ಒಂದು ತಿಂಗಳು ಈ ಮ್ಯಾಜಿಕಲ್ ಜ್ಯೂಸ್ ಕುಡಿಯಿರಿ ಎಷ್ಟು ಚಂದ & ಆರೋಗ್ಯವಾಗಿ ಇರ್ತಿರಾ ನೋಡಿ..!!

ಒಂದು ತಿಂಗಳು ಈ ಮ್ಯಾಜಿಕಲ್ ಜ್ಯೂಸ್ ಕುಡಿಯಿರಿ ಎಷ್ಟು ಚಂದ & ಆರೋಗ್ಯವಾಗಿ ಇರ್ತಿರಾ ನೋಡಿ..!!

ನಮಸ್ತೆ ಪ್ರಿಯ ಓದುಗರೇ, ಚರ್ಮದ ಆರೋಗ್ಯಕ್ಕ್ ಉತ್ತಮವಾದ ಒಂದು ಮನೆಯಲ್ಲೇ ಮಾಡಬಹುದಾದ ಒಂದು ಜ್ಯೂಸ್ ನ್ನ ಹೇಗೆ ತಯಾರಿಸುವುದು ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈಗಿನ ಬೇಸಿಗೆ ಕಾಲದಲ್ಲಿ ಮುಖ ಗ್ಲೋ ಆಗಲು ಮುಖ ಶೈನ್ ಆಗಲು, ಚರ್ಮ ಒಳ್ಳೆಯ ಬಣ್ಣಕ್ಕೆ ತಿರುಗಲು ಒಂದು ಮ್ಯಾಜಿಕಲ್ ಜ್ಯೂಸ್ ನ್ನ ಯಾವ ರೀತಿ ತಯಾರಿಸಿ ಕುಡಿಯಬಹುದು ಎಂದು ತಿಳಿಯೋಣ. ಇದನ್ನು ವಾರದಲ್ಲಿ ಒಂದೆರಡು ಬಾರಿ ಕುಡಿದರೆ ಸಾಕು ಮುಖ ಒಳ್ಳೆಯ ಹೊಳಪನ್ನು ಪಡೆಯುತ್ತದೆ. ಈ ಡ್ರಿಂಕ್ ಬರೀ ಮುಖದ ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೂ ಒಳ್ಳೆಯದು. ಹಾಗೆಯೇ ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಡ್ರಿಂಕ್ ಇಂದ ಯಾವುದೇ ರೋಗ ರುಜಿನಗಳು ಬರೋದಿಲ್ಲ. ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಅರ್ಥ ಆಗುತ್ತೆ.

 

 

 

ನಿಮಗೆ ತುಂಬಾ ಇಷ್ಟ ಆಗುತ್ತೆ. ಇಷ್ಟ ಆದ್ರೆ ದಯವಿಟ್ಟು ಲೈಕ್ ಮಾಡಿ. ಮುಖದ ಚರ್ಮಕ್ಕೆ ಸಂಬಂಧ ಪಟ್ಟ ಹಾಗೆ ಒಂದು ಮನೆಮದ್ದನ್ನು ತಿಳಿದುಕೊಳ್ಳೋಣ. ಈಗಿನ ಸೆಕೆ ಗಾಲಕ್ಕೆ ನಮ್ಮ ಸ್ಕಿನ ತುಂಬಾ ಡ್ರೈ ಆಗೋದು, ಒಣಗೊದು ಆಗ್ತಾ ಇರುತ್ತೆ. ಮುಖದ ಗ್ಲೋ ಹೆಚ್ಚು ಮಾಡಲು ಇಂದು ಹೇಳುವ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಸ್ಕಿನ್ ನ ಗ್ಲೋ ಜಾಸ್ತಿ ಆಗುತ್ತೆ. ಶೈನ್ ಆಗುತ್ತೆ ಹಾಗೂ ಆರೋಗ್ಯದಾಯಕ ಆಗಿಯೊ ಕೆಲ್ಸ ಮಾಡುತ್ತೆ. ನಾವು ಹೇಳಿಕೊಡುವ ಈ ಜ್ಯೂಸ್ ನ ನೀವು ಪ್ರತಿದಿನ ಬೆಳಿಗ್ಗೆ ಬೆಳಗಿನ ಉಪಹಾರಕ್ಕೆ ಮೊದಲು ಅರ್ಧ ಒಂದು ಗಂಟೆ ಮುಚೆ ಕುಡಿದರೆ ನಿಮಗೆ ಸ್ಕಿನ್ ನಲ್ಲಿ ಆಗುವ ಬದಲಾವಣೆ ಚೆನ್ನಾಗಿ ಗೊತ್ತಾಗುತ್ತೆ. ಹಾಗಾದ್ರೆ ತಡ ಯಾಕೆ ಬನ್ನಿ ಈ ಮ್ಯಾಜಿಕಲ್ ಡ್ರಿಂಕ್ ಮಾಡುವ ವಿಧಾನ ತಿಳಿಯೋಣ. ಮೊದಲಿಗೆ ಒಂದು ಎರಡು ಕ್ಯಾರೆಟ್ ನ ಕಟ್ ಮಾಡಿಟ್ಟುಕೊಳ್ಳಿ, ಹಾಗೆ ಒಂದು ಬೀಟ್ರೂಟ್ ಕಟ್ ಮಾಡಿಟ್ಟುಕೊಳ್ಳಿ, ನಂತರ ಒಂದು ಟೊಮೆಟೊ ನ ಕಟ್ ಮಾಡಿ ಇಟ್ಟುಕೊಳ್ಳಿ.

 

 

 

ಈ ಮೂರನ್ನು ಉಪಯೋಗಿಸಿ ಒಂದು ಡ್ರಿಂಕ್ ನ ಮಾಡೋಣ. ಮೊದಲಿಗೆ ಜ್ಯೂಸ್ ಮಾಡುವ ಒಂದು ಜಾರ್ ತೆಗೆದುಕೊಂಡು ಅದಕ್ಕೆ ಎರಡು ಹೆಚ್ಚಿದ ಕ್ಯಾರೆಟ್ ಹಾಕಿಕೊಳ್ಳಿ, ಒಂದು ಬೀಟ್ರೂಟ್, ನಂತ್ರ ಒಂದು ಟೊಮೆಟೊ ಹಾಕಿಕೊಂಡು ಸ್ವಲ್ಪ ಅಂದ್ರೆ ಅರ್ಧ ಮುಷ್ಟಿಯಷ್ಟು ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಸೇರಿಸಿ, ಇದಕ್ಕೆ ಅರ್ಧ ಲೋಟ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ನಂತರ ಇದನ್ನು ಒಂದು ಸ್ಟೇನರ್ ಇಂದ ಸೋಸಿಕೊಳ್ಳಿ. ಬರೀ ಜ್ಯೂಸ್ ಬೇಕಾಗಿರುವುದರಿಂದ ಮೇಕೆ ಉಳಿದಿರುವ ತಿರುಳನ್ನು ಹೊರಗೆ ತೆಗೆದಿಟ್ಟ ರೆ ಒಳ್ಳೆಯದು. ಪ್ರೆಸ್ ಮಾಡಿ ಅಥವಾ ಬಟ್ಟೆಯಿಂದ ಜ್ಯೂಸ್ ನ್ನೂ ಸಂಪೂರ್ಣವಾಗಿ ಹಿಂಡಿ ತೆಗೆದಿಟ್ಟುಕೊಳ್ಳಿ. ಈಗ ಚರ್ಮದ ಉತ್ತಮ ಆರೋಗ್ಯಕ್ಕೆ ಮ್ಯಾಜಿಕಲ್ ಆಗಿ ಕೆಲಸ ಮಾಡುವ ಡ್ರಿಂಕ್ ಈಗ ತಯಾರಾಗಿದೆ. ಇದಕ್ಕೆ ಸಕ್ಕರೆ ಹಾಕುವ ಅವಶ್ಯಕತೆ ಇಲ್ಲ. ಇದೆ ಸಿಹಿಯಾಗಿ ಇರುವುದರಿಂದ ಸಕ್ಕರೆಯ ಅವಶ್ಯಕತೆ ಇಲ್ಲ. ನೋಡಿದ್ರಲ್ವ ಸ್ನೇಹಿತರೆ ಕ್ಯಾರೆಟ್ ಬೀಟ್ರೂಟ್ ಹಾಗೂ ಟೊಮೆಟೊ ಬಳಸಿ ಹೇಗೆ ಒಂದು ಆರೋಗ್ಯಕರ ಹೆಲ್ತ್ ಡ್ರಿಂಕ್ ತಯಾರಿಸುವುದು ಎಂದು. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ