀತಿ ಕತ್ತರಿಸಬೇಕು. ಆಮೇಲೆ ಅಡ್ಡವಾಗಿ ಕತ್ತರಿಸಿ ಚಿಕ್ಕದಾಗಿ ಕತ್ತರಿಸಿ. ಈ ಹಣ್ಣನ್ನು ಇಂದು ಬೌಲ್ ಗೆ ವರ್ಗಾಯಿಸಿ. ಮ್ಯಾಶರ್ ಇಂದ ಇನ್ನೂ ಮ್ಯಾಶ್ ಮಾಡಿ ಪೇಸ್ಟ್ ರೀತಿ ತಯಾರಿಸಿ. ಸ್ಪೂನ್ ಸಹ ಬಳಸಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಬಿಸಿ ಮಾಡಿ ತಣ್ಣಗೆ ಮಾಡಿದ ಸ್ವಲ್ಪ ಹಾಲನ್ನು ಸೇರಿಸಿ. ಇದೆಲ್ಲದಕ್ಕೂ ಮುಂಚೆ ಒಂದು ಚಮಚ ಕಾಮ ಕಸ್ತೂರಿ ಬೀಜ ಅಥವಾ ಸಬ್ಜ ಸೀಡ್ಸ್ ನ್ನೂ ನೀರಿಗೆ ಹಾಕಿ ನೆನೆಯಲು ಬಿಡಿ. ಈ ಬೀಜಗಳು ದೇಹವನ್ನು ಬಲು ಬೇಗ ತಂಪಾಗಿಸುತ್ತವೆ. ಇದನ್ನು ಬಳಕೆ ಮಾಡಿದರೆ ನಿಮ್ಮ ದೇಹ ಎಷ್ಟೇ ಹೀಟ್ ಆಗಿದ್ದರೂ ತಕ್ಷಣ ಕಡಿಮೆ ಮಾಡುತ್ತೆ. ಒಂದು ಹತ್ತು ನಿಮಿಷಗಳಲ್ಲಿ ಆ ಬೀಜಗಳು ಉಬ್ಬಿ ಬಿಳಿ ಪರದೆಯ ರೀತಿ ರೆಡಿ ಆಗುತ್ತವೆ.

 

 

 

ಇವುಗಳನ್ನು ನಾವು ಇಂದು ತಯಾರಿಸುತ್ತಿರುವ ರಸಾಯನಕ್ಕೆ ಹಾಕೋಣ. ಮೊದಲು ಬಾಳೆಹಣ್ಣು ಹಾಗೂ ತಣ್ಣಗಿನ ಹಾಲನ್ನು ಸೇರಿಸಿದ ಬೌಲ್ ಗೆ ಒಂದೊಂದೇ ಅಡುಗೆ ಸಾಮಗ್ರಿಗಳನ್ನು ಸೇರಿಸೋಣ. ಮೊದಲು ಒಂದು ಕಾಲು ಚಮಚ ಏಲಕ್ಕಿ ಪುಡಿ, ನಂತರ 8-10 ಪೀಸ್ ಗೋಡಂಬಿ, 10-20 ಒಣ ದ್ರಾಕ್ಷಿ, ನಿಮ್ಮ ಟೇಸ್ಟ್ ಗೆ ಅನುಗುಆವಾಗಿ ಸ್ವಲ್ಪ ಸಕ್ಕರೆ ಸೇರಿಸಿ. ಈಗ ಇದಕ್ಕೆ ಎರಡು ಚಮಚ ಕೊನೆಗೆ ನೆನ್ಸಿದ ಕಾಮ ಕಸ್ತೂರಿ ಬೀಜಗಳನ್ನು ಹಾಕೊಳ್ಳೋಣ. ಇದನ್ನೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡೋಣ. ನಾವು ಬೆರೆಸುವ ಎಲ್ಲ ಸಾಮಗ್ರಿಗಳು ಚೆನ್ನಾಗಿ ಮಿಕ್ಸ್ ಆಗಲಿ. ಹೀಗೆ ಮಿಕ್ಸ್ ಮಾಡುವುದರಿಂದ ಇದಕ್ಕೆ ಹಾಕಿದ ಸಕ್ಕರೆ ಕೂಡ ಕರಗುತ್ತದೆ. ಈಗ ಕೊನೆಯಲ್ಲಿ ನಿಮಗೆ ಎಷ್ಟು ತಿಳಿಯಾಗಿ ಬೇಕು ಅಷ್ಟು ಹಾಲನ್ನು ಸೇರಿಸಿ. ಎರಡು ಬಾಳೆಹಣ್ಣನ್ನು ಉಪಯೋಗಿಸಿದರೆ ಅದಕ್ಕೆ ಒಂದು ದೊಡ್ಡ ಲೋಟ ಹಾಲನ್ನು ಹಾಕಬೇಕು. ಈಗ ಬಾಳೆಹಣ್ಣಿನ ರಸಾಯನ ಸವಿಯಲು ಸಿದ್ಧ. ಒಮ್ಮೆ ಇದನ್ನು ತಯಾರಿಸಿ ಕುಡಿದದ್ದೆ ಆದ್ರೆ ಇನ್ನೂ ಯಾವತ್ತೂ ಮರೆಯೋಲ್ಲ ಹಾಗೂ ಬಿಡೋಲ್ಲ. ಪದೇ ಪದೇ ಮಾಡಿಕೊಂಡು ಕುಡಿತಾ ಇರ್ಥಿರಾ. ಬಾಯಲ್ಲಿ ಅಲ್ಲಲ್ಲಿ ಬಾಳೆಹಣ್ಣಿನ ಚಿಕ್ಕ ತುಂಡುಗಳು ಹಾಗೂ ಗೋಡಂಬಿ ದ್ರಾಕ್ಷಿ ಸಿಗುತ್ತಾ ಇರುತ್ತದೆ. ಕುಡಿಯುತ್ತಿದ್ದರೆ ತುಂಬಾ ಮಜಾ ಎನ್ನಿಸುವುದು ಖಂಡಿತ. ನೋಡಿದ್ರಲ್ವ ಫ್ರೆಂಡ್ಸ್ ರುಚಿ ರುಚಿಯಾದ ಆರೋಗ್ಯದಾಯಕ ಶಕ್ತಿದಾಯಕ ಬಾಳೆಹಣ್ಣಿನ ರಸಾಯನ ಹೇಗೆ ಮಾಡುವುದು ಎಂದು. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ನೀವು ತಯಾರಿಸಿ ಸವಿದು ನಿಮ್ಮವರಿಗು ಶೇರ್ ಮಾಡಿ. ಶುಭದಿನ.

Uncategorized