ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಗಾರ್ಲಿಕ್ ಬಟ್ಟರ್ ಚಿಕನ್ ರೆಸಿಪಿ.

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಗಾರ್ಲಿಕ್ ಬಟ್ಟರ್ ಚಿಕನ್ ರೆಸಿಪಿ.

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ವೀಕೆಂಡ್ ಬಂತು ಎಂದರೆ ದಿನದ ಓಡಾಟ, ಅಲೆದಾಟ, ಮತ್ತು ಒಂದಿಷ್ಟು ಶಾಪಿಂಗ್ ಹಾಗೆ ಕೊನೆಗೆ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ತಿನ್ನಲು ಆಗದೆ ರೆಸ್ಟೋರೆಂಟ್ ಗೆ ಹೋಗುವವರು ಒಂದಿಷ್ಟು ಜನ ಆದರೆ, ವೀಕೆಂಡ್ ಬಂತು ಎಂದರೆ ಇಡೀ ದಿನ ಇಡೀ ವಾರದ ಮಿಕ್ಕಿದ ಅರ್ಧ ಆದ ನಿದ್ದೆಯನ್ನು ಪೂರ್ಣ ಮಾಡಿ, ಅಡುಗೆ ಮಾಡದೆ ಮ್ಯಾಗಿ ತಿಂದು, ಕತ್ತಲಾಯಿತು ಎಂದರೆ ಇಡೀ ವಾರದ ಸುಸ್ತನ್ನು, ಒತ್ತಡವನ್ನು ಮರೆಯಲು ರೆಸ್ಟೋರೆಂಟ್ ಗೆ ಹೋಗುವವರು ಕೆಲವೊಂದಿಷ್ಟು ಜನ. ಹೇಗೆ ವಿವಿಧ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ವೀಕೆಂಡ್ ನ ಅನುಭವಿಸುವವರು ನಮ್ಮ ಬೆಂಗಳೂರು ಜನ. ಹೀಗೆ ರೆಸ್ಟೋರೆಂಟ್ ಗೆ ಹೋದಾಗ ಅಲ್ಲಿ ಮಾಂಸಾಹಾರ ಪ್ರಿಯರು ಚಿಕನ್ ಅಲ್ಲಿ ಇತ್ತೀಚೆಗೆ ಫೇಮಸ್ ಗಾರ್ಲಿಕ್ ಬಟ್ಟರ್ ಚಿಕನ್ ಆರ್ಡರ್ ಮಾಡಿ ತಿಂದು ಆಹಾ ಎಂಥ ರುಚಿ ಎಂದು ಬಾಯಿ ಚಪ್ಪರಿಸುತ್ತಾರೆ.

 

ಹೀಗೆ ಬಾಯಿ ಚಪ್ಪರಿಸುವ ಗಾರ್ಲಿಕ್ ಬಟ್ಟರ್ ಚಿಕನ್ ರೆಸಿಪಿಯನ್ನು ಮನೆಯಲ್ಲೇ ಮಾಡಿಕೊಳ್ಳುವ ವಿಧಾನವನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಮೊದಲು ಒಂದು ಮಿಕ್ಸಿಂಗ್ ಬೌಲ್ ಅಲ್ಲಿ ಸಣ್ಣದಾಗಿ ಕತ್ತರಿಸಿದ ಚಿಕನ್ ಪೀಸ್ ಗಾಳನ್ನು ಹಾಕಿ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮೊಟ್ಟೆಯ ಬಿಳಿ ಭಾಗ, ಸೋಯಾ ಸಾಸ್, ವೈಟ್ ಪೆಪ್ಪರ್ ಅಂದ್ರೆ ಕಾಳು ಮೆಣಸಿನ ಪುಡಿ, ಒಂದು ಚಮಚ ವಿನೆಗರ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ ಚಿಕನ್ ಮಾರಿನೆಟ್ ಆಗಲು ಇಡೀ. ನಂತರ ಮ್ಯರಿನೆಟ್ ಆದ ಚಿಕನ್ ನ್ನೂ ಒಂದು ಫ್ರೈ ಇಂಗ್ ಪಾನ್ ಅಲ್ಲಿ ಸ್ವಲ್ಪವೇ ಎಣ್ಣೆ ಹಾಕಿ ಎಲ್ಲಾ ಚಿಕನ್ ಪೀಸ್ ಹಾಕಿ ಹೊಂಬಣ್ಣ ಬರುವ ವರೆಗೆ ಫ್ರೈ ಮಾಡಿ. ಹೊಂಬಣ್ಣ ಬಂದ ಮೇಲೆ ಅವುಗಳನ್ನು ಒಂದು ಪ್ಲೇಟ್ ಗೆ ವರ್ಗಾಯಿಸಿ. ನಂತರ ಒಂದು ಬಾಣಲೆ ಬಿಸಿ ಇಟ್ಟು, ಅದಕ್ಕೆ ಒಂದೆರೆಡು ಚಮಚ ಬಟ್ಟರ್ ಹಾಕಿ ಅದೆಲ್ಲ ಕರಗಿದ ಮೇಲೆ ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ಸ್ವಲ್ಪ ಹೊಂಬಣ್ಣ ಬಂದ ಮೇಲೆ ಚಿಕ್ಕದಾಗಿ ಹೆಚ್ಚಿದ ಹಸಿರು ಮೆಸಿನಕಾಯಿ ಹಾಗೂ ಈರುಳ್ಳಿ ಎಲೆಗಳನ್ನು ಅಂದ್ರೆ ಸ್ಪ್ರಿಂಗ್ ಆನಿಯನ್ ಹಾಕಿ ಬಾಡಿಸಿ.

 

ಈಗ ಫ್ರೈ ಆಗುತ್ತಿರುವ ಬಾಣಲೆಗೆ ಕಪ್ಪು ಮೆಣಸಿನ ಪುಡಿಯನ್ನು ಸ್ವಲ್ಪವೇ ಉಪ್ಪನ್ನು ಸೇರಿಸಿ ಹುರಿಯಿರಿ ಚೆನ್ನಾಗಿ ಮಿಕ್ಸ್ ಮಾಡಿರಿ, ಈಗ ಒಂದು ಬಟ್ಟಲಲ್ಲಿ ಕಾರ್ನ್ ಫ್ಲೋರ್ ಅನ್ನು ಒಂದೆರೆಡು ಚಮಚ ನೀರಿನ ಜೊತೆ ಕಲಸಿ ನೀರಾಗಿ ಪೇಸ್ಟ್ ಮಾಡಿದ್ದನ್ನು ಹಾಕಿರಿ. ಕುದಿಯುತ್ತಿರುವ ಪೇಸ್ಟ್ ಗೆ ಸ್ವಲ್ಪ ನೀರು ಸೇರಿಸಿ. ಅದು ಕುದ್ದ ಮೇಲೆ ಅದಕ್ಕೆ ಈ ಮೊದಲೇ ಫ್ರೈ ಮಾಡಿಟ್ಟ ಚಿಕನ್ ಪೀಸ್ ಗಳನ್ನೂ ಸೇರಿಸಿ ಒಂದು ಮಿಕ್ಷೆ ಕೊಡಿ. ಚೆನ್ನಾಗಿ ಆ ಪೇಸ್ಟ್ ಜೊತೆ ಹೊಂದಿಕೊಳ್ಳುವಂತೆ ಫ್ರೈ ಮಾಡಿದರೆ ಬಿಸಿ ಬಿಸಿ ರೆಸ್ಟೋರೆಂಟ್ ಶೈಲಿಯ ಗಾರ್ಲಿಕ್ ಬಟ್ಟರ್ ಚಿಕನ್ ಸವಿಯಲು ಸಿದ್ಧ. ಇದನ್ನು ಹಾಗೆಯೇ ತಿನ್ನಬಹುದು ಇಲ್ಲವಾದಲ್ಲಿ ಟೊಮೆಟೊ ಸಾಸ್, ಚಿಲ್ಲಿ ಸಾಸ್ ಜೊತೆಯೂ ಸವಿಯಬಹುದು. ರುಚಿ ಅಂತೂ ತುಂಬಾ ಚೆನ್ನಾಗಿರುತ್ತದೆ. ಅದರ ಘಮಕ್ಕೇ ತಿನ್ನಬೇಕು ಅನಿಸುವುದು ನಿಜ. ನೋಡಿದ್ರಲ್ವ ಸ್ನೇಹಿತರೆ ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ರೆಸಿಪಿಗಳನ್ನು ಎಷ್ಟು ಸುಲಭವಾಗಿ ಮಾಡಬಹುದು ಎಂದು. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ, ದಯವಿಟ್ಟು ನಿಮ್ಮ ಪ್ರೀತಿ ಪಾತ್ರರಿಗೆ ಶೇರ್ ಮಾಡಿ ನೀವು ತಿಂದು ನಿಮ್ಮ ಮನೆಯವರಿಗೂ ಇದನ್ನು ತಯಾರಿಸಲು ಪ್ರೇರೇಪಿಸಿ. ಶುಭದಿನ.

ಆರೋಗ್ಯ