ಮುಖದ ಕಾಂತಿ ಹೆಚ್ಚಿಸುವ ಬಾಳೆಹಣ್ಣಿನ ಫೇಸ್ ಮಾಸ್ಕ್.

ನಮಸ್ತೆ ಪ್ರಿಯ ಓದುಗರೇ, ಈ ಬಿರು ಬೇಸಿಗೆಯಲ್ಲಿ ನಮ್ಮ ನಮ್ಮ ಕೆಲಸಗಳನ್ನು ಬಿಡಲಾಗದೇ ಹೊರಗಡೆ ಹೋಗುವ ಸಂದರ್ಭ ಬಂದೆ ಬರುತ್ತದೆ. ಮುಖದ ಅಂದ ಹೋಗುತ್ತೆ ಎಂದು ಮನೆಯಲ್ಲಿ ಕೂರಲು ಆಗುವುದಿಲ್ಲ. ಹಾಗಾಗಿ ಈ ಬಿಸಿಲಿನ ಬೇಗೆಗೆ ನಮ್ಮ ಮುಖ ಕಾಂತಿ ಕಳೆದುಕೊಂಡು ಸೂರ್ಯನ ಯುವಿ ಕಿರಣಗಳಿಂದ ಕಾಂತಿ ಹೀನವಾಗಿ ಕಾಣಲು ಶುರು ಆಗುತ್ತದೆ. ಒಮ್ಮೊಮ್ಮೆ ನಮಗೆ ಏನಪ್ಪಾ ನಮ್ಮ ತ್ವಚೆ ಹೀಗೆ ಸುಕ್ಕು ಗಟ್ಟಿ ಕಪ್ಪು ಕಲೆಗಳು ಬರುತ್ತಿದೆ ಎಂದು. ಆ ಎಲ್ಲಾ ಸಮಸ್ಯೆಗೆ ರಾಮಬಾಣ ಈ ಬಾಳೆಹಣ್ಣಿನ ಫೇಸ್ ಮಾಸ್ಕ್. ಇಂದಿನ ಲೇಖನದಲ್ಲಿ ಬಾಳೆಹಣ್ಣಿ ನಿಂದಾ ಹೇಗೆ ನಮ್ಮ ಮುಖಕ್ಕೆ ಮಾಸ್ಕ್ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ. ಈ ಮಾಸ್ಕ್ ಹಾಕಿಕೊಳ್ಳುವುದರಿಂದ ಚರ್ಮ ತುಂಬಾ ಸಾಫ್ಟ್ ಆಗಲು ಸಹಾಯ ಮಾಡುತ್ತದೆ. ಇನ್ನೂ ಹಲವಾರು ಉಪಯೋಗಗಳು ಇವೆ. ಅದನ್ನು ಮಾಸ್ಕ್ ತಯಾರು ಮಾಡುವ ವಿಧಾನದ ಜೊತೆಗೆ ಒಂದೊಂದಾಗಿ ತಿಳಿದುಕೊಳ್ಳೋಣ. ಅದಕ್ಕಿಂತ ಮೊದಲು ಈ ಮಾಸ್ಕ್ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು ಎನ್ನುವುದನ್ನು ನೋಡೋಣ.

 

ನಮಗೆ ಮೊದಲು ಬೇಕಾಗಿರುವುದು ಬಾಳೆಹಣ್ಣು, ಮೊಸರು ಮತ್ತು ಜೇನುತುಪ್ಪ. ಬಾಳೆಹಣ್ಣನ್ನು ಸಣ್ಣದಾಗಿ ಸ್ಲೈಸ್ ಮಾಡಿಕೊಂಡು ಇಟ್ಟಿರಿ ನಂತರ ಇದನ್ನು ಚೆನ್ನಾಗಿ ಸ್ಪೂನ್ ನ ಸಹಾಯದಿಂದ ಮ್ಯಾಶ್ ಮಾಡಿಕೊಳ್ಳಬೇಕು. ನಾವು ಈ ಮಾಸ್ಕ್ ಅಲ್ಲಿ ಮೇನ್ ಆಗಿ ಬಾಳೆಹಣ್ಣು ಬಳಸುತ್ತಿದ್ದೇವೆ, ಈ ಬಾಳೆಹಣ್ಣನ್ನು ಬಳಸುವುದರಿಂದ ಇದರಲ್ಲಿನ ಪೊಟ್ಯಾಸಿಯಂ ಚರ್ಮಕ್ಕೆ ಒಳ್ಳೆಯ ಪೋಷಕಾಂಶವನ್ನು ಒದಗಿಸುತ್ತದೆ. ಚರ್ಮವನ್ನು ಮಾಯಿಷ್ಟರಿಸೇರ್ ತರಹ ಇರಿಸಿ ಚರ್ಮವನ್ನು ಹೈಡ್ರೇಟ್ ಮಾಡುತ್ತೆ. ಚರ್ಮವನ್ನು ಸಾಫ್ಟ್ ಆಗಿ ಕೂಡ ಇರಿಸಲು ಸಹಕಾರಿ ಈ ಬಾಳೆಹಣ್ಣು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಚರ್ಮದಲ್ಲಿ ಆಗುವ ಸುಕ್ಕನ್ನು ಕೂಡ ಕಡಿಮೆ ಮಾಡುತ್ತದೆ. ಈಗ ಚೆನ್ನಾಗಿ ಮ್ಯಾಶ್ ಆದ ಬಾಳೆಹಣ್ಣಿ ಗೆ ಒಂದು ಚಮಚ ಜೇನುತುಪ್ಪ ಸೇರಿಸಿ. ಜೇನುತುಪ್ಪ ಬಳಸುವುದರಿಂದ ಇದು ಚರ್ಮಕ್ಕೆ ಒಳ್ಳೆಯ ಗ್ಲೋ ಕೊಡುತ್ತೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್,ಆಂಟಿ ಸೆಪ್ಟಿಕ್ ಗುಣ ಮುಖವನ್ನು ಕ್ಲೆನ್ಸ್ ಮಾಡುತ್ತದೆ. ಹಾಗೂ ಆಕ್ನೆ ಅಂದ್ರೆ ಮುಖದ ಮೇಲೆ ಆಗುವ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದಲ್ಲಿನ ಎಣ್ಣೆ ಅಂಶ ತೆಗೆದು ಹಾಕಿ ಮುಖಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ. ಕೊನೆಯದಾಗಿ ಒಂಚೂರು ಗಟ್ಟಿ ಮೊಸರನ್ನು ಹಾಕಿಕೊಳ್ಳುವ.

 

ಮೊಸರನ್ನು ಬಳಸುವುದರಿಂದ ಬಿಸಿಲಿನಿಂದ ಆಗಿರುವ ಕಪ್ಪನ್ನು ಕಮ್ಮಿ ಮಾಡಿ ಚರ್ಮದ ಸುಕ್ಕನ್ನ ಸಹ ಕಡಿಮೆ ಮಾಡುತ್ತದೆ. ಕಪ್ಪು ಕಲೆಗಳನ್ನು ಮಾಯ ಮಾಡಿಸಿ ಚರ್ಮವನ್ನು ಸಾಫ್ಟ್ ಆಗಿ ಮೆದುವಾಗಿ ಬೆಣ್ಣೆಯಂತೆ ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಮೂರು ಸಾಮಗ್ರಿಗಳು ಚೆನ್ನಾಗಿ ಮಿಕ್ಸ್ ಆಗಬೇಕು. ಆಮೇಲೆ ಈ ತಯಾರಾದ ಮಾಸ್ಕ್ ಅನ್ನು ಇಡೀ ನಿಮ್ಮ ಮುಖಕ್ಕೆ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಮೇಲೆ 5-10 ನಿಮಿಷ ಹಾಗೆಯೇ ಚರ್ಮದ ಮೇಲೆ ಬಿಡಿ. 10 ನಿಮಿಷಗಳು ಆದ ಮೇಲೆ ನಿಮ್ಮ ಮುಖವನ್ನು ಚೆನ್ನಾಗಿ ತಣ್ಣಿರಲ್ಲಿ ತೊಳೆಯಬಹುದು. ಒಂದೇ ಬಳಕೆಯಲ್ಲಿ ನಿಮ್ಮ ಚರ್ಮ ಸಾಫ್ಟ್ ಆಗಿ ಹೈಡ್ರೇಟ್ ಆಗಿ ನಿಮಗೆ ಅನಿಸುತ್ತದೆ. ಸೋ ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಇದನ್ನು ತಯಾರಿಸಿ ಬಳಸಿದ ಮೇಲೆ ನಿಮಗೆ ಏನು ಫಲಿತಾಂಶ ಬರುತ್ತೆ ಅದನ್ನು ನಮಗೆ ತಿಳಿಸಿ. ನೊಡಿದ್ರಲ್ವ ಸ್ನೇಹಿತರೆ ಅಗ್ಗವಾಗಿ ಸಿಗುವ ಬಾಳೆಹಣ್ಣನ್ನು ಉಪಯೋಗಿಸಿ ನಮ್ಮ ಮುಖದ ಸೌಂದರ್ಯ ಹಾಗೂ ಕಾಂತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published.